ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್​ಡಿ

RD Benefits: ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ಗಳಲ್ಲಿ ಖಾತೆಗಳನ್ನು ಹೊಂದಿರುವ ಯಾರು ಬೇಕಾದರೂ ಆರ್​ಡಿ ಸ್ಕೀಮ್ ಪಡೆಯಬಹುದು. ರೆಕರಿಂಗ್ ಡೆಪಾಸಿಟ್ ಸ್ಕೀಮ್ ಬಹಳ ಸಾಮಾನ್ಯವಾಗಿ ಬಳಕೆಯಾಗುವ ಉಳಿತಾಯ ಮತ್ತು ಹೂಡಿಕೆ ಯೋಜನೆ ಆಗಿದೆ. ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಕಟ್ಟುವ ಮೂಲಕ ನೀವು ಹಣ ಉಳಿತಾಯ ಮಾಡಬಹುದು. ಅದೇ ವೇಳೆ ಹೂಡಿಕೆಯನ್ನು ಬೆಳೆಸಬಹುದು. ಇದು ಬಹಳ ಸರಳ ಹಾಗೂ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.

ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್​ಡಿ
ರೆಕರಿಂಗ್ ಡೆಪಾಸಿಟ್
Follow us
|

Updated on: Sep 26, 2023 | 3:15 PM

ಆರ್​ಡಿ ಎಂದೇ ಚಿರಪರಿಚಿತವಾಗಿರುವ ರೆಕರಿಂಗ್ ಡೆಪಾಸಿಟ್ ಸ್ಕೀಮ್ (Recurring deposit plan) ಬಹಳ ಸಾಮಾನ್ಯವಾಗಿ ಬಳಕೆಯಾಗುವ ಉಳಿತಾಯ ಮತ್ತು ಹೂಡಿಕೆ ಯೋಜನೆ (Investment Scheme) ಆಗಿದೆ. ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಕಟ್ಟುವ ಮೂಲಕ ನೀವು ಹಣ ಉಳಿತಾಯ ಮಾಡಬಹುದು. ಅದೇ ವೇಳೆ ಹೂಡಿಕೆಯನ್ನು ಬೆಳೆಸಬಹುದು. ಇದು ಬಹಳ ಸರಳ ಹಾಗೂ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಪಿಪಿಎಫ್, ಎನ್​ಎಸ್​ಸಿ, ಕೆವಿಪಿ, ಬ್ಯಾಂಕ್ ಎಫ್​ಡಿ ಇತ್ಯಾದಿ ಇತರ ಹೂಡಿಕೆ ಯಂತ್ರಗಳಲ್ಲಿ ಸಿಗುವಷ್ಟೇ ರಿಟರ್ನ್ ಆರ್​ಡಿಯಿಂದಲೂ ಪಡೆಯಬಹುದು. ನಿಯಮಿತವಾಗಿ ಹಣ ಹೂಡಿಕೆ ಮಾಡುವುದರಿಂದ ಹೆಚ್ಚು ಅನುಕೂಲಗಳನ್ನು ಒದಗಿಸುತ್ತದೆ. ನಿಮ್ಮ ಮಧ್ಯಮ, ದೀರ್ಘಾವಧಿ ಹಣಕಾಸು ಗುರಿಗಳಿಗೆ ತಕ್ಕಂತೆ ಆರ್​ಡಿಯನ್ನು ಆರಂಭಿಸಬಹುದು.

ರೆಕರಿಂಗ್ ಡೆಪಾಸಿಟ್​ನಿಂದ ಆಗುವ ಲಾಭಗಳೇನು?

  • ನಿಯಮಿತವಾಗಿ ಹಣ ಹೂಡಿಕೆ ಮಾಡಬಹುದು. ಇದರಿಂದ ಹಣಕಾಸು ಶಿಸ್ತು ಹೆಚ್ಚುತ್ತದೆ.
  • ಬಹುತೇಕ ಇತರ ಸೇವಿಂಗ್ಸ್ ಸ್ಕೀಮ್​ಗಳಷ್ಟೇ ಬಡ್ಡಿದರ ಆರ್​ಡಿಯಿಂದಲೂ ಸಿಗುತ್ತದೆ.
  • ಪೂರ್ವ ಲೆಕ್ಕಾಚಾರದ ಪ್ರಕಾರವೇ ರಿಟರ್ನ್ ಸಿಗುತ್ತದೆ.
  • ಯಾವುದೇ ಬ್ಯಾಂಕ್​ನಲ್ಲಿ 5 ಲಕ್ಷ ರೂವರೆಗಿನ ಠೇವಣಿಗೆ ಇನ್ಷೂರೆನ್ಸ್ ಬೆಂಬಲ ಇರುತ್ತದೆ. ಹೀಗಾಗಿ ಆರ್​ಡಿಯಲ್ಲಿನ ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ.
  • ಆರ್​ಡಿ ಮೊತ್ತದ ಮೇಲೆ ಸಾಲ ಕೂಡ ಪಡೆಯುವ ಅವಕಾಶ ಇರುತ್ತದೆ. ನಿಮ್ಮ ಆರ್​ಡಿಯನ್ನು ಹಿಂಪಡೆಯದೆಯೇ ಆ ಹಣವನ್ನು ಸಾಲದ ರೂಪದಲ್ಲಿ ಬಳಸಬಹುದು.
  • ಆರ್​ಡಿ ಖಾತೆಗಳನ್ನು ತೆರೆಯುವುದು ಬಹಳ ಸುಲಭ. ಬ್ಯಾಂಕ್​ನ ಆ್ಯಪ್, ನೆಟ್​ಬ್ಯಾಂಕಿಂಗ್ ಮೂಲಕ ಬಹಲ ಸುಲಭವಾಗಿ ಆರ್​ಡಿ ಓಪನ್ ಮಾಡಬಹುದು.

ಇದನ್ನೂ ಓದಿ: ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?

ಐದು ವರ್ಷದ ಅವಧಿಯ ಆರ್​ಡಿಗಳಿಗೆ ಬಡ್ಡಿದರಗಳೆಷ್ಟು?

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಪೈಕಿ ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕುಗಳು ಶೇ. 6.70ರಷ್ಟು ಬಡ್ಡಿ ನೀಡುತ್ತವೆ. ಇತರ ಬಹುತೇಕ ಬ್ಯಾಂಕುಗಳು ಶೇ. 6.50ರಷ್ಟು ಬಡ್ಡಿ ನೀಡುತ್ತವೆ. ಪೋಸ್ಟ್ ಆಫೀಸ್​ನಲ್ಲೂ ರೆಕರಿಂಗ್ ಡೆಪಾಸಿಟ್ ಸ್ಕೀಮ್ ಇದ್ದು, ಅಲ್ಲಿಯೂ ಶೇ. 6.50ರಷ್ಟು ಬಡ್ಡಿ ಸಿಗುತ್ತದೆ.

ಇನ್ನು, ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಸ್ಕೀಮ್​ಗಳಿಗೆ ಅತಿಹೆಚ್ಚು ಬಡ್ಡಿ ಇರುತ್ತದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ಯಾದಿ ಕಡೆ ಶೇ. 8ಕ್ಕಿಂತಲೂ ಹೆಚ್ಚು ವಾರ್ಷಿಕ ರಿಟರ್ನ್ ಇರುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ

ಖಾಸಗಿ ಬ್ಯಾಂಕುಗಳಲ್ಲಿ ಹೆಚ್ಚಿನವು ಆರ್​ಡಿ ಠೇವಣಿಗಳಿಗೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ. ಎಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಡಿಸಿಬಿ ಬ್ಯಾಂಕ್, ಐಸಿಐಸಿಐ, ಐಡಿಎಫ್​ಸಿ ಮೊದಲಾದ ಬ್ಯಾಂಕುಗಳಲ್ಲಿ ಶೇ. 7 ಹಾಗೂ ಅದಕ್ಕಿಂತಲೂ ಹೆಚ್ಚು ಬಡ್ಡಿ ಕೊಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ