AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಚಾಲ್ತಿ ಖಾತೆ ಕೊರತೆ 76 ಸಾವಿರ ಕೋಟಿಗೆ ಹೆಚ್ಚಳ; ಏನಿದು ಕರೆಂಟ್ ಅಕೌಂಟ್ ಡೆಫಿಸಿಟ್?

India Current Account Deficit Widens: 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ (ಕರೆಂಟ್ ಅಕೌಂಟ್ ಡೆಫಿಸಿಟ್) 9.2 ಬಿಲಿಯನ್ ಡಾಲರ್​ಗೆ ಹಿಗ್ಗಿದೆ. ಚಾಲ್ತಿ ಖಾತೆ ಕೊರತೆ ದೇಶದ ಜಿಡಿಪಿಯ ಶೇ. 1.1ರಷ್ಟಿದೆ. ಹಿಂದಿನ ಕ್ವಾರ್ಟರ್​ಗೆ ಹೋಲಿಸಿದರೆ ಕೊರತೆ ಸಾಕಷ್ಟು ಹಿಗ್ಗಿದೆ. ಹಿಂದಿನ ತ್ರೈಮಾಸಿಕವಾದ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ಕೇವಲ 1.3 ಬಿಲಿಯನ್ ಡಾಲರ್ ಇತ್ತು. ಅಂದರೆ ಕೊರತೆಯು ಜಿಡಿಪಿಯ ಶೇ. 1.1ರಷ್ಟಿತ್ತು. ಈ ಕ್ವಾರ್ಟರ್​ನಲ್ಲಿ ಇದು ಏಳು ಪಟ್ಟು ಹೆಚ್ಚಾಗಿದೆ.

ಭಾರತದ ಚಾಲ್ತಿ ಖಾತೆ ಕೊರತೆ 76 ಸಾವಿರ ಕೋಟಿಗೆ ಹೆಚ್ಚಳ; ಏನಿದು ಕರೆಂಟ್ ಅಕೌಂಟ್ ಡೆಫಿಸಿಟ್?
ವ್ಯಾಪಾರ ವಹಿವಾಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2023 | 2:37 PM

Share

ನವದೆಹಲಿ, ಸೆಪ್ಟೆಂಬರ್ 28: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ (CAD- Current Account Deficit) 9.2 ಬಿಲಿಯನ್ ಡಾಲರ್​ಗೆ ಹಿಗ್ಗಿದೆ. ಅಂದರೆ ಸುಮಾರು 76,000 ಕೋಟಿ ರೂನಷ್ಟು ಕೊರತೆ ಇದೆ. ಆರ್​ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಚಾಲ್ತಿ ಖಾತೆ ಕೊರತೆ ದೇಶದ ಜಿಡಿಪಿಯ ಶೇ. 1.1ರಷ್ಟಿದೆ. ಹಿಂದಿನ ಕ್ವಾರ್ಟರ್​ಗೆ ಹೋಲಿಸಿದರೆ ಕೊರತೆ ಸಾಕಷ್ಟು ಹಿಗ್ಗಿದೆ. ಆದರೆ, ವರ್ಷದ ಹಿಂದಿನ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಕರೆಂಟ್ ಅಕೌಂಟ್ ಡೆಫಿಸಿಟ್ ಬಹಳಷ್ಟು ತಗ್ಗಿದೆ.

ಹಿಂದಿನ ತ್ರೈಮಾಸಿಕವಾದ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ಅಥವಾ ಸಿಎಡಿ ಕೇವಲ 1.3 ಬಿಲಿಯನ್ ಡಾಲರ್ ಇತ್ತು. ಅಂದರೆ ಕೊರತೆಯು ಜಿಡಿಪಿಯ ಶೇ. 1.1ರಷ್ಟಿತ್ತು. ಈ ಕ್ವಾರ್ಟರ್​ನಲ್ಲಿ ಇದು ಏಳು ಪಟ್ಟು ಹೆಚ್ಚಾಗಿದೆ. ಇನ್ನು, ವರ್ಷದ ಹಿಂದಿನ ಇದೇ ಅವಧಿಯಲ್ಲಿ, ಅಂದರೆ 2022ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಸಿಎಡಿ ಬರೋಬ್ಬರಿ 17.9 ಬಿಲಿಯನ್​ನಷ್ಟಿತ್ತು. ಇದು ಜಿಡಿಪಿಯ ಶೇ. 2.1ರಷ್ಟಾಗಿತ್ತು.

ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ

ಈ ಬಾರಿ ಸಿಎಡಿ ಹೆಚ್ಚಲು ಕಾರಣವಾಗಿದ್ದು, ಸರಕು ವಹಿವಾಟಿನಲ್ಲಿನ ಅಂತರದಲ್ಲಿ ಹೆಚ್ಚಳ. ಹಾಗೆಯೇ, ಸರ್ವಿಸ್ ವಹಿವಾಟಿನಲ್ಲಿ ಹೆಚ್ಚಳ ಪ್ರಮಾಣ ತಗ್ಗಿದ್ದು ಮತ್ತು ಖಾಸಗಿ ಟ್ರಾನ್ಸ್​ಫರ್ ರಿಸಿಪ್ಟ್​ನಲ್ಲಿ ಇಳಿಕೆಯಾಗಿದ್ದೂ ಕೂಡ ಚಾಲ್ತಿ ಖಾತೆ ಕೊರತೆ ಹೆಚ್ಚಲು ಕಾರಣವಾಗಿದೆ.

ಸರಕು ವ್ಯಾಪಾರ ಕೊರತೆ 63.1 ಬಿಲಿಯನ್ ಡಾಲರ್ ಇದ್ದದ್ದು 56.6 ಬಿಲಿಯನ್ ಡಾಲರ್​ಗೆ ಇಳಿದಿದೆ. ಆದರೂ ಕೂಡ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಇದ್ದ 52.6 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಅದರ ಕೊರತೆ ತುಸು ಹೆಚ್ಚಳವಾಗಿದೆ.

ಇನ್ನು, ಭಾರತದ ಪ್ರಮುಖ ರಫ್ತು ಎನಿಸಿರುವ ಸೇವಾ ಕ್ಷೇತ್ರದಲ್ಲಿ ತುಸು ಇಳಿಮುಖವಾಗಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸರ್ವಿಸ್ ಸೆಕ್ಟರ್​ನ ವ್ಯಾಪಾರ ಹೆಚ್ಚುವರಿ ಮೊತ್ತ 39.1 ಬಿಲಿಯನ್ ಡಾಲರ್ ಇತ್ತು. ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಇದು 35.1 ಬಿಲಿಯನ್ ಡಾಲರ್​ಗೆ ಇಳಿದಿದೆ. ಹೀಗಾಗಿ, ಒಟ್ಟಾರೆಯಾಗಿ ಚಾಲ್ತಿ ಖಾತೆ ಕೊರತೆ ತುಸು ಏರಿಕೆಯಾಗಿದೆ.

ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಏನಿದು ಚಾಲ್ತಿ ಖಾತೆ ಕೊರತೆ?

ಒಂದು ದೇಶದ ಚಾಲ್ತಿ ಖಾತೆ ಕೊರತೆ ಎಂದರೆ ಅದರ ಒಟ್ಟಾರೆ ಸರಕು ಮತ್ತು ಸೇವೆಗಳ ಆಮದು ಹಾಗೂ ರಫ್ತಿನ ನಡುವೆ ಇರುವ ಅಂತರ. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಆಗ ಚಾಲ್ತಿ ಖಾತೆ ಕೊರತೆ ಎನಿಸುತ್ತದೆ. ಅದೇ ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಆಗ ಚಾಲ್ತಿ ಖಾತೆ ಹೆಚ್ಚುವರಿ (Current Account Surplus) ಎನಿಸುತ್ತದೆ.

ಅತಿಹೆಚ್ಚು ಚಾಲ್ತಿ ಖಾತೆ ಕೊರತೆ ಇರುವ ದೇಶಗಳಲ್ಲಿ ಅಮೆರಿಕ, ಬ್ರಿಟನ್, ಭಾರತ, ಫ್ರಾನ್ಸ್, ಬ್ರೆಜಿಲ್ ಮೊದಲಾದವುಗಳಿವೆ. ಇನ್ನು, ಕರೆಂಟ್ ಅಕೌಂಟ್ ಸರ್ಪ್ಲಸ್ ಇರುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ರಷ್ಯಾ, ನಾರ್ವೆ, ಜರ್ಮನಿ, ಸೌದಿ ಅರೇಬಿಯಾ, ಜಪಾನ್ ಮೊದಲಾದವುಗಳೂ ಈ ಪಟ್ಟಿಯಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!