AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?

Know About Infra Bonds: ಪ್ರಧಾನಿ ನರೇಂದ್ರ ಮೋದಿ ಕೆಲ ವರ್ಷಗಳ ಹಿಂದೆ ತಮ್ಮ ಆಸ್ತಿ ವಿವರ ಘೋಷಣೆಯಲ್ಲಿ ಎಲ್ ಅಂಡ್ ಟಿ ಇನ್ಫ್ರಾಸ್ಟ್ರಕ್ಚರ್ ಬಾಂಡ್​ಗಳ ಮೇಲಿನ ಹೂಡಿಕೆಯನ್ನು ತೋರಿಸಿದ್ದರು. ಈ ಬಾಂಡ್​ಗಳು ಉತ್ತಮ ಬಡ್ಡಿ ಆದಾಯಕ್ಕೆ ಮತ್ತು ತೆರಿಗೆ ಉಳಿತಾಯಕ್ಕೆ ಹೆಸರಾಗಿವೆ. ಅಂತೆಯೇ ಜನಪ್ರಿಯವೂ ಆಗಿವೆ. ಈ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗಳ ಬಗ್ಗೆ ಕೆಲವಿಷ್ಟು ಮಾಹಿತಿ ಇಲ್ಲಿದೆ...

ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2023 | 2:00 PM

Share

Narendra Modi Birthday Special (September 17th): ಪ್ರಧಾನಿ ನರೇಂದ್ರ ಮೋದಿ ಹಲವು ವರ್ಷಗಳಿಂದ ಸತತವಾಗಿ ಆಡಳಿತದಲ್ಲಿದ್ದರೂ ಅವರ ಆಸ್ತಿಪಾಸ್ತಿ ಯಾರ ಕಣ್ಣುಕುಕ್ಕುವಷ್ಟು ಇಲ್ಲ. ಅವರು ಘೋಷಣೆ ಮಾಡಿಕೊಂಡಿರುವ ಆಸ್ತಿ ವಿವರದ ಪ್ರಕಾರ ಎರಡು ಕೋಟಿ ರುಪಾಯಿಗೂ ತುಸು ಹೆಚ್ಚು. ಇದರಲ್ಲಿ ಚಿರಾಸ್ತಿ ಮೌಲ್ಯ ಹಾಗೂ ವಿವಿಧ ಹೂಡಿಕೆಗಳಿಂದ ಸೃಷ್ಟಿಯಾದ ಆದಾಯವೇ ಹೆಚ್ಚು. ಇದು 2022ರಲ್ಲಿ ಘೋಷಣೆ ಮಾಡಿಕೊಂಡ ಅಸ್ತಿ ವಿವರ. ಹಾಗೆಯೇ, 2016ರಲ್ಲಿ ಅವರು ಘೋಷಣೆ ಮಾಡಿಕೊಂಡ ಪ್ರಕಾರ ತೆರಿಗೆ ಉಳಿತಾಯದ ಇನ್ಫ್ರಾ ಬಾಂಡ್​ಗಳಲ್ಲಿ ಕೆಲ ಪ್ರಮಾಣದ ಹಣ ಹೂಡಿಕೆ ಮಾಡಿದ್ದರು. ಎಲ್ ಅಂಡ್ ಟಿ ಇನ್ಫ್ರಾ ಬಾಂಡ್​ಗಳನ್ನು (L&T Infrastructure bonds) ಅವರು ಹೊಂದಿದ್ದರು. 2022ರಷ್ಟರಲ್ಲಿ ಅವರು ಈ ಬಾಂಡ್​ಗಳನ್ನು ರಿಡೀಮ್ ಮಾಡಿಕೊಂಡಿದ್ದಿರಬಹುದು.

ಏನಿದು ಇನ್​ಫ್ರಾ ಬಾಂಡ್​ಗಳು?

ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ತೊಡಗಿರುವ ಸಂಸ್ಥೆಗಳು ಬಂಡವಾಳ ಸಂಗ್ರಹಿಸಲು ಸರ್ಕಾರದ ಅನುಮೋದನೆ ಮೇರೆಗೆ ಬಾಂಡ್​ಗಳನ್ನು ಸಾರ್ವಜನಿಕರಿಗೆ ವಿತರಿಸುತ್ತವೆ. ಬ್ಯಾಂಕುಗಳ ಪ್ರಸಕ್ತ ಠೇವಣಿ ದರಗಳಿಗೆ ಬಹುತೇಕ ಸಮವಾಗಿ ಬಡ್ಡಿ ಆಫರ್ ಮಾಡಲಾಗುತ್ತದೆ. ಜೊತೆಗೆ ಇವು ಐಟಿ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿ ಅವಕಾಶವನ್ನೂ ನೀಡುತ್ತವೆ. ಈ ಬಾಂಡ್​ಗಳ ಮೇಲೆ ನೀವು ಮಾಡುವ 20,000 ರೂವರೆಗಿನ ಹೂಡಿಕೆ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ಕಾರಣಕ್ಕೆ ಇನ್​ಫ್ರಾ ಬಾಂಡ್​ಗಳು ಜನಪ್ರಿಯವಾಗಿವೆ.

ಇದನ್ನೂ ಓದಿ: ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಎಲ್ ಅಂಡ್ ಟಿ, ಐಡಿಎಫ್​ಸಿ, ಎಲ್​ಐಸಿ ಮೊದಲಾದ ಸಂಸ್ಥೆಗಳು ಇನ್ಫ್ರಾಸ್ಟ್ರಕ್ಚರ್ ಬಾಂಡ್​ಗಳನ್ನು ನೀಡುತ್ತವೆ. ಇಂಥ ಬಾಂಡ್​ಗಳನ್ನ ಪಡೆಯಬೇಕಾದರೆ ಕನಿಷ್ಠ ಹೂಡಿಕೆ 5,000 ರೂ ಇದೆ. ಅದಕ್ಕೂ ಮೇಲೆ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಈ ಬಾಂಡ್​ಗಳು 10ರಿಂದ 15ವರ್ಷದಲ್ಲಿ ಮೆಚ್ಯೂರ್ ಆಗುತ್ತವೆ. ಇದರ ಲಾಕ್ ಇನ್ ಪೀರಿಯಡ್ 5 ವರ್ಷ ಇರುತ್ತದೆ. ನೀವು ಹೂಡಿಕೆ ಮಾಡಿ 5 ವರ್ಷದವರೆಗೂ ಬಾಂಡ್ ಹಿಂಪಡೆಯಲು ಆಗುವುದಿಲ್ಲ.

ನಿಮಗೆ ಅಗತ್ಯಬಿದ್ದರೆ 5 ವರ್ಷದ ಬಳಿಕ ಬಾಂಡ್ ಅನ್ನು ಸರೆಂಡರ್ ಮಾಡಿ ನಿಮ್ಮ ಹೂಡಿಕೆಯನ್ನು ಹಿಂಪಡೆಯಬಹುದು. ಆ ಅವಧಿಯವರೆಗೆ ಸೇರುವ ಬಡ್ಡಿ ಸಮೇತ ನಿಮ್ಮ ಹೂಡಿಕೆ ವಾಪಸ್ ಸಿಗುತ್ತದೆ.

ಇದನ್ನೂ ಓದಿ: ಸೆ. 17, ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆ ಲೋಕಾರ್ಪಣೆ; ಏನಿದು ಸ್ಕೀಮ್?

ತೆರಿಗೆ ವಿಚಾರದಲ್ಲಿ ಇನ್ನೊಂದು ಅಂಶ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿದೆ. ಇನ್ಫ್ರಾ ಬಾಂಡ್​ಗಳ ಮೇಲಿನ ಹೂಡಿಕೆಗೆ 20,000 ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ ಎಂಬುದು ಹೌದು. ಆದರೆ, ಈ ಬಾಂಡ್​ಗಳಿಂದ ಸಿಗುವ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು