Viral: ಭಾರತದಲ್ಲಿ ಈ ಎಲ್ಲ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ; ವಿವಾಹಾಕಾಂಕ್ಷಿಗಳ ಗಮನಕ್ಕೆ

Indian Marriage : ಭಾರತದಲ್ಲಿ ಇತ್ತೀಚೆಗೆ ಏನೇನೋ ಸಣ್ಣಸಣ್ಣ ಕಾರಣಗಳಿಗಾಗಿ ಮದುವೆ ಮುರಿದು ಬೀಳುತ್ತಿವೆ. ನೀವು ಕೇಳಿರುವ ಅಥವಾ ಕಂಡಿರುವ ಒಂದು ಕಾರಣವನ್ನು ಹೇಳಬಹುದೆ? ಎಂದು ರೆಡ್ಡಿಟ್​ನಲ್ಲಿ ನೆಟ್ಟಿಗರೊಬ್ಬರು ಕೇಳಿದ್ದಾರೆ. ಸುಮಾರು 700 ಜನರು ತಾವು ಕಂಡ, ಕೇಳಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಮದುವೆಯಾಗುವವರು ಖಂಡಿತ ಇದನ್ನು ಓದಲೇಬೇಕು.

Viral: ಭಾರತದಲ್ಲಿ ಈ ಎಲ್ಲ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ; ವಿವಾಹಾಕಾಂಕ್ಷಿಗಳ ಗಮನಕ್ಕೆ
ಪ್ರಾತಿನಿಧಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Sep 28, 2023 | 1:15 PM

Marriage : ಇತ್ತೀಚೆಗೆ ಭಾರತದಲ್ಲಿ ಸಾಕಷ್ಟು ಮದುವೆಗಳು ಏನೇನೋ ಅಸಂಬದ್ಧ ಕಾರಣಗಳಿಂದಾಗಿ ಮುರಿದು ಬೀಳುತ್ತಿವೆ ಎಂದು ಎಲ್ಲೋ ಓದಿದ್ದೇನೆ. ಈ ವಿಷಯವಾಗಿ ನೀವು ಏನು ಹೇಳುತ್ತೀರಿ? ಕೇಳಿದ್ದು, ನೋಡಿದ್ದನ್ನು ಹಂಚಿಕೊಳ್ಳಬಹುದೆ? ಎಂದು ರೆಡ್ಡಿಟ್​ನ ಅನುರಾಗ ಸಿಂಘ್​ ನೆಟ್ಟಿಗರಿಗೆ ಕೇಳಿದ್ದಾರೆ. ಅನೇಕರು ತಾವು ಕಂಡ, ಕೇಳಿದ ಘಟನೆ, ಕಾರಣಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ನಿರೀಕ್ಷೆಗೆ ತಕ್ಕಂತೆ ಔತಣಕೂಟ ಏರ್ಪಡಿಸದ ಕಾರಣ ಮದುವೆ ರದ್ದಾದ ಪ್ರಕರಣಗಳು ಇವೆ ಎಂದಿದ್ದಾರೆ ಕೆಲವರು. ಹುಡುಗಿ ತನಗಿಂತ ಹೆಚ್ಚು ಸಂಬಳ ( High Salary) ಪಡೆಯುತ್ತಾಳೆಂಬ ಕಾರಣಕ್ಕೆ ಮದುವೆಗಳು ಮುರಿದುಬಿದ್ದ ಉದಾಹರಣಗಳಿವೆ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.

ಇದನ್ನೂ ಓದಿ : Viral: ಗ್ರೀಸ್; 100 ಕೇಜಿ ಗಾಂಜಾ ತಿಂದ ಕುರಿಹಿಂಡು; ನಗಬೇಕೋ ಅಳಬೇಕೋ ಎಂದ ಕುರುಬ

‘ಒಂದು ಮದುವೆಯಲ್ಲಿ ಊಟದಲ್ಲಿ ಮಟನ್​ ಬಡಿಸಿಲ್ಲವೆಂದು ವರನ ಸ್ನೇಹಿತರು ಗಲಾಟೆ ಆರಂಭಿದ್ದರು. ಮಟನ್ ಬಡಿಸುವವರೆಗೂ ಮದುವೆ ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಇವರೊಂದಿಗೆ ಇವನ ಹೆತ್ತವರೂ ಸೇರಿಕೊಂಡರು. ಎಲ್ಲರೂ ಸೇರಿ ವಧುವಿನ ಪೋಷಕರನ್ನು ಗದರಿಸಿದರು. ಅವರು ವರನ ಪೋಷಕರ ಪಾದ ಮುಟ್ಟಿ ಕ್ಷಮೆ ಯಾಚಿಸಿದರು. ಇದು ವಧುವಿಗೆ ಗೊತ್ತಾಯಿತು. ವರನ ಮತ್ತು ಅವನ ಮನೆಯವರ ಅಹಂಕಾರದ ಪರಮಾವಧಿ ಕಂಡು ಈ ಮದುವೆಯೇ ಬೇಡವೆಂದಳು. ಆಗ ವರ ತನ್ನ ಕುಟುಂಬದವರೊಂದಿಗೆ ಆಕೆಯ ಬಳಿ ಕ್ಷಮೆ ಕೇಳಿದರೂ ಆಕೆ ಜಗ್ಗದೇ ಅವರೆಲ್ಲರನ್ನೂ ಹೊರಹಾಕಿದಳು.’ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಕಾರಣಕ್ಕೆಲ್ಲ ಮದುವೆಗಳು ಮುರಿದು ಬಿದ್ದಿವೆ

What’s the most absurd reason you’ve heard of someone cancelling their marriage? byu/AnuragSlNGH inindia

‘ನನ್ನ ಸ್ನೇಹಿತನ ಮದುವೆ ನಿಶ್ಚಯಗೊಂಡಿತ್ತು, ಆದರೆ ತಯಾರಿ ಇನ್ನೂ ಆರಂಭವಾಗಿರಲಿಲ್ಲ. ಅವರು ಫೈವ್​ ಸ್ಟಾರ್ ರೆಸ್ಟೋರೆಂಟ್​ಗೆ ಡೇಟ್​ಗೆ ಹೋದರು. ಊಟದ ನಂತರ ಉಳಿದ ಆಹಾರವನ್ನು ವ್ಯರ್ಥಗೊಳಿಸುವುದು ಬೇಡವೆಂದು ಅವನು ಪಾರ್ಸೆಲ್​ ಮಾಡಲು ಮಾಣಿಗೆ ಹೇಳಿದೆ. ಆಗ ಅವನ ಹುಡುಗಿ ಇದು ಚೀಪ್​ ಬಿಹೇವಿಯರ್​ ಎಂದು ಹೇಳಿ ಮನೆ ತಲುಪುವತನಕವೂ ಅವನನ್ನು ರೇಗಿಸಿದಳು. ಹುಡುಗಿಯ ಮನೆಯವರು ಆಕೆಗೆ ತಿಳಿವಳಿಕೆ ಹೇಳಿ ಒಪ್ಪಿಸಲು ನೋಡಿದರು. ಆದರೆ ಭವಿಷ್ಯದಲ್ಲಿ ಇಂಥ ಸಂಗತಿಗಳಿಂದ ತೊಂದರೆ ಉಂಟಾಗುತ್ತದೆ ಎಂದು ಆಕೆ ಹೇಳಿದಳು.’ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ‘ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರೂ ಕುಸಿದಿಲ್ಲ’ ಪ್ರೊ ರಿದ್ಧಿ ರಾಥೋರ್

‘ಹುಡುಗಿಗೆ ಪ್ರೊಮೋಷನ್​ ಸಿಕ್ಕಿತು, ಸಂಬಳವೂ ಜಾಸ್ತಿಯಾಯಿತು ಎಂಬ ವಿಷಯ ತಿಳಿದ ನನ್ನ ಸ್ನೇಹಿತನ ಸ್ನೇಹಿತನೊಬ್ಬ ಮದುವೆ ಮಂಟಪದಿಂದ ಎದ್ದು ಹೋದ. ಮದುವೆಯಾದ ಮೇಲೆ ಹುಡುಗಿ ಕೆಲಸ ಮಾಡುವುದು ಅವಮಾನಕರ. ಆಕಸ್ಮಾತ್ ಮಾಡಿದರೂ ಅವನಿಗಿಂತ ಕಡಿಮೆ ಸಂಬಳ ಹುದ್ದೆ ಇರಬೇಕಿತ್ತು ಎನ್ನುವುದು ಅವನ ಮತ್ತು ಕುಟುಂಬದವರ ವಾದವಾಗಿತ್ತು.’ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿನ್ನೆ ಹಂಚಿಕೊಂಡ ಈ ಪೋಸ್ಟಿನಡಿ ಸುಮಾರು 700 ಜನರು ತಾವು ಕಂಡ, ಕೇಳಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನೀವೇನಂತೀರಿ ಈ ವಿಷಯವಾಗಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:10 pm, Thu, 28 September 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್