ಎಸ್​ಬಿಐನಿಂದ ಕೆನರಾ ಬ್ಯಾಂಕ್​ವರೆಗೆ, ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

Fixed Deposit Rates: ಅತಿ ಸಾಮಾನ್ಯವಾಗಿ ಬಳಲಾಗುವ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ನಲ್ಲಿ ಬ್ಯಾಂಕುಗಳು ಉತ್ತಮ ಬಡ್ಡಿದರ ನೀಡುತ್ತವೆ. ಸಹಕಾರಿ ಸಂಸ್ಥೆಗಳಷ್ಟಲ್ಲವಾದರೂ ಪ್ರಮುಖ ಬ್ಯಾಂಕುಗಳಲ್ಲಿ ಶೇ. 7ರಿಂದ 8ರಷ್ಟು ಎಫ್​ಡಿ ದರಗಳಿವೆ. ಎಚ್​ಡಿಎಫ್​ಸಿ, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಎಷ್ಟು ಬಡ್ಡಿ ದರ ಇದೆ ಎಂಬ ವಿವರ ಇಲ್ಲಿದೆ...

ಎಸ್​ಬಿಐನಿಂದ ಕೆನರಾ ಬ್ಯಾಂಕ್​ವರೆಗೆ, ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಕೆನರಾ ಬ್ಯಾಂಕ್
Follow us
|

Updated on: Sep 13, 2023 | 8:58 AM

ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್​ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಒಂದು. ಕೆಲ ಬ್ಯಾಂಕುಗಳಲ್ಲಿ ಒಳ್ಳೆಯ ಎಫ್​ಡಿ ದರಗಳಿವೆ. ಸಹಕಾರಿ ಸೊಸೈಟಿ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ವರ್ಷಕ್ಕೆ ಶೇ. 9.50ರವರೆಗೂ ಬಡ್ಡಿದರಗಳನ್ನು ಫಿಕ್ಸೆಡ್ ಡೆಪಾಸಿಟ್​ಗಳಿಗೆ ನೀಡಲಾಗುತ್ತದೆ. ಕೋ ಆಪರೇಟಿವ್ ಬ್ಯಾಂಕುಗಳಿಗೆ ಹೋಲಿಸಿದರೆ ಪ್ರಮುಖ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ತುಸು ಕಡಿಮೆ. ಆದರೂ ಕೆಲ ಬ್ಯಾಂಕುಗಳು ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿದರವನ್ನು ಎಫ್​ಡಿಗೆ ಕೊಡುತ್ತವೆ. ಯಾವುದೇ ಬ್ಯಾಂಕ್​ನಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿ ಸಿಗುತ್ತದೆ.

ಫಿಕ್ಸೆಡ್ ಡೆಪಾಸಿಟ್​ನಲ್ಲಿ ಹೆಚ್ಚಿನ ಮಂದಿ ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ಠೇವಣಿ ಇರಿಸುತ್ತಾರೆ. ಈ ಅವಧಿಗೆ ಪ್ರಮುಖ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ ಎಂಬ ವಿವರ ಇಲ್ಲಿದೆ.

ಐಸಿಐಸಿಐ ಬ್ಯಾಂಕ್

ಇಲ್ಲಿ ವಿವಿಧ ಅವಧಿಯ ಎಫ್​ಡಿಗಳಿಗೆ ಶೇ. 3ರಿಂದ ಶೇ. 7.10ರವರೆಗೂ ಬಡ್ಡಿ ಆಫರ್ ಇದೆ. ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಅಂದರೆ ಶೇ. 7.6ರವರೆಗೂ ಬಡ್ಡಿ ಸಿಗುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.70ರಷ್ಟು ಬಡ್ಡಿ ನೀಡಲಾಗುತ್ತದೆ.

ಇದನ್ನೂ ಓದಿ: ಎಸ್​ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ

ಎಚ್​ಡಿಎಫ್​ಸಿ ಬ್ಯಾಂಕ್

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ 7 ದಿನದಿಂದ 10 ವರ್ಷದ ವಿವಿಧ ಅವಧಿಯ ಠೇವಣಿಗಳಿಗೆ ಶೇ. 3ರಿಂದ ಶೇ. 7.25ರಷ್ಟು ಬಡ್ಡಿ ಇದೆ. ಒಂದು ವರ್ಷದ ಠೇವಣಿಗೆ ಶೇ. 7.10 ಬಡ್ಡಿ ಕೊಡಲಾಗುತ್ತದೆ.

ಎಸ್​ಬಿಐ ಬ್ಯಾಂಕ್

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್​ಬಿಐನಲ್ಲಿ ಸಾಮಾನ್ಯ ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ಶೇ. 3ರಿಂದ ಶೇ. 7.1ರಷ್ಟು ಬಡ್ಡಿ ಇದೆ. ಒಂದು ವರ್ಷದ ಅವಧಿಯ ಠೇವಣಿಗೆ ಶೇ. 6.8 ಬಡ್ಡಿ ಆಫರ್ ಇದೆ.

ಕೆನರಾ ಬ್ಯಾಂಕ್

ಈ ಸರ್ಕಾರಿ ಬ್ಯಾಂಕ್​ನಲ್ಲಿ ಎಫ್​ಡಿಗಳಿಗೆ ಶೇ. 4ರಿಂದ ಶೇ. 7.40ರವರೆಗೆ ಬಡ್ಡಿ ಕೊಡಲಾಗುತ್ತದೆ. ಕೆನರಾ ಬ್ಯಾಂಕ್​ನ ಒಂದು ವರ್ಷದ ಅವಧಿಯ ಠೇವಣಿಗೆ ಶೇ. 7.05 ಬಡ್ಡಿ ಇದೆ. ಆದರೆ, ಒಂದು ವರ್ಷದೊಳಗೆ ಈ ಠೇವಣಿಯನ್ನು ಹಿಂಪಡೆಯುವಂತಿಲ್ಲ. ಅವಧಿಗೆ ಮುನ್ನ ಠೇವಣಿ ಹಿಂಪಡೆಯುವುದಾದರೆ ಬಡ್ಡಿ ದರ ಶೇ. 7.25ರವರೆಗೂ ಮಾತ್ರ ಇರುತ್ತದೆ.

ಇದನ್ನೂ ಓದಿ: ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?

ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಶೇ. 4.50 ಯಿಂದ ಶೇ. 7.30ರವರೆಗೂ ಬಡ್ಡಿ ಇದೆ. ಒಂದು ವರ್ಷದ ಅವಧಿಯ ಠೇವಣಿಗೆ ಶೇ. 7ರಷ್ಟು ಬಡ್ಡಿ ಇದೆ.

ಈ ಮೇಲಿನ ಐದು ಬ್ಯಾಂಕುಗಳಲ್ಲಿ ತಿಳಿಸಲಾಗಿರುವ ಬಡ್ಡಿ ದರಗಳು 2 ಕೋಟಿ ರೂಗಿಂತ ಕಡಿಮೆ ಮೊತ್ತದ ಹಣದ ಠೇವಣಿಗೆ ಅನ್ವಯ ಆಗುತ್ತವೆ. 2 ಕೋಟಿಗೂ ಹೆಚ್ಚಿನ ಮೊತ್ತದ ಠೇವಣಿಗೆ ನೀಡುವ ಬಡ್ಡಿಯಲ್ಲಿ ತುಸು ವ್ಯತ್ಯಯ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ