ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸಲು ಡೆಡ್​ಲೈನ್ ಜನವರಿ 1ಕ್ಕೆ ವಿಸ್ತರಣೆ

Mutual Fund Account Nominee Rules: ಮ್ಯೂಚುವಲ್ ಫಂಡ್ ಅಕೌಂಟ್​ಗಳಿಗೆ ನಾಮಿನಿ ಹೆಸರನ್ನು ನಮೂದಿಸಬೇಕು ಇಲ್ಲ, ನಾಮಿನಿ ಹೆಸರಿಸುವುದಿಲ್ಲ ಎಂದು ಘೋಷಣೆ ಸಲ್ಲಿಸಬೇಕು ಎಂದು ಹೂಡಿಕೆದಾರರಿಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಮೂಲಕ ಸಂವಹನ ಮಾಡಿ ತಿಳಿಸಬೇಕು ಎಂದು ಎಎಂಸಿ ಮತ್ತು ಆರ್​ಟಿಎಗಳಿಗೆ ಸೆಬಿ ತಿಳಿಸಿದೆ. ನಾಮಿನಿ ಹೆಸರಿಸಲು ಸೆಪ್ಟೆಂಬರ್ 30ಕ್ಕೆ ಇದ್ದ ಡೆಡ್​ಲೈನ್ ಅನ್ನು ಜನವರಿ 1ರವರೆಗೂ ವಿಸ್ತರಿಸಲಾಗಿದೆ.

ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸಲು ಡೆಡ್​ಲೈನ್ ಜನವರಿ 1ಕ್ಕೆ ವಿಸ್ತರಣೆ
ಮ್ಯುಚುವಲ್ ಫಂಡ್
Follow us
|

Updated on: Sep 28, 2023 | 10:25 AM

ಬೆಂಗಳೂರು, ಸೆಪ್ಟೆಂಬರ್ 28: ಮ್ಯುಚುವಲ್ ಫಂಡ್ ಖಾತೆ ಹೊಂದಿರುವವರು ನಾಮಿನಿ ನಮೂದಿಸಲು ಸೆಪ್ಟೆಂಬರ್ 30ಕ್ಕೆ ಇದ್ದ ಡೆಡ್​ಲೈನ್ ಅನ್ನು ಸೆಬಿ (SEBI- Securities and Exchange Board of India) ಜನವರಿಗೆ 1ರವರೆಗೆ ವಿಸ್ತರಿಸಿದೆ. ಜನವರಿ 1ರೊಳಗೆ ನಾಮಿನಿ ಯಾರೆಂದು ತಿಳಿಸಬೇಕು. ಅಥವಾ ನಾಮಿನಿ ಹೆಸರಿಸದೇ ಇರಲು ನಿರ್ಧರಿಸಿದವರು ಅದನ್ನು ಸ್ಪಷ್ಟಪಡಿಸುವ ಡಿಕ್ಲೆರೇಶನ್ ಫಾರ್ಮ್ ಅನ್ನು ಸಲ್ಲಿಸಬೇಕು. ಒಂದು ವೇಳೆ, ಮ್ಯುಚುವಲ್ ಫಂಡ್ ಖಾತೆದಾರರು ಈ ಕ್ರಮ ಅನುಸರಿಸದಿದ್ದರೆ ಅವರ ಫೋಲಿಯೋಗಳನ್ನು (ಹೂಡಿಕೆ) ಸ್ಥಗಿತಗೊಳಿಸಲಾಗುವುದು ಎಂದು ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ತಿಳಿಸಿದೆ.

‘ಮಾರುಕಟ್ಟೆ ಸಹಭಾಗಿಗಳ ಅಭಿಪ್ರಾಯದ ಮೇರೆಗೆ ಫೋಲಿಯೋಗಳನ್ನು ಫ್ರೀಜ್ ಮಾಡುವ ಕ್ರಮವನ್ನು 2023ರ ಸೆಪ್ಟೆಂಬರ್ 30ರ ಬದಲು 2024ರ ಜನವರಿ 1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಸೆಬಿ ತನ್ನ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?

ಮ್ಯುಚುವಲ್ ಫಂಡ್​ಗಳನ್ನು ನಿರ್ವಹಿಸುವ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು (ಎಎಂಸಿ) ಮತ್ತು ಆರ್​ಟಿಎಗಳು ತಮ್ಮಲ್ಲಿನ ಹೂಡಿಕೆದಾರರಿಗೆ ನಾಮಿನೇಶನ್ ವಿಚಾರವಾಗಿ ಎಚ್ಚರಿಸಬೇಕು ಎಂದೂ ಸೆಬಿ ಹೇಳಿದೆ. ಮ್ಯೂಚುವಲ್ ಫಂಡ್ ಅಕೌಂಟ್​ಗಳಿಗೆ ನಾಮಿನಿ ಹೆಸರನ್ನು ನಮೂದಿಸಬೇಕು ಇಲ್ಲ, ನಾಮಿನಿ ಹೆಸರಿಸುವುದಿಲ್ಲ ಎಂದು ಘೋಷಣೆ ಸಲ್ಲಿಸಬೇಕು ಎಂದು ಹೂಡಿಕೆದಾರರಿಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಮೂಲಕ ಸಂವಹನ ಮಾಡಿ ತಿಳಿಸಬೇಕು ಎಂದು ಎಎಂಸಿ ಮತ್ತು ಆರ್​ಟಿಎಗಳಿಗೆ ಸೆಬಿ ತಿಳಿಸಿದೆ.

ಈ ಹಿಂದೆ ಹಲವು ಮ್ಯೂಚುವಲ್ ಫಂಡ್​ಗಳು ನಾಮಿನಿ ಇಲ್ಲದೆಯೇ ಫೋಲಿಯೋ ಅಕೌಂಟ್​ಗಳನ್ನು ತೆರೆದಿದ್ದವು. ಹಾಗೆಯೇ, ಜಂಟಿಯಾಗಿ ಮ್ಯುಚುವಲ್ ಫಂಡ್ ಖಾತೆ ತೆರೆದಿದ್ದವರಲ್ಲೂ ಬಹಳ ಮಂದಿ ನಾಮಿನಿ ಹೆಸರಿಸಿಲ್ಲ. ಹೀಗಾಗಿ, ಸೆಬಿ ಈಗ ನಾಮಿನಿ ವಿಚಾರವನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್​ಡಿ

ಯಾಕೆ ಬೇಕು ನಾಮಿನಿ?

ಒಂದು ಖಾತೆಗೆ ನಾಮಿನಿ ಎಂದರೆ ಆ ಖಾತೆಯ ಹಣಕ್ಕೆ ವಾರಸುದಾರರಾಗಿರುತ್ತಾರೆ. ಬ್ಯಾಂಕ್ ಖಾತೆಯಾಗಲೀ, ಎಲ್​ಐಸಿಯಾಗಲೀ, ಪಿಎಫ್ ಆಗಲೀ ಯಾವುದೇ ಹಣಕಾಸು ಯೋಜನೆಯಾಗಲೀ ಅದಕ್ಕೆ ನಾಮಿನಿ ಹೆಸರಿಸಬೇಕು. ಖಾತೆದಾರರು ಅಕಾಲಿಕವಾಗಿ ಮೃತಪಟ್ಟಾಗ ಆ ಖಾತೆಯ ಹಣ ಯಾರಿಗೆ ಹೋಗಬೇಕು ಎಂಬುದನ್ನು ನಾಮಿನಿ ಹೆಸರಿಸುವ ಮೂಲಕ ಮುಂಚಿತವಾಗಿ ತಿಳಿಸಿರಬೇಕು. ಇಲ್ಲದಿದ್ದರೆ ಆ ಹಣ ಯಾರಿಗೂ ಹೋಗದೇ ಉಳಿದುಬಿಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ