ಈ ಸರ್ಕಾರಿ ಬ್ಯಾಂಕಲ್ಲಿ ಭರ್ಜರಿ ಫೆಸ್ಟಿವ್ ಆಫರ್; ಎಲ್ಲಾ ಸಾಲವೂ ಅಗ್ಗವೋ ಅಗ್ಗ; ಡಿ. 31ರವರೆಗೂ ಅವಕಾಶ

Bank of Baroda Festival Offers: ಬ್ಯಾಂಕ್ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್​ಗೆ ಒಳ್ಳೆಯ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್ ಬಡ್ಡಿದರದಲ್ಲಿ ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್​ಗಳನ್ನೂ ಚಾಲನೆಗೊಳಿಸಿದೆ. ಇವುಗಳ ಜೊತೆಗೆ ಈಗಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್​ಗಳಿಗೂ ವಿವಿಧ ಡಿಸ್ಕೌಂಟ್​ಗಳನ್ನು ನೀಡಲಾಗುತ್ತಿದೆ. ಡಿಸೆಂಬರ್ 31ರವರೆಗೂ ಈ ಆಫರ್​ಗಳು ಇರಲಿವೆ.

ಈ ಸರ್ಕಾರಿ ಬ್ಯಾಂಕಲ್ಲಿ ಭರ್ಜರಿ ಫೆಸ್ಟಿವ್ ಆಫರ್; ಎಲ್ಲಾ ಸಾಲವೂ ಅಗ್ಗವೋ ಅಗ್ಗ; ಡಿ. 31ರವರೆಗೂ ಅವಕಾಶ
ಬ್ಯಾಂಕ್ ಆಫ್ ಬರೋಡಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2023 | 3:38 PM

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ (Bank of Baroda) ಬಹಳ ಕಡಿಮೆ ಬಡ್ಡಿದರಗಳಿಗೆ ಸಾಲಗಳ ಆಫರ್ ಮಾಡುತ್ತಿದೆ. ಶೇ. 8.40ರಿಂದ ಅದರ ಸಾಲದ ದರ ಆರಂಭವಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಬ್ಯಾಂಕ್ ಆಫರ್ ಬರೋಡ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ‘ಬಾಬ್ ಕೆ ಸಂಗ್, ತ್ಯೋಹಾರ್ ಕೀ ಉಮಂಗ್’ (BOB Ke Sang, Tyohaar Ki Umang) ಎಂಬ ಅಭಿಯಾನ ಆರಂಭಿಸಿರುವ ಬ್ಯಾಂಕ್ ಆಫ್ ಬರೋಡ, ಡಿಸೆಂಬರ್ 31ರವರೆಗೂ ಕಡಿಮೆ ಬೆಲೆ ಗೃಹಸಾಲ, ವಾಹನ ಸಾಲ ಮತ್ತು ಶಿಕ್ಷಣ ಸಾಲಗಳನ್ನು ನೀಡುತ್ತಿದೆ. ಇದರ ಜೊತೆಗೆ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳಿಗೂ ಭರ್ಜರಿ ಡಿಸ್ಕೌಂಟ್​ಗಳನ್ನೂ ಕೊಡುತ್ತಿದೆ. ಹಾಗೆಯೇ, ನಾಲ್ಕು ಹೊಸ ಸೇವಿಂಗ್ಸ್ ಖಾತೆಗಳನ್ನೂ ಬಿಡುಗಡೆ ಮಾಡಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಲಕ್ಕೆ ಎಷ್ಟು ಬಡ್ಡಿ?

ಹಬ್ಬದ ಕೊಡುಗೆಯಾಗಿ ಬ್ಯಾಂಕ್ ಆಫ್ ಬರೋಡಾ ಮಾಡುತ್ತಿರುವ ಆಫರ್​ನಲ್ಲಿ ಸಾಲದ ಬಡ್ಡಿದರ ಬಹಳ ಕಡಿಮೆ ಮಾಡಲಾಗಿದೆ. ಅದರ ಗೃಹಸಾಲ ಶೇ. 8.40ಯಿಂದ ಆರಂಭವಾಗುತ್ತದೆ. ಇನ್ನು, ಕಾರ್ ಲೋನ್ ದರ ಶೇ. 8.70ಯಿಂದ ಆರಂಭವಾಗುತ್ತದೆ. ವಿಶೇಷ ಎಂದರೆ ಗೃಹಸಾಲ ಮತ್ತು ವಾಹನ ಸಾಲಗಳಿಗೆ ಪ್ರೋಸಸಿಂಗ್ ಫೀಯಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್ ಸ್ಕೀಮ್; ಪೋಸ್ಟ್ ಆಫೀಸ್ ಉತ್ತಮವೋ, ಎಸ್​ಬಿಐ ಇತ್ಯಾದಿ ಬ್ಯಾಂಕುಗಳ ಆರ್​ಡಿ ಉತ್ತಮವೋ? ಇಲ್ಲಿದೆ ಹೋಲಿಕೆ

ಬ್ಯಾಂಕ್ ಆಫ್ ಬರೋಡಾ ಶಿಕ್ಷಣ ಸಾಲ

ಇನ್ನು, ಬಾಬ್ ನೀಡುವ ಶಿಕ್ಷಣ ಸಾಲಕ್ಕೆ ಬಡ್ಡಿದರ ಶೇ. 8.55ರಿಂದ ಶುರುವಾಗುತ್ತದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೇ ಇನ್ನೂ ಕಡಿಮೆ ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ಬ್ಯಾಂಕ್ ಆಫ್ ಬರೋಡಾ ಆಫರ್ ಮಾಡಿದೆ.

ಬ್ಯಾಂಕ್ ಆಫ್ ಬರೋಡಾ ಪರ್ಸನಲ್ ಲೋನ್

ಈ ಬ್ಯಾಂಕ್​ನ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಶೇ. 10.10ರಿಂದ ಶುರುವಾಗುತ್ತದೆ. ಗರಿಷ್ಠ 20 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ. ಫ್ಲೋಟಿಂಗ್ ರೇಟ್ ಜೊತೆಗೆ ಫಿಕ್ಸೆಡ್ ರೇಟ್ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು ವೈಯಕ್ತಿಕ ಸಾಲ ಪಡೆಯುವವರಿಗೆ ಮಾತ್ರವಲ್ಲ, ವಾಹನ ಸಾಲ ಪಡೆಯುವವರಿಗೂ ಅನ್ವಯ ಆಗುತ್ತದೆ.

ಇದನ್ನೂ ಓದಿ: ಎಸ್​ಬಿಐನಿಂದ ಕೆನರಾ ಬ್ಯಾಂಕ್​ವರೆಗೆ, ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ವಿಶೇಷ ಸೇವಿಂಗ್ಸ್ ಅಕೌಂಟ್​ಗಳ ಆಫರ್

ಫೆಸ್ಟಿವ್ ಆಫರ್ ಆಗಿ ಬ್ಯಾಂಕ್ ಆಫರ್ ಬರೋಡಾ ಲೈಟ್ ಸೇವಿಂಗ್ಸ್ ಅಕೌಂಟ್, ಬ್ರೋ ಸೇವಿಂಗ್ಸ್ ಅಕೌಂಟ್, ಪರಿವಾರ್ ಅಕೌಂಟ್ ಮತ್ತು ಎನ್​ಆರ್​ಐ ಪವರ್​ಪ್ಯಾಕ್ ಅಕೌಂಟ್, ಹೀಗೆ ನಾಲ್ಕು ಉಳಿತಾಯ ಖಾತೆಗಳನ್ನು ಬಿಒಬಿ ಆರಂಭಿಸಿದೆ. ಇದರಲ್ಲಿ ಬಿಒಬಿ ಲೈಟ್ ಮತ್ತು ಬ್ರೋ ಸೇವಿಂಗ್ಸ್ ಅಕೌಂಟ್​ಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಎಂಬುದು ಇರುವುದಿಲ್ಲ.

ವಿಜಯ ಬ್ಯಾಂಕ್ ವಿಲೀನ

ಬ್ಯಾಂಕ್ ಆಫ್ ಬರೋಡಾ ಗುಜರಾತ್ ಮೂಲದ್ದಾದರೂ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಕರ್ನಾಟಕ ಮೂಲದ ಐತಿಹಾಸಿಕ ವಿಜಯ ಬ್ಯಾಂಕ್ ಐದು ವರ್ಷಗಳ ಹಿಂದೆ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿತು. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾ ಬೆಂಗಳೂರಿನಲ್ಲಿ ಸುಮಾರು 100 ಶಾಖೆಗಳನ್ನು ಹೊಂದಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು