Viral: ನಾಯಿಯ ಪೋಷಕರನ್ನು ಪತ್ತೆ ಹಚ್ಚಲು ಸಹಾಯ ಕೋರಿದ ರತನ್​ ಟಾಟಾ

Ratan Tata: ಮುಂಬೈನ ಸಿಯೋನ್ ಆಸ್ಪತ್ರೆಯ ಆವರಣದಲ್ಲಿ ಈ ನಾಯಿ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ಉದ್ಯಮಿ ರತನ್ ಟಾಟಾ ಇದಕ್ಕೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದಷ್ಟು ಬೇಗ ಇದು ತನ್ನ ಪೋಷಕರ ಮಡಿಲನ್ನು ಸೇರಬೇಕು ಎನ್ನುವ ನಿರೀಕ್ಷೆ ಮತ್ತು ಆಶಯದಿಂದ ಅವರು ಇದೀಗ ನೆಟ್ಟಿಗರ ಸಹಾಯ ಕೋರಿದ್ದಾರೆ. ಲಕ್ಷಾಂತರ ಜನರು ಇವರ ಮಾನವೀಯತೆಯನ್ನು ಕೊಂಡಾಡುತ್ತಿದ್ದಾರೆ.

Viral: ನಾಯಿಯ ಪೋಷಕರನ್ನು ಪತ್ತೆ ಹಚ್ಚಲು ಸಹಾಯ ಕೋರಿದ ರತನ್​ ಟಾಟಾ
ಈ ನಾಯಿಯ ಪೋಷಕರನ್ನು ಪತ್ತೆ ಹಚ್ಚಲು ಸಹಾಯಮಾಡಿ ಎಂದು ರತನ್ ಟಾಟಾ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.
Follow us
ಶ್ರೀದೇವಿ ಕಳಸದ
|

Updated on: Sep 28, 2023 | 2:00 PM

Ratan Tata: ಉದ್ಯಮಿ ರತನ್ ಟಾಟಾ ಮಹಾನ್ ಶ್ವಾನಪ್ರೇಮಿ (Dog Lover). ಆಗಾಗ ನಾಯಿಗಳ ರಕ್ಷಣೆಗೆ ಸಂಬಂಧಿಸಿ ಮತ್ತು ಕಳೆದುಹೋದ ನಾಯಿಗಳ ಪೋಷಕರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ನೆಟ್ಟಿಗರ ಗಮನ ಸೆಳೆದು ಸಹಾಯ ಕೋರುತ್ತಿರುತ್ತಾರೆ. ಇದೀಗ ಮತ್ತೊಂದು ನಾಯಿಯನ್ನು ರಕ್ಷಿಸಿದ ಅವರು ಅದರ ಪೋಷಕರನ್ನು ಪತ್ತೆ ಹಚ್ಚಲು ಮತ್ತೆ ನೆಟ್ಟಿಗರ ಸಹಾಯ ಕೋರಿದ್ದಾರೆ. ಸೆ. 27 ರಂದು ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಗಾಯಗೊಂಡ ನಾಯಿಯೊಂದು ರತನ್​ ಟಾಟಾ ಆಪ್ತವಲಯದ ಕಣ್ಣಿಗೆ ಬಿದ್ದಿತು. ಆನಂತರ ಅದಕ್ಕೆ ಚಿಕಿತ್ಸೆ ಕೊಡಿಸಿ ಪೋಷಿಸಲಾಗುತ್ತಿದೆ. ಆದಷ್ಟು ಬೇಗ ಅದು ತನ್ನ ಪೋಷಕರ ಮಡಿಲು ಸೇರಬೇಕು ಎನ್ನುವುದು ರತನ್ ಅವರ ಆಶಯವಾಗಿದೆ.

ಇದನ್ನೂ ಓದಿ : Viral: ಭಾರತದಲ್ಲಿ ಈ ಎಲ್ಲ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ; ವಿವಾಹಾಕಾಂಕ್ಷಿಗಳ ಗಮನಕ್ಕೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಿನ್ನೆ ರಾತ್ರಿ ಈ ನಾಯಿ ಸಿಕ್ಕಿದೆ. ಇದು ನಿಮ್ಮ ನಾಯಿಯಾಗಿದ್ದಲ್ಲಿ ಸೂಕ್ತ ಪುರಾವೆಗಳೊಂದಿಗೆ reportlostdog@gmail.com ಗೆ ಇಮೇಲ್ ಮಾಡಿ. ಗಾಯಗೊಂಡ ಇದು ಸದ್ಯ ಚಿಕಿತ್ಸೆ ಪಡೆಯುತ್ತಿದೆ’ ಎಂದು ರತನ್ ಟಾಟಾ ಇನ್​ಸ್ಟಾಗ್ರಾಂನಲ್ಲಿ ಈ ಪೋಸ್ಟ್​ಗೆ ಒಕ್ಕಣೆ ಬರೆದಿದ್ದಾರೆ. ನಾಲ್ಕು ಗಂಟೆಗಳ ಹಿಂದೆ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 7 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 6.5 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ರತನ್ ಟಾಟಾ ಇನ್​ಸ್ಟಾಗ್ರಾಂ ಪೋಸ್ಟ್​

View this post on Instagram

A post shared by Ratan Tata (@ratantata)

‘ಈ ಮನುಷ್ಯ ಬದುಕಿನ ಪ್ರತೀ ಹಂತದಲ್ಲಿಯೂ ‘ಮಾನವೀಯತೆ’ ಎಂದರೇನು ಎಂದು ವ್ಯಾಖ್ಯಾನಿಸುತ್ತಲೇ ಇರುತ್ತಾರೆ. ನೀವು ಶತಕೋಟಿ ಜನರಿಗೆ ಸ್ಫೂರ್ತಿಯಾಗಿದ್ದೀರಿ. ಸರ್ ನಿಮಗೆ ಗೌರವ’ ಎಂದಿದ್ದಾರೆ ಒಬ್ಬರು. ‘ಸ್ವರ್ಗ ಎಂಬ ಸ್ಥಳ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ನಿಮ್ಮಂಥವರೇ ಕಾರಣ’ ಎಂದಿದ್ದಾರೆ ಇನ್ನೊಬ್ಬರು. ಸರ್​, ನನಗೆ ಇರುವುದು ಒಂದೇ ಹೃಯದ, ನೀವು ಅದೆಷ್ಟು ಬಾರಿ ಗೆಲ್ಲುತ್ತೀರಿ! ಎಂದಿದ್ದಾರೆ ಮತ್ತೊಬ್ಬರು. ನಿಮ್ಮಂಥ ಮಾನವತಾವಾದಿಗಳು ಇನ್ನೂ ಬೇಕು ಎಂದಿದ್ದಾರೆ ಅನೇಕರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್