ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?

Retirement Plan: ಸರ್ಕಾರಿ ಉದ್ಯೋಗಿಗಳಾದರೆ ಪಿಂಚಣಿ ಸಿಗುತ್ತದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಈ ಅವಕಾಶ ಇರುವುದಿಲ್ಲ. ಅವರ ನಿವೃತ್ತಿ ಯೋಜನೆಯನ್ನು ಅವರೇ ಕೈಗೊಳ್ಳಬೇಕು. ನೀವು ವೃತ್ತಿಯ ಆರಂಭಿಕ ದಿನಗಳಿಂದಲೇ ನಿವೃತ್ತಿ ಬಗ್ಗೆ ಯೋಜನೆ ಕೈಗೊಳ್ಳಬೇಕು. ಹೆಚ್ಚಿನ ಜನರು ಈ ಆಲೋಚನೆ ಮಾಡಿರುವುದಿಲ್ಲ. ಇನ್ನೂ ಕೆಲವರು ನಿವೃತ್ತಿ ಆಗುವವರೆಗೂ ವೃದ್ಧಾಪ್ಯ ಜೀವನದ ಬಗ್ಗೆ ಯೋಚಿಸಿರುವುದಿಲ್ಲ. ನೀವು ನಿವೃತ್ತಿಯ ದಿನಗಳನ್ನು ಎದುರುನೋಡುತ್ತಿದ್ದರೆ ಮುಂದಿನ ದಾರಿಗಳೇನು?

ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?
ಪಿಂಚಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2023 | 2:11 PM

ನಿಮ್ಮ ಉದ್ಯೋಗದ ಅವಧಿ ಮುಗಿಯುತ್ತಾ ಬರುತ್ತಿದೆಯಾ? ಸರ್ಕಾರಿ ಉದ್ಯೋಗಿಗಳಾದರೆ ಪಿಂಚಣಿ ಸಿಗುತ್ತದೆ. ಹಣದುಬ್ಬರದ ಹೊಡೆತ ತಡೆದುಕೊಳ್ಳಲು ವರ್ಷಕ್ಕೆ ಎರಡು ಬಾರಿ ಡಿಯರ್ನೆಸ್ ರಿಲೀಫ್ (DR- Dearness Relief) ಅನ್ನೂ ನೀಡಲಾಗುತ್ತದೆ. ಹೀಗಾಗಿ, ಸರ್ಕಾರಿ ಉದ್ಯೋಗಿಗಳ ಪಿಂಚಣಿ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಆದರೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಈ ಅವಕಾಶ ಇರುವುದಿಲ್ಲ. ಅವರ ನಿವೃತ್ತಿ ಯೋಜನೆಯನ್ನು ಅವರೇ ಕೈಗೊಳ್ಳಬೇಕು. ನೀವು ವೃತ್ತಿಯ ಆರಂಭಿಕ ದಿನಗಳಿಂದಲೇ ನಿವೃತ್ತಿ ಬಗ್ಗೆ ಯೋಜನೆ ಕೈಗೊಳ್ಳಬೇಕು. ಹೆಚ್ಚಿನ ಜನರು ಈ ಆಲೋಚನೆ ಮಾಡಿರುವುದಿಲ್ಲ. ಇನ್ನೂ ಕೆಲವರು ನಿವೃತ್ತಿ ಆಗುವವರೆಗೂ ವೃದ್ಧಾಪ್ಯ ಜೀವನದ ಬಗ್ಗೆ ಯೋಚಿಸಿರುವುದಿಲ್ಲ. ನೀವು ನಿವೃತ್ತಿಯ ದಿನಗಳನ್ನು ಎದುರುನೋಡುತ್ತಿದ್ದರೆ ಮುಂದಿನ ದಾರಿಗಳೇನು?

ನಿವೃತ್ತಿಯ ಸಮೀಪ ಇದ್ದರೆ ಪಿಂಚಣಿಗಾಗಿ ಹೀಗೆ ಮಾಡಿ…

ಮೊದಲಿಗೆ ನಿಮ್ಮ ಬಳಿ ಎಷ್ಟು ಹೂಡಿಕೆ ಮತ್ತು ಉಳಿತಾಯ ಹಣ ಇದೆ ಎಂಬುದು ಲೆಕ್ಕ ಹಾಕಿ. ಇನ್ಷೂರೆನ್ಸ್ ಪಾಲಿಸಿಗಳಿಂದ ಹಿಡಿದು ಪಿಪಿಎಫ್, ಎಫ್​ಡಿ ಇತ್ಯಾದಿ ಯಾವುದೇ ಹೂಡಿಕೆಯಂತ್ರಗಳಲ್ಲಿ ನಿಮ್ಮ ಹಣದ ಮೊತ್ತ ತಿಳಿಯಿರಿ. ಸ್ಥಿರಾಸ್ತಿ ಇದ್ದು ಅದರ ಮೌಲ್ಯ ಎಷ್ಟು, ಅದರಿಂದ ಬರುವ ಬಾಡಿಗೆ ಆದಾಯ ಎಷ್ಟು ಇತ್ಯಾದಿ ಎಲ್ಲವನ್ನೂ ಎಣಿಸಿ.

ಇದನ್ನೂ ಓದಿ: ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ

ಪಿಪಿಎಫ್, ಠೇವಣಿ ಇತ್ಯಾದಿ ಹೂಡಿಕೆ ಯೋಜನೆಗಳಲ್ಲಿ ನಿಮ್ಮಲ್ಲಿರುವ ಒಟ್ಟು ಹಣ 50 ಲಕ್ಷಕ್ಕೂ ಹೆಚ್ಚಿದ್ದರೆ ನಿವೃತ್ತಿ ಬಳಿಕ ತಿಂಗಳಿಗೆ 20ರಿಂದ 30 ಸಾವಿರ ರೂನಷ್ಟು ಪಿಂಚಣಿ ಸಿಗುವಂತೆ ಮಾಡಬಹುದು. ಆದರೆ, ಯಾವುದಕ್ಕೆ ಹೂಡಿಕೆ ಮಾಡಬೇಕು ಎಂಬುದು ಮುಖ್ಯ. ನಿವೃತ್ತಿ ಸಂದರ್ಭದಲ್ಲಿ ನೇರವಾಗಿ ಷೇರುಗಳ ಮೇಲೆ ಹೂಡಿಕೆ ಮಾಡುವುದು ರಿಸ್ಕಿ ಎನಿಸುತ್ತದೆ. ಅದರ ಬದಲು ಮ್ಯೂಚುವಲ್ ಫಂಡ್ ಎಸ್​ಐಪಿ ಪಡೆಯಬಹುದು.

ಒಂದೇ ರೀತಿಯ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವ ಬದಲು ವಿವಿಧ ರೀತಿಯ ಎಂಎಫ್​ಗಳಲ್ಲಿ ಹೂಡಿಕೆ ಮಾಡಿ. ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ (ಎಸ್​ಡಬ್ಲ್ಯುಪಿ) ಅನ್ನು ಆರಂಭಿಸಿ. ಇದರಿಂದ, ಅಧಿಕ ರಿಸ್ಕ್ ಇಲ್ಲದೇ ತಕ್ಕಮಟ್ಟಿಗೆ ಮಾಸಿಕ ವರಮಾನ ಸಿಗುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ

ಎಲ್​ಐಸಿಯ ರಿಟೈರ್ಮೆಂಟ್ ಪ್ಲಾನ್​ಗಳಿವೆ. ಆದರೆ, ಇದರಿಂದ ಹೆಚ್ಚಿನ ರಿಟರ್ನ್ ಸಿಗುವುದಿಲ್ಲ. ವಿಸ್ತೃತವಾದ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ಶೇ. 12ರಷ್ಟು ರಿಟರ್ನ್ ನಿರೀಕ್ಷಿಸಬಹುದು. ನಿವೃತ್ತಿ ಬಳಿಕ ಈ ಹೂಡಿಕೆಗಳಿಂದ ನಿಮಗೆ ಸಿಗುವ ಮಾಸಿಕ ಆದಾಯ ಸಾಕಾಗುತ್ತಿಲ್ಲವೆಂದರೆ, ಬೇರೆ ದಾರಿ ಅವಲೋಕಿಸಿ. ನಿಮ್ಮಲ್ಲಿ ಸ್ಥಿರಾಸ್ತಿ ಇದ್ದು ಅದರಿಂದ ಮಾಸಿಕ ಆದಾಯ ಬರುತ್ತಿಲ್ಲವಾದರೆ, ಅದನ್ನು ಮಾರಿ ಆ ಹಣವನ್ನು ಹೂಡಿಕೆಗೆ ಬಳಸಬಹುದು. ಇವೆಲ್ಲವನ್ನೂ ನಿರ್ಧರಿಸುವ ಮುನ್ನ ನೀವು ಸೂಕ್ತ ಹಣಕಾಸು ತಜ್ಞರೊಬ್ಬರನ್ನು ಸಂಪರ್ಕಿಸುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ