No Cost EMI ಬೋರ್ಡ್ ನೋಡಿ ಮಾರುಹೋಗದಿರಿ; ಅದರ ಅಸಲಿ ಸತ್ಯ ತಿಳಿಯಿರಿ

Money9 Special: ಹಬ್ಬದ ಋತುವಿನಲ್ಲಿ ವ್ಯಾಪಾರ ವಹಿವಾಟು ಚುರುಕುಗೊಳಿಸಲು ಕಂಪೆನಿಗಳು ಆಫರ್​ಗಳ ಸುರಿಮಳೆ ಹರಿಸುತ್ತವೆ. ಈ ಕೊಡುಗೆಗಳ ಪೈಕಿ, ನೋ ಕಾಸ್ಟ್ ಇಎಂಐ, ಅಂದರೆ ವೆಚ್ಚ ರಹಿತ ಮಾಸಿಕ ಸಮ ಕಂತು ಪಾವತಿ ಆಯ್ಕೆ ಹೆಚ್ಚು ಜನಪ್ರಿಯವಾಗಿದೆ. ಆದರೆ, ಈ ನೋ ಕಾಸ್ಟ್ ಇಎಂಐ ಎಂಬುದು ನಿಜಕ್ಕೂ ವೆಚ್ಚರಹಿತವಾ? ಅಥವಾ ಇದರ ಅಸಲಿಯತ್ತು ಬೇರೆಯೇ ಇದೆಯಾ?

No Cost EMI ಬೋರ್ಡ್ ನೋಡಿ ಮಾರುಹೋಗದಿರಿ; ಅದರ ಅಸಲಿ ಸತ್ಯ ತಿಳಿಯಿರಿ
ಸೇಲ್ಸ್ ಆಫರ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Aug 14, 2023 | 6:55 PM

ಹಬ್ಬದ ಸೀಸನ್ ಬರುತ್ತಿದೆ. ಬಹಳಷ್ಟು ಮಳಿಗೆಗಳಲ್ಲಿ ರಿಯಾಯಿತಿ ಆಫರ್ ಇರುವ ಬೋರ್ಡ್ ನೋಡುತ್ತೀರಿ. ಹಾಗೆಯೇ, ಹಲವು ಉತ್ಪನ್ನಗಳಿಗೆ ನೋ ಕಾಸ್ಟ್ ಇಎಂಐ (No Cost EMI) ಎಂಬ ಆಫರ್ ಅನ್ನೂ ಕಾಣಬಹುದು. ಕಂಪೆನಿಗಳು ವ್ಯಾಪಾರ ವಹಿವಾಟು ಚುರುಕುಗೊಳಿಸಲು ಅನೇಕ ಪಾವತಿ ಆಯ್ಕೆಗಳನ್ನು ಆಫರ್ ಮಾಡುತ್ತವೆ. ವ್ಯಾಪಾರದ ದೃಷ್ಟಿಕೋನದಿಂದ ಶೂನ್ಯ ಬಡ್ಡಿದರ ಹಣಕಾಸು ಯೋಜನೆ ವಿಶೇಷವಾಗಿದೆ. ಹಣಕಾಸು ಸಂಸ್ಥೆಗಳು ರೀಟೇಲ್ ಶಾಪ್​ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಇದರ ಆಧಾರದ ಮೇಲೆ, ಅವರು ಗ್ರಾಹಕರಿಗೆ ಕೊಡುಗೆಗಳನ್ನು ಘೋಷಿಸುತ್ತಾರೆ. ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಅಂದರೆ ನೋ ಕಾಸ್ಟ್ ಇಎಂಐ ಪಾವತಿ ಮಾಡಬಹುದಾಗಿರುತ್ತದೆ. ಆದರೆ ಇಲ್ಲಿ ಶೂನ್ಯ ಬಡ್ಡಿ ದರ ಎಂದರೆ ನೀವು ಹೆಚ್ಚುವರಿ ಹಣ ಪಾವತಿ ಮಾಡುವಂತಿಲ್ಲ ಎಂದಲ್ಲ. ಹಣಕಾಸು ಸಂಸ್ಥೆಗಳು ಸಾಲ ನೀಡಲು ಬೃಹತ್ ಮೊತ್ತದ ಪ್ರಾಸಸಿಂಗ್ ಶುಲ್ಕ ವಿಧಿಸುತ್ತವೆ. ಕೆಲವೊಮ್ಮೆ ಈ ಶುಲ್ಕ ಬಡ್ಡಿ ಹಣಕ್ಕೆ ಸಮನಾಗಿರುತ್ತದೆ. ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸಲು ಅಷ್ಟೂ ಮೊತ್ತವನ್ನು ಪಾವತಿಸಲು ಸಾಧ್ಯವಾಗದೇ ಇದ್ದಾಗ, ಅನೇಕ ಕಂಪೆನಿಗಳು ಮತ್ತು ವರ್ತಕರು ಇಎಂಐ ಮೂಲಕ ಪಾವತಿ ಆಯ್ಕೆ ನೀಡುತ್ತಾರೆ. ಅವುಗಳಿಗೆ ನೋ ಕಾಸ್ಟ್ ಇಎಂಐ ಅಥವಾ ಶೂನ್ಯ ಬಡ್ಡಿ ಸಾಲ ಎಂಬ ಹೆಸರಿಟ್ಟು ಅದನ್ನು ಇನ್ನಷ್ಟು ಆಕರ್ಷಕವಾಗಿಸಲು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ನಿದರ್ಶನವಾಗಿ ಈ ಘಟನೆ ಇದೆ.

ಗಗನ್ ಎಂಬ ವ್ಯಕ್ತಿ ಮಾಸಿಕ 5 ಸಾವಿರ ರೂ ಪಾವತಿಯ ನೋ ಕಾಸ್ಟ್ ಇಎಂಐ ಆಯ್ಕೆಯೊಂದಿಗೆ 40 ಸಾವಿರ ರೂಪಾಯಿ ಮೌಲ್ಯದ ಟಿವಿ ಖರೀದಿಸುತ್ತಾರೆ. ಆದರೆ ಅವರ ಸ್ನೇಹಿತ ಮನ್ವಿತ್, ಅದೇ ಟಿವಿಯನ್ನು 35 ಸಾವಿರ ರೂಪಾಯಿಗೆ ಖರೀದಿ ಮಾಡಿರುತ್ತಾರೆ. ಎರಡೂ ಟಿವಿ ಸೆಟ್​ಗಳು ಒಂದೇ ಮಾಡೆಲ್ ಮತ್ತು ಒಂದೇ ಕಂಪೆನಿಯವು. ಆದರೆ ಗಗನ್ ನೋ ಕಾಸ್ಟ್ ಇಎಂಐ ಪಾವತಿ ಆಯ್ಕೆ ಮಾಡಿಕೊಂಡಿದ್ದರಿಂದ ಬೆಲೆ ಮಾತ್ರ ಬೇರೆ ಬೇರೆಯಾಗಿವೆ. ಬಡ್ಡಿ ರಹಿತ ಮಾಸಿಕ ಕಂತು ಪಾವತಿಯಿಂದ ಹೊರೆಯಾಗುವುದಿಲ್ಲ ಎಂದು ಗಗನ್ ಭಾವಿಸಿದ್ದರು. ಆದರೆ ವಾಸ್ತವ ಅದಕ್ಕೆ ವಿರುದ್ಧವಾಗಿತ್ತು. ಇಂತಹ ಸನ್ನಿವೇಶದಲ್ಲಿ, ನೋ ಕಾಸ್ಟ್ ಇಎಂಐ ನಿಜವಾಗಿಯೂ ಲಾಭದಾಯಕವೇ ಅಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ವೈಯಕ್ತಿಕ ಹಣಕಾಸು ತಜ್ಞ, ಡಾ|| ರಾಹುಲ್ ಶರ್ಮಾ ಹೀಗೆ ಹೇಳುತ್ತಾರೆ : “ನೋ ಕಾಸ್ಟ್ ಇಎಂಐ ಒಪ್ಪಂದದಡಿ, ಖರೀದಿದಾರರು ಮಾಸಿಕ ಕಂತುಗಳ ಮೇಲೆ ಯಾವುದೇ ಬಡ್ಡಿ ಪಾವತಿಸುವ ಅಗತ್ಯವಿಲ್ಲ. ಸರಳವಾಗಿ ಹೇಳುವುದಾದರೆ, ಇದು ಕೇವಲ ಖಾಸಗಿ ಹಣಕಾಸು ಸಂಸ್ಥೆಗಳು ನೀಡುವ ಸಾಲ. ಟ್ಟಾರೆಯಾಗಿ, ಈ ಖರೀದಿ ವಿಧಾನ ನಗದು ಖರೀದಿಗಿಂತಲೂ ಹೆಚ್ಚು ದುಬಾರಿ. ಯಾವುದೇ ಹಣಕಾಸು ಕಂಪೆನಿ ಬಡ್ಡಿ ಇಲ್ಲದೇ ಸಾಲ ಏಕೆ ಕೊಡುತ್ತದೆ? ನಿಸ್ಸಂಶಯವಾಗಿ ಕಂಪೆನಿ ಯಾವುದೇ ವಿಧಾನದಲ್ಲಾದರೂ ಕಂಪೆನಿಯು ಅದನ್ನು ಸರಿದೂಗಿಸಿಕೊಳ್ಳುತ್ತದೆಯಲ್ಲವೇ!

ಇದನ್ನೂ ಓದಿ: ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಹಬ್ಬರ ಋತುವಿನಲ್ಲಿ, ಚಿಲ್ಲರೆ ಮಳಿಗೆಗಳು ಮತ್ತು ಹಣಕಾಸು ಕಂಪೆನಿಗಳೆರಡೂ ತಮ್ಮ ತಮ್ಮ ವ್ಯಾಪಾರ ಹೆಚ್ಚು ಮಾಡುವ ಗುರಿ ಹೊಂದಿರುತ್ತದೆ. ಹೀಗಾಗಿ ಅವರು ಇಂತಹ ಕೊಡುಗೆ ನೀಡಲು ಒಪ್ಪಂದ ಮಾಡಿಕೊಳ್ಳುತ್ತವೆ. ಇದರಡಿ, ಮಾರಾಟಗಾರರು ಸರಕುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕಡತ ಶುಲ್ಕ ಮತ್ತು ಇತರ ಬಗೆಯ ಶುಲ್ಕ ಎಂದು ಹಣ ಸಂಗ್ರಹಿಸುತ್ತಾರೆ. ಅಲ್ಲದೇ, ಈ ಯೋಜನೆಯಡಿ ಮಾರಾಟ ಮಾಡಲ್ಪಡುವ ಉತ್ಪನ್ನಗಳ ಬೆಲೆಯನ್ನು ಮೊದಲೇ ಹೆಚ್ಚಿಸಿರುತ್ತಾರೆ. ಬಡ್ಡಿ ಮುಕ್ತ ಸಾಲ ಕೊಡುಗೆಯಿಂದ ಆಕರ್ಷಿತರಾಗುವ ಗ್ರಾಹಕರು ಖರೀದಿಗಳನ್ನು ಮಾಡುತ್ತಾರೆ, ಆದರೆ ಕಾಣದ ರೂಪದಲ್ಲಿ ಬಡ್ಡಿಯನ್ನು ಖರೀದಿಯ ಸಂದರ್ಭದಲ್ಲೇ ಇತರ ಶುಲ್ಕವಾಗಿ ವಿಧಿಸಲಾಗುತ್ತದೆ.

ಡಾ||ರಾಹುಲ್ ಶರ್ಮಾ ಹೀಗೆ ಹೇಳುತ್ತಾರೆ: ಖರೀದಿಗೂ ಮುನ್ನ ಖರೀದಿ ಮಾಡುವ ಉತ್ಪನ್ನಗಳ ಬಗ್ಗೆ ಸ್ಪಲ್ಪ ಹೋಂವರ್ಕ್ ಮಾಡುವುದು ಉತ್ತಮ ಅಂದರೆ ಆ ವಸ್ತು ಎಲ್ಲಿ ಮತ್ತು ಎಷ್ಟು ಬೆಲೆಗೆ ಸಿಗುತ್ತದೆ, ಆನ್ ಲೈನ್ ಶಾಪಿಂಗ್ ಇನ್ನಷ್ಟು ಹೆಚ್ಚು ಉಳಿತಾಯ ತರಬಹುದೇ ಹೀಗೆ ಮಾಹಿತಿ ಸಂಗ್ರಹಿಸುವುದು ಒಳಿತು. ಹೀಗಾಗಿ, ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಖರೀದಿ ಸಂದರ್ಭದಲ್ಲಿ ತೀರಾ ಅಗತ್ಯ ಎನಿಸಿದರೆ ಮಾತ್ರ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬಳಿ ಹಣವಿದ್ದರೆ ಆಗ ನಿಮ್ಮ ಹಣ ಕೊಟ್ಟೇ ಖರೀದಿಸಿ. ಪ್ರತಿ ಬಾರಿಯೂ ನಿಮಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಎಂದೇನೂ ಅಲ್ಲ. ಕೆಲವು ಕಂಪೆನಿಗಳು ಬ್ರಾಂಡ್ ಪ್ರಮೋಷನ್ ಅಂದರೆ ತಮ್ಮ ಕಂಪೆನಿ ಹೆಸರಿನ ಉತ್ಪನ್ನಗಳ ಪ್ರಚಾರಕ್ಕಾಗಿ ಮತ್ತು ವ್ಯಾಪಾರ ವಹಿವಾಟು ವೃದ್ಧಿಗಾಗಿ ಬಡ್ಡಿ ರಹಿತ ಪಾವತಿ ಅವಕಾಶವನ್ನೂ ನೀಡುತ್ತವೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್

ಶೂನ್ಯ ಬಡ್ಡಿ ದರದಂತಹ ಯಾವುದೇ ಯೋಜನೆಗಳಲ್ಲಿ ಭಾಗಿಯಾಗದಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆರ್​ಬಿಐ ಕಠಿಣ ನಿರ್ಬಂಧ ಹೇರಿದೆ. ಇಂತಹ ಉದ್ಯಮದಲ್ಲಿ, ಕೇವಲ ಖಾಸಗಿ ಹಣಕಾಸು ಸಂಸ್ಥೆಗಳು ಮಾತ್ರ ರೀಟೇಲ್ ಮಳಿಗೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತವೆ. ರಿಸ್ಕ್​ನಿಂದ ತುಂಬಿರುವ ಉದ್ಯಮದಲ್ಲಿ ಯಾವುದೇ ಹಣಕಾಸು ಕಂಪೆನಿ ಬಡ್ಡಿ ಇಲ್ಲದೇ ಸಾಲ ಏಕೆ ಕೊಡುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ?

ಹೀಗಾಗಿ, ನೋ ಕಾಸ್ಟ್ ಇಎಂಐ ಕೇಳಲು ಹಿತವಾಗಿದ್ದರೂ, ಹೇಳಿದಷ್ಟು ಹಿತ ವಾಸ್ತವದಲ್ಲಿ ಇಲ್ಲ. ನೀವು ಈ ಸಾಲಕ್ಕಾಗಿ ಏನನ್ನಾದರೂ ಪಾವತಿಸಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ನೀವು ಯಾವುದೇ ವಸ್ತುವನ್ನು “ನೋ ಕಾಸ್ಟ್ ಇಎಂಐ” ನಲ್ಲಿ ಖರೀದಿಸಲು ಯೋಜಿಸುತ್ತಿದ್ದರೆ, ಮೊದಲು ಅದರ ಲಾಭ, ನಷ್ಟಗಳನ್ನು ಅಂದಾಜಿಸಿ. ಯಾವುದೇ ಹಣಕಾಸು ಕಂಪೆನಿ ತನಗೆ ಲಾಭವಿಲ್ಲದೇ ನಿಮಗೆ ಸಾಲ ಕೊಡುವುದಿಲ್ಲ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ.

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Mon, 14 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್