ಅಬ್ಬಬ್ಬಾ ಚಿನ್ನವೋ ಚಿನ್ನ…ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ: ವಿಡಿಯೋ ನೋಡಿ
ದಾವಣೆಗರೆಯ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಭೇಡಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಬ್ಯಾಂಕ್ನಿಂದ ಕದ್ದುಕೊಂಡು ಹೋಗಿದ್ದ 17.750 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ನಾನಾ ರೀತಿ ಬಂಗಾರದ ಚೈನ್, ಉಂಗುರವನ್ನು ಜೋಡಿಸಿ ಇಡಲಾಗಿದೆ. ಹೀಗಾಗಿ ಎಸ್ಪಿ ಕಚೇರಿ ಒಂದು ರೀತಿ ಬಂಗಾರದ ಅಂಗಡಿಯಂತೆ ಕಾಣಿಸುತ್ತಿದೆ.
ದಾವಣಗೆರೆ, ಮಾರ್ಚ್ 31): ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಭೇಡಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಬ್ಯಾಂಕ್ನಿಂದ ಕದ್ದುಕೊಂಡು ಹೋಗಿದ್ದ 17.750 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಚಿನ್ನವನ್ನು ಪ್ರದರ್ಶನ ಮಾಡಲಾಯ್ತು. ನಾನಾ ರೀತಿ ಬಂಗಾರದ ಚೈನ್, ಉಂಗುರವನ್ನು ಜೋಡಿಸಿ ಇಡಲಾಗಿದೆ. ಹೀಗಾಗಿ ಎಸ್ಪಿ ಕಚೇರಿ ಒಂದು ರೀತಿ ಬಂಗಾರದ ಅಂಗಡಿಯಂತೆ ಕಾಣಿಸುತ್ತಿದೆ. ಎತ್ತ ಕತ್ತು ತಿರುಗಿಸಿ ನೋಡಿದ್ರೂ ಸಹ ಚಿನ್ನಾಭರಣಗಳು ಕಣ್ಣಿಗೆ ಕುಕ್ಕುತ್ತವೆ. ಈ ಒಂದು ದೃಶ್ಯವನ್ನು ನೀವು ಸಹ ಒಂದು ಕಣ್ತುಂಬಿಕೊಳ್ಳಿ.
ಇದನ್ನೂ ಓದಿ: ನ್ಯಾಮತಿ SBI ಬ್ಯಾಂಕ್ ದರೋಡೆ: ಪಾಳು ಬಾವಿಯಲ್ಲಿ 17 ಕೆಜಿ ಚಿನ್ನ ಬಚ್ಚಿಟ್ಟಿದ್ದ ಗ್ಯಾಂಗ್ ಅಂದರ್
Published on: Mar 31, 2025 04:40 PM