Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗಡ ತೆರಿಗೆ 2ನೇ ಕಂತಿಗೆ ಇವತ್ತು ಕೊನೆ ದಿನ; ಏನಿದು ಅಡ್ವಾನ್ಸ್ ಟ್ಯಾಕ್ಸ್? ಯಾರು ಕಟ್ಟಬೇಕು?

Advance Tax: 2024-25ರ ಅಸೆಸ್ಮೆಂಟ್ ವರ್ಷಕ್ಕೆ ಪಾವತಿಸಬೇಕಾದ ಮುಂಗಡ ತೆರಿಗೆಯಲ್ಲಿ ಎರಡನೇ ಕಂತಿನ ಹಣ ಕಟ್ಟಲು ಇಂದು ಸೆಪ್ಟೆಂಬರ್ 15, ಕೊನೆಯ ದಿನವಾಗಿದೆ. ಮೊಲದ ಕಂತು ಪಾವತಿಸಲು ಜೂನ್ 15ರವರೆಗೆ ಕಾಲಾವಕಾಶ ಇತ್ತು. ಇನ್ನು, ಮೂರನೇ ಹಾಗೂ ಕೊನೆಯದಾದ ನಾಲ್ಕನೇ ಕಂತಿನ ಹಣ ಪಾವತಿಸಲು ಡಿಸೆಂಬರ್ 15 ಹಾಗೂ 2024ರ ಮಾರ್ಚ್ 15ಕ್ಕೆ ಕೊನೆಯ ದಿನವಾಗಿದೆ. ಈ ಅಡ್ವಾನ್ಸ್ ಟ್ಯಾಕ್ಸ್ ಯಾರು ಕಟ್ಟಬೇಕು ಎಂಬ ವಿವರ ಇಲ್ಲಿದೆ.

ಮುಂಗಡ ತೆರಿಗೆ 2ನೇ ಕಂತಿಗೆ ಇವತ್ತು ಕೊನೆ ದಿನ; ಏನಿದು ಅಡ್ವಾನ್ಸ್ ಟ್ಯಾಕ್ಸ್? ಯಾರು ಕಟ್ಟಬೇಕು?
ಆದಾಯ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2023 | 10:17 AM

ನವದೆಹಲಿ, ಸೆಪ್ಟೆಂಬರ್ 15: ಪ್ರಸಕ್ತ ಹಣಕಾಸು ವರ್ಷಕ್ಕೆ ಎರಡನೇ ಕಂತಿನ ಮುಂಗಡ ತೆರಿಗೆ (Advance Tax) ಪಾವತಿಸಲು ಇಂದು (ಸೆ. 15) ಕೊನೆಯ ದಿನಾಂಕವಾಗಿದೆ. ಇದು 2023-24ರ ಹಣಕಾಸು ವರ್ಷ ಅಥವಾ 2024-25ರ ಅಸೆಸ್ಮೆಂಟ್ ವರ್ಷದಲ್ಲಿ (Assessment Year) ಕಟ್ಟಬೇಕಿರುವ ಮುಂಗಡ ತೆರಿಗೆ ಬಾಬ್ತು 10,000 ರುಪಾಯಿಗೂ ಹೆಚ್ಚಿದ್ದಲ್ಲಿ, ಅಂಥವರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕು. ಮುಂಗಡವಾಗಿ ಕಟ್ಟಬೇಕಿರುವ ತೆರಿಗೆಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಬಹುದು. ಜೂನ್ 15ರವರೆಗೆ ಮೊದಲ ಕಂತನ್ನು ಕಟ್ಟಲು ಅವಕಾಶ ನೀಡಲಾಗಿತ್ತು. ಡಿಸೆಂಬರ್ 15ಕ್ಕೆ ಮತ್ತು 2024ರ ಮಾರ್ಚ್ 15ಕ್ಕೆ ಮೂರನೇ ಹಾಗೂ ನಾಲ್ಕನೇ ಕಂತಿನ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಲು ಡೆಡ್​ಲೈನ್ ಆಗಿದೆ.

ಮುಂಗಡ ತೆರಿಗೆ ಯಾರು ಪಾವತಿಸಬೇಕು?

ನಮ್ಮ ಆದಾಯ ತೆರಿಗೆಯನ್ನು ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯಲ್ಲಿ ಕಟ್ಟುತ್ತೇವೆ. ಆದರೆ, 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 208ರ ಪ್ರಕಾರ ಯಾರು ಒಂದು ವರ್ಷದಲ್ಲಿ 10,000 ರೂಗಿಂತ ಹೆಚ್ಚು ಮೊತ್ತದ ತೆರಿಗೆ ಕಟ್ಟಬೇಕಿರುತ್ತದೋ ಅವರು ಮುಂಗಡವಾಗಿ ತೆರಿಗೆ ಪಾವತಿಸಬೇಕು. ಅದು ಅಡ್ವಾನ್ಸ್ ಟ್ಯಾಕ್ಸ್ ಎನಿಸುತ್ತದೆ.

ಸಂಬಳದ ಆದಾಯ ಇರುವ ಉದ್ಯೋಗಿಗಳು, ಸ್ವಂತ ಉದ್ಯೋಗ ಹೊಂದಿರುವ ವ್ಯಕ್ತಿಗಳು, ಉದ್ದಿಮೆಗಳು, ಟ್ರಸ್ಟ್​​ಗಳು ಮತ್ತು ಪಾಲುದಾರಿಕೆ ವ್ಯವಹಾರಗಳು ಮುಂಗಡ ತೆರಿಗೆ ಪಾವತಿಸುವ ಅವಶ್ಯಕತೆ ಇರುತ್ತದೆ.

ಇದನ್ನೂ ಓದಿ: ಈ ಸರ್ಕಾರಿ ಬ್ಯಾಂಕಲ್ಲಿ ಭರ್ಜರಿ ಫೆಸ್ಟಿವ್ ಆಫರ್; ಎಲ್ಲಾ ಸಾಲವೂ ಅಗ್ಗವೋ ಅಗ್ಗ; ಡಿ. 31ರವರೆಗೂ ಅವಕಾಶ

ಯಾವ್ಯಾವ ಕಂತಿನಲ್ಲಿ ಎಷ್ಟೆಷ್ಟು ಮುಂಗಡ ತೆರಿಗೆ ಪಾವತಿ?

ಈ ಮೊದಲೇ ಹೇಳಿದಂತೆ ಒಂದು ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆಯನ್ನು 4 ಕಂತುಗಳಲ್ಲಿ ಕಟ್ಟುವ ಅವಕಾಶ ಕೊಡಲಾಗಿದೆ. ನೀವು ಕಟ್ಟಬೇಕಿರುವ ತೆರಿಗೆ ಮೊತ್ತದ ಶೇ. 15ರಷ್ಟು ಮೊತ್ತವನ್ನು ಮೊದಲ ಕಂತಿನಲ್ಲಿ ಪಾವತಿಸಬೇಕು. ಎರಡನೇ ಕಂತಿನಲ್ಲಿ, ಉಳಿದ ತೆರಿಗೆ ಬಾಕಿಯ ಶೇ. 45ರಷ್ಟು ಮೊತ್ತವನ್ನು ಪಾವತಿಸಬೇಕು. ಅದಾದ ಬಳಿಕ ಉಳಿದ ಮೊತ್ತದಲ್ಲಿ ಶೇ. 75ರಷ್ಟನ್ನು ಮೂರನೇ ಕಂತಿನಲ್ಲಿ ಪಾವತಿಸಬೇಕು. ಹಣಕಾಸು ವರ್ಷದ ಕೊನೆಯ ತಿಂಗಳಿನಲ್ಲಿ ಎಲ್ಲಾ ಬಾಕಿ ತೆರಿಗೆ ಹಣವನ್ನು ಪಾವತಿಸಬೇಕಅಗುತ್ತದೆ.

ಐಟಿ ಕಾಯ್ದೆ ಸೆಕ್ಷನ್ 44ಎಡಿ ಅಥವಾ 44ಎಡಿಎ ಅಡಿಯಲ್ಲಿ ಪ್ರಿಸಂಪ್ಟಿವ್ ಟ್ಯಾಕ್ಸೇಶನ್ ಸ್ಕೀಮ್ (Presumptive taxation scheme) ಅನ್ನು ಆಯ್ಕೆ ಮಾಡಿಕೊಂಡಿರುವವರು ಮಾರ್ಚ್ 15ರೊಳಗೆ ಯಾವುದೇ ದಿನದಲ್ಲಾದರೂ ಇಡೀ ಮುಂಗಡ ತೆರಿಗೆ ಮೊತ್ತವನ್ನೇ ಒಂದೇ ಕಂತಿನಲ್ಲಿ ಪಾವತಿಸಬೇಕು.

ಇದನ್ನೂ ಓದಿ: ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಅಡ್ವಾನ್ಸ್ ಟ್ಯಾಕ್ಸ್ ಪಾವತಿಯಿಂದ ವಯೋವೃದ್ಧರಿಗೆ ವಿನಾಯಿತಿ

ವೃತ್ತಿಪರ ಕೆಲಸ ಅಥವಾ ವ್ಯವಹಾರಗಳಿಂದ ಯಾವುದೇ ಆದಾಯ ಹೊಂದಿಲ್ಲದ, 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ.

ಮುಂಗಡ ತೆರಿಗೆಯನ್ನು ಗಡುವಿನೊಳಗೆ ಕಟ್ಟದಿದ್ದರೆ ಎಷ್ಟು ದಂಡ?

ಒಂದು ವೇಳೆ ಮುಂಗಡ ತೆರಿಗೆ ಕಟ್ಟಬೇಕಾದ ವ್ಯಕ್ತಿಗಳು ನಿಗದಿತ ದಿನದೊಳಗೆ ಕಂತು ಕಟ್ಟಲಿಲ್ಲವೆಂದರೆ ದಂಡದ ಹೊರೆಯನ್ನೂ ಹೊರಬೇಕಾಗುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಬಿ ಮತ್ತು 234ಸಿ ಅಡಿಯಲ್ಲಿ, ಬಾಕಿ ಇರುವ ತೆರಿಗೆ ಮೊತ್ತದ ಮೇಲೆ ಶೇ. 1ರಷ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ