AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ

Tips In Buying New Home: ನಮ್ಮ ಜೀವಿತಾವಧಿಯ ಸಂಪಾದನೆ ಎಲ್ಲವನ್ನೂ ಮನೆಗಾಗಿ ವ್ಯಯಿಸುತ್ತೇವೆ. ನಿವೇಶನದಲ್ಲಿ ಹೊಸ ಮನೆ ಕಟ್ಟುವುದೋ, ಈಗಾಗಲೆ ಕಟ್ಟಿರುವ ಮನೆಯನ್ನು ಖರೀದಿಸುವುದೋ ಅಥವಾ ಅಪಾರ್ಟ್ಮೆಂಟ್ ಖರೀದಿಸುವುದೋ ಯಾವುದೇ ಆದರೂ ನಮ್ಮ ಜೀವಮಾನದ ಉಳಿತಾಯ ಹಣವನ್ನು ಧಾರೆ ಎರೆಯಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ನಮ್ಮ ಮನೆ ಹಾಗೂ ಅದಕ್ಕೆ ನಾವು ಮಾಡುವ ವೆಚ್ಚ ಅದೆಷ್ಟು ಮುಖ್ಯ ಎಂಬುದು ನಮಗೇ ಗೊತ್ತು. ಮನೆ ಪಡೆಯುವಾಗ ಯಾವ್ಯಾವ ಅಂಶಗಳ ಬಗ್ಗೆ ಯೋಚಿಸಬೇಕು ಎಂಬ ವಿವರ ಇಲ್ಲಿದೆ...

ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ
ಗೃಹಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 25, 2023 | 2:58 PM

Share

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂದು ದೊಡ್ಡವರು ಗಾದೆ ಮಾತು ಹೇಳುವುದಿದೆ. ಒಬ್ಬನ ಜೀವಿತಾವಧಿಯಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಒಂದು ಪ್ರಮುಖ ಮೈಲಿಗಲ್ಲು ಅಥವಾ ಸಾಧನೆ ಎಂದರೆ ಅತಿಶಯೋಕ್ತಿ ಆಗಲಾರದು. ಅದರಲ್ಲೂ ಸಾಧಾರಣ ಸಂಬಳದಾರ ಅಥವಾ ಸಾಮಾನ್ಯ ಸ್ಥಿತಿವಂತನಿಗೆ ಇದು ಅಕ್ಷರಶಃ ಅನ್ವಯ ಆಗುವ ಸತ್ಯಾಂಶ. ನಮ್ಮ ಜೀವಿತಾವಧಿಯ ಸಂಪಾದನೆ (Lifetime earning) ಎಲ್ಲವನ್ನೂ ಮನೆಗಾಗಿ ವ್ಯಯಿಸುತ್ತೇವೆ. ನಿವೇಶನದಲ್ಲಿ ಹೊಸ ಮನೆ ಕಟ್ಟುವುದೋ, ಈಗಾಗಲೆ ಕಟ್ಟಿರುವ ಮನೆಯನ್ನು ಖರೀದಿಸುವುದೋ ಅಥವಾ ಅಪಾರ್ಟ್ಮೆಂಟ್ ಖರೀದಿಸುವುದೋ ಯಾವುದೇ ಆದರೂ ನಮ್ಮ ಜೀವಮಾನದ ಉಳಿತಾಯ ಹಣವನ್ನು ಧಾರೆ ಎರೆಯಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ನಮ್ಮ ಮನೆ ಹಾಗೂ ಅದಕ್ಕೆ ನಾವು ಮಾಡುವ ವೆಚ್ಚ (buying home) ಅದೆಷ್ಟು ಮುಖ್ಯ ಎಂಬುದು ನಮಗೇ ಗೊತ್ತು.

ಮನೆ ಖರೀದಿ ನಿರ್ಧಾರಕ್ಕೆ ಭಾವುಕರಾಗುವುದು ಬೇಡ

ಮನೆ ಎನ್ನುವುದು ನಮ್ಮ ಭಾವನೆಗಳೊಂದಿಗೆ ಮಿಳಿತವಾಗಿರುವ ಆಸ್ತಿ. ಮನೆ ಖರೀದಿಸುವಾಗ ಅದಮ್ಯವಾದ ಭಾವನೆ ನಮ್ಮನ್ನು ಪುಳಕಿತಗೊಳಿಸುತ್ತದೆ. ಹೀಗಾಗಿ ನಾವು ಮನೆ ಖರೀದಿಸುವಾಗ ಭಾವನಾತ್ಮಕವಾಗಿ ಯೋಚಿಸುವುದುಂಟು. ಆದರೆ, ಒಂದು ಆಸ್ತಿ ಖರೀದಿಸುವ ಮುನ್ನ ನಿಮ್ಮ ಭಾವನೆಯನ್ನು ಬದಿಗಿಟ್ಟು ವಾಸ್ತವ ನೆಲಗಟ್ಟಿನಲ್ಲಿ ಯೋಜಿಸುವುದು ಉತ್ತಮ.

ಆರ್ಥಿಕ ಸ್ಥಿತಿ ಬಗ್ಗೆ ಯೋಚಿಸಿ

ಮೊದಲೇ ಹೇಳಿದಂತೆ ಮನೆ ಖರೀದಿಸುವುದಕ್ಕೆ ಸಾಕಷ್ಟು ಹಣ ಬೇಕು. ಆಸ್ತಿ ಇರುವ ಸ್ಥಳ, ಅದರ ಬೆಲೆ, ನಿಮ್ಮ ಹಣಕಾಸು ಸ್ಥಿತಿ ಇವೆಲ್ಲವನ್ನೂ ಪರಿಗಣಿಸಿ ಖರೀದಿಸಬೇಕೋ ಬೇಡವೊ ಎಂದು ನಿರ್ಧರಿಸಬೇಕು. ಇಲ್ಲದಿದ್ದರೆ ನಮಗೆ ಹಣ ಹೊಂದಿಸಲು ಕಷ್ಟವಾಗಿ ತೀರಾ ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗಬಹುದು.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ

ಆಸ್ತಿ ಸರಿಯಾದ ಸ್ಥಳದಲ್ಲಿದೆಯಾ ನೋಡಿ

ನಿಮ್ಮ ಮನೆ ಯಾವ ಸ್ಥಳದಲ್ಲಿ ಇದೆ ಎನ್ನುವುದು ಮುಖ್ಯ. ತೀರಾ ಕಡಿಮೆ ಬೆಲೆಗೆ ಸಿಕ್ಕಿತೆಂದು ಅನನುಕೂಲ ಇರುವ ಸ್ಥಳದಲ್ಲಿ ಮನೆ ಪಡೆದರೆ ಮುಂದೆ ತೊಂದರೆ ಆಗಬಹುದು. ಪ್ರದೇಶದಲ್ಲಿ ಸಾಕಷ್ಟು ಮನೆಗಳಿರಬೇಕು. ಇಲ್ಲವೇ ಮುಂದಿನ ಕೆಲ ವರ್ಷಗಳಲ್ಲಿ ಮನೆಗಳಾಗುವ ದಟ್ಟ ಸಾಧ್ಯತೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಪ್ರದೇಶಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾ ಎಂದು ನೋಡಿ. ಶಾಲೆ, ಆಸ್ಪತ್ರೆ ಇತ್ಯಾದಿ ಅಗತ್ಯ ಸೌಲಭ್ಯಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಿ.

ಮನೆ ಖರೀದಿಗೆ ಬೇಕಾದ ಸಾಲಕ್ಕೆ ವ್ಯವಸ್ಥೆ

ನಿಮ್ಮ ಮನೆಯ ಬೆಲೆ ಶೇ. 20ರಷ್ಟು ಹಣವನ್ನು ನೀವು ಡೌನ್​ಪೇಮೆಂಟ್ ಮಾಡಿ ಉಳಿದ ಹಣವನ್ನು ಬ್ಯಾಂಕ್​ನಿಂದ ಸಾಲವಾಗಿ ಪಡೆಯಬಹುದು. ಗೃಹಸಾಲಕ್ಕೆ ನೀವು ಬ್ಯಾಂಕ್​ನಿಂದ ಪ್ರೀ ಅಪ್ರೂವಲ್ ಕೂಡ ಪಡೆಯಬಹುದು.

ಸಾಲ ಮರುಪಾವತಿಗೆ ಯೋಜಿಸಿ

ಬ್ಯಾಂಕುಗಳು ನಿಮಗೆ ಸಾಲ ಕೊಡುವಾಗ ನಿಮ್ಮ ಹಣಕಾಸು ಸಾಮರ್ಥ್ಯ, ಹಿಂದಿನ ಸಾಲದ ಇತಿಹಾಸ ಇವೆಲ್ಲವನ್ನೂ ಪರಿಗಣಿಸುತ್ತವೆ. ನೀವು ಸಾಲದ ಅವಧಿ ಮತ್ತು ಮಾಸಿಕ ಕಂತಿನ ಮೊತ್ತದ ಬಗ್ಗೆಯೂ ಎಚ್ಚರದಿಂದಿರಿ. ನಿಮ್ಮಲ್ಲಿ ಹೆಚ್ಚು ಆದಾಯ ಇದ್ದರೆ ಇಎಂಐ ಮೊತ್ತವನ್ನು ಹೆಚ್ಚಿಸಿ ಬೇಗನೇ ಸಾಲ ತೀರಿಸಬಹುದು. ಆದಾಯ ತಕ್ಕಮಟ್ಟಿಗೆ ಇಲ್ಲದಿದ್ದರೆ ಇಎಂಐ ಅನ್ನು ಅನುಗುಣವಾಗಿ ಇಳಿಕೆ ಮಾಡಬಹುದು.

ಇದನ್ನೂ ಓದಿ: ಈ ಸರ್ಕಾರಿ ಬ್ಯಾಂಕಲ್ಲಿ ಭರ್ಜರಿ ಫೆಸ್ಟಿವ್ ಆಫರ್; ಎಲ್ಲಾ ಸಾಲವೂ ಅಗ್ಗವೋ ಅಗ್ಗ; ಡಿ. 31ರವರೆಗೂ ಅವಕಾಶ

ಇತರ ವೆಚ್ಚಗಳಿಗೆ ಹಣಕಾಸು ಹೊಂದಿಕೆ

ಮನೆ ಖರೀದಿಸುವಾಗ ಪೂರ್ಣ ಹಣವನ್ನು ಬ್ಯಾಂಕ್​ನಿಂದ ಸಾಲವಾಗಿ ಪಡೆಯಲು ಆಗುವುದಿಲ್ಲ. ಡೌನ್​ಪೇಮೆಂಟ್ ಮತ್ತು ಬೇರೆ ಮನೆ ವೆಚ್ಚಗಳು ಇರುತ್ತವೆ. ಅವೆಲ್ಲವಕ್ಕೂ ನೀವು ಹಣಕಾಸು ಹೊಂದಿಸಬೇಕು. ಇಲ್ಲದಿದ್ದರೆ ಗೃಹ ಸಾಲದ ಜೊತೆಗೆ ಬೇರೆ ಸಾಲಗಳೂ ಸೇರಿಕೊಂಡು ಶೂಲಕ್ಕೆ ಸಿಕ್ಕಿಕೊಂಡಂತಾಗಿಬಿಡಬಹುದು.

ಯಾರಿಂದ ಮನೆ ಖರೀದಿಸುತ್ತೀರಿ ಎಂಬುದು ಮುಖ್ಯ

ಕಡಿಮೆ ಬೆಲೆಗೆ ಮನೆ ಅಥವಾ ನಿವೇಶನ ಸಿಕ್ಕಿತೆಂದು ಸಂತುಷ್ಟರಾಗಿಬಿಡುತ್ತೇವೆ. ಆದರೆ, ನಿವೇಶನದ ದಾಖಲೆಪತ್ರಗಳನ್ನು ತಜ್ಞರ ಮೂಲಕ ಪರಿಶೀಲಿಸಿ ಎಲ್ಲವೂ ಸರಿ ಇದೆಯಾ ಎಂದು ಖಚಿತಪಡಿಸಿಕೊಳ್ಳಿ. ಕೆಲ ಬಿಲ್ಡರ್​ಗಳು ನಿಮಗೆ ಮನೆ ಮಾರುತ್ತಾರಾದರೂ ಅದನ್ನು ವಾಸಕ್ಕೆ ಒಪ್ಪಿಸಲು ಹಲವು ವರ್ಷಗಳನ್ನೇ ತೆಗೆದುಕೊಳ್ಳುವುದುಂಟು.

ಇನ್ನಷ್ಟು ಪರ್ಸನಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Mon, 25 September 23

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್