AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?

Money9 special: ನೀವೇನಾದರೂ ಒಂದು ಮಗುವನ್ನು ಹೊಂದುವ ಯೋಜನೆಯನ್ನು ಹೊಂದಿದ್ದರೆ ಆಗ ನೀವೊಂದು ಮಾತೃತ್ವದ ರಕ್ಷಣೆಯನ್ನು ಸಕಾಲದಲ್ಲಿ ಕೊಳ್ಳಲೇಬೇಕು. ನೀವು ಈ ಕ್ರಮವನ್ನು ಕೈಗೊಳ್ಳುವುದರಿಂದ ಅನೇಕ ಚಿಂತೆಗಳನ್ನು ನಿವಾರಿಸಿಕೊಳ್ಳಬಹುದು. ಮಾತೃತ್ವದ ವಿಮಾರಕ್ಷಣೆಯು ಯಾವಾಗ ಮತ್ತು ಹೇಗೆ ನಿಮಗೆ ಲಾಭದಾಯಕವಾಗಬಹುದು ಎಂಬುದನ್ನು ಕಂಡುಕೊಳ್ಳಲು ಮನಿ9ನ ಈ ವಿಶೇಷ ವರದಿ ಓದಿ.

Maternity Insurance: ಮಾತೃತ್ವದ ವಿಮೆ ಎಷ್ಟು ಲಾಭದಾಯಕ? ಯಾವುದು ಅತ್ಯುತ್ತಮ ಆಯ್ಕೆ?
ಮ್ಯಾಟರ್ನಿಟಿ
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Aug 29, 2023 | 7:04 PM

Share

ಇವತ್ತು ಗರ್ಭಧಾರಣೆ ಎಂದರೆ ಸುಲಭದ ಮಾತಲ್ಲ. ಅದರಲ್ಲೂ ಹೆರಿಗೆಯಂತೂ ಹಣಕಾಸು ಮತ್ತು ಮಾನಸಿಕ ಒತ್ತಡ ತರುವಂಥದ್ದು. ಸಿಸೇರಿಯನ್ ಹೆರಿಗೆಯಾದರಂತೂ ಹಣ ನೀರಿನಂತೆ ಖರ್ಚಾಗುತ್ತದೆ. ಒಂದು ಸಾಮಾನ್ಯ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಡೆಲಿವರಿಗೆ 1 ಲಕ್ಷ ರೂಗಿಂತ ಮೇಲೆ ಖರ್ಚಾಗುತ್ತದೆ. ವೃತ್ತಿಜೀವನದ ಆರಂಭಿಕ ಘಟ್ಟದಲ್ಲಿರುವಾಗ ಅಷ್ಟೊಂದು ದೊಡ್ಡ ಮೊತ್ತ ಸಕಾಲದಲ್ಲಿ ಹೊಂದಿಸುವುದು ಕಷ್ಟ. ಆಸ್ಪತ್ರೆಯ ವೆಚ್ಚಗಳು ಹಣದುಬ್ಬರಕ್ಕಿಂತಲೂ ವೇಗವಾಗಿ ಏರುತ್ತಿವೆ. ಇಲ್ಲಿ ಮ್ಯಾಟರ್ನಿಟಿ ಇನ್ಷೂರೆನ್ಸ್ ಅಥವಾ ಮಾತೃತ್ವದ ವಿಮೆ (Maternity Insurance) ಹೊಂದಿರುವುದು ಬಹಳ ಅನುಕೂಲವಾಗುತ್ತದೆ. ನವವಿವಾಹಿತರಂತೂ ತಪ್ಪದೇ ಈ ವಿಮಾ ರಕ್ಷಣೆ ಪಡೆಯುವುದು ಸಂದರ್ಭೋಚಿತ. ಈ ವಿಮಾರಕ್ಷಣೆಯ ಕಾಯುವಿಕೆಯ ಅವಧಿಯು ಸಾಕಷ್ಟು ದೀರ್ಘವಾದದ್ದು. ಈ ವಿಮಾರಕ್ಷಣೆಯು ಹೆರಿಗೆಯಾದ ನಂತರ ಲಭ್ಯವಿರುವುದಿಲ್ಲ. ವಿಮಾ ಪರಿಭಾಷೆಯಲ್ಲಿ ಗರ್ಭಾವಸ್ಥೆಯನ್ನು ಅದೊಂದು ರೋಗವಲ್ಲದ ಕಾರಣದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಯೆಂದು ಪರಿಗಣಿಸಲಾಗುತ್ತದೆ.

ಮಾತೃತ್ವದ ವಿಮೆಯು ಮುಖ್ಯವಾಗಿ ಒಂದು ಹೆಚ್ಚುವರಿ ರಕ್ಷಣೆಯಾಗಿ ಅಥವಾ ಆರೋಗ್ಯ ವಿಮಾಪಾಲಿಸಿಯ ಮೇಲೆ ಸಿಗುವ ಹೆಚ್ಚುವರಿ ರಕ್ಷಣೆಯಾಗಿ (ರೈಡರ್‌) ಲಭ್ಯವಿರುತ್ತದೆ. ಆದಾಗ್ಯೂ, ಕೆಲ ಕಂಪನಿಗಳು ತಮ್ಮ ಆರೋಗ್ಯ ವಿಮಾಪಾಲಿಸಿಗಳ ಅಡಿಯಲ್ಲಿಯೇ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಡೆಯದೇ ಈ ರಕ್ಷಣೆಯನ್ನು ಒದಗಿಸುತ್ತವೆ. ಉದಾಹರಣೆಗೆ, ಬಜಾಜ್‌ ಅಲಿಯನ್ಸ್‌ ಕಂಪನಿಯು ತನ್ನ ಫ್ಯಾಮಿಲಿ ಫ್ಲೋಟರ್‌ ಹೆಲ್ತ್ ಗಾರ್ಡ್‌ ಪ್ಲಾನ್‌ ಅಡಿಯಲ್ಲಿ 25 ವರ್ಷ ವಯೋಮಾನದ ಆರೋಗ್ಯವಂತ ದಂಪತಿಗಳಿಗೆ 9,080 ರೂಪಾಯಿಗಳಿಗೆ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮಾರಕ್ಷಣೆಯನ್ನು ಒದಗಿಸುತ್ತಿದೆ. ಈ ವಿಮಾ ಯೋಜನೆಯು ಮಾತೃತ್ವದ ರಕ್ಷಣೆಯ ಸೌಲಭ್ಯವನ್ನೂ ಒಳಗೊಂಡಿದೆ. ಕಂಪನಿಯ ಹೆಲ್ತ್‌ ಕೇರ್‌ ಸುಪ್ರೀಮ್‌ ಪ್ಲಾನ್‌ ಕೂಡ ಇದೇ ಪ್ರಮಾಣದ ರಕ್ಷಣೆಯನ್ನು ಒಳಗೊಂಡಿದೆ.

ಕೆಲವು ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಮಾತೃತ್ವ ವಿಮಾ ರಕ್ಷಣೆಯನ್ನು ವಿಶೇಷ ಯೋಜನೆಯಾಗಿ ಒದಗಿಸುತ್ತಿವೆ. ಆದರೆ, ಗುಂಪು ವಿಮಾಯೋಜನೆಗಳ ಅಡಿಯಲ್ಲಿ ಮಾತೃತ್ವದ ವಿಮಾರಕ್ಷಣೆಯನ್ನು ಒಂದು ಹೆಚ್ಚುವರಿ ರಕ್ಷಣೆಯ ಸೌಲಭ್ಯವನ್ನಾಗಿ ಒದಗಿಸಲಾಗುತ್ತದೆ. ಗುಂಪು ವಿಮಾ ಯೋಜನೆಯಲ್ಲಿ ಕಾಯುವಿಕೆಯ ಅವಧಿಯು ಇರುವುದಿಲ್ಲ. ಮಾತೃತ್ವ ವಿಮಾಯೋಜನೆಯ ಅಡಿಯಲ್ಲಿ ಸಾಮಾನ್ಯ ಹಾಗೂ ಸಿಸೇರಿಯನ್‌ ಹೆರಿಗೆಗಳೆರಡಕ್ಕೂ ವಿಮಾರಕ್ಷಣೆಯು ಸಿಗುವುದು.

ಇದನ್ನೂ ಓದಿ: ULIP, ಇದು ವಿಮೆಯಾ, ಹೂಡಿಕೆಯಾ? ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಬಗ್ಗೆ ತಿಳಿಯಿರಿ

ಬಜಾಜ್‌ ಅಲಿಯನ್ಸ್‌ ಜನರಲ್‌ ಇನ್ಷೂರೆನ್ಸ್‌ ಕಂಪನಿಯ ಆರೋಗ್ಯ ಆಡಳಿತ ನಿರ್ವಹಣಾ ತಂಡದ ಮುಖ್ಯಸ್ಥರಾದ ಭಾಸ್ಕರ್‌ ನೆರೂರ್‌ಕರ್‌ರವರು ಹೇಳುವಂತೆ, “ಮಕ್ಕಳನ್ನು ಹೊಂದಬೇಕೆನ್ನುವ ಯೋಜನೆ ಹೊಂದಿರುವವರಿಗೆ ಮಾತೃತ್ವ ವಿಮಾ ಯೋಜನೆಯು ಒಂದು ಉಪಯುಕ್ತವಾದ ಆಯ್ಕೆಯಾಗಿದೆ. ಆದರೆ, ಇಲ್ಲಿ ನೆನಪಿನಲ್ಲಿಡಬೇಕಾಗಿರುವ ಸಂಗತಿಯೆಂದರೆ ಇದು 24ರಿಂದ 36 ತಿಂಗಳುಗಳವರೆಗಿನ ದೀರ್ಘವಾದ ಕಾಯುವಿಕೆಯ ಅವಧಿಯನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮಾತೃತ್ವದ ವಿಮಾ ಯೋಜನೆಯನ್ನು ಸಕಾಲದಲ್ಲಿ ಕೊಂಡುಕೊಳ್ಳಬೇಕು. ಹೆಚ್ಚಿನ ವೇಳೆ, ಮಾತೃತ್ವ ವಿಮಾರಕ್ಷಣೆಯು ಒಂದು ಕೌಟುಂಬಿಕ ಫ್ಲೋಟರ್‌ ಯೋಜನೆಯ ಅಡಿಯಲ್ಲಿ ಅಥವಾ ವೈಯಕ್ತಿಕ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಆಯ್ಕೆಯಾಗಿ ಲಭ್ಯವಿರುತ್ತದೆ. ಅಂತಹ ಯೋಜನೆಗಳನ್ನು ಜನರು ತಮ್ಮ ವಿವಾಹದ ನಂತರ ಅಥವಾ ಮಗುವನ್ನು ಪಡೆಯಲು ನಿರ್ಧರಿಸುವ ಮೊದಲು ಕೊಳ್ಳಬಹುದಾಗಿದೆ.

ನೀವೇನಾದರೂ ಮಾತೃತ್ವ ವಿಮೆಯನ್ನು ಸಕಾಲದಲ್ಲಿ ಕೊಂಡುಕೊಂಡಲ್ಲಿ ಅದು ಹೆರಿಗೆಯ ಹಿಂದಿನ 30 ದಿನಗಳಲ್ಲಿ ಹಾಗೂ ಹೆರಿಗೆಯ ನಂತರದ 90 ದಿನಗಳಲ್ಲಿ ನೀವು ಭರಿಸಬೇಕಾದ ವೆಚ್ಚಗಳಿಗೆ ರಕ್ಷಣೆ ನೀಡುತ್ತದೆ. ಒಂದು ವೇಳೆ ಹುಟ್ಟಿದ ಮಗುವಿಗೆ ಏನಾದರೂ ಆರೋಗ್ಯಸಂಬಂಧಿ ಸಮಸ್ಯೆ ಇದ್ದಲ್ಲಿ ಅದರ ಆಸ್ಪತ್ರೆವಾಸದ ವೆಚ್ಚಕ್ಕೂ ಈ ಯೋಜನೆಯ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ಮಗುವಿಗೆ ಹಾಕಲಾಗುವ ಲಸಿಕೆಗಳ ಶುಲ್ಕಗಳಿಗೂ ಸಹ ಈ ಯೋಜನೆಯು ರಕ್ಷಣೆಯನ್ನು ನೀಡುತ್ತದೆ. ಸಾಮಾನ್ಯವಾಗಿ, ವಿಮಾ ಕಂಪನಿಗಳು ಗರಿಷ್ಠ 2 ಮಕ್ಕಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತವೆ. ಮಾತೃತ್ವ ವಿಮಾ ಯೋಜನೆಗಳ ವಿಷಯದಲ್ಲಿ ವಿವಿಧ ಕಂಪನಿಗಳು ವಿವಿಧ ರೀತಿಯ ನಿಯಮಗಳನ್ನು ಹೊಂದಿವೆ.”

ಇದನ್ನೂ ಓದಿ: ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಈಗ ಎದುರಾಗುವ ಅತಿ ದೊಡ್ಡ ಪ್ರಶ್ನೆಯೆಂದರೆ ಒಂದು ಉತ್ತಮವಾದ ಆರೋಗ್ಯ ವಿಮಾ ಯೋಜನೆಯನ್ನು ನೀವು ಹೇಗೆ ಕೊಳ್ಳಬೇಕು? ಎಂಬುದು. ನೆರೂರ್‌ಕರ್‌ರವರು ಹೇಳುವಂತೆ, “ಆರೋಗ್ಯ ವಿಮೆಗಾಗಿ ನೀವು ಪಾವತಿ ಮಾಡಿರುವ ಪ್ರೀಮಿಯಮ್‌ಗಳ ನಿಜವಾದ ಮೌಲ್ಯವು ನೀವು ಮಾಡಿದ ವೆಚ್ಚಗಳನ್ನು ನೀವು ಕಂಪನಿಯಿಂದ ಹಿಂಪಡೆಯುವಾಗ ನಿಮಗೆ ತಿಳಿಯುತ್ತದೆ. ಆದ್ದರಿಂದ, ವಿಮಾ ಯೋಜನೆಯ ಪ್ರೀಮಿಯಮ್‌ಗಳನ್ನು ನೋಡಿ ಯೋಚಿಸುವ ಬದಲು ಕಂಪನಿಯು ಮರಪಾವತಿಯ ದಾವೆಗಳನ್ನು ಇತ್ಯರ್ಥಪಡಿಸಿರುವ ಅಂಕಿ-ಅಂಶಗಳನ್ನು ಗಮನಿಸಿ. ಈ ಅಂಕಿ-ಅಂಶಗಳು ನಿಮಗೆ ವಿಮಾ ನಿಯಂತ್ರಕ ಸಂಸ್ಥೆಯಾದ ಐಆರ್‌ಡಿಎ ಜಾಲತಾಣದಲ್ಲಿ ಸುಲಭವಾಗಿ ಸಿಗುತ್ತವೆ. ದಾವೆಗಳನ್ನು ಇತ್ಯರ್ಥಪಡಿಸುವಲ್ಲಿ ಉತ್ತಮವಾದ ಅನುಪಾತವನ್ನು ಹೊಂದಿರುವ ಕಂಪನಿಯ ವಿಮಾ ಯೋಜನೆಗಳು ನಿಮಗೆ ಉಪಯುಕ್ತವಾದವುಗಳೆಂದು ಸಿದ್ಧವಾಗಬಹುದು.

“ಇದಾದ ನಂತರ, ಕಂಪನಿಯ ಜಾಲದಲ್ಲಿ ಸೇರಿರುವ ಆಸ್ಪತ್ರೆಗಳ ಪಟ್ಟಿಯನ್ನು ಗಮನಿಸಿ, ನೀವು ವಾಸಿಸುತ್ತಿರುವ ಸ್ಥಳದ ಸಮೀಪದಲ್ಲಿರುವ ಆಸ್ಪತ್ರೆಗಳೊಂದಿಗೆ ಕಂಪನಿಯು ಸಹಯೋಗವನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕಂಪನಿಯ ಜಾಲದಲ್ಲಿ ಸೇರಿರುವ ಆಸ್ಪತ್ರೆಗಳಲ್ಲಿ ನೀವು ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದು. ಆದರೆ, ಕಂಪನಿಯ ಜಾಲದಲ್ಲಿ ಸೇರಿರದ ಆಸ್ಪತ್ರೆಗಳಲ್ಲಿ ನೀವು ಚಿಕಿತ್ಸೆ ಪಡೆದಾಗ ಮೊದಲು ನೀವು ನಿಮ್ಮ ಜೇಬಿನಿಂದಲೇ ಎಲ್ಲಾ ವೆಚ್ಚಗಳನ್ನೂ ಭರಿಸಬೇಕಾಗುವುದು ಹಾಗೂ ನಂತರದ ಸಮಯದಲ್ಲಿ ನೀವು ಮಾಡಿರುವ ವೆಚ್ಚಗಳನ್ನು ಮರುಪಾವತಿ ಮಾಡಲಾಗುವುದು.”

ಅಂತಹ ಪರಿಸ್ಥಿತಿಯಲ್ಲಿ, ನೀವೇನಾದರೂ ಮಗುವೊಂದನ್ನು ಪಡೆಯುವ ಯೋಜನೆಯನ್ನು ಹೊಂದಿದ್ದರೆ, ಆಗ ಮಾತೃತ್ವದ ರಕ್ಷಣೆಯನ್ನು ಸಕಾಲದಲ್ಲಿ ಕೊಂಡುಕೊಳ್ಳಿ, ಏಕೆಂದರೆ, ಆಗ ನೀವು ನಿಮ್ಮ ಅನೇಕ ಬಗೆಯ ಚಿಂತೆಗಳಿಂದ ಹೊರಬರಬಹುದು.

(ಮಾಹಿತಿ: kannada.money9.com)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ