Viral Video: ಈ ವಿಡಿಯೋ ಖಂಡಿತ ಮುಂಬೈಯದ್ದೇ! ಎಂದ ನೆಟ್ಟಿಗರು, ನೀವೇನು ಹೇಳುತ್ತೀರಿ?

Ganesh Festival: ಗಂಡು ಹೆಣ್ಣು, ಮುದುಕರು ಯುವಕರು, ಪೊಲೀಸರು ಸಾರ್ವಜನಿಕರು ಮೈಮರೆತು ಹೀಗೆ ಕುಣಿದಿದ್ದಾರೆಂದರೆ ಖಂಡಿತ ಇದು ಮುಂಬೈನಲ್ಲಿ ನಡೆದ ಗಣೇಶೋತ್ಸವದ ವಿಡಿಯೋ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ವೈಭವಪೂರ್ಣ ಮೆರವಣಿಗೆ ನೋಡುತ್ತಿದ್ದರೆ ನನಗೆ ಮುಂದಿನ ಜನ್ಮದಲ್ಲಿ ಭಾರತದಲ್ಲಿಯೇ ಹುಟ್ಟಬೇಕು ಎನ್ನಿಸುತ್ತಿದೆ ಎಂದು ಕೆಲ ನೆಟ್ಟಿಗರು ಹೇಳಿದ್ಧಾರೆ. ನೀವೇನಂತೀರಿ?

Viral Video: ಈ ವಿಡಿಯೋ ಖಂಡಿತ ಮುಂಬೈಯದ್ದೇ! ಎಂದ ನೆಟ್ಟಿಗರು, ನೀವೇನು ಹೇಳುತ್ತೀರಿ?
ಜೈಗಣೇಶ!
Follow us
ಶ್ರೀದೇವಿ ಕಳಸದ
|

Updated on: Sep 27, 2023 | 3:48 PM

Ganesh Festival: ಇದು ಬಹಳ ಸಣ್ಣ ಅಂಶವೆನ್ನಿಸಬಹುದು. ಆದರೂ ನನಗೆ ಅಚ್ಚರಿಯಾಗುತ್ತಿದೆ, ಪೊಲೀಸರು ಚಪ್ಪಲಿ, ಬೂಟುಗಳಿಲ್ಲದೆ ಅದ್ಹೇಗೆ ರಸ್ತೆಯಲ್ಲಿ ನರ್ತಿಸಿದ್ದಾರೆ? ಅರೆ, ಆ ಹಣ್ಣಣ್ಣು ಅಜ್ಜಿ ಮತ್ತು ಅಜ್ಜ ಎಷ್ಟು ಉತ್ಸಾಹದಿಂದ ಕುಣಿದಿದ್ದಾರೆ. ಇದು ನನ್ನ ಫೇವರಿಟ್​ ಹಾಡು. ನಾನು ಕೆಲವರ್ಷಗಳ ಹಿಂದೆ ಐಟಿಯಲ್ಲಿದ್ದಾಗ ಇಯರ್ ಫೋನ್ ಹಾಕಿಕೊಂಡು ಈ ಹಾಡೊಂದನ್ನೇ ಕೇಳುತ್ತಿದ್ದೆ. ಈ ಹಾಡು ನನ್ನನ್ನು ಸದಾ ಉತ್ಸಾಹಿಯನ್ನಾಗಿಡುತ್ತದೆ; ರೆಡ್ಡಿಟ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋದಡಿ ಅನೇಕರು ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ. ವಯಸ್ಸಿನ ಹಂಗಿಲ್ಲದೆ, ಹುದ್ದೆ ಅಂತಸ್ತುಗಳ ಅರಿವಿಲ್ಲದೆ, ಲಿಂಗಬೇಧವೂ ಇಲ್ಲದೆ ಸ್ವಯಂಪ್ರೇರಣೆಯಿಂದ ಹೀಗೆ ರಸ್ತೆಯಲ್ಲಿ ನರ್ತಿಸುತ್ತಿದ್ದಾರೆಂದರೆ ಇದು ಖಂಡಿತ ಮುಂಬೈನ (Mumbai) ಗಣೇಶೋತ್ಸವವೇ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಗಿನ್ನೀಸ್​ ವಿಶ್ವ ದಾಖಲೆ; ಕಣ್ಣು ಮುಚ್ಚಿ ಚೆಸ್ ಜೋಡಿಸಿದ 10 ವರ್ಷದ ಪುನೀತಾಮಲರ್​

ಇದೇ ಭಾರತದ ವೈಶಿಷ್ಟ್ಯ. ಪ್ರಪಂಚದ ಇತರೇ ಭಾಗಗಳಿಗಿಂತ ಭಿನ್ನವೆನ್ನಿಸುವುದು ಇದಕ್ಕೇ. ನಾನು ಇಲ್ಲಿ ಹುಟ್ಟಿರುವುದು ನನ್ನ ಅದೃಷ್ಟ ಎಂದಿದ್ದಾರೆ ಒಬ್ಬರು. ನಾನು ಮುಂದಿನ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಮುಂಬೈನಲ್ಲಿರಲೇಬೇಕು ಎಂದಿದ್ಧಾರೆ ಇನ್ನೊಬ್ಬರು. ಇಂಡಿಯಾದ ಎಲ್ಲಾ ಅಂಕಲ್​​ಗಳ ಉತ್ಸಾಹ ಮತ್ತು ನೃತ್ಯ ಒಂದೇ ರೀತಿಯಾಗಿರುತ್ತದೆಯಾ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೇಗಿದೆ ಈ ನೃತ್ಯವೈಭವ

Such a Wholesome video :)) byu/drishah inindiasocial

18 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 4,900 ಜನರು ಲೈಕ್ ಮಾಡಿದ್ದಾರೆ. ಸುಮಾರು 90 ಜನರು ಪ್ರತಿಕ್ರಿಯಿಸಿದ್ದಾರೆ. ಗಣೇಶನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಸಾಟಿಯೇ ಇಲ್ಲ ಎಂದು ಅನೇಕರು ಹೇಳಿದ್ದಾರೆ. ವಿವಿಧ ಸಮುದಾಯಗಳು ಒಟ್ಟಿಗೇ ಬೆರೆಯುವ ಇಂಥ ಹಬ್ಬ, ಉತ್ಸವಗಳು ನಿಜಕ್ಕೂ ಚೇತೋಹಾರಿ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ

ಪೊಲೀಸರೂ ಮನುಷ್ಯರೇ, ಅಲ್ಲಿರುವವರೆಲ್ಲರೂ ಮನುಷ್ಯರೇ. ಅದಕ್ಕೇ ಕುಣಿದು ಕುಪ್ಪಳಿಸಿದ್ಧಾರೆ. ನನಗೂ ಹೀಗೆ ಕುಣಿಯಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಈತನಕ ನಾನು ಹೀಗೆ ಕುಣಿದೇ ಇಲ್ಲ. ಒಮ್ಮೆಯಾದರೂ ಮುಂಬೈಗೆ ಹೋಗಿ ಗಣೇಶೋತ್ಸವದಲ್ಲಿ ಮಗುವಿನಂತೆ ಕುಣಿಯಬೇಕು ಎಂದು ಹಲವಾರು ಜನರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್