ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

What Happens to SB Accounts Without Minimum Balance: ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟಿದ್ದು. ಕೆಲವೊಮ್ಮೆ ಒಂದೇ ಬ್ಯಾಂಕ್​ನ ಬೇರೆ ಬೇರೆ ಶಾಖೆಗಳಲ್ಲಿ ಈ ಬಗ್ಗೆ ಭಿನ್ನ ನೀತಿಗಳಿರಬಹುದು. ಶೂನ್ಯ ಬ್ಯಾಲನ್ಸ್ ಇರುವ ಅಕೌಂಟ್​ಗಳು ಹಲವಿರುತ್ತವೆ. ಅವುಗಳಿಗೆ ದಂಡ ಹಾಕಿದರೆ ನೆಗಟಿವ್ ಬ್ಯಾಲನ್ಸ್ ಆಗುತ್ತದೆ. ಅಂಥದ್ದಕ್ಕೆ ಅವಕಾಶ ಇದೆಯಾ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಏನು ಹೇಳುತ್ತದೆ? ಆರ್​ಬಿಐನ ನಿಯಮಾವಳಿಗಳೇನು, ಬ್ಯಾಂಕ್​ಗಳ ಮುಂದಿರುವ ಆಯ್ಕೆಗಳೇನು ಎಂಬ ವಿವರ ಇಲ್ಲಿದೆ.

ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್
ಮಿನಿಮಮ್ ಬ್ಯಾಲನ್ಸ್
Follow us
|

Updated on: Sep 28, 2023 | 12:15 PM

ಬಹುತೇಕ ಬ್ಯಾಂಕ್​ಗಳ ಸೇವಿಂಗ್ಸ್ ಅಕೌಂಟ್​ಗಳಲ್ಲಿ ಕನಿಷ್ಠ ಬಾಕಿ ಹಣ ಇರಬೇಕು ಎನ್ನುವ ನಿಯಮ ಇರುತ್ತದೆ. ಈ ಮಿನಿಮಮ್ ಬ್ಯಾಲನ್ಸ್ (Minimum Account Balance) ಇಲ್ಲದಿದ್ದರೆ ಪೆನಾಲ್ಟಿ ಹಾಕಲಾಗುತ್ತದೆ. ಆದರೆ, ಶೂನ್ಯ ಬ್ಯಾಲನ್ಸ್ ಇರುವ ಅಕೌಂಟ್​ಗಳು ಹಲವಿರುತ್ತವೆ. ಅವುಗಳಿಗೆ ದಂಡ ಹಾಕಿದರೆ ನೆಗಟಿವ್ ಬ್ಯಾಲನ್ಸ್ ಆಗುತ್ತದೆ. ಅಂಥದ್ದಕ್ಕೆ ಅವಕಾಶ ಇದೆಯಾ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಏನು ಹೇಳುತ್ತದೆ? ಆರ್​ಬಿಐನ ನಿಯಮಾವಳಿಗಳೇನು, ಬ್ಯಾಂಕ್​ಗಳ ಮುಂದಿರುವ ಆಯ್ಕೆಗಳೇನು ಎಂಬ ವಿವರ ಇಲ್ಲಿದೆ.

ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟಿದ್ದು. ಕೆಲವೊಮ್ಮೆ ಒಂದೇ ಬ್ಯಾಂಕ್​ನ ಬೇರೆ ಬೇರೆ ಶಾಖೆಗಳಲ್ಲಿ ಈ ಬಗ್ಗೆ ಭಿನ್ನ ನೀತಿಗಳಿರಬಹುದು. ಗ್ರಾಮೀಣ ಭಾಗದ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ನಗರದ ಬ್ಯಾಂಕುಗಳಲ್ಲಿ ದಂಡ ವಿಧಿಸುವ ಪ್ರವೃತ್ತಿ ಹೆಚ್ಚು.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸಲು ಡೆಡ್​ಲೈನ್ ಜನವರಿ 1ಕ್ಕೆ ವಿಸ್ತರಣೆ

ಮಿನಿಮಮ್ ಬ್ಯಾಲನ್ಸ್ ಹೇಗೆ ಎಣಿಸಲಾಗುತ್ತದೆ?

ಎಚ್​ಡಿಎಫ್​ಸಿ, ಎಕ್ಸಿಸ್ ಇತ್ಯಾದಿ ಕೆಲ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್​ಗಳು ಕನಿಷ್ಠ 10,000 ರೂ ಹಣ ಹೊಂದಿರಬೇಕು ಎನ್ನುವ ನಿಯಮ ಇದೆ. ಇನ್ನೂ ಕೆಲ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ 1,000 ಇರುತ್ತದೆ. ಕೆಲ ಬ್ಯಾಂಕುಗಳು ಶೂನ್ಯ ಬ್ಯಾಲನ್ಸ್ ಸೌಲಭ್ಯ ಇರುವ ಎಸ್​ಬಿ ಅಕೌಂಟ್​ಗಳಿಗೆ ಅವಕಾಶ ಕೊಡುತ್ತವೆ.

ಒಂದು ತಿಂಗಳಲ್ಲಿ ಒಂದು ಎಸ್​ಬಿ ಅಕೌಂಟ್​ನ ಮಿನಿಮಮ್ ಬ್ಯಾಲನ್ಸ್ ಎಷ್ಟು ಎಂಬುದನ್ನು ಎಣಿಸಲು ಒಂದು ಕ್ರಮ ಇದೆ. ಪ್ರತೀ ದಿನದ ಅಂತ್ಯದಲ್ಲಿ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಆ ರೀತಿ ಎಲ್ಲಾ ದಿನಗಳಿಗೂ ಎಣಿಸಲಾಗುತ್ತದೆ. ಅದನ್ನು ಒಟ್ಟುಗೂಡಿಸಿ, ಒಂದು ತಿಂಗಳ 30 ಅಥವಾ 31 ದಿನಗಳಿಂದ ಅದನ್ನು ಭಾಗಿಸಿ ಸರಾಸರಿ ಮೊತ್ತವನ್ನು ಪಡೆಯಲಾಗುತ್ತದೆ. ಅದೇ ಮಿನಿಮಮ್ ಬ್ಯಾಲನ್ಸ್ ಆಗಿರುತ್ತದೆ.

ಇದನ್ನೂ ಓದಿ: ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?

ಆರ್​ಬಿಐ ನಿಯಮ ಏನು ಹೇಳುತ್ತದೆ?

ಎಸ್​ಬಿ ಖಾತೆಯಲ್ಲಿ ಹಣವು ಮಿನಿಮಮ್ ಬ್ಯಾಲನ್ಸ್ ಮಟ್ಟಕ್ಕಿಂತ ಕಡಿಮೆ ಹೋದಾಗ ಬ್ಯಾಂಕುಗಳು ಏಕಾಏಕಿ ದಂಡ ಹಾಕುವಂತಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ಅಥವಾ ಪತ್ರಗಳ ಮೂಲಕವೂ ಸಂವಹನ ನಡೆಸಿ ನೋಟೀಸ್ ನೀಡಬೇಕು. ಮಿನಿಮಮ್ ಬ್ಯಾಲನ್ಸ್ ತುಂಬಲು ಗ್ರಾಹಕರಿಗೆ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನೀಡಬೇಕು. ಆ ಬಳಿಕವಷ್ಟೇ ದಂಡ ಹಾಕಬಹುದು ಎಂದು ಆರ್​ಬಿಐ 2014ರಲ್ಲಿ ರೂಪಿಸಿದ ನಿಯಮದಲ್ಲಿ ಸ್ಪಷ್ಟಪಡಿಸಿದೆ.

ಅಷ್ಟೇ ಅಲ್ಲ, ಎಲ್ಲಾ ಪ್ರಕರಣದಲ್ಲೂ ಸಮಾನ ರೀತಿಯಲ್ಲಿ ದಂಡ ವಿಧಿಸುವಂತಿಲ್ಲ, ಅಥವಾ ತೀರಾ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವಂತಿಲ್ಲ. ಕನಿಷ್ಠ ಮೊತ್ತಕ್ಕಿಂತ ಎಷ್ಟು ಕಡಿಮೆ ಇದೆ, ಅದಕ್ಕೆ ಅನುಗುಣವಾಗಿ ದಂಡ ವಿಧಿಸಬೇಕು ಎಂದು ಆರ್​ಬಿಐ ನಿಯಮ ಹೇಳುತ್ತದೆ. ಹಾಗೆಯೇ, ಪೆನಾಲ್ಟಿ ಹಣವನ್ನು ಕಟ್ಟಲು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸಬೇಕು ಎಂದೂ ನಿಯಮವು ಹೇಳುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ