ಎಂಎಫ್ ಹೂಡಿಕೆಗಳಿಗೆ ನಾಮಿನೇಶನ್ ಅಪ್​ಡೇಟ್ ಮಾಡಲು ಸೆ. 30 ಡೆಡ್​ಲೈನ್; ಲಕ್ಷಾಂತರ ಮಂದಿ ಇನ್ನೂ ಬಾಕಿ

Deadline For Updating MF Portfolios Nomination: ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನೇಶನ್ ಅನ್ನು ಅಪ್​ಡೇಟ್ ಮಾಡಲಿಲ್ಲವೆಂದರೆ ಹಲವು ನಿರ್ಬಂಧಗಳು ಜಾರಿಗೆ ಬರುತ್ತವೆ. ಮ್ಯೂಚುವಲ್ ಫಂಡ್ ಪೋರ್ಟ್​ಫೋಲಿಯೋಗಳಿಂದ ನಿಮ್ಮ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮುಂದುವರಿಸಬಹುದೇ ವಿನಃ ವಿತ್​ಡ್ರಾ ಮಾಡಲು ಆಗುವುದಿಲ್ಲ.

ಎಂಎಫ್ ಹೂಡಿಕೆಗಳಿಗೆ ನಾಮಿನೇಶನ್ ಅಪ್​ಡೇಟ್ ಮಾಡಲು ಸೆ. 30 ಡೆಡ್​ಲೈನ್; ಲಕ್ಷಾಂತರ ಮಂದಿ ಇನ್ನೂ ಬಾಕಿ
ಮ್ಯೂಚುವಲ್ ಫಂಡ್
Follow us
|

Updated on: Sep 18, 2023 | 12:52 PM

ನವದೆಹಲಿ, ಸೆಪ್ಟೆಂಬರ್ 18: ಮ್ಯುಚುವಲ್ ಫಂಡ್​ಗಳಿಗೆ ನಾಮನಿರ್ದೇಶನ ಪರಿಷ್ಕರಿಸಲು ಸೆಪ್ಟೆಂಬರ್ 30ರ ಗಡುವು ಸಮೀಪಿಸುತ್ತಿದೆ. ಸಿಎಎಂಎಸ್ ನೀಡಿರುವ ಮಾಹಿತಿ ಪ್ರಕಾರ ಇನ್ನೂ 25 ಲಕ್ಷ ಪ್ಯಾನ್ ಕಾರ್ಡ್​ದಾರರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನೇಶನ್ ಅಪ್​ಡೇಟ್ ಮಾಡಿಲ್ಲವಂತೆ. ರಿಜಿಸ್ಟ್ರಾರ್ ಮತ್ತು ಟ್ರಾನ್ಸ್​ಫರ್ ಏಜೆಂಟ್​ಗಳ (Registrar and Transfer Agent) ಮುಖಾಂತರ ನಾಮನಿರ್ದೇಶನಗಳನ್ನು ಅಪ್​ಡೇಟ್ ಮಾಡಬಹುದು. ಭಾರತದಲ್ಲಿ ಅಂಥ ಒಂದು ಏಜೆಂಟ್ ಸಿಎಎಂಎಸ್ ಇದೆ. ಹಾಗೆಯೇ, ಕೆಫಿನ್​ಟೆಕ್ ಎಂಬ ಇನ್ನೊಂದು ಏಜೆಂಟ್ ಸಂಸ್ಥೆಯೂ ಇದೆ. ಸಿಎಎಂಎಸ್​ನಲ್ಲಿ 25 ಲಕ್ಷ ಮಂದಿ ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮನಿರ್ದೇಶನ ಪರಿಷ್ಕರಿಸಿಲ್ಲ. ಕೆಫಿನ್​ಟೆಕ್​ನಲ್ಲಿ ಎಷ್ಟು ಮಂದಿಯಿಂದ ಈ ಕೆಲಸ ಬಾಕಿ ಉಳಿದಿದೆ ಎಂಬ ವಿವರ ಲಭ್ಯವಾಗಿಲ್ಲ ಎಂದು ಮನಿಕಂಟ್ರೋಲ್ ಸುದ್ದಿಜಾಲತಾಣ ಹೇಳಿದೆ.

ಈ ಮೊದಲು ಪ್ಯಾನ್ ಕಾರ್ಡ್​ದಾರರಿಗೆ ತಮ್ಮ ಮ್ಯೂಚುವಲ್ ಫಂಡ್​ಗಳಿಗೆ ನಾಮಿನೇಶನ್ ಅಪ್​ಡೇಟ್ ಮಾಡಲು ಮಾರ್ಚ್ 30ಕ್ಕೆ ಡೆಡ್​ಲೈನ್ ನೀಡಲಾಗಿತ್ತು. ಆದರೆ, ಬಹಳ ಮಂದಿಗೆ ಈ ನಾಮಿನೇಶನ್ ಅಪ್​ಡೇಟ್ ಮಾಡುವುದು ಕಷ್ಟವಾಗಿದ್ದರಿಂದ ಗಡುವನ್ನು ಆರು ತಿಂಗಳು ಮುಂದಕ್ಕೆ ಹಾಕಲಾಯಿತು. ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್​ಬಿಐ ಹೊಸ ಪ್ರಯೋಗ

ನಾಮಿನೇಶನ್ ಅಪ್​ಡೇಟ್ ಮಾಡಲಿಲ್ಲವೆಂದರೆ ಏನು ಸಮಸ್ಯೆ?

ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನೇಶನ್ ಅನ್ನು ಅಪ್​ಡೇಟ್ ಮಾಡಲಿಲ್ಲವೆಂದರೆ ಹಲವು ನಿರ್ಬಂಧಗಳು ಜಾರಿಗೆ ಬರುತ್ತವೆ. ಮ್ಯೂಚುವಲ್ ಫಂಡ್ ಪೋರ್ಟ್​ಫೋಲಿಯೋಗಳಿಂದ ನಿಮ್ಮ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮುಂದುವರಿಸಬಹುದೇ ವಿನಃ ವಿತ್​ಡ್ರಾ ಮಾಡಲು ಆಗುವುದಿಲ್ಲ.

ನಾಮಿನೇಶನ್ ಯಾಕೆ ಕಷ್ಟವಾಗುತ್ತಿದೆ?

ಮ್ಯೂಚುವಲ್ ಫಂಡ್​ಗಳ ಮೇಲೆ ಜಂಟಿಯಾಗಿ ಹೂಡಿಕೆ ಮಾಡಿರುವವರ ಸಂಖ್ಯೆ ಬಹಳ ಇದೆ. ಅಂದರೆ, ಇಬ್ಬರು ಅಥವಾ ಇನ್ನೂ ಹೆಚ್ಚು ಮಂದಿ ಸೇರಿ ಮ್ಯುಚುವಲ್ ಫಂಡ್​ಗಳ ಮೇಲೆ ಹೂಡಿಕೆ ಮಾಡಿರುವುದು ಇದೆ. ಇವರಲ್ಲಿ ಹೆಚ್ಚಿನವರು ನಾಮಿನಿ ಯಾರೆಂದು ನಮೂದಿಸಿಲ್ಲ.

ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ; ವಿಮಾ ಯೋಜನೆಗಳ ಮಹತ್ವ ತಪ್ಪದೇ ತಿಳಿಯಿರಿ

ಹಿಂದೆ ಮ್ಯೂಚುವಲ್ ಫಂಡ್​ಗಳ ಮೇಲೆ ಜಂಟಿಯಾಗಿ ಹೂಡಿಕೆ ಮಾಡುವಾಗ ಯಾರಾದರೂ ಒಬ್ಬರ ಸಂಪರ್ಕ ವಿವರ ಪಡೆಯಲಾಗುತ್ತಿತ್ತು. ಹೀಗಾಗಿ, ಜಂಟಿಯಾಗಿ ಹೂಡಿಕೆ ಮಾಡಿದವರೆಲ್ಲರ ಸಂಪರ್ಕ ವಿವರ ಕಡತಗಳಲ್ಲಿ ಇಲ್ಲ. ಈಗ ಎಲ್ಲರ ಸಂಪರ್ಕ ವಿವರ ಒದಗಿಸುವುದು ಅವಶ್ಯಕವಾಗಿದೆ. ಹೀಗಾಗಿ, ನಾಮಿನಿ ಸಮಸ್ಯೆ ಹಳೆಯ ಮ್ಯೂಚುವಲ್ ಫಂಡ್ ಪೋರ್ಟ್​ಫೋಲಿಯೋಗಳಲ್ಲಿ ಹೆಚ್ಚು ಉಳಿದುಕೊಂಡಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ