Viral Video: ಉತ್ತರ ಪ್ರದೇಶ; ಮಥುರಾ ರೈಲು ಹಳಿಬಿಟ್ಟು ಪ್ಲ್ಯಾಟ್​ಫಾರ್ಮ್​ ಏರಿದ್ದಕ್ಕೆ ಕಾರಣ ಇಲ್ಲಿದೆ

Mathura : ದೆಹಲಿಯಿಂದ ಹೊರಟ ರೈಲು ಮಥುರಾ ಜಂಕ್ಷನ್​ನಲ್ಲಿ ಹಳಿ ಬಿಟ್ಟು ಪ್ಲ್ಯಾಟ್​ಫಾರ್ಮ್​ ಏರಿತ್ತು. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ. ರೈಲ್ವೇ ಇಲಾಖೆಯು ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. ಇದೀಗ ಸತ್ಯ ಹೊರಬಿದ್ದಿದೆ. ರೈಲ್ವೆ ಸಿಬ್ಬಂದಿಯು ಕುಡಿದ ಅಮಲಿನಲ್ಲಿ ಮಾಡಿದ ಪ್ರಮಾದದಿಂದ ಈ ಅವಘಡ ಸಂಭವಿಸಿದೆ. ರೈಲಿನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಇಲ್ಲಿವೆ.

Viral Video: ಉತ್ತರ ಪ್ರದೇಶ; ಮಥುರಾ ರೈಲು ಹಳಿಬಿಟ್ಟು ಪ್ಲ್ಯಾಟ್​ಫಾರ್ಮ್​ ಏರಿದ್ದಕ್ಕೆ ಕಾರಣ ಇಲ್ಲಿದೆ
ಮಥುರಾ ರೈಲು ಪ್ಲ್ಯಾಟ್​ಫಾರ್ಮ್ ಏರುವ ಮೊದಲಿನ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Sep 28, 2023 | 4:37 PM

Uttar Pradesh: ಸೆಪ್ಟೆಂಬರ್ 26, 2023 ರ ರಾತ್ರಿ, ದೆಹಲಿಯ ಶಕುರ್ ಬಸ್ತಿಯಿಂದ ಹೊರಟ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (EMU) ರೈಲು ಮಥುರಾ ಜಂಕ್ಷನ್​ನಲ್ಲಿ ಹಳಿತಪ್ಪಿ ಪ್ಲ್ಯಾಟ್​ಫಾರ್ಮ್ ಸಂಖ್ಯೆ 2A ಗೆ ಏರಿತ್ತು. ಅದೃಷ್ಟವಶಾತ್​ ಆ ರಾತ್ರಿ 10.49 ಕ್ಕೆ  ಈ ಅವಘಡ ಸಂಭವಿಸುವ ಮೊದಲೇ ಪ್ರಯಾಣಿಕರು ರೈಲಿನಿಂದ ಇಳಿದಿದ್ದರು. ಹಾಗಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೇ ಇಲಾಖೆಯು (Indian Railway) ಆದೇಶಿಸಿತ್ತು. ಆ ಪ್ರಕಾರ, ರೈಲು ಸಿಬ್ಬಂದಿ ಸಚಿನ್​ ಕುಡಿದ ಅಮಲಿನಲ್ಲಿ ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನುವುದು ಪತ್ತೆಯಾಗಿದೆ. ಸಚಿನ್​ ಜೊತೆ ನಾಲ್ವರು ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ : Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು

ಟ್ರೇಲರ್‌ನಲ್ಲಿದ್ದ ಕೀ ತೆಗೆದುಕೊಂಡು ಬರಲು ಸಹಾಯಕ ಸಚಿನ್​ನನ್ನು ಕಳಿಸಲಾಗಿತ್ತು. ಆಗ ಅವನು ತನ್ನ ಬ್ಯಾಗ್ ತೆಗೆದು ಎಂಜಿನ್​ನ ಥ್ರೊಟಲ್ ಮೇಲೆ ಇರಿಸಿಬಿಟ್ಟನು. ಇದರಿಂದಾಗಿ ರೈಲು ಹಠಾತ್ತನೇ ವೇಗ ಪಡೆದುಕೊಂಡು ಪ್ಲ್ಯಾಟ್​ಫಾರ್ಮ್​ಗೆ ಅಪ್ಪಳಿಸಿತು. ಸಚಿನ್ ಕುಡಿದ ಅಮಲಿನಲ್ಲಿ ಮೊಬೈಲ್ ನೋಡುತ್ತಿರುವುದು ಮತ್ತು ರೈಲು ಅಪ್ಪಳಿಸಿದ ತಕ್ಷಣ ಗಾಬರಿಗೆ ಬೀಳುವುದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ

ಅಂತೆಯೇ ನಿರ್ಲಕ್ಷ್ಯದಿಂದ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ ಸಚಿನ್ ಮತ್ತು ಇತರ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ರೈಲಿನ ಇಂಜಿನ್‌ನಿಂದ ಪ್ಲಾಟ್‌ಫಾರ್ಮ್‌ನ ಒಂದು ಭಾಗ ಮತ್ತು ವಿದ್ಯುತ್ ಕಂಬ ಹಾನಿಗೊಳಗಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:36 pm, Thu, 28 September 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್