AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು

Trevor Noah's Show Canceled In Bengaluru: ಸೆಪ್ಟೆಂಬರ್ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಟ್ರೆವೊರ್ ನೋವಾ ಅವರ ಕಾಮಿಡಿ ಶೋ ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಂಡಿದೆ. ಸೌತ್ ಆಫ್ರಿಕಾದ ಸ್ಟ್ಯಾಂಡಪ್ ಕಾಮಿಡಿಯನ್ ನಿನ್ನೆ ವೇದಿಕೆಗೆ ಬಂದು ಶೋ ಶುರು ಮಾಡಲು ಯತ್ನಿಸಿದರೂ ಆಡಿಯೋ ಸಮಸ್ಯೆಯಾಗಿ ಕಾರ್ಯಕ್ರಮ ನಿಲ್ಲಿಸಿದ್ದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ತಮ್ಮ ಕಾಮಿಡಿ ಶೋ ರದ್ದಾಗಿರುವುದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ, ಟೆಕ್ ಸಿಟಿ ಬೆಂಗಳೂರಿನ ಹೆಸರಿಗೆ ಈ ಘಟನೆ ಕಳಂಕ ಆಗಿದೆ ಎಂದು ವಿಷಾದಿಸಿದ್ದಾರೆ.

ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು
ಸೌತ್ ಆಫ್ರಿಕಾ ಸ್ಟ್ಯಾಂಡಪ್ ಕಾಮಿಡಿಯನ್ ಟ್ರೆವೊರ್ ನೋವಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2023 | 3:39 PM

Share

ಬೆಂಗಳೂರು, ಸೆಪ್ಟೆಂಬರ್ 28: ನಿನ್ನೆ ಇಲ್ಲಿ ನಡೆಯಬೇಕಿದ್ದ ಟ್ರೆವೊರ್ ನೋವಾ ಅವರ ಕಾಮಿಡಿ ಶೋ (South African standup comedian Trevor Noah) ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಂಡಿದೆ. ಸೌತ್ ಆಫ್ರಿಕಾದ ಸ್ಟ್ಯಾಂಡಪ್ ಕಾಮಿಡಿಯನ್ ಟ್ರೆವೊರ್ ಅವರು ನಿನ್ನೆ ವೇದಿಕೆಗೆ ಬಂದು ಶೋ ಶುರು ಮಾಡಲು ಯತ್ನಿಸಿದರೂ ಆಡಿಯೋ ಸಮಸ್ಯೆಯಾಗಿ ಕಾರ್ಯಕ್ರಮ ನಿಲ್ಲಿಸಿದ್ದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ತಮ್ಮ ಕಾಮಿಡಿ ಶೋ ರದ್ದಾಗಿರುವುದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಿವಾಸಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah), ಟೆಕ್ ಸಿಟಿ ಎನಿಸಿರುವ ಬೆಂಗಳೂರಿನ ಹೆಸರಿಗೆ ಈ ಘಟನೆ ಕಳಂಕ ಆಗಿದೆ ಎಂದು ವಿಷಾದಿಸಿದ್ದಾರೆ.

‘ಬಲವಂತವಾಗಿ ರದ್ದು ಮಾಡಬೇಕಾಯಿತು’: ಟ್ರೆವೊರ್ ನೊವಾ ಅವರ ಬೆಂಗಳೂರು ಕಾರ್ಯಕ್ರಮಗಳನ್ನು ತಾಂತ್ರಿಕ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಟೆಕ್ ಇಮೇಜ್​ಗೆ ಇದು ಕಪ್ಪುಚುಕ್ಕೆಯಾಗಿದೆ. ಕನ್ವೆನ್ಷನ್ ಸೆಂಟರ್​ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿರಣ್ ಮುಜುಮ್ದಾರ್ ಷಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ

ದಕ್ಷಿಣ ಆಫ್ರಿಕಾದ ಹಾಸ್ಯಗಾರ ಟ್ರೆವೋರ್ ನೋವಾ ಅವರು ನಾಗವಾರಯಲ್ಲಿರುವ ಮ್ಯಾನ್​ಫೋ ಕನ್ವೆನ್ಷನ್ ಸೆಂಟರ್​ನಲ್ಲಿ ನಿನ್ನೆ ಮತ್ತು ಇವತ್ತು (ಸೆ. 27, 28) ಕಾರ್ಯಕ್ರಮ ನಡೆಸಬೇಕಿತ್ತು. ನಿನ್ನೆ ಕನ್ವೆನ್ಷನ್ ಸೆಂಟರ್​​ನ ಸಭಾಂಗಣದಲ್ಲಿ ವೇದಿಕೆ ಏರಿ ಕಾರ್ಯಕ್ರಮ ಶುರು ಮಾಡಿದಾಗಲೇ ಗೊತ್ತಾಗಿದ್ದು ತಾಂತ್ರಿಕ ತೊಂದರೆ ಇದೆ ಎಂಬದು. ಸಭಾಂಗಣದಲ್ಲಿ ನೆರೆದಿದ್ದ ಸಭಿಕರಲ್ಲಿ ಒಬ್ಬರಿಗೂ ಕೂಡ ಅವರ ಧ್ವನಿ ಕೇಳುತ್ತಿರಲಿಲ್ಲ. ಈ ಸಮಸ್ಯೆ ಬೇರ ಸರಿಯಾಗಲೂ ಇಲ್ಲ. ಹೀಗಾಗಿ, ಟ್ರೆವೊರ್ ಅವರು ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಬೇಕಾಯಿತು.

ಇನ್ನೂ ವಿಚಿತ್ರ ಎಂದರೆ, ನಿನ್ನೆ ಇದೇ ಪ್ರದೇಶದ ಸುತ್ತಮುತ್ತ ಮಾಮೂಲಿಗಿಂತ ತುಸು ಹೆಚ್ಚೇ ಟ್ರಾಫಿಕ್ ಜಾಮ್ ಇತ್ತು. ಹೀಗಾಗಿ, ಶೋಗೆ ಟಿಕೆಟ್ ಬುಕ್ ಮಾಡಿದ್ದವರಲ್ಲಿ ಬಹಳ ಮಂದಿ ತಡವಾಗಿ ಬಂದಿದ್ದರು. ಅವರೆಲ್ಲರೂ ಸಭಾಂಗಣಕ್ಕೆ ಬರುವ ಹೊತ್ತಿಗೆ ಶೋ ರದ್ದಾಗಿರುವುದು ಗೊತ್ತಾಗಿ ಪೆಚ್ಚುಮೋರೆ ಹಾಕಿ ಮರಳಬೇಕಾಯಿತು. ಸದ್ಯ, ಟಿಕೆಟ್ ನೀಡಿದ ಸಂಘಟಕರು, ಸಭಾಂಗಣದವರು ಮತ್ತು ಬುಕ್ ಮೈ ಶೋನವರು ಎಲ್ಲರಿಗೂ ರೀಫಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಣಬೀರ್ ಕಪೂರ್ ಒಟ್ಟೂ ಆಸ್ತಿ ಎಷ್ಟು? ಎಲ್ಲಿಂದ ಬಂತು ಇಷ್ಟೊಂದು ಹಣ?

ಇನ್ನು, ಬೆಂಗಳೂರಿನಲ್ಲಿ ಎರಡು ದಿನ ಶೋ ನಡೆಸಬೇಕಿದ್ದ ಟ್ರೆವೊರ್ ನೋವಾ ಅವರು ಮುಂಬೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ಶೋ ಕೊಡುತ್ತಿದ್ದಾರೆ. ಅಲ್ಲಿಯೂ ಅವರಿಗೆ ತಾಂತ್ರಿಕ ತೊಂದರೆ ಆಗದಿದ್ದರೆ ಸರಿ..!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ