ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ

Know How to Revive Lapsed LIC Policy: ಎಲ್​ಐಸಿಯ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್​ಗಳನ್ನು ನೀವು ನಿರ್ದಿಷ್ಟ ಅವಧಿಯಲ್ಲಿ ಕಟ್ಟದೇ ಹೋದರೆ ಪಾಲಿಸಿ ನಿಷ್ಕ್ರಿಯಗೊಳ್ಳಬಹುದು. ನೀವು ಕೆಲವಾರು ವರ್ಷ ಪ್ರೀಮಿಯಮ್ ಕಟ್ಟಿ ಪಾಲಿಸಿ ಲ್ಯಾಪ್ಸ್ ಆಗಿ ಹೋದರೆ ಅದನ್ನು ಕೈಬಿಟ್ಟುಬಿಟ್ಟರೆ ನಷ್ಟವೇ. ಲ್ಯಾಪ್ಸ್ ಅಥವಾ ನಿಷ್ಕ್ರಿಯಗೊಂಡಿರುವ ನಿಮ್ಮ ಎಲ್​ಐಸಿ ಪಾಲಿಸಿಯನ್ನು ಮತ್ತೆ ಚಾಲನೆಗೊಳಿಸಲು ಮಾರ್ಗೋಪಾಯಗಳಿವೆ. ಈ ಬಗ್ಗೆ ವಿವರ ಇಲ್ಲಿದೆ...

ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ
ಎಲ್​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2023 | 6:30 PM

ಇನ್ಷೂರೆನ್ಸ್ ಆಗಲೀ ಅಥವಾ ಯಾವುದಾದರೂ ನಿಯಮಿತ ಹೂಡಿಕೆ ಯೋಜನೆಯಾಗಲೀ ಕೆಲವೊಮ್ಮೆ ಕಾರಣಾಂತರಗಳಿಂದ ಹಣ ಪಾವತಿಸಲು ಸಾಧ್ಯವಾಗದೇ ಹೋಗಬಹುದು. ಉದ್ಯೋಗ ನಷ್ಟ, ಅನಾರೋಗ್ಯ ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಹೀಗಾಗಬಹುದು. ಎಲ್​ಐಸಿಯ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್​ಗಳನ್ನು (LIC Insurance Policy) ನೀವು ನಿರ್ದಿಷ್ಟ ಅವಧಿಯಲ್ಲಿ ಕಟ್ಟದೇ ಹೋದರೆ ಪಾಲಿಸಿ ನಿಷ್ಕ್ರಿಯಗೊಳ್ಳಬಹುದು. ನೀವು ಕೆಲವಾರು ವರ್ಷ ಪ್ರೀಮಿಯಮ್ ಕಟ್ಟಿ ಪಾಲಿಸಿ ಲ್ಯಾಪ್ಸ್ ಆಗಿ ಹೋದರೆ ಅದನ್ನು ಕೈಬಿಟ್ಟುಬಿಟ್ಟರೆ ನಷ್ಟವೇ. ಲ್ಯಾಪ್ಸ್ ಅಥವಾ ನಿಷ್ಕ್ರಿಯಗೊಂಡಿರುವ ನಿಮ್ಮ ಎಲ್​ಐಸಿ ಪಾಲಿಸಿಯನ್ನು ಮತ್ತೆ ಚಾಲನೆಗೊಳಿಸಲು ಮಾರ್ಗೋಪಾಯಗಳಿವೆ.

ಎಷ್ಟು ತಡವಾಗಿ ಪ್ರೀಮಿಯಮ್ ಕಟ್ಟಬಹುದು?

ಸಾಮಾನ್ಯವಾಗಿ ಎಲ್​ಐಸಿ ಸಂಸ್ಥೆ ತನ್ನ ಪಾಲಿಸಿದಾರರಿಗೆ ಪ್ರೀಮಿಯಮ್ ಕಟ್ಟಲು ನಿಗದಿತ ದಿನಕ್ಕಿಂತ ಒಂದಷ್ಟು ಹೆಚ್ಚಿನ ಕಾಲಾವಕಾಶ ಕೊಡುತ್ತದೆ. ನಿಮ್ಮ ಪ್ರೀಮಿಯಮ್ ಕಟ್ಟಸಲು ಜೂನ್ 30 ಡೆಡ್​ಲೈನ್ ಎಂದಿದ್ದರೂ ಗ್ರೇಸ್ ಪೀರಿಯಡ್ ಆಗಿ 30 ಅಥವಾ 31 ದಿನ ಹೆಚ್ಚುವರಿ ಕಾಲಾವಕಾಶ ಇರುತ್ತದೆ. ಈ ಹೆಚ್ಚುವರಿ ಅವಧಿಯಲ್ಲಿ ನೀವು ಪ್ರೀಮಿಯಮ್ ಕಟ್ಟದೇ ಹೋದಾಗ ಪಾಲಿಸಿ ಲ್ಯಾಪ್ಸ್ ಆಗುತ್ತದೆ.

ಇದನ್ನೂ ಓದಿ: ಅರ್ಜಿಯ ಅಗತ್ಯವಿಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ? ಇದು ನಿಮ್ಮ ಹೆಂಡತಿ, ಮಕ್ಕಳ ಅಗತ್ಯಕ್ಕಾಗಿ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಎಲ್​ಐಸಿ ಪಾಲಿಸಿ ಮತ್ತೆ ಸಕ್ರಿಯಗೊಳಿಸುವ ವಿಧಾನಗಳು

ಲ್ಯಾಪ್ಸ್ ಆದ ಎಲ್​ಐಸಿ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶಗಳಿವೆ. ನಿಮ್ಮ ಎಲ್​ಐಸಿ ಪಾಲಿಸಿ ದಾಖಲೆಗಳಲ್ಲಿ ಅದನ್ನು ಬರೆದಿರಲಾಗುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ವಿಧಾನಗಳನ್ನು ನೀವು ಪರಿಶೀಲಿಸಬಹುದು:

ಎಲ್​ಐಸಿಯ ಕಸ್ಟಮರ್ ಕೇರ್ ನಂಬರ್, ಇಮೇಲ್ ಮೂಲಕ ಸಂಪರ್ಕಸಬಹುದು. ಅಥವಾ ಯಾವುದಾದರೂ ಎಲ್​ಐಸಿ ಕಚೇರಿ ಅಥವಾ ಸರ್ವಿಸ್ ಸೆಂಟರ್​ಗೆ ಹೋಗಿ ಮಾತನಾಡಬಹುದು. ಏಜೆಂಟ್ ಮೂಲಕವಾದರೂ ನೀವು ಪಾಲಿಸಿ ರಿವೈವಲ್ ಮಾಡಬಹುದು.

ಎಲ್​ಐಸಿ ಕಚೇರಿಯಲ್ಲಿ ನೀವು ರಿವೈವಲ್ ಫಾರ್ಮ್ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ

ಬಹಳ ಕಾಲದಿಂದ ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕಾಗಬಹುದು. ಇದರ ಖರ್ಚು ವೆಚ್ಚವನ್ನು ಪಾಲಿಸಿದಾರರೇ ಭರಿಸಬೇಕಾಗುತ್ತದೆ.

ನೀವು ಎಲ್​ಐಸಿ ಪಾಲಿಸಿ ರಿವೈವಲ್​ಗೆ ಮನವಿ ಸಲ್ಲಿಸಿದ ಬಳಿಕ ಅವಶ್ಯಕತ ದಾಖಲೆಗಳನ್ನು ಪರಿಶೀಲಿಸಿ, ಎಲ್​ಐಸಿ ನಿಮಗೆ ಹೊಸ ಪಾಲಿಸಿ ದಾಖಲೆ ಕೊಡುತ್ತದೆ.

ಇದಾದ ಬಳಿಕ ಮೊದಲಿನಂತೆ ನಿಮ್ಮ ಪಾಲಿಸಿಯಲ್ಲಿ ಪ್ರೀಮಿಯಮ್ ಕಟ್ಟುವುದನ್ನು ಮುಂದುವರಿಸಬಹುದು. ಪಾಲಿಸಿಯ ಯಾವುದೇ ಪ್ರಯೋಜನಗಳಲ್ಲೂ ವ್ಯತ್ಯಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ