ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ

PPF Withdrawal Rules: ಪಬ್ಲಿಕ್ ಪ್ರಾವಿಡೆಂಟ್ ಫಂಡ್ 15 ವರ್ಷದ ಅವಧಿಯದ್ದಾಗಿದ್ದು, 7 ವರ್ಷದ ಬಳಿಕ ಸ್ವಲ್ಪ ಭಾಗವನ್ನು ವಿತ್​ಡ್ರಾ ಮಾಡುವ ಅವಕಾಶ ನೀಡಲಾಗುತ್ತದೆ. ಸರಿಯಾದ ಕಾರಣಗಳು, ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿ ನೀವು ಶೇ. 50ರಷ್ಟು ಹಣವನ್ನು ಪಿಪಿಎಫ್ ಅಕೌಂಟ್​ನಿಂದ ಹಿಂಪಡೆಯಲು ಸಾಧ್ಯ ಇದೆ. ಈ ರೀತಿ ಮೆಚ್ಯೂರಿಟಿಗೆ ಮುನ್ನವೇ ಹಣ ವಿತ್​ಡ್ರಾ ಮಾಡುವುದು ಹೇಗೆ, ಏನು ಮಾನದಂಡ, ಯಾವ ದಾಖಲೆಗಳು ಬೇಕು, ಕ್ರಮಗಳೇನು ಇತ್ಯಾದಿ ವಿವರ ಇಲ್ಲಿವೆ.

ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ
ಪಿಪಿಎಫ್
Follow us
|

Updated on: Sep 21, 2023 | 11:37 AM

ಸರ್ಕಾರದಿಂದ ನಡೆಸುವ ಹೂಡಿಕೆ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಒಂದು. ತೆರಿಗೆ ಲಾಭ, ಉತ್ತಮ ಬಡ್ಡಿದರ ಇತ್ಯಾದಿ ಕೆಲವಿಷ್ಟು ಪ್ರಮುಖ ಲಾಭಗಳನ್ನು ಈ ಸ್ಕೀಮ್​ನಿಂದ ಪಡೆಯಬಹುದು. ದೀರ್ಘಾವಧಿ ಹೂಡಿಕೆಗೆ (Long term investment) ಹೇಳಿ ಮಾಡಿಸಿದ ಯೋಜನೆ ಇದಾಗಿದೆ. ಆದರೆ, ಕೆಲವೊಮ್ಮೆ ತುರ್ತು ಅಗತ್ಯ ಎದುರಾಗಿ ಹೂಡಿಕೆ ಹಣ ಹಿಂಪಡೆಯಬೇಕಾಗಬಹುದು. ಪಿಪಿಎಫ್​ನಲ್ಲಿ ಅದಕ್ಕೂ ಅವಕಾಶ ಇದೆ. ಈ ರೀತಿ ಮೆಚ್ಯೂರಿಟಿಗೆ ಮುನ್ನವೇ ಹಣ ವಿತ್​ಡ್ರಾ (PPF withdrawal) ಮಾಡುವುದು ಹೇಗೆ, ಏನು ಮಾನದಂಡ, ಯಾವ ದಾಖಲೆಗಳು ಬೇಕು, ಕ್ರಮಗಳೇನು ಇತ್ಯಾದಿ ವಿವರ ಇಲ್ಲಿವೆ.

ಅವಧಿಗೆ ಮುನ್ನ ಪಿಪಿಎಫ್ ಹಿಂಪಡೆಯಲು ಮಾನದಂಡ ಏನು?

ಪಿಪಿಎಫ್ ಸ್ಕೀಮ್ ಪಡೆದರೆ ಅದು ಮೆಚ್ಯೂರ್ (PPF Maturity) ಆಗಲು 15 ವರ್ಷ ಬೇಕು. ಪ್ರತೀ ವರ್ಷ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಪಿಪಿಎಫ್​ ಅಕೌಂಟ್​ಗೆ ಹಣ ಜಮೆ ಮಾಡಬಹುದು. 15 ವರ್ಷ ಬಳಿಕ ಬೇಕೆಂದರೆ 5 ವರ್ಷ ವಿಸ್ತರಣೆ ಮಾಡಬಹುದು. ಪಿಪಿಎಫ್​ಗೆ ಸರ್ಕಾರ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡುತ್ತದೆ. ಈ ಬಡ್ಡಿದರವನ್ನು ಸರ್ಕಾರ ಪ್ರತೀ ವರ್ಷ ಪರಿಷ್ಕರಿಸುತ್ತದೆ.

ಇದನ್ನೂ ಓದಿ: ಎಂಎಫ್ ಹೂಡಿಕೆಗಳಿಗೆ ನಾಮಿನೇಶನ್ ಅಪ್​ಡೇಟ್ ಮಾಡಲು ಸೆ. 30 ಡೆಡ್​ಲೈನ್; ಲಕ್ಷಾಂತರ ಮಂದಿ ಇನ್ನೂ ಬಾಕಿ

ಹೂಡಿಕೆ ಆರಂಭಿಸಿ 7 ವರ್ಷದ ಬಳಿಕ ಹಣ ವಿತ್​ಡ್ರಾ ಮಾಡಲು ಅವಕಾಶ ಇರುತ್ತದೆ. ಆದರೆ, ಪೂರ್ತಿ ಹಣ ತೆಗೆಯಲು ಆಗುವುದಿಲ್ಲ. ಹಿಂದಿನ ವರ್ಷದಲ್ಲಿ ನಿಮ್ಮ ಪಿಪಿಎಫ್ ಅಕೌಂಟ್​ನಲ್ಲಿ ಎಷ್ಟು ಮೊತ್ತ ಇತ್ತೋ ಅದರ ಅರ್ಧದಷ್ಟು ಹಣವನ್ನು ಮಾತ್ರ ವಿತ್​ಡ್ರಾ ಮಾಡಿಕೊಳ್ಳಲು ಸಾಧ್ಯ.

ಪಿಪಿಎಫ್ ಹಣ ಹಿಂಪಡೆಯಲು ಸರಿಯಾದ ಕಾರಣ ಬೇಕು

ಇಪಿಎಫ್ ವಿತ್​ಡ್ರಾ ಮಾಡಲು ಇರುವಂತೆ ಪಿಪಿಎಫ್​ನಲ್ಲೂ ನಿರ್ಬಂಧಗಳಿವೆ. ನೀವು ಇಚ್ಛಾನುಸಾರ ಹಣ ಹಿಂಪಡೆಯಲು ಬರುವುದಿಲ್ಲ. ಸೂಕ್ತ ಕಾರಣಗಳನ್ನು ನೀಡಬೇಕು. ಉನ್ನತ ಶಿಕ್ಷಣ, ವೈದ್ಯಕೀಯ ವೆಚ್ಚ, ಮನೆ ಖರೀದಿ, ಮದುವೆ ವೆಚ್ಚ ಇತ್ಯಾದಿ ಕಾರಣಗಳಿದ್ದರೆ ಹಣ ಹಿಂಪಡೆಯಬಹುದು.

ಇದನ್ನೂ ಓದಿ: ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಪಿಪಿಎಫ್ ಅಕೌಂಟ್​ನಿಂದ ಹಣ ಹಿಂಪಡೆಯುವ ಕ್ರಮಗಳೇನು?

ನೀವು ಪಿಪಿಎಫ್ ಅಕೌಂಟ್ ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ವಿತ್​​ಡ್ರಾ ಮಾಡಲು ಸಾಧ್ಯ. ಗುರುತಿನ ದಾಖಲೆಗಳು ಜೊತೆಯಲ್ಲಿರಬೇಕು. ವಿತ್​ಡ್ರಾಯಲ್ ಫಾರ್ಮ್ ಅನ್ನು ಪಡೆದು ಅದನ್ನು ಭರ್ತಿ ಮಾಡಬೇಕು. ಹಣ ಹಿಂಪಡೆಯಲು ನೀವು ನೀಡಿದ ಕಾರಣಕ್ಕೆ ಪೂರಕವಾದ ದಾಖಲೆಗಳೂ ಇರಬೇಕು.

ಇವೆಲ್ಲವೂ ಸರಿಯಾಗಿದ್ದಲ್ಲಿ ನಿಮ್ಮ ಪಿಪಿಎಫ್ ಹಣ ವಿತ್​ಡ್ರಾಗೆ ಸಲ್ಲಿಸಲಾದ ಅರ್ಜಿ ಬೇಗ ವಿಲೇವಾರಿ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ