Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?

Creating Retirement Fund: ಚಿಕ್ಕ ವಯಸ್ಸಿನಲ್ಲಿ ಮನುಷ್ಯ ಎಷ್ಟು ಬೇಕಾದ್ರೂ ಕಷ್ಟಪಟ್ಟು ಕೆಲಸ ಮಾಡಿ ಜೀವನ ಮಾಡಬಹುದು. ಆದ್ರೆ, ರಿಟೈರ್‌ ಆದ್‌ಮೇಲೆ ಸಂಪಾದನೆಯ ದಾರಿ ಇಲ್ಲಾಅಂದ್ರೆ ತುಂಬಾ ಕಷ್ಟ ಆಗುತ್ತೆ. ಈ ಕಷ್ಟ ಬರಬಾರದು ಅಂದರೆ, ಕೆಲಸದಲ್ಲಿ ಇರೋವಾಗ್ಲೇ ನಿವೃತ್ತಿಯ ನಂತರದ ವೆಚ್ಚಗಳಿಗೆ ಅಂತ ಒಂದಷ್ಟು ಹಣ ಕೂಡಿಟ್ಕೋಬೇಕು. ಹಾಗಾದ್ರೆ ನಿಮ್ಮ ಸುರಕ್ಷಿತವಾದ ಮತ್ತು ನಿವೃತ್ತಿಯ ನಂತರದ ಜೀವನಕ್ಕೆ ಎಷ್ಟು ಹಣ ಕೂಡಿಟ್ಕೋಬೇಕಾಗುತ್ತೆ ಹಾಗೂ ಅದನ್ನ ಬೆಳಸೋದಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕಾಗುತ್ತೆ, ಈ ಎಲ್ಲಾ ವಿವರ ಇಲ್ಲಿದೆ...

ಭವಿಷ್ಯದ ಭದ್ರತೆಗೆ ನಿಮಗೆ ಎಷ್ಟು ಹಣ ಬೇಕು? ನಿವೃತ್ತಿ ನಂತರದ ಬದುಕಿಗೆ ಈಗಲೇ ಲೆಕ್ಕ ಹಾಕುವುದು ಹೇಗೆ?
ಹೂಡಿಕೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Aug 21, 2023 | 6:11 PM

ದಿನಬಳಕೆಯ ವಸ್ತುಗಳ ಬೆಲೆಗಳು ಪ್ರತಿ ವರ್ಷ ಹೆಚ್ಚಾಗ್ತಾ ಇದೆ. ಇದರಿಂದ, ಕಾಲ ಕಳೆದಂತೆ, ನಿಮ್ಮ ಹಣ ವೆಚ್ಚ ಮಾಡೋ ಸಾಮರ್ಥ್ಯ ಕಡಿಮೆ ಆಗ್ತಾ ಹೋಗುತ್ತೆ. ಇವತ್ತು ನಿಮಗೆ ₹100ಕ್ಕೆ ಸಿಕ್ತಾ ಇರೋ ವಸ್ತುವಿಗೆ ಒಂದು ವರ್ಷದ ನಂತರ ₹107 ಕೊಡಬೇಕಾಗುತ್ತೆ. ನಿಮ್ಮ ವಾರ್ಷಿಕ ಜೀವನಶೈಲಿಯ ವೆಚ್ಚ ಪ್ರತೀ ವರ್ಷ ಹೆಚ್ಚಾಗ್ತಾ ಹೋಗುತ್ತೆ. ಈ ಹಿಂದಿನ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರ ವಾರ್ಷಿಕವಾಗಿ ಶೇ 7ರ ಸರಾಸರಿ ದರದಲ್ಲಿ ಹೆಚ್ಚಾಗ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈಗ ತಿಂಗಳಿಗೆ 25,000 ರೂ ಖರ್ಚು ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ​. 20 ವರ್ಷಗಳ ನಂತರ ಇದೇ ರೀತಿಯ ಜೀವನ ಮಾಡಲು ನಿಮಗೆ ತಿಂಗಳಿಗೆ ಒಂದು ಲಕ್ಷ ರೂ ಬೇಕಾಗುತ್ತೆ. ಖಾಸಗಿ ಕಂಪನಿಗಳಲ್ಲಿ ಈಗ ಮೊದಲಿನ ರೀತಿ 15-20 ವರ್ಷಗಳ ಖಾಯಂ ಕೆಲಸ ಸಿಗಲ್ಲ. ಕಂಪನಿಗಳು ತಮ್ಮ ನೌಕರರಿಗೆ 50 ವರ್ಷ ಆಗ್ತಿದ್ದಂತೆ ಏನೋ ಒಂದು ಸಬೂಬು ನೀಡಿ ಮನೆಗೆ ಕಳಿಸಿಬಿಡುತ್ತಿವೆ. ಹೀಗಿರೋವಾಗ, ರಿಟೈರ್‌ಮೆಂಟ್‌ ಜೀವನಕ್ಕೆ ಬೇಕಾದ ವ್ಯವಸ್ಥೆಯನ್ನ ಈಗಲೇ ಮಾಡ್ಕೋಬೇಕಾಗುತ್ತೆ. ಈ ಕೆಲಸವನ್ನ ನೀವು ಬಹಳ ತಡವಾಗಿ ಮಾಡಿದರೆ ಹೆಚ್ಚು ಬೆಲೆ ತೆರಬೇಕಾಗಬಹುದು.

ಎಷ್ಟು ಹಣ ಹೂಡಿಕೆ ಮಾಡಬೇಕು ಮತ್ತು ಎಲ್ಲಿ ಹೂಡಿಕೆ ಮಾಡಬೇಕು ?

ನಿವೃತ್ತಿಯ ಯೋಜನೆಗೆ ಅನೇಕ ಆಯ್ಕೆಗಳಿವೆ. ಪರ್ಸನಲ್‌ ಫೈನಾನ್ಸ್‌ ಎಕ್ಸ್‌ಪರ್ಟ್‌ಗಳು ಹೇಳೋ ಪ್ರಕಾರ ಜನರು ಕೆಲಸಕ್ಕೆ ಸೇರುತ್ತಿದ್ದಂತೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್‌) ಹೂಡಿಕೆ ಆರಂಭಿಸಬೇಕು. ಇದರ ಜೊತೆಗೆ, ಮ್ಯೂಚುಯಲ್‌ ಫಂಡ್‌ಗಳಲ್ಲಿ ಈಕ್ಟಿಟಿಗಳಿಗೆ ಸಂಬಂಧಿಸಿದ ಎಸ್‌ಐಪಿಗಳಲ್ಲಿ ಹೂಡಿಕೆ ಶುರು ಮಾಡೋದು ಕೂಡಾ ಒಂದು ಒಳ್ಳೆ ಆಯ್ಕೆ.

ನಿಮ್ಮ ವಯಸ್ಸು 40 ಆಗಿದ್ದರೆ ನಿವೃತ್ತಿ ಆಗಲು 20 ವರ್ಷಗಳಿರಬಹುದು. ನಿಮ್ಮ ಬಳಿ ಈಗ ಯಾವುದೇ ಸೇವಿಂಗ್ ದುಡ್ಡು ಇಲ್ಲ. ಎಲ್ಲರಿಗೂ ಗೊತ್ತಿರೋ ಹಾಗೆ, ತಿಂಗಳಿಗೆ 1 ಲಕ್ಷ ರೂ ಆದಾಯ ಬರಬೇಕು ಅಂದ್ರೆ, ಕನಿಷ್ಠ 1.5 ಕೋಟಿ ರೂ ಇರಬೇಕಾಗುತ್ತೆ.

ಇದನ್ನೂ ಓದಿ: ULIP, ಇದು ವಿಮೆಯಾ, ಹೂಡಿಕೆಯಾ? ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಬಗ್ಗೆ ತಿಳಿಯಿರಿ

ಇನ್ನು 20 ವರ್ಷಗಳಲ್ಲಿ ನಿಮ್ಮ ಬಳಿ 1.5 ಕೋಟಿ ರೂ ಹಣ ಇರಬೇಕು ಅಂದ್ರೆ ತಿಂಗಳಿಗೆ ಎಷ್ಟು ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು, ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಪ್ರಶ್ನೆ.

“ಈ ಗುರಿ ಸಾಧಿಸಬೇಕಾದ್ರೆ, ನೀವು ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಲ್ಲಿ ಹಣ ಹೂಡಬೇಕು” ಎಂಬುದು ತಜ್ಞರ ಅನಿಸಿಕೆ. ನೀವು ಪ್ರತಿ ತಿಂಗಳಿಗೆ 15,000 ರೂಗಳ ಒಂದು ಎಸ್‌ಐಪಿ ಶುರು ಮಾಡುತ್ತೀರಿ. ಅದರ ವಾರ್ಷಿಕ ಸರಾಸರಿ ರಿಟರ್ನ್ ಶೇ 12ರಷ್ಟು ಇದ್ದರೆ, ಮುಂದಿನ 20 ವರ್ಷಗಳಲ್ಲಿ ನಿಮ್ಮ ಬಳಿ 1.5 ಕೋಟಿ ರೂ ಫಂಡ್‌ ಇರುತ್ತೆ.

ಆದಾಯದ ಲೆಕ್ಕಾಚಾರ

ಎಸ್‌ಐಪಿಯಲ್ಲಿನ ಹೂಡಿಕೆ: ₹15,000 ತಿಂಗಳಿಗೆ

ಅವಧಿ: 20 ವರ್ಷಗಳು

ನಿರೀಕ್ಷಿತ ಆದಾಯ: ವಾರ್ಷಿಕ ಶೇ 12ರಷ್ಟು

ಫಂಡ್‌ನ ಮೊತ್ತ : ₹1.5 ಕೋಟಿ

ಇದನ್ನೂ ಓದಿ: No Cost EMI ಬೋರ್ಡ್ ನೋಡಿ ಮಾರುಹೋಗದಿರಿ; ಅದರ ಅಸಲಿ ಸತ್ಯ ತಿಳಿಯಿರಿ

ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ (ಎಸ್‌ಡಬ್ಲ್ಯೂಪಿ) ಯಲ್ಲಿನ ಹೂಡಿಕೆ: ₹1.5 ಕೋಟಿ

ವಾರ್ಷಿಕ ಆದಾಯ: ಶೇ 8 (ನಿರೀಕ್ಷಿತ)

ವಾರ್ಷಿಕ ಆದಾಯ: ₹12 ಲಕ್ಷ

ಮಾಸಿಕ ಆದಾಯ: ₹1 ಲಕ್ಷ

ನಿಯಮಿತ ಆದಾಯ ಗಳಿಸುವುದು ಹೇಗೆ?

ವಿಮಾ ಕಂಪನಿಗಳ ಆನ್ಯುಯಿಟಿ ಪ್ಲಾನ್‌ಗಳು ಹಾಗೂ ಅಂಚೆ ಕಚೇರಿಯ ಪ್ಲಾನ್‌ಗಳು ನಿವೃತ್ತಿಯ ನಂತರದ ನಿಗದಿತ ಆದಾಯಕ್ಕೆ ಬಹಳ ಜನಪ್ರಿಯವಾಗಿವೆ. ಈ ಯೋಜನೆಗಳಲ್ಲಿ ಸುರಕ್ಷಿತ ಹೂಡಿಕೆಯೊಂದಿಗೆ ನಿಶ್ಚಿತ ಆದಾಯದ ಖಾತರಿ ಇರತ್ತೆ. ಆದರೆ, ಇತ್ತೀಚೆಗೆ, ಮ್ಯೂಚುಯಲ್‌ ಫಂಡ್‌ಗಳ ವ್ಯವಸ್ಥಿತ ಹಿಂಪಡೆತದ ಯೋಜನೆಗಳೂ (ಸಿಸ್ಟಮ್ಯಾಟಿಕ್‌ ವಿತ್‌ಡ್ರಾಯಲ್‌ ಪ್ಲಾನ್‌) ಸಹ ಬಹಳ ಜನಪ್ರಿಯವಾಗುತ್ತಿವೆ. ಇಂತಹ ಹೂಡಿಕೆಗಳಿಂದ, ನಿಯಮಿತ ಮಧ್ಯಂತರ ಅವಧಿಗಳಲ್ಲಿ ನಿಯಮಿತ ಆದಾಯವನ್ನು ಪಡೆಯಬಹುದು. ಒಂದು ವೇಳೆ, ನೀವು ಮ್ಯೂಚುಯಲ್‌ ಫಂಡ್‌ನ ಎಸ್‌ಡಬ್ಲ್ಯೂಪಿಯ (SWP) ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಾಗೂ ಇದರ ಮೇಲೆ ವಾರ್ಷಿಕ ಶೇ 8ರಷ್ವು ಆದಾಯ ಸಿಕ್ಕರೆ, ತಿಂಗಳಿಗೆ ₹1 ಲಕ್ಷದ ಆದಾಯ ಸಿಗುವ ಸಾಧ್ಯತೆ ಇರುತ್ತೆ.

ಇದನ್ನೂ ಓದಿ: ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಎಕ್ಸ್‌ಪರ್ಟ್‌ಗಳು ಏನ್‌ ಹೇಳ್ತಾರೆ ?

ಪರ್ಸನಲ್‌ ಫೈನಾನ್ಸ್‌ ಎಕ್ಸ್‌ಪರ್ಟ್‌ ಜಿತೇಂದ್ರ ಸೋಲಂಕಿ ಅವರ ಪ್ರಕಾರ : “ನಿವೃತ್ತಿಯ ಯೋಜನೆಯನ್ನ ಸಮಯಕ್ಕೆ ಸರಿಯಾಗಿ ಮಾಡಬೇಕು. ಇದನ್ನ ನೀವು ಎಷ್ಟು ಬೇಗ ಶುರು ಮಾಡ್ತೀರೋ ಅಷ್ಟು ದೊಡ್ಡ ನಿಧಿ ನಿಮ್ಮದಾಗತ್ತೆ. ರಿಟೈರ್‌ಮೆಂಟ್‌ ಯೋಜನೆಗೆ ಒಂದೇ ಉತ್ಪನ್ನದ ಮೇಲೆ ಹೂಡಿಕೆ ಮಾಡೋದು ಬುದ್ಧಿವಂತಿಕೆ ಆಗಲ್ಲ. ಇದಕ್ಕಾಗಿ ನೀವು ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ವೈವಿಧ್ಯತೆ ಹೊಂದಿರಬೇಕು. ಸಾಮಾನ್ಯವಾಗಿ ಜನ ರಿಟೈರ್‌ಮೆಂಟ್‌ ಪ್ಲಾನಿಂಗ್‌ ಮಾಡೋವಾಗ ತಮ್ಮ ರಿಟೈರ್‌ಮೆಂಟ್‌ವರೆಗಿನ ಹಣದುಬ್ಬರವನ್ನು ಮಾತ್ರ ಲೆಕ್ಕ ಹಾಕ್ತಾರೆ. ಆದರೆ, ಅದರ ನಂತರದ ಹಣದುಬ್ಬರದ ಲೆಕ್ಕಾಚಾರ ಹಾಕಲ್ಲ.

ನಿಮ್ಮ ವಯಸ್ಸು 40 ಆಗಿದ್ದು ರಿಟೈರ್‌ಮೆಂಟ್‌ ನಂತರ 25 ವರ್ಷ ಬದುಕಿರುತ್ತೀರಿ ಎಂದು ಭಾವಿಸೋಣ. ಈ ಅವಧಿಯಲ್ಲಿ ಶೇ 6ರ ದರದಲ್ಲಿ ಸರಾಸರಿ ಹಣದುಬ್ಬರ ಇರುತ್ತೆ ಎಂದಿಟ್ಟುಕೊಳ್ಳೋಣ. ಇದೇ ರೀತಿ ಜೀವನಶೈಲಿಯಲ್ಲಿ ಆಗಲೂ ಬದುಕಬೇಕೆಂದ್ರೆ ₹2.5 ಕೋಟಿಯ ನಿಧಿ ಬೇಕಾಗುತ್ತೆ. ರಿಟೈರ್‌ಮೆಂಟ್‌ ಪ್ಲಾನಿಂಗ್‌ ಮಾಡೋವಾಗ, ಈ ರೀತಿ ಜೀವಿತಾವಧಿ ಮತ್ತು ಹಣದುಬ್ಬರದ ಸರಾಸರಿ ದರದ ಪ್ರಭಾವವನ್ನು ಪರಿಗಣಿಸಬೇಕು . ಇದಕ್ಕೆ ತಪ್ಪಿದರೆ ನೀವು ನಿಮ್ಮ ಗುರಿಯನ್ನು ಸಾಧಿಸಲು ಆಗುವುದಿಲ್ಲ.”

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Mon, 21 August 23

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್