TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್

ಟೈಮ್ ಮ್ಯಾಗಝಿನ್ ರೂಪಿಸಿರುವ 2023ರ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಅಮೆರಿಕದ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಟಾಪ್ 100 ಪಟ್ಟಿಯಲ್ಲಿ ಏಷ್ಯಾದ ಎರಡು ಕಂಪನಿಗಳು ಮಾತ್ರವೇ ಇರುವುದು. ಇನ್ಫೋಸಿಸ್ ಮತ್ತು ಸ್ಯಾಮ್ಸುಂಗ್ ಮಾತ್ರವೇ ಟಾಪ್ 100 ನಲ್ಲಿರುವ ಏಷ್ಯನ್ ಕಂಪನಿಗಳು. ಪಟ್ಟಿಯಲ್ಲಿ ಅತಿಹೆಚ್ಚು ಕಂಪನಿಗಳು ಅಮೆರಿಕದವು. ಜರ್ಮನಿ, ಇಟಲಿ, ಫ್ರಾನ್ಸ್, ಬ್ರಿಟನ್, ಸ್ವಿಟ್ಜರ್​ಲೆಂಡ್, ಕೆನಡಾ ದೇಶದ ಕಂಪನಿಗಳೂ ಹಲವಿವೆ.

TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್
ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿ
Follow us
|

Updated on: Sep 15, 2023 | 12:08 PM

ಬೆಂಗಳೂರು, ಸೆಪ್ಟೆಂಬರ್ 15: ಈ ವರ್ಷದಲ್ಲಿ (2023) ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಟೈಮ್ ನಿಯತಕಾಲಿಕೆ (TIME Magazine) ಪ್ರಕಟಿಸಿದೆ. ಮೈಕ್ರೋಸಾಫ್ಟ್ ಸಂಸ್ಥೆ 96.46 ಅಂಕಗಳೊಂದಿಗೆ ವಿಶ್ವದ ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿತವಾಗಿದೆ. ಟೈಮ್ ಮ್ಯಾಗಝಿನ್ ಮತ್ತು ಸ್ಟಾಟಿಶಿಯಾ ಸಂಸ್ಥೆಗಳು ಸೇರಿ ವಿಶ್ವದ ಒಟ್ಟು 750 ಬೆಸ್ಟ್ ಕಂಪನಿಗಳ ಪಟ್ಟಿ ತಯಾರಿಸಿವೆ. ಇದರಲ್ಲಿ ಮೊದಲ ನಾಲ್ಕು ಕಂಪನಿಗಳು ಅಮೆರಿಕದ ಟೆಕ್ ದೈತ್ಯ ಸಂಸ್ಥೆಗಳೇ ಆಗಿವೆ. ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಬೆಟ್ (ಗೂಗಲ್) ಮತ್ತು ಮೆಟಾ ಪ್ಲಾಟ್​ಫಾರ್ಮ್ಸ್ (ಫೇಸ್ಬುಕ್) ಕಂಪನಿಗಳು ಟಾಪ್-4 ನಲ್ಲಿವೆ. ಕುತೂಹಲವೆಂದರೆ ಈ ಪಟ್ಟಿಯಲ್ಲಿರುವ ಅಗ್ರ 100 ಕಂಪನಿಗಳಲ್ಲಿ ಇನ್ಫೋಸಿಸ್ (Infosys) ಮಾತ್ರವೇ ಏಕೈಕ ಭಾರತೀಯ ಕಂಪನಿ ಇರುವುದು. ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್ ಒಟ್ಟಾರೆ 88.38 ಅಂಕಗಳೊಂದಿಗೆ 64ನೇ ಸ್ಥಾನದಲ್ಲಿದೆ.

ಇನ್ಫೋಸಿಸ್ ಸಂಸ್ಥೆ ತನಗೆ ಸಿಕ್ಕ ಈ ಗೌರವವನ್ನು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡಿದೆ. ವಿಶ್ವದ 3 ವೃತ್ತಿಪರ ಸೇವೆಗಳ ಸಂಸ್ಥೆಗಳ ಪೈಕಿ ಒಬ್ಬರೆನಿಸಿದ್ದೇವೆ. ಟಾಪ್ 100 ಗ್ಲೋಬಲ್ ಪಟ್ಟಿಯಲ್ಲಿ ಭಾರತದಿಂದ ನಮ್ಮದೇ ಏಕೈಕ ಕಂಪನಿ ಸ್ಥಾನ ಪಡೆದಿರುವುದು ಎಂದು ಇನ್ಫೋಸಿಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಅತ್ಯುತ್ತಮ ಕಂಪನಿ ಎಂದು ಪರಿಗಣಿಸಲು ಏನು ಮಾನದಂಡ?

  • ಉದ್ಯೋಗಿ ಸಂತುಷ್ಟಿ
  • ಆದಾಯ ಹೆಚ್ಚಳ
  • ಸುಸ್ಥಿರತೆ
  • ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಕಳಕಳಿಯ ಆಡಳಿತ (ಇಎಸ್​ಜಿ)

ಈ ನಾಲ್ಕು ಅಂಶಗಳಲ್ಲಿ ಇಎಸ್​ಜಿ ವಿಚಾರದಲ್ಲಿ ಅತಿಹೆಚ್ಚು ಸ್ಕೋರ್ ಮಾಡಿರುವುದು ಐರ್ಲೆಂಡ್ ಮೂಲದ ಅಕ್ಸೆಂಚರ್. ಇನ್ನು ಜಾಗತಿಕವಾಗಿ ಟಾಪ್ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಹೆಚ್ಚಿನವು ಅಮೆರಿಕದವೇ ಆಗಿವೆ. ಜರ್ಮನಿ, ಫ್ರಾನ್ಸ್, ಬ್ರಿಟನ್, ಇಟಲಿ, ಕೆನಡಾ, ಸ್ವಿಟ್ಜರ್​ಲೆಂಡ್ ದೇಶಗಳಿಂದಲೂ ಹಲವು ಕಂಪನಿಗಳಿವೆ.

ಇನ್ನು, ಈ ಪಟ್ಟಿಯಲ್ಲಿ ಜಪಾನ್ ಮತ್ತು ಚೀನಾದ ಒಂದೂ ಕಂಪನಿ ಇಲ್ಲ ಎಂಬುದು ಅಚ್ಚರಿ ಮೂಡಿಸುತ್ತದೆ. ಇನ್ಫೋಸಿಸ್ ಬಿಟ್ಟರೆ ದಕ್ಷಿಣ ಕೊರಿಯಾದ ಸ್ಯಾಮ್ಸುಂಗ್ ಮಾತ್ರವೇ ಈ ಪಟ್ಟಿಯಲ್ಲಿರುವ ಏಷ್ಯನ್ ಕಂಪನಿಯಾಗಿದೆ.

ಇದನ್ನೂ ಓದಿ: ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ

ಟೈಮ್ ಮ್ಯಾಗಝಿನ್ ಟಾಪ್ 100 ಅತ್ಯುತ್ತಮ ಕಂಪನಿಗಳ ಪಟ್ಟಿ

  1. ಮೈಕ್ರೋಸಾಫ್ಟ್, ಅಮೆರಿಕ
  2. ಆ್ಯಪಲ್, ಅಮೆರಿಕ
  3. ಆಲ್ಫಬೆಟ್, ಅಮೆರಿಕ
  4. ಮೆಟಾ ಪ್ಲಾಟ್​ಫಾರ್ಮ್ಸ್, ಅಮೆರಿಕ
  5. ಅಕ್ಸೆಂಚರ್, ಐರ್ಲೆಂಡ್
  6. ಫೈಜರ್, ಅಮೆರಿಕ
  7. ಅಮೆರಿಕನ್ ಎಕ್ಸ್​ಪ್ರೆಸ್, ಅಮೆರಿಕ
  8. ಎಲೆಕ್ಟ್ರಿಸೈಟೆ ಡೀ ಪ್ರಾನ್ಸ್, ಫ್ರಾನ್ಸ್
  9. ಬಿಎಂಡಬ್ಲ್ಯು ಗ್ರೂಪ್, ಜರ್ಮನಿ
  10. ಡೆಲ್ ಟೆಕ್ನಾಲಜೀಸ್, ಅಮೆರಿಕ
  11. ಎಲ್​ವಿಎಂಎಚ್ ಲೂಯಿಸ್ ವುಟನ್, ಫ್ರಾನ್ಸ್
  12. ಡೆಲ್ಟಾ ಏರ್ ಲೈನ್ಸ್, ಅಮೆರಿಕ
  13. ಎನೆಲ್, ಇಟಲಿ
  14. ಸ್ಟಾರ್​ಬಕ್ಸ್ ಕಾರ್ಪ್, ಅಮೆರಿಕ
  15. ವೋಲ್ಸ್​ವಾಗನ್ ಗ್ರೂಪ್, ಜರ್ಮನಿ
  16. ಜನರಲ್ ಮೋಟಾರ್ಸ್, ಅಮೆರಿಕ
  17. ಎಲಿವೆನ್ಸ್ ಹೆಲ್ತ್, ಅಮೆರಿಕ
  18. ಬೋಷ್, ಜರ್ಮನಿ
  19. ಫೋರ್ಡ್, ಅಮೆರಿಕ
  20. ಜಾನ್ಸನ್ ಅಂಡ್ ಜಾನ್ಸನ್, ಅಮೆರಿಕ
  21. ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂಡಿ), ಅಮೆರಿಕ
  22. ಪೇಪಾಲ್, ಅಮೆರಿಕ
  23. ಎನ್​ವಿಡಿಯಾ ಕಾರ್ಪ್, ಅಮೆರಿಕ
  24. ಮೆರ್ಕ್ ಅಂಡ್ ಕೋ, ಅಮೆರಿಕ
  25. ಲಾರಿಯಲ್, ಫ್ರಾನ್ಸ್
  26. ಬಿಪಿ, ಬ್ರಿಟನ್
  27. ಜೆ.ಪಿ. ಮಾರ್ಗನ್, ಅಮೆರಿಕ
  28. ಲುಲುಲೆಮನ್ ಅಥ್ಲೆಟಿಕಾ, ಕೆನಡಾ
  29. ಶೆಲ್, ಬ್ರಿಟನ್
  30. ಇಲ್ಲೂಮಿನಾ, ಅಮೆರಿಕ
  31. ಮರ್ಸಿಡೆಸ್ ಬೆಂಜ್ ಗ್ರೂಪ್, ಜರ್ಮನಿ
  32. ಹ್ಯೂಮನಾ, ಅಮೆರಿಕ
  33. ಟೋಟಲ್ ಎನರ್ಜೀಸ್, ಫ್ರಾನ್ಸ್
  34. ಇ ಆನ್, ಜರ್ಮನಿ
  35. ಡೋಯ್ಚ ಟೆಲಿಕಾಂ, ಜರ್ಮನಿ
  36. ಡೆಲಾಯಿಟ್, ಬ್ರಿಟನ್
  37. ಕೆಎಲ್​ಎ ಕಾರ್ಪೊರೇಶನ್, ಅಮೆರಿಕ
  38. ರೋಶೆ, ಸ್ವಿಟ್ಜರ್​ಲೆಂಡ್
  39. ಶ್ನೇಡರ್ ಎಲೆಕ್ಟ್ರಿಕ್, ಫ್ರಾನ್ಸ್
  40. ಸೀಮನ್ಸ್, ಜರ್ಮನಿ
  41. ಸನೋಫಿ, ಫ್ರಾನ್ಸ್
  42. ಇಂಡಿಟೆಕ್ಸ್, ಸ್ಪೇನ್
  43. ಎಚ್​ಪಿ, ಅಮೆರಿಕ
  44. ಅಮೇಜಾನ್, ಅಮೆರಿಕ
  45. ನೊವಾರ್ಟಿಸ್, ಸ್ವಿಟ್ಜರ್ಲೆಂಡ್
  46. ಎನ್​ಬಿಡಬ್ಲ್ಯು ಎನರ್ಜೀ ಬಾಡೆನ್ ವುರ್ಟೆಂಬರ್ಗ್, ಜರ್ಮನಿ
  47. ಸ್ವಿಸ್ ರೆ, ಸ್ವಿಟ್ಜರ್​ಲೆಂಡ್
  48. ಯುನೈಟೆಡ್ ಹೆಲ್ತ್ ಗ್ರೂಪ್, ಅಮೆರಿಕ
  49. ಹೋಮ್ ಡಿಪೋ, ಅಮೆರಿಕ
  50. ಲೆಗೋ ಗ್ರೂಪ್, ಡೆನ್ಮಾರ್ಕ್
  51. ಡೋಯ್ಚ ಬಾನ್, ಜರ್ಮನಿ
  52. ಟಾರ್ಗೆಟ್ ಕಾರ್ಪ್, ಅಮೆರಿಕ
  53. ಟೆಸ್ಲಾ, ಅಮೆರಿಕ
  54. ಮ್ಯಾರಿಯಟ್ ಇಂಟರ್ನ್ಯಾಷನಲ್, ಅಮೆರಿಕ
  55. ಕಾಸ್ಟ್​ಕೋ ಹೋಲ್​ಸೇಲ್ ಕಾರ್ಪ್, ಅಮೆರಿಕ
  56. ಬಿಎಎಸ್​ಎಫ್, ಜರ್ಮನಿ
  57. ಎನ್ಜೀ, ಫ್ರಾನ್ಸ್
  58. ವಾಲ್ಟ್ ಡಿಸ್ನೀ ಕಂಪನಿ, ಅಮೆರಿಕ
  59. ಸಫ್ರನ್, ಫ್ರಾನ್ಸ್
  60. ಲಾಯ್ಡ್ಸ್ ಬ್ಯಾಂಕಿಂಗ್ ಗ್ರೂಪ್, ಬ್ರಿಟನ್
  61. ವಿನ್ಸಿ, ಫ್ರಾನ್ಸ್
  62. ಅಡೋಬ್, ಅಮೆರಿಕ
  63. ಡೋಯ್ಚೆ ಪೋಸ್ಟ್, ಜರ್ಮನಿ
  64. ಇನ್ಫೋಸಿಸ್, ಭಾರತ
  65. ಲ್ಯಾಮ್ ರಿಸರ್ಚ್, ಅಮೆರಿಕ
  66. ಟಿಡಿ ಬ್ಯಾಂಕ್, ಕೆನಡಾ
  67. ಕೋಕ ಕೋಲ ಕಂಪನಿ, ಅಮೆರಿಕ
  68. ಬುಕಿಂಗ್ ಹೋಲ್ಡಿಂಗ್ಸ್, ಅಮೆರಿಕ
  69. ಸಿಗ್ನ ಕಾರ್ಪೊರೇಶನ್, ಅಮೆರಿಕ
  70. ಇನ್ಫಿನಿಯಾನ್ ಟೆಕ್ನಾಲಜೀಸ್, ಜರ್ಮನಿ
  71. ಸಿಎನ್​ಪಿ ಅಶೂರೆನ್ಸಸ್, ಫ್ರಾನ್ಸ್
  72. ಸಿಸ್ಕೋ ಸಿಸ್ಟಮ್ಸ್, ಅಮೆರಿಕ
  73. ಸೇಲ್ಸ್​ಫೋರ್ಸ್, ಅಮೆರಿಕ
  74. ಅಪ್ಲೈಡ್ ಮೆಟೀರಿಯಲ್ಸ್, ಅಮೆರಿಕ
  75. ಏರ್ಬಸ್, ನೆದರ್ಲೆಂಡ್ಸ್
  76. ನೆಕ್ಸ್ಟ್ ಪಿಎಲ್​ಸಿ, ಬ್ರಿಟನ್
  77. ಕ್ವಾಲ್​ಕಾಮ್, ಅಮೆರಿಕ
  78. ಅಬ್ಬಾಟ್ ಲ್ಯಾಬೊರೇಟರೀಸ್, ಅಮೆರಿಕ
  79. ಡೆವೋನ್ ಎನರ್ಜಿ, ಅಮೆರಿಕ
  80. ನೈಕ್, ಅಮೆರಿಕ
  81. ಟಿಜೆಎಕ್ಸ್ ಕಂಪನೀಸ್, ಅಮೆರಿಕ
  82. ಇಂಟ್ಯಾಕ್ಟ್ ಫೈನಾನ್ಷಿಯಲ್ ಕಾರ್ಪ್, ಕೆನಡಾ
  83. ಬಿಬಿವಿಎ, ಸ್ಪೇನ್
  84. ಸ್ಯಾಮ್ಸುಂಗ್ ಎಲೆಕ್ಟ್ರಾನಿಕ್ಸ್, ಸೌತ್ ಕೊರಿಯಾ
  85. ಕ್ಯಾಪ್​ಜೆಮಿನಿ, ಫ್ರಾನ್ಸ್
  86. ಮಿಶೆಲಿನ್ ಗ್ರೂಪ್, ಫ್ರಾನ್ಸ್
  87. ಡಬ್ಲ್ಯುಎಸ್​ಪಿ ಗ್ಲೋಬಲ್, ಕೆನಡಾ
  88. ಐಕಾನ್, ಐರ್ಲೆಂಡ್
  89. ಎ2ಎ, ಇಟಲಿ
  90. ನೆಸ್ಲೆ, ಸ್ವಿಟ್ಜರ್ಲೆಂಡ್
  91. ಕಾಮ್​ಕ್ಯಾಸ್ಟ್ ಕಾರ್ಪ್, ಅಮೆರಿಕ
  92. ಡೆಕಾತ್ಲಾನ್, ಫ್ರಾನ್ಸ್
  93. ಥರ್ಮೋ ಫಿಶನ್ ಸೈಂಟಿಫಿಕ್, ಅಮೆರಿಕ
  94. ಅಮೇಡ್ಯೂಸ್ ಐಟಿ ಗ್ರೂಪ್, ಸ್ಪೇನ್
  95. ಡೋಯ್ಚೆ ಲುಫ್ತಾನ್ಸ, ಜರ್ಮನಿ
  96. ಎಸ್​ಎಪಿ, ಜರ್ಮನಿ
  97. ಎನಿ, ಇಟಲಿ
  98. ಆಸ್ಟ್ರಾಜೆನೆಕಾ, ಬ್ರಿಟನ್
  99. ಒರಾಕಲ್, ಅಮೆರಿಕ
  100. ರೇತಿಯಾನ್ ಟೆಕ್ನಾಲಜೀಸ್, ಅಮೆರಿಕ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ