AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

How to earn Rs 100 Cr: ಮ್ಯೂಚುವಲ್ ಫಂಡ್​ನಲ್ಲಿ ನಿಮಗೆ ಆಸಕ್ತಿ ಹೊಂದಿದ್ದು, ಅದರಲ್ಲಿ ಹೂಡಿಕೆ ಮಾಡಲು ಬಯಸಿದರೆ, ಸಾಕಷ್ಟು ಆದಾಯ ಪಡೆಯುವ ಸಾಧ್ಯತೆ ದಟ್ಟವಾಗಿರುತ್ತದೆ. ಶೇ. 16ರಷ್ಟು ಪ್ರಮಾಣದಲ್ಲಿ ವಾರ್ಷಿಕವಾಗಿ ರಿಟರ್ನ್ ಕೊಡುವ ಮ್ಯೂಚುವಲ್ ಫಂಡ್ ನಿಮ್ಮದಾಗಿದ್ದರೆ 30 ವರ್ಷದಲ್ಲಿ ನೀವು 100 ಕೋಟಿ ರೂ ಸಂಪಾದಿಸಲು ತಿಂಗಳಿಗೆ 21,000 ರೂನಿಂದ ಎಸ್ಐಪಿ ಹೂಡಿಕೆ ಆರಂಭಿಸಬೇಕು. ಪ್ರತೀ ವರ್ಷ ಶೇ. 20ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಬೇಕು.

ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 4:55 PM

Share

ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಲು ಸಮಯ ಇಲ್ಲದವರಿಗೆ ಈಕ್ವಿಟಿ ಫಂಡ್​ಗಳು (Equity Mutual funds) ಇದ್ದದ್ದರಲ್ಲಿ ಉತ್ತಮ ಆಯ್ಕೆ. ನಿಮ್ಮ ಹಣವನ್ನು ಬೆಳೆಸಲು ಈ ಮ್ಯುಚುವಲ್ ಫಂಡ್ ಉಪಯುಕ್ತ ಎನಿಸುತ್ತದೆ. ನೀವು ದೀರ್ಘಕಾಲದ ದೃಷ್ಟಿಯಿಂದ ಹೂಡಿಕೆ ಮಾಡುವುದು ಸೂಕ್ತ. ಈ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಎಸ್​ಐಪಿ ಪ್ಲಾನ್ (SIP- sytematic investment plan) ಪಡೆಯಬಹುದು. ಇದರಿಂದ ನೀವು ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಹೋಗಬಹುದು. ಸಂಯಮ ಕಳೆದುಕೊಳ್ಳದೆ ಸುದೀರ್ಘ ಕಾಲ ಸ್ಥಿರವಾಗಿ ಪ್ರತೀ ತಿಂಗಳು ತಪ್ಪಿಸದೇ ಹಣ ಹೂಡಿಕೆ ಮಾಡುವುದು ಯಶಸ್ಸಿ ಮಂತ್ರ. ಅದರಲ್ಲೂ ಈಕ್ವಿಟಿ ಫಂಡ್​ಗಳು ದೀರ್ಘಾವಧಿಯಲ್ಲಿ ಬಹಳ ಹೆಚ್ಚು ಲಾಭ ತಂದುಕೊಡಬಲ್ಲುವು.

ನೀವು ಎಷ್ಟು ವರ್ಷ ಕಾಲ ಎಷ್ಟು ಮೊತ್ತದ ಹೂಡಿಕೆ ಮಾಡುತ್ತೀರಿ, ಅದರಿಂದ ಎಷ್ಟು ರಿಟರ್ನ್ ಬರಬಹುದು ಎಂಬ ಒಂದು ಕಲ್ಪನೆ ಅಥವಾ ಅಂದಾಜು ಹೊಂದಿರಬೇಕು. ಮ್ಯೂಚುವಲ್ ಫಂಡ್​ಗಳು 20 ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಶೇ. 12ರಿಂದ ಶೇ. 20ರ ವಾರ್ಷಿಕ ದರದಲ್ಲಿ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಹೂಡಿಕೆ ತಂತ್ರ ಅನುಸರಿಸಿ…

ನೀವು ಎಸ್​ಐಪಿ ನಡೆಸುವುದಾದರೆ ನಿಮ್ಮ ಹೂಡಿಕೆಯನ್ನು ಕ್ಷಿಪ್ರವಾಗಿ ಬೆಳೆಸಲು ಒಂದು ಉತ್ತಮ ತಂತ್ರ ಇದೆ. ನಿಮ್ಮ ಆದಾಯ ಪ್ರತೀ ವರ್ಷ ಹೆಚ್ಚಾಗುವ ಸಾಧ್ಯತೆ ಇದ್ದೇ ಇದೆ. ಶೇ. 5ರಿಂದ ಶೇ. 30ರವರೆಗೂ ನಿಮ್ಮ ಆದಾಯ ಹೆಚ್ಚಾಗಬಹುದು. ಅದಕ್ಕೆ ಅನುಗುಣವಾಗಿ ನಿಮ್ಮ ಎಸ್​ಐಪಿ ಹೂಡಿಕೆಯ ಪ್ರಮಾಣವನ್ನೂ ಹೆಚ್ಚಿಸಬೇಕು. ಇದರಿಂದ ನಿಮ್ಮ ಹೂಡಿಕೆ ಬಹಳ ವೇಗವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

100 ಕೋಟಿ ಪಡೆಯಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು?

ನೀವು 100 ಕೋಟಿ ರೂ ಹಣ ಸೇರಿಸಬೇಕು ಎಂಬ ಗುರಿ ಹೊಂದಿದ್ದಲ್ಲಿ, ಅದನ್ನು ಈಡೇರಿಸಲು ಸಾಧ್ಯವಾಗುವ ಅಂಶಗಳನ್ನು ಗಮನಿಸಿ ನೋಡಿ. ಮೇಲೆ ತಿಳಿಸಿದ ರೀತಿಯಲ್ಲಿ ನಿಮ್ಮ ಹೂಡಿಕೆಯ ಪ್ರಮಾಣವನ್ನು ಒಂದು ವರ್ಷದಲ್ಲಿ ಶೇ. 20ರಷ್ಟು ಹೆಚ್ಚಿಸಲು ಸಾಧ್ಯವಾದರೆ 100 ಕೋಟಿ ರೂ ಗುರಿ ಈಡೇರಿಸುವುದು ಸುಲಭವಾಗುತ್ತದೆ.

ನಿಮ್ಮ ಈಕ್ವಿಟಿ ಮ್ಯೂಚುವಲ್ ಫಂಡ್ ಎಸ್​ಐಪಿ ಒಂದು ವರ್ಷಕ್ಕೆ ಶೇ. 16ರಷ್ಟು ರಿಟರ್ನ್ ಕೊಡುತ್ತದೆಂದು ಭಾವಿಸಿದಲ್ಲಿ ನೀವು ತಿಂಗಳಿಗೆ 21,000 ರೂ ಎಸ್​ಐಪಿ ಪ್ಲಾನ್​ನಿಂದ ಆರಂಭಿಸಬಹುದು. ಹೀಗಾದಲ್ಲಿ 30 ವರ್ಷದ ಬಳಿಕ ನೀವು 100 ಕೋಟಿ ರೂ ಒಡೆಯರಾಗಬಲ್ಲಿರಿ.

ಗಮನಿಸಿ, ನೀವು ತಿಂಗಳಿಗೆ 21,000 ರೂ ಹಣದಿಂದ ಹೂಡಿಕೆ ಆರಂಭಿಸುತ್ತೀರಿ. ಒಂದು ವರ್ಷದ ಬಳಿಕ ನೀವು ತಿಂಗಳಿಗೆ ಕಟ್ಟುವ ಎಸ್​ಐಪಿ ಮೊತ್ತ ಶೇ. 20ರಷ್ಟು ಹೆಚ್ಚಾಗಬೇಕು. ಅಂದರೆ ಎರಡನೇ ವರ್ಷದಲ್ಲಿ 25ರಿಂದ 26 ಸಾವಿರ ರೂನಷ್ಟು ಹಣವನ್ನು ಪ್ರತೀ ತಿಂಗಳು ಹೂಡಿಕೆ ಮಾಡಬೇಕು. 3ನೆ ವರ್ಷ ನಿಮ್ಮ ಮಾಸಿಕ ಹೂಡಿಕೆ 31,000 ರೂ ಆಗಬೇಕು. ಈ ರೀತಿ ವರ್ಷ ವರ್ಷಕ್ಕೆ ಹೂಡಿಕೆ ಹೆಚ್ಚಿಸುತ್ತಾ 30 ವರ್ಷ ಕಾಲ ಅದೇ ವೇಗ ಪಾಲನೆ ಮಾಡಬೇಕು.

ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್​ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?

ಅದಕ್ಕೆ ತಕ್ಕಂತೆ ನಿಮ್ಮ ಮ್ಯೂಚುವಲ್ ಫಂಡ್ ಶೇ. 16ರ ವಾರ್ಷಿಕ ದರದಲ್ಲಿ ರಿಟರ್ನ್ ಕೊಡಬೇಕು. ಇವೆಲ್ಲವೂ ನೀವು ನಿರೀಕ್ಷಿಸಿದಂತೆ ಆದಲ್ಲಿ 30 ವರ್ಷದಲ್ಲಿ 100 ಕೊಟಿ ರೂ ನಿಮ್ಮದಾಗಬಹುದು.

ಈ ಅಂಶಗಳು ಗಮನದಲ್ಲಿರಲಿ…

ನೀವು ವರ್ಷಕ್ಕೆ ಶೇ. 20 ಸಾಧ್ಯವಾಗದೇ ಹೋದರೂ ಶೇ. 5ರಷ್ಟನ್ನಾದರೂ ಹೆಚ್ಚಿಸುತ್ತಾ ಹೋಗಬಹುದು. ಹೆಚ್ಚಿಸುತ್ತಾ ಹೋಗಬಹುದು. ಒಟ್ಟಾರೆ ಈ ಮೂರು ಅಂಶಗಳು ನಿಮ್ಮ ಸಂಪತ್ತುವೃದ್ಧಿಗೆ ಬಹಳ ಸಹಾಯಕವಾಗುತ್ತವೆ.

  1. ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ
  2. ಸಾಧ್ಯವಾದಷ್ಟೂ ಹೆಚ್ಚು ಸೇವಿಂಗ್ಸ್
  3. ಪ್ರತೀ ವರ್ಷವೂ ಹೂಡಿಕೆ ಹೆಚ್ಚಳ

ಇದನ್ನೂ ಓದಿ: ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ

(ಗಮನಿಸಿ: ಮ್ಯೂಚುವಲ್ ಫಂಡ್​ಗಳಿಂದ ನಿರೀಕ್ಷಿಸಿದಷ್ಟು ಆದಾಯ ಬರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ರಿಟರ್ನ್ ಸಿಗುವುದು ಏರುಪೇರಾಗಬಹುದು. ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಜೊತೆ ಸಮಾಲೋಚಿಸುವುದು ಒಳಿತು.)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ