ನಾವಿಲ್ಲದೇ ಕಾರಿಡಾರ್ ಹೇಗೆ ಸಾಧ್ಯ? ಭಾರತದ ಹೊಸ ಆರ್ಥಿಕ ಕಾರಿಡಾರ್​ಗೆ ಟರ್ಕಿ ಅಸಮಾಧಾನ

Turkey Trade Corridor: ಟರ್ಕಿ ಇಲ್ಲದೇ ಯಾವ ಕಾರಿಡಾರ್ ಸಾಧ್ಯ ಇಲ್ಲ. ಪೂರ್ವ ಮತ್ತು ಪಶ್ಚಿಮದ ಮಧ್ಯೆ ಸೂಕ್ತ ವ್ಯಾಪಾರ ಮಾರ್ಗ ಬೇಕೆಂದರೆ ಅದು ಟರ್ಕಿ ಮೂಲಕವೇ ಹಾದುಹೋಗಬೇಕು ಎಂದು ಆ ದೇಶದ ಅಧ್ಯಕ್ಷ ಎರ್ಡೋಗನ್ ಇತ್ತೀಚೆಗೆ ಹೇಳಿದ್ದರು. ಇದೀಗ ಟರ್ಕಿ ಮೂಲಕ ಏಷ್ಯಾ ಮತ್ತು ಯೂರೋಪ್ ಮಧ್ಯೆ ಸಾಗುವ ಹೊಸ ಮಾರ್ಗವನ್ನು ಟರ್ಕಿ ಅವಲೋಕಿಸುತ್ತಿದೆ. ಭಾರತದ ಹೊಸ ಆರ್ಥಿಕ ಕಾರಿಡಾರ್ ಪ್ರಾಜೆಕ್ಟ್ ಅನ್ನು ಟರ್ಕಿ ವಿರೋಧಿಸಿದೆ.

ನಾವಿಲ್ಲದೇ ಕಾರಿಡಾರ್ ಹೇಗೆ ಸಾಧ್ಯ? ಭಾರತದ ಹೊಸ ಆರ್ಥಿಕ ಕಾರಿಡಾರ್​ಗೆ ಟರ್ಕಿ ಅಸಮಾಧಾನ
ಟರ್ಕಿ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್
Follow us
|

Updated on: Sep 18, 2023 | 11:54 AM

ಅಂಕಾರ, ಸೆಪ್ಟೆಂಬರ್ 18: ಏಷ್ಯಾ ಮತ್ತು ಯೂರೋಪ್ ಮಧ್ಯೆ ಹೊಸ ಆರ್ಥಿಕ ಕಾರಿಡಾರ್ (IMEEC) ಸ್ಥಾಪನೆಗೆ ಟರ್ಕಿ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ದೇಶಗಳ ಜೊತೆ ಟರ್ಕಿ ಮಾತುಕತೆಗೆ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಜಿ20 ಶೃಂಗಸಭೆಯಲ್ಲಿ ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ಮಧ್ಯೆ ಆರ್ಥಿಕ ಕಾರಿಡಾರ್ ಯೋಜನೆ ಘೋಷಣೆ ಆದ ಬಳಿಕ ಟರ್ಕಿ ಚುರುಕುಗೊಂಡಿದೆ. ತಾನಿಲ್ಲದೇ ಇಲ್ಲದೇ ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ಮಾರ್ಗ ಹೇಗೆ ಸಾಧ್ಯ ಎಂಬುದು ಟರ್ಕಿ ಪ್ರಶ್ನೆ. ಜಿ20 ಶೃಂಗ ಸಭೆ ಬಳಿಕ ಟರ್ಕಿ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ (Recep Tayyip Erdogan) ಕೂಡ ಈ ಬಗ್ಗೆ ಚಕಾರ ಎತ್ತಿದ್ದರು.

‘ಟರ್ಕಿ ಇಲ್ಲದೇ ಯಾವ ಕಾರಿಡಾರ್ ಸಾಧ್ಯ ಇಲ್ಲ. ಪೂರ್ವ ಮತ್ತು ಪಶ್ಚಿಮದ ಮಧ್ಯೆ ಸೂಕ್ತ ವ್ಯಾಪಾರ ಮಾರ್ಗ ಬೇಕೆಂದರೆ ಅದು ಟರ್ಕಿ ಮೂಲಕವೇ ಹಾದುಹೋಗಬೇಕು’ ಎಂಬುದು ಎರ್ಡೋಗನ್ ಅಭಿಪ್ರಾಯ.

ಇದನ್ನೂ ಓದಿ: ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು: ಎಸ್ ಜೈಶಂಕರ್ ಕರೆ

ಬಹಳ ಕಾಲದಿಂದಲೂ ಏಷ್ಯಾದಿಂದ ಯೂರೋಪ್​ಗೆ ಸರಕುಗಳು ಸಾಗಿ ಹೋಗುತ್ತಿದ್ದ ಮಾರ್ಗದಲ್ಲಿ ಟರ್ಕಿಯೂ ಒಂದು ಭಾಗವಾಗಿದೆ. ಪೂರ್ವ ಮತ್ತು ಪಶ್ಚಿಮಕ್ಕೆ ಟರ್ಕಿ ಕೊಂಡಿಯಾಗುತ್ತಾ ಬಂದಿದೆ. ಅದೇ ಸ್ಥಿತಿ ಮುಂದುವರಿಯಬೇಕೆಂಬುದು ಅದರ ಇರಾದೆ.

ಸದ್ಯ, ಪೂರ್ವ ಮತ್ತು ಪಶ್ಚಿಮದ ಮಧ್ಯೆ ವ್ಯಾಪಾರ ಮಾರ್ಗ ಸೃಷ್ಟಿಸಲು ಚೀನಾ ಸಿಲ್ಕ್ ರೋಡ್ ಯೋಜನೆ ಕೈಗೆತ್ತಿಕೊಂಡಿದೆ. ಭಾರತದ ನೇತೃತ್ವದಲ್ಲಿ ಹೊಸ ಮಾರ್ಗ ಸೃಷ್ಟಿಯಾಗುತ್ತಿದೆ. ಭಾರತ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮೂಲಕ ಯೂರೋಪ್ ದೇಶಗಳಿಗೆ ಈ ಹೊಸ ಆರ್ಥಿಕ ಕಾರಿಡಾರ್ ಸಾಗುವ ಪ್ರಸ್ತಾಪ ಇದೆ. ಐರೋಪ್ಯ ದೇಶವಾಗಿರುವ ಟರ್ಕಿ ಭಾರತದ ಕಾರಿಡಾರ್ ಪ್ರಾಜೆಕ್ಟ್ ಅನ್ನ ವಿರೋಧಿಸಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ; ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ

ಟರ್ಕಿ ಇರುವ ಕಾರಿಡಾರ್ ಹೇಗಿರುತ್ತೆ?

ಇರಾಕ್ ಮತ್ತು ಟರ್ಕಿ ಮಧ್ಯೆ ಮಾತುಕತೆಗಳು ನಡೆದಿವೆ. ದಕ್ಷಿಣ ಇರಾಕ್​ನಲ್ಲಿರುವ ಗ್ರ್ಯಾಂಡ್ ಫಾ ಪೋರ್ಟ್​ನಿಂದ ಆರಂಭಗೊಂಡು ಅ ದೇಶದ 10 ಪ್ರಾಂತ್ಯಗಳ ಮೂಲಕ ಈ ಮಾರ್ಗ ಹಾದು ಟರ್ಕಿ ತಲುಪಿ ಆ ಮೂಲಕ ಯೂರೋಪ್ ಮುಟ್ಟುವುದು ಟರ್ಕಿ ತಲೆಯಲ್ಲಿರುವ ಆಲೋಚನೆ. ಇದಕ್ಕೆ ಸುಮಾರು 17 ಬಿಲಿಯನ್ ಡಾಲರ್ ಹಣ ವೆಚ್ಚವಾಗಬಹುದು. ಅಂದರೆ ಸುಮಾರು ಒಂದೂವರೆ ಲಕ್ಷಕೋಟಿ ರೂ ಹಣ ಖರ್ಚಾಗುತ್ತದೆ. ಇಷ್ಟೊಂದು ಹಣ ಟರ್ಕಿಯಲ್ಲಿ ಇಲ್ಲ. ಹೀಗಾಗಿ ಅದು ಯುಎಇ, ಕತಾರ್ ಮೊದಲಾದ ದೇಶಗಳ ಬೆಂಬಲ ಗಿಟ್ಟಿಸುವ ಪ್ರಯತ್ನದಲ್ಲಿದೆ ಎನ್ನುವಂತಹ ವದಂತಿಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ