Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2ನೇ ಸರಣಿಯಲ್ಲಿ ಹೂಡಿಕೆ ಮಾಡಲು ಇಂದೇ ಕೊನೆ; ಏನಿದರ ವಿಶೇಷತೆ?

Good Investment Option: ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರಿಗೆ ಸಾವರೀನ್ ಗೋಲ್ಡ್ ಬಾಂಡ್ ಒಳ್ಳೆಯ ಆಯ್ಕೆ. ಇದು ಎಂಟು ವರ್ಷದ ಹೂಡಿಕೆ ಯೋಜನೆಯಾಗಿದ್ದು, ಚಿನ್ನದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆ ಬೆಳೆಯುತ್ತದೆ. ಒಬ್ಬ ವ್ಯಕ್ತಿ 1 ಗ್ರಾಮ್​ನಿಂದ ಹಿಡಿದು 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಸಂಘ ಸಂಸ್ಥೆಗಳಾದರೆ 20 ಕಿಲೋ ಚಿನ್ನದವರೆಗೆ ಇನ್ವೆಸ್ಟ್ ಮಾಡಬಹುದು.

Sovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ 2ನೇ ಸರಣಿಯಲ್ಲಿ ಹೂಡಿಕೆ ಮಾಡಲು ಇಂದೇ ಕೊನೆ; ಏನಿದರ ವಿಶೇಷತೆ?
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2023 | 1:02 PM

ನವದೆಹಲಿ, ಸೆಪ್ಟೆಂಬರ್ 15: ಬಹಳ ಜನಪ್ರಿಯವಾಗುತ್ತಿರುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ (Sovereign Gold Bond Scheme) ಈ ಹಣಕಾಸು ವರ್ಷದ ಎರಡನೇ ಸರಣಿಯಲ್ಲಿ ಹೂಡಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 11ರಂದು ಶುರುವಾದ ಎರಡನೇ ಸರಣಿಯ (2nd Tranche or Series) ಹೂಡಿಕೆ ಅವಕಾಶ ಇಂದು (ಸೆ. 15) ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ 20ಕ್ಕೆ ಗೋಲ್ಡ್ ಬಾಂಡ್ ವಿತರಣೆ ಮಾಡಲಾಗುತ್ತದೆ. 2023-24ರ ಮೊದಲ ಸರಣಿ ಜೂನ್ 19ರಿಂದ 23ರವರೆಗೆ ಇತ್ತು. ಜೂನ್ 27ಕ್ಕೆ ಬಾಂಡ್​ಗಳನ್ನು ವಿತರಿಸಲಾಗಿತ್ತು. ಈಗ ಎರಡನೇ ಸರಣಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?

ಚಿನ್ನದ ಮೇಲೆ ಹೂಡಿಕೆ ಮಾಡಲು ಸರ್ಕಾರ ರೂಪಿಸಿರುವ ಸ್ಕೀಮ್ ಇದಾಗಿದೆ. ವೈಯಕ್ತಿಕವಾಗಿ ಒಂದು ಗ್ರಾಮ್​ನಿಂದ 4 ಕಿಲೋ ಚಿನ್ನದವರೆಗೆ ಹೂಡಿಮೆ ಮಾಡಲು ಅವಕಾಶ ಇದೆ. ಭೌತಿಕ ಚಿನ್ನ ದೊರಕುವುದಿಲ್ಲ. ಆದರೆ, ಭೌತಿಕ ಚಿನ್ನದ ಬೆಲೆಗೆ ಅನುಗುಣವಾಗಿ ನಿಮಗೆ ರಿಟರ್ನ್ ಸಿಗುತ್ತದೆ. ಅಂದರೆ ಇವತ್ತು ನೀವು ನಿರ್ದಿಷ್ಟ ಬೆಲೆಗೆ ಚಿನ್ನ ಖರೀದಿಸಿ, 8 ವರ್ಷದ ಬಳಿಕ ಭೌತಿಕ ಚಿನ್ನದ ಮಾರುಕಟ್ಟೆ ದರ ಎಷ್ಟಿದೆಯೋ ಅಷ್ಟು ಮೊತ್ತ ನಿಮ್ಮ ಕೈಸೇರುತ್ತದೆ.

ಗೋಲ್ಡ್ ಬಾಂಡ್: ಗ್ರಾಮ್​ಗೆ 5,923 ರೂ

ಎರಡನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಒಂದು ಗ್ರಾಮ್ ಚಿನ್ನಕ್ಕೆ ಆರ್​ಬಿಐ 5,923 ರೂ ಎಂದು ನಿಗದಿ ಮಾಡಿದೆ. ಈ ದರದ ಪ್ರಕಾರ ನೀವು 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಒಂದು ವೇಳೆ ನೀವು ಆನ್​ಲೈನ್​ನಲ್ಲಿ ಹಣ ಪಾವತಿ ಮಾಡುವುದಾದರೆ ಗ್ರಾಮ್​ಗೆ 50 ರೂ ರಿಯಾಯಿತಿ ಸಿಗುತ್ತದೆ. ಅಂದರೆ ನೀವು ಗ್ರಾಮ್​ಗೆ 5,873 ರೂನಂತೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ

ವೈಯಕ್ತಿಕವಾಗಿ ಒಂದು ವರ್ಷದ ಅವಧಿಯಲ್ಲಿ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟ್ ಅದರೆ 20 ಕಿಲೋವರೆಗೆ ಅವಕಾಶ ಇರುತ್ತದೆ. ಇದು ಒಂದು ವರ್ಷದ ಹೂಡಿಕೆ. ಒಂದು ವರ್ಷದಲ್ಲಿ ವಿವಿಧ ಸರಣಿಗಳಲ್ಲಿ ಸ್ಕೀಮ್ ಅನ್ನು ಆರ್​​ಬಿಐ ಬಿಡುಗಡೆ ಮಾಡುತ್ತದೆ. ಆ ಎಲ್ಲಾ ಸರಣಿಗಳಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ, ಎಲ್ಲಾ ಸರಣಿ ಸೇರಿ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಇರುವ ಹೂಡಿಕೆ ಮಿತಿ 4 ಕಿಲೋ ಮಾತ್ರ.

ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ ಗೋಲ್ಡ್ ಬಾಂಡ್

ನೀವು ಈಗ ಗೋಲ್ಡ್ ಬಾಂಡ್ ಖರೀದಿಸಿದರೆ, ಎಂಟು ವರ್ಷದ ಬಳಿಕ, ಅಂದರೆ 2031ಕ್ಕೆ ಬಾಂಡ್ ಮೆಚ್ಯೂರ್ ಆಗುತ್ತದೆ. 2031ರಲ್ಲಿ ಚಿನ್ನದ ಮಾರುಕಟ್ಟೆ ಬೆಲೆ ಪ್ರಕಾರ ನಿಮ್ಮ ಹೂಡಿಕೆಯ ಮೌಲ್ಯ ಬದಲಾಗಿರುತ್ತದೆ. ಒಂದು ವೇಳೆ ನೀವು ಮುಂಚಿತವಾಗಿ ಬಾಂಡ್ ಸ್ಕೀಮ್ ಹಿಂಪಡೆಯಬೇಕೆಂದರೆ ಅದಕ್ಕೂ ಅವಕಾಶಗಳಿವೆ. ಆದರೆ, ಬಾಂಡ್ ಪಡೆದು ಕನಿಷ್ಠ 5 ವರ್ಷವಾದ ಬಳಿಕವಷ್ಟೇ ಮುಂಚಿತವಾಗಿ ಹಿಂಪಡೆಯಬಹುದು.

ಸಾವರೀನ್ ಗೋಲ್ಡ್ ಬಾಂಡ್: ಬಡ್ಡಿ ಸಿಗುತ್ತೆ

ಸಾವರೀನ್ ಗೋಲ್ಡ್ ಬಾಂಡ್ ಮೇಲೆ ನೀವು ಹೂಡಿಕೆ ಮಾಡಿದರೆ, ಚಿನ್ನದ ಬೆಲೆ ಏರಿಕೆಯಿಂದ ಸಿಗುವ ಲಾಭದ ಜೊತೆಗೆ ಕಾಲಕಾಲಕ್ಕೆ ಬಡ್ಡಿಯೂ ಪ್ರಾಪ್ತವಾಗುತ್ತದೆ. ವರ್ಷಕ್ಕೆ ಶೇ. 2.5ರ ದರದಲ್ಲಿ ಬಡ್ಡಿ ಕೊಡಲಾಗುತ್ತದೆ. ಆರು ತಿಂಗಳಿಗೊಮ್ಮೆ ಹೂಡಿಕೆದಾರರ ಖಾತೆಗೆ ಬಡ್ಡಿ ಹಣ ವರ್ಗಾವಣೆ ಆಗುತ್ತದೆ. ಆದರೆ, ಈ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್

ಬಡ್ಡಿಹಣಕ್ಕೆ ಮಾತ್ರವೇ ತೆರಿಗೆ ವಿಧಿಸಲಾಗುವುದು. ನಿಮ್ಮ ಹೂಡಿಕೆಯ ಮೇಲೆ ತೆರಿಗೆ ಕಡಿತ ಇರುವುದಿಲ್ಲ. ನೀವು ಬಾಂಡ್ ಹಿಂಪಡೆಯುವಾಗ ಸಿಗುವ ಲಾಭಕ್ಕೂ ಯಾವ ತೆರಿಗೆ ಇರುವುದಿಲ್ಲ.

ಚಿನ್ನಕ್ಕೆ ಯಾವತ್ತಿದ್ದರೂ ಚಿನ್ನದ ಬೆಲೆ

ಭೂಮಿಯಂತೆ ಚಿನ್ನಕ್ಕೂ ಯಾವತ್ತಿದ್ದರೂ ಬೇಡಿಕೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇದರ ಬೆಲೆ ವರ್ಷಕ್ಕೆ ಶೇ. 10ರಿಂದ 15ರಷ್ಟು ಬೆಳೆಯುತ್ತದೆ. ಹೀಗಾಗಿ, ಸಾವರೀನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆಯಿಂದ ಸಾಕಷ್ಟು ಲಾಭ ನಿರೀಕ್ಷಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ