ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?

Insurance For Housewives: ಇಲ್ಲಿಯವರೆಗೆ ಗೃಹಿಣಿಯರಿಗೆ ಕೇವಲ ಅವರ ಗಂಡಂದಿರ ಜೀವ ವಿಮಾ ಯೋಜನೆಗಳ ಅಡಿಯಲ್ಲಿ ವಿಮಾ ರಕ್ಷಣೆ ಸಿಗುತ್ತಿತ್ತು. ಆದರೆ, ಮ್ಯಾಕ್ಸ್‌ ಲೈಫ್‌ ಇನ್‌ಷ್ಯೂರೆನ್ಸ್‌ ಮತ್ತು ಪಾಲಿಸಿ ಬಜಾರ್‌ ಕಂಪನಿಗಳು ಗೃಹಿಣಿಯರಿಗೆಂದೇ ಮೀಸಲಾದ ಜೀವ ವಿಮಾ ಉತ್ಪನ್ನಗಳನ್ನು ಹೊರತಂದಿವೆ. ಆದರೆ, ಅಂತಹ ವಿಮಾ ಯೋಜನೆಗಳು ಗೃಹಿಣಿಯರಿಗೆ ಉಪಯುಕ್ತ ಎನಿಸುತ್ತವೆಯೇ? ಮನಿ9ನ ಈ ವಿಶೇಷ ವರದಿ ಓದಿ.

ಗಂಡ ಆದಾಯ ಸರ್ಟಿಫಿಕೇಟ್  ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?
ಸಾಂದರ್ಭಿಕ ಚಿತ್ರ
Follow us
|

Updated on: Sep 03, 2023 | 6:11 AM

ಗಂಡಂದಿರ ವಿಮಾ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ ಇನ್ಷೂರೆನ್ಸ್ ಪ್ರೊಟೆಕ್ಷನ್ (Insurance Protection for Women) ನೀಡುತ್ತಿರುವ ಹೊತ್ತಿನಲ್ಲಿ ಮ್ಯಾಕ್ಸ್‌ ಲೈಫ್‌ ಇನ್ಷ್ಯೂರೆನ್ಸ್‌ ಮತ್ತು ಪಾಲಿಸಿ ಬಜಾರ್‌ ಕಂಪನಿಗಳು “ಮ್ಯಾಕ್ಸ್‌ ಲೈಫ್‌ ಸ್ಮಾರ್ಟ್‌ ಸೆಕ್ಯೂರ್‌ ಪ್ಲಸ್‌” ಎಂಬ ಹೆಸರಿನ ವಿಮಾ ಉತ್ಪನ್ನವನ್ನು ನಿರ್ದಿಷ್ಟವಾಗಿ ಮಹಿಳೆಯರಿಗೆಂದೇ ಇತ್ತೀಚೆಗೆ ಆರಂಭಿಸಿವೆ. ಗೃಹಿಣಿಯರಿಗೆಂದೇ ಪ್ರತ್ಯೇಕವಾದ ಜೀವ ವಿಮಾ ಯೋಜನೆಯ ಉತ್ಪನ್ನಗಳನ್ನು ಹೊರತರಲಾಯಿತಾದರೂ ತಮ್ಮ ಗಂಡಂದಿರ ಆದಾಯ ದೃಢೀಕರಣಪತ್ರವಿಲ್ಲದೇ (Income Certificate) ಮಹಿಳೆಯರು ಅಂತಹ ಯೋಜನೆಗಳನ್ನು ಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ, ಇವುಗಳಿಗೆ ಸಂಬಂಧಿಸಿದ ನಿಯಮಗಳೂ ಸಹ ಈಗಾಗಲೇ ಅಸ್ತಿತ್ವದಲ್ಲಿರುವ ಟರ್ಮ್‌ ಯೋಜನೆಗಳಂತೆಯೇ ಇವೆ.

ಗೃಹಿಣಿಯರಿಗೆಂದೇ ಪ್ರತ್ಯೇಕವಾದ ವಿಮಾ ಪಾಲಿಸಿಗಳಿಲ್ಲ ಎಂಬುದು ವಾಸ್ತವ. ಬಹಳಷ್ಟು ಕಂಪನಿಗಳು ಅವರವರ ಗಂಡಂದಿರ ವಿಮಾ ಪಾಲಿಸಿಗಳ ಅಡಿಯಲ್ಲೇ ಅವರಿಗೆ ವಿಮಾ ರಕ್ಷಣೆಯನ್ನು ನೀಡುತ್ತವೆ. ಗಂಡನ ಆದಾಯ ದೃಢೀಕರಣ ಪ್ರಮಾಣಪತ್ರದ ಆಧಾರದ ಮೇಲೆ ಅವರು ಒಂದು ನಿಯಮಿತವಾದ ಟರ್ಮ್‌ ಯೋಜನೆಯನ್ನು ಕೊಳ್ಳಬಹುದಾಗಿದೆ. ಇಲ್ಲಿಯವರೆಗೆ, ಗೃಹಿಣಿಯರು ತಮ್ಮ ವಿಮಾ ರಕ್ಷಣೆಯ ಶೇ 50ರಷ್ಟು ಮೊತ್ತವನ್ನು ಮಾತ್ರ ಕ್ಲೈಮ್‌ ಮಾಡಲು ಸಾಧ್ಯವಿತ್ತು. ಗಂಡನ ಆದಾಯವು ದೊಡ್ಡ ಪ್ರಮಾಣದಲ್ಲಿ ಇರದಿದ್ದರೆ, ಆಗ ಅವರಿಗೆ ಕಡಿಮೆ ವೆಚ್ಚದ ಒಂದು ರಕ್ಷಣೆ ಸಿಗುತ್ತಿತ್ತು. ಆಗ, ಆ ಮೊತ್ತದ ಅರ್ಧದಷ್ಟು ಮಾತ್ರ ಗೃಹಿಣಿಗೆ ಉಳಿಯುತ್ತಿದ್ದು ಅದು ಸಾಕಾಗುತ್ತಿರಲಿಲ್ಲ. ಅಲ್ಲದೇ, ಸಣ್ಣ ಮೊತ್ತದ ವಿಮಾ ರಕ್ಷಣೆಯನ್ನು ಒದಗಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ.

ಪಾಲಿಸಿಬಜಾರ್‌ಡಾಟ್‌ಕಾಮ್‌ ಸಂಸ್ಥೆಯ ಟರ್ಮ್‌ ಜೀವ ವಿಮಾ ವಿಭಾಗದ ಮುಖ್ಯಸ್ಥರಾದ ಪ್ರವೀಣ್‌ ಚೌಧರಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. “ಕೋವಿಡ್‌ ಮಹಾಮಾರಿಯ ಅವಧಿಯಲ್ಲಿ ಅನೇಕ ಕುಟುಂಬಗಳು ತಮ್ಮ ಗೃಹಿಣಿಯರನ್ನು ಕಳೆದುಕೊಂಡವು. ಆ ಕುಟುಂಬಗಳು ಅತ್ಯಂತ ಕಷ್ಟದ ಪರಿಸ್ಥಿತಿಗೆ ಸಿಲುಕಿದವು. ಈ ವಿಮಾ ಯೋಜನೆಯನ್ನು ಆರಂಭಿಸುವ ಕ್ರಮದ ಹಿಂದಿರುವ ಆಲೋಚನೆ ಏನೆಂದರೆ ಗೃಹಿಣಿಯ ಕೊಡುಗೆಯನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡುವುದು ಹಾಗೂ ಗುರುತಿಸುವುದು. ಮನೆಯ ಗೃಹಿಣಿಯು ಕಣ್ಮರೆಯಾಗಿಬಿಟ್ಟರೆ ಅದು ಕುಟುಂಬದ ಮೇಲೆ ದೊಡ್ಡ ಪ್ರಮಾಣದ ಹಣವನ್ನು ವೆಚ್ಚ ಮಾಡಬೇಕಾದ ಭಾರವನ್ನು ಹೊರಿಸಿಬಿಡುತ್ತದೆ. ಉದಾಹರಣೆಗೆ, ಗಂಡನು ಮಕ್ಕಳನ್ನು ನೋಡಿಕೊಳ್ಳಲು ತನ್ನ ವೃತ್ತಿಯನ್ನೇ ಬದಲಿಸಬೇಕಾಗಬಹುದು. ಮನೆಯ ಗೃಹಿಣಿಯು ನಿರ್ವಹಿಸುತ್ತಿದ್ದ ಹೊಣೆಗಾರಿಕೆಗಳು ಗಂಡನ ಭುಜಗಳ ಮೇಲೆ ಹಠಾತ್‌ ಬಿದ್ದುಬಿಡುತ್ತವೆ,” ಎಂದು ಚೌಧರಿ ಹೇಳುತ್ತಾರೆ.

ಇದನ್ನೂ ಓದಿ: Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?

ಮ್ಯಾಕ್ಸ್‌ ಲೈಫ್‌ ಇನ್ಷ್ಯೂರೆನ್ಸ್‌ ಮತ್ತು ಪಾಲಿಸಿ ಬಜಾರ್‌ ಕಂಪನಿಗಳು ಗೃಹಿಣಿರಿಗೆ ನೀಡುತ್ತಿರುವ ವಿಮಾ ರಕ್ಷಣೆಯು 49.99 ಲಕ್ಷ ರೂಪಾಯಿಗಳವರೆಗೆ ಇವೆ. ಗಂಡನು ವಿಮಾ ಪಾಲಿಸಿಯನ್ನು ಹೊಂದಿರದಿದ್ದರೂ ಈ ಪಾಲಿಸಿಯು ಗೃಹಿಣಿಗೆ ಸಿಗುತ್ತದೆ. ವಯಸ್ಸು ಮತ್ತು ವಿಮಾ ಯೋಜನೆಯ ನಿಯಮಗಳಿಗೆ ಒಳಪಟ್ಟು ಈ ಪಾಲಿಸಿಗಳ ಪ್ರೀಮಿಯಮ್‌ 10 ರಿಂದ 12 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತವೆ.

ಆದರೆ, ಈ ಯೋಜನೆಯಲ್ಲಿಯೂ ಸಹ ಗಂಡನ ಆದಾಯ ದೃಢೀಕರಣ ಪತ್ರವನ್ನು ತೋರಿಸಬೇಕಾಗುತ್ತದೆ. ಗಂಡನ ವಾರ್ಷಿಕ ಆದಾಯವು 5 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿರಬೇಕು ಹಾಗೂ ಗೃಹಿಣಿಯು ಪದವೀಧರೆಯಾಗಿರಬೇಕು. ಇದೇ ರೀತಿಯಲ್ಲಿ, ಟಾಟಾ ಕಂಪನಿಯೂ ಸಹ ಗೃಹಿಣಿಯರಿಗಾಗಿಯೇ ಇರುವ ಒಂದು ವಿಮಾ ಯೋಜನೆಯನ್ನು ಹೊಂದಿದೆ. ಇಂಡಿಯಾಫಸ್ಟ್‌ ವಿಮಾ ಕಂಪನಿಯೂ ಸಹ 10ನೆಯ ತರಗತಿಯಲ್ಲಿ ಉತ್ತೀರ್ಣರಾಗಿರುವ ಗೃಹಿಣಿಯರಿಗೆ, ಒಂದು ವೇಳೆ ಅವರ ಗಂಡಂದಿರ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿಗಳ ಮೇಲಿದ್ದರೂ, ವಿಮಾ ಪಾಲಿಸಿಗಳನ್ನು ನೀಡುತ್ತಿದೆ. ಒಂದು ವೇಳೆ ಗಂಡನು ಸ್ವ-ಉದ್ಯೋಗಿಯಾಗಿದ್ದರೆ, ಆಗ ಅವನ ವಾರ್ಷಿಕ ಆದಾಯವು 4 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿರಬೇಕು, ಮಾತ್ರವಲ್ಲ, ಅವನು 40 ಲಕ್ಷ ರೂಪಾಯಿಗಳ ವಿಮಾರಕ್ಷಣೆಯನ್ನೂ ಹೊಂದಿರಬೇಕು. ಎಚ್‌ಡಿಎಫ್‌ಸಿ ಲೈಫ್‌ ಕಂಪನಿಯು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ “ಗೃಹಿಣಿಯರಿಗೆ ಸಂಪೂರ್ಣ ನಿವೇಶ್‌” ಯೋಜನೆಯ ಅಡಿಯಲ್ಲಿ ವಿಮಾರಕ್ಷಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?

ಗೃಹಿಣಿಯರಿಗೆ ವಿಮಾರಕ್ಷಣೆಯನ್ನು ನೀಡುವುದು ಸಂತಸವೆನಿಸದರೂ ವಿಮಾ ಯೋಜನೆಗಳ ಈ ಮೂರು ನಿಯಮಗಳು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಿಬಿಡುತ್ತವೆ. ಅವುಗಳಲ್ಲಿ ಮೊದಲನೆಯ ನಿಯಮ, ಗೃಹಿಣಿಯ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರವನ್ನು ಒದಗಿಸುವುದು. ಎರಡನೆಯ ನಿಯಮವು, ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ನಿರ್ವಹಿಸುವುದು ಅಥವಾ ಅದೇ ಕಂಪನಿಯಲ್ಲಿ ಗಂಡನು ವಿಮಾಯೋಜನೆ ಹೊಂದಿದ್ದರೆ ಮಾತ್ರ ಈ ವಿಮಾರಕ್ಷಣೆ ಸಿಗಲಿದೆ ಎನ್ನುವುದು. ಕಡಿಮೆ ಶಿಕ್ಷಣಾರ್ಹತೆಯನ್ನು ಹೊಂದಿರುವ ಹಾಗೂ ಅಲ್ಪ ಆದಾಯದ ಕುಟುಂಬಗಳ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ರಕ್ಷಣೆ ಪಡೆಯಲಾರರು. ಮೂರನೆಯ ನಿಯಮವು, ಗಂಡನ ಆದಾಯದ ದೃಢೀಕರಣ ಪತ್ರವಿಲ್ಲದೆ ಗೃಹಿಣಿಗೆ ವಿಮಾ ಪಾಲಿಸಿಯ ರಕ್ಷಣೆ ಸಿಗದಿರುವುದು. ಹೀಗಾಗಿ, ಈಗ ಅಸ್ತಿತ್ವದಲ್ಲಿರುವ ವಿಮಾಯೋಜನೆಗಳಿಗೆ ಅನ್ವಯವಾಗುವ ಅಂತಹ ನಿಯಮಗಳು ಈ ಹೊಸ ಯೋಜನೆಗೂ ಅನ್ವಯವಾಗುವುದಾದರೆ, ಆಗ ಈ ಯೋಜನೆಯು ಇತರ ಯೋಜನೆಗಳಿಗಿಂತ ಹೇಗೆ ವಿಭಿನ್ನವಾಗಿರಲಿದೆ? ಎನ್ನುವ ಪ್ರಶ್ನೆ ತಲೆದೋರುವುದು.

ಪ್ರೊಮೋರ್‌ ಫಿನ್‌ಟೆಕ್‌ ಕಂಪನಿಯ ಸಹಸಂಸ್ಥಾಪಕರೂ ಹಾಗೂ ಪ್ರಮಾಣೀಕೃತ ಆರ್ಥಿಕ ಯೋಜಕರಾದ (ಸಿಎಫ್‌ಪಿ) ನಿಶಾ ಸಂಘವಿ ಹೀಗೆ ಹೇಳುತ್ತಾರೆ: “ಒಂದು ವೇಳೆ ಮಹಿಳೆಯೊಬ್ಬಳು ಯಾವುದೇ ಆದಾಯವನ್ನು ಗಳಿಸುತ್ತಿಲ್ಲವೆಂದರೆ ಅವಳಿಗೊಂದು ವಿಮಾಯೋಜನೆಯನ್ನು ಕೊಳ್ಳುವುದನ್ನು ಹೆಚ್ಚಾಗಿ ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಒಂದು ವೇಳೆ ಅವಳೇನಾದರೂ ಒಬ್ಬಂಟಿ ತಾಯಿಯಾಗಿದ್ದು, ಮಕ್ಕಳ ಹೊಣೆಗಾರಿಕೆಯೂ ಇದ್ದು, ಉದ್ಯೋಗದಲ್ಲಿರದಿದ್ದರೆ, ಆಗ ಅವಳೊಂದು ವಿಮಾ ಯೋಜನೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ. ಆದರೆ, ಗೃಹಿಣಿಯರ ವಿಮಾ ಯೋಜನೆಯ ವಿಷಯಕ್ಕೆ ಬಂದರೆ, ಗಂಡನ ಆದಾಯ ಪ್ರಮಾಣಪತ್ರವು ಕಡ್ಡಾಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಏಕಾಂಗಿ ತಾಯಂದಿರು ಅಂತಹ ವಿಮಾ ಯೋಜನೆಗಳ ಅನುಕೂಲತೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.”

(ಮಾಹಿತಿ: kannada.money9.com)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ