ಸರ್ಕಾರಕ್ಕೆ ಕಾವೇರಿ ಬಲ; ಒಂದೇ ದಿನದಲ್ಲಿ 26 ಸಾವಿರಕ್ಕೂ ಹೆಚ್ಚು ಸ್ವತ್ತುಗಳ ನೊಂದಣಿ; 312 ಕೋಟಿ ರೂ ಆದಾಯ; ಏನಿದು ಹೊಸ ವ್ಯವಸ್ಥೆ?

Kavery 2.0 Transformation In Karnataka governance: ‘ಕಾವೇರಿ 2 ದೆಸೆಯಿಂದಾಗಿ ಇವತ್ತು ದಾಖಲೆಯ 26,058 ದಸ್ತಾವೇಜುಗಳ ನೋಂದಣಿ ಮಾಡಿದ್ದೇವೆ. 312 ಕೋಟಿ ರೂನಷ್ಟು ಆದಾಯ ಬಂದಿದೆ. ಕಾವೇರಿ 2ಗೆ ನಾವು ಬೆಂಬಲ ನೀಡಿದ್ದು ಸರಿ ಎಂದು ಸಾಬೀತಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿಯೇ ಈ ದಾಖಲೆ ಸಾಧ್ಯವಾಗಿರುವುದು. ಈ ವ್ಯವಸ್ಥೆ ಬಹಳ ದೊಡ್ಡ ಲೋಡ್ ನಿರ್ವಹಿಸಬಲ್ಲುದು. ನಮ್ಮ ಸಿಬ್ಬಂದಿಗೆ ಧನ್ಯವಾದ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.

ಸರ್ಕಾರಕ್ಕೆ ಕಾವೇರಿ ಬಲ; ಒಂದೇ ದಿನದಲ್ಲಿ 26 ಸಾವಿರಕ್ಕೂ ಹೆಚ್ಚು ಸ್ವತ್ತುಗಳ ನೊಂದಣಿ; 312 ಕೋಟಿ ರೂ ಆದಾಯ; ಏನಿದು ಹೊಸ ವ್ಯವಸ್ಥೆ?
ಕೃಷ್ಣ ಬೈರೇಗೌಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2023 | 4:33 PM

ಬೆಂಗಳೂರು, ಸೆಪ್ಟೆಂಬರ್ 28: ಹೊಸ ಕಾವೇರಿ ತಂತ್ರಾಂಶ ಅಳವಡಿಕೆ ಬಳಿಕ ರಾಜ್ಯದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ (Department of Stamp and Registration) ಸ್ವತ್ತುಗಳ ನೊಂದಣಿ ವ್ಯವಸ್ಥೆ ಬಲಗೊಂಡಿದೆ. ಭರಪೂರವಾಗಿ ದಸ್ತವೇಜುಗಳ ನೊಂದಣಿ (Documents registration) ಕಾರ್ಯ ನಡೆಯುತ್ತಿದೆ. ಕಾವೇರಿ ತಂತ್ರಾಂಶದ (Kavery 2.0 software) ಸಹಾಯದಿಂದ ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ದಸ್ತಾವೇಜುಗಳ ನೊಂದಣಿ ಆಗಿದೆಯಂತೆ. ಹಾಗಂತ ಸಚಿವರು ಮಾಹಿತಿ ನೀಡಿದ್ದಾರೆ. ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು ಒಂದೇ ದಿನದಲ್ಲಿ (ಸೆಪ್ಟೆಂಬರ್ 27) ನೊಂದಣಿ ಮತ್ತು ಮುದ್ರಾಂಕ ಇಲಾಖೆ 312 ಕೋಟಿ ರೂ ಲಾಭ ಮಾಡಿರುವ ಸಂಗತಿ ತಿಳಿಸಿದ್ದಾರೆ.

‘ಕಾವೇರಿ 2 ದೆಸೆಯಿಂದಾಗಿ ಇವತ್ತು ದಾಖಲೆಯ 26,058 ದಸ್ತಾವೇಜುಗಳ ನೋಂದಣಿ ಮಾಡಿದ್ದೇವೆ. 312 ಕೋಟಿ ರೂನಷ್ಟು ಆದಾಯ ಬಂದಿದೆ. ಕಾವೇರಿ 2ಗೆ ನಾವು ಬೆಂಬಲ ನೀಡಿದ್ದು ಸರಿ ಎಂದು ಸಾಬೀತಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿಯೇ ಈ ದಾಖಲೆ ಸಾಧ್ಯವಾಗಿರುವುದು. ಈ ವ್ಯವಸ್ಥೆ ಬಹಳ ದೊಡ್ಡ ಲೋಡ್ ನಿರ್ವಹಿಸಬಲ್ಲುದು. ನಮ್ಮ ಸಿಬ್ಬಂದಿಗೆ ಧನ್ಯವಾದ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.

ಸಚಿವರ ಈ ಟ್ವೀಟ್​ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಹೊಸ ಆವೃತ್ತಿಯ ಕಾವೇರಿ ತಂತ್ರಾಂಶ ಬಂದ ಬಳಿಕ ವ್ಯವಸ್ಥೆ ಸುಧಾರಿಸಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ರೈತರಿಗೆ ಖಾತೆ ಬದಲಾವಣೆ ಇತ್ಯಾದಿ ಸಮಸ್ಯೆ ನಿವಾರಣೆ ಆಗಿಲ್ಲ ಎಂದು ಒಂದಿಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು

ರಾಜ್ಯದಲ್ಲಿ 6,500 ಕೋಟಿ ರೂ ಮೌಲ್ಯದ ಆಸ್ತಿಗಳು ಅಧಿಕೃತವಾಗಿ ಒಂದೇ ದಿನದಲ್ಲಿ ವಹಿವಾಟಾಗಿವೆ. ಒಂದು ಆಸ್ತಿಗೆ ಸರಾಸರಿಯಾಗಿ 1.25 ಲಕ್ಷ ರೂನಷ್ಟು ಮುದ್ರಾಂಕ ಶುಲ್ಕ ಸಿಕ್ಕಿದೆ ಎಂದು ಒಬ್ಬರು ಅಂದಾಜು ಮಾಡಿದ್ದಾರೆ.

ಏನಿದು ಕಾವೇರಿ ತಂತ್ರಾಂಶ 2.0?

ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಾವೇರಿ ತಂತ್ರಾಂಶ 2.0 ಅನ್ನು ರೂಪಿಸಲಾಗಿದೆ. ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸ್ವತ್ತುಗಳ ನೊಂದಣಿ ಕಾರ್ಯವನ್ನು ಸುಗಮಗೊಳಿಸಲು ಮತ್ತು ಉಪನೊಂದಣಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಹೊಸ ತಂತ್ರಾಂಶ ಸಹಾಯಕವಾಗಿದೆ.

ವಿಶೇಷ ಎಂದರೆ ಇಡೀ ರಾಜ್ಯಕ್ಕೆ ಒಂದೇ ಸರ್ವರ್ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸರ್ವರ್ ಕೈಕೊಡುವ ಪ್ರಮೇಯ ಇರುವುದಿಲ್ಲ. ಕೆಲ ತಿಂಗಳ ಹಿಂದೆ ರಾಜ್ಯದ ಎಲ್ಲಾ 256 ಉಪನೊಂದಣಿ ಕಚೇರಿಗಳಲ್ಲಿ ಕಾವೇರಿ 2.0 ಸಾಫ್ಟ್​ವೇರ್ ಅನ್ನು ಅಳವಡಿಸಲಾಗಿದೆ. ಹಿಂದೆ ಒಂದು ಉಪನೊಂದಣಿ ಕಚೇರಿಯಲ್ಲಿ 40 ದಾಖಲೆಗಳ ನೊಂದಣಿ ಆಗುತ್ತಿತ್ತು. ಈಗ ಕಾವೇರಿ 2.0 ಬಂದ ಬಳಿಕ ಒಂದು ಕಚೇರಿಯಲ್ಲಿ 150ಕ್ಕೂ ಹೆಚ್ಚು ದಾಖಲೆಗಳ ನೊಂದಣಿ ಆಗುತ್ತಿದೆಯಂತೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?

ನೊಂದಣಿ ಕಾರ್ಯ ಹೇಗೆ ನಡೆಯುತ್ತದೆ?

ಮೂರು ಹಂತದಲ್ಲಿ ಆಸ್ತಿಗಳ ನೊಂದಣಿ ನಡೆಯುತ್ತದೆ. ನೊಂದಣಿ ಪೂರ್ವ, ನೊಂದಣಿ ಮತ್ತು ನೊಂದಣಿ ನಂತರ, ಹೀಗೆ ಮೂರು ಹಂತಗಳ ಪ್ರಕ್ರಿಯೆ ಇರುತ್ತದೆ. ನೊಂದಣಿ ಪೂರ್ವ ಹಂತದಲ್ಲಿ, ನಾಗರಿಕರೇ ಆನ್​ಲೈನ್ ಮೂಲಕ ದಾಖಲೆಗಳನ್ನು ಅಪ್​ಲೋಡ್ ಮಾಡುತ್ತಾರೆ. ಅದನ್ನು ಉಪನೋಂದಣಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅದಾದ ಬಳಿಕ ನಾಗರಿಕರು ಶುಲ್ಕ ಪಾವತಿಸಬೇಕು. ಶುಲ್ಕ ಕಟ್ಟಿದ ಬಳಿಕ ನೊಂದಣಿ ಸಮಯ ನಿಗದಿ ಮಾಡಿಕೊಳ್ಳಬಹುದು.

ಇದಾದ ಬಳಿಕ ನೊಂದಣಿ ಹಂತರ ಇರುತ್ತದೆ. ಉಪನೊಂದಣಿ ಕಚೇರಿಗೆ ಹೋಗಿ ಭಾವಚಿತ್ರ ಮತ್ತು ಹೆಬ್ಬೆಟ್ಟು ಗುರುತನ್ನು ನೀಡಬೇಕು. ಇಲ್ಲಿಗೆ ಬಹುತೇಕ ಮುಗಿಯುತ್ತದೆ.

ಮೂರನೇ ಹಂತದಲ್ಲಿ, ಡಿಜಿಟಲ್ ಸಹಿ ಆಗಿರುವ ದಸ್ತಾವೇಜನ್ನು ನಾಗರಿಕರ ಡಿಜಿಲಾಕರ್ ಖಾತೆಗೆ ಅಥವಾ ಬೇರೆ ಸಂಪರ್ಕ ಪ್ಲಾಟ್​ಫಾರ್ಮ್​ಗೆ ಕಳುಹಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ