ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್​ಬಿಐ ಹೊಸ ಪ್ರಯೋಗ

SBI's Novel Method: ಸಾಲದ ಕಂತು ಕಟ್ಟದೇ ಹೋಗುವ ಗ್ರಾಹಕರನ್ನು ಎಐ ಟೆಕ್ನಾಲಜಿಯಿಂದ ಗುರುತಿಸಿ ಅಂಥವರ ಮನೆಗೆ ಅನಿರೀಕ್ಷಿತವಾಗಿ ಮತ್ತು ಖುದ್ದಾಗಿ ಭೇಟಿ ನೀಡಲು ಎಸ್​ಬಿಐ ಯೋಜಿಸಿದೆ. ಗ್ರಾಹಕರ ಮನೆಗೆ ಹೋಗುವಾಗ ಒಂದು ಪ್ಯಾಕ್ ಚಾಕೊಲೇಟ್ ತೆಗೆದುಕೊಂಡು ಹೋಗಿ ಕೊಟ್ಟು ಬರುವ ಯೋಜನೆ ಹಾಕಿದೆ. ಗ್ರಾಹಕರಿಗೆ ಅವರ ಜವಾಬ್ದಾರಿ ನೆನಪಿಸುವ ವಿನೂತನ ವಿಧಾನ ಇದು.

ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್​ಬಿಐ ಹೊಸ ಪ್ರಯೋಗ
ಎಸ್​ಬಿಐ
Follow us
|

Updated on: Sep 18, 2023 | 8:35 AM

ಟ್ರಾಫಿಕ್ ನಿಯಮಗಳನ್ನು ಮುರಿಯುವ ವಾಹನ ಸವಾರರನ್ನು ನಿಲ್ಲಿಸಿ ಪೊಲೀಸರು ಹೂ ಕೊಡುವ ಮೂಲಕವೋ, ಶಾಲು ಹೊದಿಸುವ ಮೂಲಕವೋ ಸಾರ್ವಜನಿಕವಾಗಿ ಸನ್ಮಾನ ಮಾಡುವ ಘಟನೆಗಳ ಬಗ್ಗೆ ಕೇಳಿರಬಹುದು. ಅದು ನಿಯಮ ಭಂಜಕರನ್ನು (Rules Breakers) ನಯವಾಗಿಯೇ ತರಾಟೆಗೆ ತೆಗೆದುಕೊಳ್ಳುವ ಒಂದು ಪರಿ. ಇಂಥದ್ದೇ ಒಂದು ತಂತ್ರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅನುಸರಿಸಲು ನಿರ್ಧರಿಸಿದೆ. ನಿಗದಿತ ದಿನದೊಳಗೆ ಕಂತಿನ ಹಣ ಕಟ್ಟದೇ ಇರುವ ವ್ಯಕ್ತಿಗಳಿಗೆ ಒಂದು ಪ್ಯಾಕ್ ಚಾಕೊಲೇಟ್​ಗಳನ್ನು ಕೊಟ್ಟು ನಯವಾಗಿ ಮುಖಭಂಗ ಮಾಡುವ ಕೆಲಸಕ್ಕೆ ಎಸ್​ಬಿಐ ಅಧಿಕಾರಿಗಳು ಮುಂದಾಗಿದ್ದಾರೆ.

ಒಂದು ಪ್ಯಾಕ್ ಚಾಕೊಲೇಟ್ ಸಿಗುತ್ತೆ ಅಂದ ನೀವು ಕಂತು ಕಟ್ಟುವುದನ್ನು ವಿಳಂಬ ಮಾಡಲು ಹೋಗದಿರಿ. ಈ ರೀತಿಯ ಗಿಫ್ಟ್​ಗಳು ಅದೆಷ್ಟು ಮುಜುಗರ ತರುತ್ತದೆ ಎಂಬುದು ಅದರ ಅನುಭವಿಗಳಿಗೇ ಗೊತ್ತು. ಬೇಕಿದ್ದರೆ ಟ್ರಾಫಿಕ್ ಪೊಲೀಸರಿಂದ ಸಾರ್ವಜನಿಕವಾಗಿ ಸನ್ಮಾನ ಮಾಡಿಸಿಕೊಂಡವರನ್ನು ಕೇಳಿನೋಡಬಹುದು.

ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ; ವಿಮಾ ಯೋಜನೆಗಳ ಮಹತ್ವ ತಪ್ಪದೇ ತಿಳಿಯಿರಿ

ಎಸ್​ಬಿಐ ಪ್ರಕಾರ, ಒಬ್ಬ ವ್ಯಕ್ತಿ ಆ ತಿಂಗಳು ಕಂತು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಯೋಜಿಸಿದ್ದಾನೆಂದರೆ ಆತ ಯಾವ ಬ್ಯಾಂಕ್ ಕರೆಯನ್ನೂ ಸ್ವೀಕರಿಸುವುದಿಲ್ಲ. ಹೀಗಾಗಿ, ಮುಂಚಿತವಾಗಿ ತಿಳಿಸದೆಯೇ ಅಂಥ ಗ್ರಾಹಕರ ಮನೆಗೆ ಅನಿರೀಕ್ಷಿತವಾಗಿ ಹೋಗಿ ಭೇಟಿ ಮಾಡಿ ಒಂದು ಚಾಕೊಲೇಟ್ ಪ್ಯಾಕ್ ಕೊಟ್ಟುಬರಲಾಗುತ್ತದೆ.

ಅಚ್ಚರಿ ಎಂದರೆ ಕೆಲವೆಡೆ ಈ ಪ್ರಯೋಗಗಳು ನಡೆದಿವೆ. ಅದರಲ್ಲಿ ಯಶಸ್ಸೂ ಸಿಕ್ಕಿದೆಯಂತೆ. ಈಗ ಎಲ್ಲೆಡೆ ಈ ತಂತ್ರವನ್ನು ಅನುಸರಿಸಲು ಎಸ್​ಬಿಐ ಮುಂದಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿದೆ ನರೇಂದ್ರ ಮೋದಿಯ ಉಳಿತಾಯ ಹಣ; ಎನ್​ಎಸ್​ಸಿ ಯೋಜನೆ ಬಗ್ಗೆ ತಿಳಿಯಿರಿ

ಈ ಕ್ರಮಕ್ಕೆ ಪೂರಕವಾಗಿ ಎಸ್​ಬಿಐ ಎರಡು ರೀತಿಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತಿದೆ. ಸಾಲ ಪಡೆದು ಕಂತುಗಳನ್ನು ಕಟ್ಟುವವರಿಗೆ ರಿಮೈಂಡರ್ ಕರೆ ಹೋಗುತ್ತದೆ. ಸಾಲಗಾರರು ಈ ತಿಂಗಳು ಕಂತು ಕಟ್ಟುವ ಸಾಧ್ಯತೆ ಇದೆಯಾ ಇಲ್ಲವಾ ಎಂಬುದನ್ನು ಎಐ ಟೆಕ್ನಾಲಜಿಯಿಂದ ಪತ್ತೆ ಮಾಡಲಾಗುತ್ತದೆ. ಇಂಥ ಗ್ರಾಹಕರನ್ನು ಅವರ ಮನೆಗಳಿಗೆ ಹೋಗಿಯೇ ಭೇಟಿಯಾಗಿ ಬರುವುದು ಎಸ್​ಬಿಐ ಐಡಿಯಾ.

ಈ ರೀತಿ ಮಾಡಿದರೆ ಗ್ರಾಹಕರಿಗೆ ನೇರವಾಗಿ ಕಂತು ಕಟ್ಟುವ ಬಗ್ಗೆ ಜ್ಞಾಪನ ಮಾಡಬಹುದು. ಕಂತು ಕಟ್ಟದೇ ಹೋದರೆ ಎದುರಾಗುವ ಅಪಾಯದ ಬಗ್ಗೆ ತಿಳಿಹೇಳಬಹುದು. ಒಟ್ಟಾರೆ ಗ್ರಾಹಕನಿಗೆ ಕಿರಿಕಿರಿಯೂ ಆಗಬಾರದು ಎಂದು ಒಂದು ಬಾಕ್ಸ್ ಸಿಹಿಯನ್ನೂ ಅಧಿಕಾರಿಗಳು ಹೊತ್ತೊಯ್ಯುತ್ತಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ