ನರೇಂದ್ರ ಮೋದಿ ಜನ್ಮದಿನ; ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ

Narendra Modi Birthday and Share Market: ಕಳೆದ ವರ್ಷದ ನರೇಂದ್ರ ಮೋದಿ ಜನ್ಮದಿನವಾದ 2022ರ ಸೆಪ್ಟೆಂಬರ್ 17ರಿಂದೀಚೆಗೆ ಭಾರತೀಯ ಷೇರುಮಾರುಕಟ್ಟೆಗಳ ವಿವಿಧ ಸೂಚ್ಯಂಕಗಳಲ್ಲಿ ಹೆಚ್ಚಿನವು ಶೇ. 12ಕ್ಕಿಂತಲೂ ಹೆಚ್ಚಿನ ದರದಲ್ಲಿ ಏರಿವೆ. ಸೆನ್ಸೆಕ್ಸ್​ನಿಂದ ಹಿಡಿದು ನಿಫ್ಟಿಯ ವಿವಿಧ ಸೂಚ್ಯಂಕಗಳು ಉತ್ತಮ ಏರಿಕೆ ಕಂಡಿವೆ. ಸಾಕಷ್ಟು ಮ್ಯೂಚುವಲ್ ಫಂಡ್​ಗಳು ಈ ಇಂಡೆಕ್ಸ್​ಗಳೊಂದಿಗೆ ಜೋಡಿತಗೊಂಡಿರುವುದರಿಂದ ಹೂಡಿಕೆದಾರರಿಗೆ ಒಂದು ವರ್ಷದಲ್ಲಿ ಹೆಚ್ಚು ಸಿಹಿ ಸಿಕ್ಕಿದೆ.

ನರೇಂದ್ರ ಮೋದಿ ಜನ್ಮದಿನ; ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2023 | 11:36 AM

ಮುಂಬೈ, ಸೆಪ್ಟೆಂಬರ್ 17: ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi birthday) ಅವರ ಜನ್ಮದಿನವಾಗಿದ್ದು, ಭಾರತದಲ್ಲಿ ಅವರ ಸಾಧನೆ, ಅವರಿಂದಾದ ಸುಧಾರಣೆಗಳನ್ನು ಹಾಗೂ ಅದರ ಪರಿಣಾಮಗಳನ್ನು ಅವಲೋಕಿಸುವ ಸಮಯವೂ ಹೌದು. ಕಳೆದ ಒಂದು ವರ್ಷ ಭಾರತದಲ್ಲಿ ಹೂಡಿಕೆದಾರರಿಗೆ ಅತಿಹೆಚ್ಚು ಮಂದಹಾಸ ತಂದ ಘಳಿಗೆಗಳಲ್ಲಿ ಒಂದು. ಭಾರತೀಯ ಷೇರುಮಾರುಕಟ್ಟೆಗಳು ಒಂದು ವರ್ಷದಲ್ಲಿ ಅದ್ವಿತೀಯವಾಗಿ ಬೆಳೆದಿವೆ. ಷೇರುಪೇಟೆಯ ಈ ಪರಿ ಬೆಳವಣಿಗೆಗೆ ಜಾಗತಿಕ ವಿದ್ಯಮಾನಗಳು ಒಂದೆಡೆ ಕಾರಣವಾದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಕೈಗೊಂಡ ಸುಧಾರಣಾ ಕ್ರಮಗಳ ಫಲಶ್ರುತಿ ಇನ್ನೊಂದೆಡೆ ಇದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗಳ ವಿವಿಧ ಸೂಚ್ಯಂಕಗಳು ಒಂದು ವರ್ಷದಲ್ಲಿ ಭಾರೀ ಲಾಭ ತಂದಿವೆ.

ಕಳೆದ ವರ್ಷದ ಮೋದಿ ಜನ್ಮದಿನವಾದ 2022 ಸೆಪ್ಟೆಂಬರ್ 17ರಿಂದ ಈಚೆಗೆ ವಿವಿಧ ಸೂಚ್ಯಂಕಗಳು ಎಷ್ಟು ಹೆಚ್ಚಳಗೊಂಡಿವೆ ಎಂಬುನ್ನು ನೋಡಿದರೆ ಬಹುತೇಕ ಎಲ್ಲಾ ಸೂಚ್ಯಂಕಗಳು ಶೇ. 10ಕ್ಕಿಂತಲೂ ಹೆಚ್ಚು ಬೆಳವಣಿ ಕಂಡಿವೆ. ಬಿಎಸ್​ಇ ಕ್ಯಾಪ್ ಗೂಡ್ಸ್ ಸೂಚ್ಯಂಕವಂತೂ ಬರೋಬ್ಬರಿ 40 ಪ್ರತಿಶತದಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿ: ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?

ಪ್ರಮುಖ ಬಿಎಸ್​ಇ ಸೂಚ್ಯಂಕಗಳು ಹಾಗೂ 1 ವರ್ಷದಲ್ಲಿ ಆದ ಬದಲಾವಣೆ

  • ಸೆನ್ಸೆಕ್ಸ್: 67,838.63 ಅಂಕಗಳು (ಶೇ. 13.19 ಹೆಚ್ಚಳ)
  • ಬಿಎಸ್​ಇ ಮಿಡ್​ಕ್ಯಾಪ್: 32,505.37 ಅಂಕಗಳು (ಶೇ. 23.56)
  • ಬಿಎಸ್​ಇ ಸ್ಮಾಲ್​ಕ್ಯಾಪ್: 37,828.56 ಅಂಕಗಳು (ಶೇ. 26.47)
  • ಬಿಎಸ್​ಇ 100: 20,666.08 ಅಂಕಗಳು (ಶೇ. 12.14)
  • ಬಿಎಸ್​ಇ 200: 8,819.05 ಅಂಕಗಳು (ಶೇ. 11.52ರಷ್ಟು ಹೆಚ್ಚಳ)
  • ಬಿಎಸ್​ಇ 500: 28,008.55 ಅಂಕಗಳು (ಶೇ. 12.77)
  • ಬಿಎಸ್​ಇ ಆಟೊ: 37,161.01 ಅಂಕಗಳು (ಶೇ. 21.7)
  • ಬಿಎಸ್​ಇ ಕ್ಯಾಂಕ್​ಎಕ್ಸ್: 51,844.91 ಅಂಕಗಳು (ಶೇ. 10.03)
  • ಬಿಎಸ್​ಇ ಕಾನ್ಸ್ ಡುರಬಲ್ಸ್: 46,264.35 ಅಂಕಗಳು (ಶೇ. 7.21ರಷ್ಟು ಹೆಚ್ಚಳ)
  • ಬಿಎಸ್​ಇ ಕ್ಯಾಪ್ ಗೂಡ್ಸ್: 47,045.67 ಅಂಕಗಳು (ಶೇ. 40.69)
  • ಬಿಎಸ್​ಇ ರಿಯಾಲ್ಟಿ: 4,693.02 ಅಂಕಗಳು (ಶೇ. 25)
  • ಬಿಎಸ್​ಇ ಮೆಟಲ್: 23,480.18 ಅಂಕಗಳು (ಶೇ. 20.8)
  • ಬಿಎಸ್​ಇ ಆಯಿಲ್ ಅಂಡ್ ಗ್ಯಾಸ್: 19,259.72 ಅಂಕಗಳು (ಶೇ. 3.24ರಷ್ಟು ಇಳಿಕೆ)
  • ಬಿಎಸ್​ಇ ಪಿಎಸ್​ಯು: 12,378 ಅಂಕಗಳು (ಶೇ. 30.68ರಷ್ಟು ಹೆಚ್ಚಳ)

ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ ವಿಶೇಷ; ಕಳೆದ ಒಂದು ವರ್ಷದಲ್ಲಿ ಭಾರತ ಹೇಗೆ ಬದಲಾಗಿದೆ ನೋಡಿ?

ಪ್ರಮುಖ ಎನ್​ಎಸ್​ಇ ಸೂಚ್ಯಂಕಗಳು ಹಾಗೂ 1 ವರ್ಷದಲ್ಲಿ ಆದ ಬದಲಾವಣೆ

  • ನಿಫ್ಟಿ 50: 20,192.30 ಅಂಕಗಳು (ಶೇ. 12.95ರಷ್ಟು ಹೆಚ್ಚಳ)
  • ನಿಫ್ಟಿ 500: 17,665 ಅಂಕಗಳು (ಶೇ. 13.38ರಷ್ಟು ಹೆಚ್ಚಳ)
  • ನಿಫ್ಟಿ ನೆಕ್ಸ್​ಟ್ 50: 46,051.85 ಅಂಕಗಳು (ಶೇ. 1.41)
  • ನಿಫ್ಟಿ ಮಿಡ್​ಕ್ಯಾಪ್ 100: 40,829 ಅಂಕಗಳು (ಶೇ. 25.96)
  • ನಿಫ್ಟಿ ರಿಯಾಲ್ಟಿ: 586 (ಶೇ. 21ರಷ್ಟು ಹೆಚ್ಚಳ)
  • ನಿಫ್ಟಿ ಮಿಡ್​ಕ್ಯಾಪ್ 50: 11,647 ಅಂಕಗಳು (ಶೇ. 20.28ರಷ್ಟು ಹೆಚ್ಚಳ)

ಇದನ್ನೂ ಓದಿ: PM Modi Birthday: ವೈಮಾನಿಕ ದಾಳಿಯಿಂದ ಹಿಡಿದು 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಪ್ರಧಾನಿ ಮೋದಿಯವರ ಮಹತ್ವದ ನಿರ್ಧಾರಗಳು ಇಲ್ಲಿವೆ

ಇಲ್ಲಿ ಕೆಲ ಪ್ರಮುಖ ಸೂಚ್ಯಂಕಗಳ ಬೆಳವಣಿಗೆಯ ವಿವರ ಇದೆ. ಈ ಸೂಚ್ಯಂಕಗಳು ಯಾಕೆ ಮುಖ್ಯ ಎಂದರೆ ಇವೆಲ್ಲವೂ ಹಲವು ಮ್ಯುಚುವಲ್ ಫಂಡ್​ಗಳಿಗೆ ಆಧಾರವಾಗಿವೆ. ಈ ಸೂಚ್ಯಂಕಗಳ ಪಟ್ಟಿಯಲ್ಲಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್​ಗಳನ್ನು ಇಂಡೆಕ್ಸ್ ಫಂಡ್​ಗಳೆಂದು ಪರಿಗಣಿಸಲಾಗುತ್ತದೆ. ಇಂಥ ಇಂಡೆಕ್ಸ್ ಫಂಡ್​ಗಳು ಲಕ್ಷಾಂತರ ಕೋಟಿ ರೂನಷ್ಟು ಹೂಡಿಕೆ ಹೊಂದಿವೆ. ಹೀಗಾಗಿ, ಇಂಡೆಕ್ಸ್ ಫಂಡ್​ಗಳ ಬೆಳವಣಿಗೆ ಬಗೆಗಿನ ಮಾಹಿತಿ ಬಹಳ ಮುಖ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ