ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ

NBFC-UL List Released: ಆರ್​ಬಿಐನ ಹೆಚ್ಚಿನ ಮಟ್ಟದ ಕಟ್ಟುಪಾಡುಗಳಿಗೆ ಒಳಪಡಬೇಕಾದ ಅಪ್ಪರ್ ಲೇಯರ್ ಎನ್​ಬಿಎಫ್​ಸಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್, ಟಾಟಾ ಸನ್ಸ್, ಮುತ್ತೂಟ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್ ಸೇರಿದಂತೆ 15 ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಸಂಸ್ಥೆಯ ಗಾತ್ರ ಮೊದಲಾದ ಕೆಲ ಅಂಶಗಳ ಆಧಾರದ ಮೇಲೆ ಅಪ್ಪರ್ ಲೇಯರ್ ಸೇರಿದಂತೆ ಮೂರು ವಿಭಾಗವಾಗಿ ಎನ್​ಬಿಎಫ್​ಸಿಯನ್ನು ವರ್ಗೀಕರಿಸಲಾಗುತ್ತದೆ. ಈ 15 ಎನ್​ಬಿಎಫ್​ಸಿಗಳು ಕನಿಷ್ಠ 5 ವರ್ಷವಾದರೂ ಆರ್​ಬಿಐನ ನಿಗದಿತ ರೆಗ್ಯುಲೇಟರಿ ಅವಶ್ಯಕತೆಗಳನ್ನು ಪೂರೈಸುವುದು ಕಡ್ಡಾಯ.

ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2023 | 11:07 AM

ನವದೆಹಲಿ, ಸೆಪ್ಟೆಂಬರ್ 15: ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ (ಸೆ. 14) ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿಯನ್ನು (NBFCs) ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ 15 ಹಣಕಾಸು ಸಂಸ್ಥೆಗಳು ಆರ್​ಬಿಐನ ಉನ್ನತ ಕಟ್ಟುಪಾಡು ನಿಯಮಗಳನ್ನು (Enhanced Regulatory Requirements) ಪೂರೈಸಬೇಕಾಗುತ್ತದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್, ಬಜಾಜ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಟಾಟಾ ಸನ್ಸ್ ಮೊದಲಾದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿವೆ.

ದೇಶದಲ್ಲಿ ಅಂದಾಜು 10,000 ಸಂಖ್ಯೆಯಷ್ಟು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿವೆ. ಆರ್​ಬಿಐ ನಿಗದಿ ಮಾಡಿದ ನಿಯಮಗಳಿಗೆ ಇವು ಒಳಪಡಬೇಕಾಗುತ್ತದೆ. ಈ ಎಲ್ಲಾ ಎನ್​ಬಿಎಫ್​ಸಿಗಳನ್ನು ಆರ್​​ಬಿಐ ಮೂರು ಹಂತ ಅಥವಾ ಲೇಯರ್ ಆಗಿ ವರ್ಗೀಕರಿಸುತ್ತದೆ. ಬೇಸ್ ಲೇಯರ್ ಅಥವಾ ಕೆಳ ಹಂತದ ಎನ್​ಬಿಎಫ್​ಸಿ, ಮಿಡಲ್ ಲೇಯರ್ ಅಥವಾ ಮಧ್ಯಮ ಹಂತದ ಎನ್​ಬಿಎಫ್​ಸಿ, ಹಾಗೂ ಅಪ್ಪರ್ ಲೇಯರ್ ಅಥವಾ ಮೇಲಿನ ಹಂತದ ಎನ್​ಬಿಎಫ್​ಸಿ ಎಂದು ವರ್ಗೀಕರಣ ಮಾಡಲಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ಎನ್​ಬಿಎಫ್​ಸಿಗಳನ್ನು ಅಪ್ಪರ್ ಲೇಯರ್ ಎಂದು ಪರಿಗಣಿಸಲಾಗುತ್ತದೆ. ಈ ಉನ್ನತ ವರ್ಗದ ಹಣಕಾಸು ಸಂಸ್ಥೆಗಳಿಗೆ ಹೆಚ್ಚು ಕಟ್ಟುಪಾಡುಗಳು ನಿಗದಿಯಾಗಿರುತ್ತವೆ.

ಇದನ್ನೂ ಓದಿ: ಮುಂಗಡ ತೆರಿಗೆ 2ನೇ ಕಂತಿಗೆ ಇವತ್ತು ಕೊನೆ ದಿನ; ಏನಿದು ಅಡ್ವಾನ್ಸ್ ಟ್ಯಾಕ್ಸ್? ಯಾರು ಕಟ್ಟಬೇಕು?

ಅಪ್ಪರ್ ಲೇಯರ್ ವರ್ಗದ ಎನ್​ಬಿಎಫ್​ಸಿಗಳ ಪಟ್ಟಿ

  1. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಲಿ
  2. ಬಜಾಜ್ ಫೈನಾನ್ಸ್ ಲಿ
  3. ಬಜಾಜ್ ಹೌಸಿಂಗ್ ಫೈನಾನ್ಸ್
  4. ಶ್ರೀರಾಮ್ ಫೈನಾನ್ಸ್ ಲಿ
  5. ಟಾಟಾ ಸನ್ಸ್ ಪ್ರೈ ಲಿ
  6. ಎಲ್ ಅಂಡ್ ಟಿ ಫೈನಾನ್ಸ್ ಲಿ
  7. ಪಿರಾಮಳ್ ಕ್ಯಾಪಿಟಲ್ ಅಂಡ್ ಹೌಸಿಂಗ್ ಫೈನಾನ್ಸ್ ಲಿ
  8. ಚೋಳಮಂಡಲಂ ಇನ್ವೆಸ್ಟ್​ಮೆಂಟ್ ಅಂಡ್ ಫೈನಾನ್ಸ್ ಕಂ. ಲಿ
  9. ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ
  10. ಮಹೀಂದ್ರ ಅಂಡ್ ಮಹೀಂದ್ರ ಫೈನಾನ್ಷಿಯಲ್ ಸರ್ವಿಸಸ್ ಲಿ
  11. ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವಿಸಸ್ ಲಿ
  12. ಪಿಎನ್​ಬಿ ಹೌಸಿಂಗ್ ಫೈನಾನ್ಸ್ ಲಿ
  13. ಹೆಚ್​ಡಿಬಿ ಫೈನಾನ್ಷಿಯಲ್ ಸರ್ವಿಸಸ್ ಲಿ
  14. ಆದಿತ್ಯ ಬಿರ್ಲಾ ಫೈನಾನ್ಸ್ ಲಿ
  15. ಮುತ್ತೂಟ್ ಫೈನಾನ್ಸ್

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಎನ್​ಬಿಎಫ್​ಸಿ ಅನ್ನು ಅಪ್ಪರ್ ಲೇಯರ್ ಆಗಿ ವರ್ಗೀಕರಿಸಲು ಆರ್​ಬಿಐ ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಿದೆ. ಸಂಸ್ಥೆಯ ಗಾತ್ರ ಮತ್ತು ಸ್ಕೋರಿಂಗ್ ವಿಧಾನ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ವರ್ಗೀಕರಣ ನಡೆಯುತ್ತದೆ. ಇದರ ಪ್ರಕಾರ ಟಿಎಂಎಫ್ ಬ್ಯುಸಿನೆಸ್ ಸರ್ವಿಸಸ್ ಲಿ (ಟಾಟಾ ಗ್ರೂಪ್ ಕಂಪನಿ) ಸಂಸ್ಥೆಯನ್ನೂ ಅಪ್ಪರ್ ಲೇಯರ್ ಎನ್​ಬಿಎಫ್​ಸಿ ಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಸಂಸ್ಥೆಯ ಪುನಾರಚನೆ ನಡೆಯುತ್ತಿರುವುದರಿಂದ ಪಟ್ಟಿಗೆ ಸೇರ್ಪಡೆಯಾಗಿಲ್ಲ.

ಪಟ್ಟಿಯಲ್ಲಿರುವ ಕಂಪನಿಗಳು ಕನಿಷ್ಠ 5 ವರ್ಷವಾದರೂ ಆರ್​ಬಿಐನ ನಿಗದಿತ ಕಟ್ಟುಪಾಡುಗಳಿಗೆ ಒಳಪಡಲೇಬೇಕಾಗುತ್ತದೆ. ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿ ಈ ಐದು ವರ್ಷದಲ್ಲಿ ನಿಗದಿತ ಮಾನದಂಡಗಳಿಗೆ ಅನ್ವಯ ಆಗದೇ ಹೋದರೂ ಕೂಡ ನಿಗದಿತ ಕಟ್ಟುಪಾಡುಗಳಿಗೆ ಒಳಪಡುವುದು ಕಡ್ಡಾಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ