ಸೆ. 17, ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆ ಲೋಕಾರ್ಪಣೆ; ಏನಿದು ಸ್ಕೀಮ್?

PM Vishwakarma Scheme: ಭಾರತದ ಸಾಂಪ್ರದಾಯಿಕ ಕರಕುಶಲ ಕಲೆ ಹಾಗೂ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ರೂಪಿಸಿದೆ. ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟಂಬರ್ 17ರಂದು ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಸ್ಕೀಮ್​ನಲ್ಲಿ 18 ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಂಡವರು ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ. ಯಾವ್ಯಾವ ಕರಕುಶಲ ಸೇವೆಗಳು ಈ ಸ್ಕೀಮ್​ನಲ್ಲಿವೆ ಎಂಬ ವಿವರ ಇಲ್ಲಿದೆ...

ಸೆ. 17, ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆ ಲೋಕಾರ್ಪಣೆ; ಏನಿದು ಸ್ಕೀಮ್?
ಕುಂಬಾರರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2023 | 2:39 PM

ನವದೆಹಲಿ, ಸೆಪ್ಟೆಂಬರ್ 15: ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ವಿಶ್ವಕರ್ಮ ಯೋಜನೆಯನ್ನು (PM Vishwakarama Scheme) ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಭಾರತದ ವಿವಿಧ ಕರಕುಶಲಕರ್ಮಿಗಳಿಗೆ (Artisans) ಪ್ರೋತ್ಸಾಹವಾಗಿ ರೂಪಿಸಲಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂ ಮೀಸಲಿರಿಸಿದೆ. ಫಲಾನುಭವಿಗಳಿಗೆ ಧನಸಹಾಯದ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಕೌಶಲ್ಯ ಅಭಿವೃದ್ಧಿಗೆ (Skill Upgradation) ತರಬೇತಿ ಇತ್ಯಾದಿ ಹಲವು ರೀತಿಯ ನೆರವುಗಳನ್ನು ಸರ್ಕಾರ ಒದಗಿಸಲಿದೆ.

ಒಟ್ಟು 18 ವಿವಿಧ ಕರಕುಶಲ ಕರ್ಮಿಗಳನ್ನು ಈ ಸ್ಕೀಮ್​ನ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಲ್ಲಿ ಮೇಸ್ತ್ರಿಗಳು, ಚಮ್ಮಾರ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ದರ್ಜಿ, ಕ್ಷೌರಿಕರೂ ಒಳಗೊಂಡಿದ್ದಾರೆ. ಕುಟುಂಬ ಮೂಲದಿಂದ ಬಂದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ಕೊಡಲು ಮತ್ತು ಅವುಗಳ ದೇಶೀಯ ಹಾಗೂ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ.

ಇದನ್ನೂ ಓದಿ: TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಳಗೊಂಡಿರುವ ಕುಶಲಕರ್ಮಿಗಳಿವರು

  1. ಮರಗೆಲಸ (ಕಾರ್ಪೆಂಟರ್)
  2. ದೋಣಿ ತಯಾರಕ
  3. ಶಸ್ತ್ರಕಾರ (ಮದ್ದುಗುಂಡು ತಯಾರಿಸುವವರು)
  4. ಕಮ್ಮಾರ
  5. ಸುತ್ತಿಗೆ ಇತ್ಯಾದಿ ತಯಾರಿಸುವವರು
  6. ಬೀಗ ಮತ್ತು ಕೀಲಿ ತಯಾರಿಸುವವರು
  7. ಅಕ್ಕಸಾಲಿಗರು (ಚಿನ್ನದ ಕುಸುರಿ)
  8. ಕುಂಬಾರರು (ಮಡಿಕೆ ತಯಾರಿಸುವವರು)
  9. ಶಿಲ್ಪಿಗಳು, ಕಲ್ಲು ಒಡೆಯುವವರು
  10. ಚಮ್ಮಾರರು (ಪಾದರಕ್ಷೆ ತಯಾರಿಸುವವರು)
  11. ಮೇಸ್ತ್ರಿಗಳು
  12. ಬುಟ್ಟಿ ಹೆಣೆಯುವವರು
  13. ಬೊಂಬೆ ತಯಾರಿಸುವವರು
  14. ಕ್ಷೌರಿಕರು
  15. ಹೂಮಾಲೆ ತಯಾರಕರು
  16. ಡೋಬಿ (ಬಟ್ಟೆ ಒಗೆಯುವವರು)
  17. ದರ್ಜಿಗಳು (ಟೈಲರ್)
  18. ಮೀನಿನ ಬಲೆ ತಯಾರಕರು

ಇದನ್ನೂ ಓದಿ: ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ

ಈ ಯೋಜನೆಯ ಫಲಾನುಭವಿಗಳಿಗೆ ಏನು ಲಾಭ?

ಮೇಲೆ ತಿಳಿಸಿದ ಅರ್ಹ ಕುಶಲಕರ್ಮಿಗಳು ಪಿಎಂ ವಿಶ್ವಕರ್ಮ ಪೋರ್ಟಲ್​ನಲ್ಲಿ ಹೆಸರು ನೊಂದಾಯಿಸಬೇಕು. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಪೋರ್ಟಲ್​ನಲ್ಲಿ ಉಚಿತವಾಗಿ ಹೆಸರು ನೊಂದಾಯಿಸಬಹುದು.

  • ಎಲ್ಲಾ ನೊಂದಾಯಿತರಿಗೂ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಕಾರ್ಡ್ ಕೊಡಲಾಗುತ್ತದೆ.
  • ಕೌಶಲ್ಯ ಅಭಿವೃದ್ಧಿಗೆ ಉನ್ನತ ಮಟ್ಟದವರೆಗೂ ತರಬೇತಿ ವ್ಯವಸ್ಥೆ ಮಾಡಲಾಗುತ್ತದೆ.
  • 15,000 ರೂ ಮೊತ್ತದ ಟೂಲ್​ಕಿಟ್ ಇನ್ಸೆಂಟಿವ್
  • ವರ್ಷಕ್ಕೆ ಕೇವಲ ಶೇ. 5ರಷ್ಟು ಬಡ್ಡಿದರದಲ್ಲಿ 2 ಲಕ್ಷ ರೂವರೆಗೆ ಸಾಲ
  • ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹಕ ಧನ
  • ಮಾರ್ಕೆಟಿಂಗ್ ನೆರವು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್