ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್

Equity Savings Fund Advantages: ಈಕ್ವಿಟಿ ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಅಗಾಧ ವೇಗವಾಗಿ ಬೆಳೆದಿದೆ. ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡುವವರಿಗೆ ಷೇರುಪೇಟೆ ದೊಡ್ಡ ಲಾಭದ ಸಾಧ್ಯತೆ ತೆರೆದಿಡುತ್ತದೆ. ರಿಸ್ಕ್ ಬೇಡವೆನ್ನುವವರಿಗೆ ಮತ್ತು ತಕ್ಕಮಟ್ಟಿಗೆ ಲಾಭವನ್ನೂ ನಿರೀಕ್ಷಿಸುವವರಿಗೆ ಈಕ್ವಿಟಿ ಸೇವಿಂಗ್ಸ್ ಫಂಡ್ ಸೂಕ್ತವಾಗಿದೆ.

ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್
ಹೂಡಿಕೆ
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Aug 13, 2023 | 5:09 PM

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Share Investments) ಮಾಡುವುದು ಅಷ್ಟು ಸುಲಭವಲ್ಲ. ಆದ್ದರಿಂದ ತಜ್ಞರು ನೀವು ಮ್ಯುಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬೇಕೆಂದು ಸಲಹೆ ನೀಡುತ್ತಾರೆ. ಆದರೆ, ಮ್ಯುಚುಯಲ್ ಫಂಡ್​ಗಳಲ್ಲಿ ವಿವಿಧ ರೀತಿ ಇದೆ. ನೀವು ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಇಚ್ಛಿಸುತ್ತಿಲ್ಲವಾದರೆ ಹಾಗೂ ನಿಮ್ಮ ಹೂಡಿಕೆ ದೀರ್ಘವೂ ಅಲ್ಲವಾದರೆ ಷೇರು ಮಾರುಕಟ್ಟೆಯಲ್ಲಿ ನೀವು ಮಾಡುವ ಹೂಡಿಕೆಯಿಂದ ಪ್ರಯೋಜನ ಪಡೆಯುವಂತಹ ಯಾವುದಾದರೂ ಫಂಡ್ ಇದೆಯೇ? ನಿಮ್ಮ ಪ್ರಶ್ನೆಗೆ ಉತ್ತರ ಈಕ್ವಿಟಿ ಸೇವಿಂಗ್ಸ್ ಫಂಡ್. ಈಕ್ವಿಟಿ ಸೇವಿಂಗ್ಸ್ ಫಂಡ್​ಗಳು ಈಕ್ವಿಟಿ ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತವೆ. ವಿವಿಧ ಮಾರುಕಟ್ಟೆಗಳಲ್ಲಿ ಲಾಭಕ್ಕೆ ಮಾರುವ ಅವಕಾಶ (Arbitrage Opportunity) ಹೊಂದಿರುತ್ತವೆ.

ಈಕ್ವಿಟಿ ಸೇವಿಂಗ್ಸ್ ಫಂಡ್​ಗಳಲ್ಲಿ ಒಟ್ಟು ಅಸೆಟ್​ನ ಕನಿಷ್ಠ ಶೇಕಡಾ 65ರಷ್ಟು ಈಕ್ವಿಟಿ ಮತ್ತು ಈಕ್ವಿಟಿ ಸಂಬಂಧಿತ ಹೂಡಿಕೆಗಳಲ್ಲೂ ಮತ್ತು ಕನಿಷ್ಠ ಶೇಕಡಾ 10ರಷ್ಟನ್ನು ಡೆಟ್ ಇನ್ಸ್​ಟ್ರುಮೆಂಟ್​ಗಳಲ್ಲಿ ಹೂಡಿಕೆ ಮಾಡುವಂತೆ ಸೆಬಿ ಆದೇಶ ನೀಡಿದೆ. ಈಕ್ವಿಟಿ ಮ್ಯುಚುವಲ್ ಫಂಡ್​ನ ರೀತಿಯಲ್ಲೇ ಈಕ್ವಿಟಿ ಸೇವಿಂಗ್ಸ್ ಫಂಡ್​ಗೂ ತೆರಿಗೆ ಅನ್ವಯ ಆಗುತ್ತದೆ. ವಿಶೇಷ ಎಂದರೆ, ಮಾರುಕಟ್ಟೆಯ ಏರಿಳಿತದಲ್ಲಿ ಇದರ ಈಕ್ವಿಟಿ ಹೂಡಿಕೆಯು ಲಾಭ ಮಾಡಲು ಅದೃಷ್ಟಪ್ರಯತ್ನ ಮಾಡುತ್ತದೆ. ಇದರ ಡೆಟ್ ಹೂಡಿಕೆಯು ಶಾಕ್ ಅಬ್ಸಾರ್ಬರ್ ರೀತಿ ಇರುತ್ತದೆ. ಅಂದರೆ ಮಾರುಕಟ್ಟೆಯಿಂದ ಈಕ್ವಿಟಿ ಹೂಡಿಕೆಗೆ ಹಿನ್ನಡೆಯಾದರೆ ಡೆಟ್ ಮಾರುಕಟ್ಟೆ ಇನ್ನೊಂದು ಭದ್ರವಾಗಿ ಒಂದಷ್ಟು ಲಾಭ ತರುತ್ತದೆ.

ಈ ಫಂಡ್​ಗಳನ್ನು ಅಲ್ಪಾವಧಿ ಮತ್ತು ಮಧ್ಯಮಾವಧಿಗೆ ಹೂಡಿಕೆ ಮಾಡಲು ಬಳಸಬಹುದು. ಇದರ ಈಕ್ವಿಟಿ ಹೂಡಿಕೆ ಹೆಚ್ಚಿನ ಲಾಭದ ಸಾಧ್ಯತೆ ಇರುವುದು ಹಾಗೂ ಈಕ್ವಿಟಿ ತೆರಿಗೆಯ ಲಾಭವನ್ನೂ ಇದು ಪಡೆಯುವುದು ಅನುಕೂಲಕರ ಎನಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಸ್ಥಿರತೆ ಮತ್ತು ಲಾಭ, ಎರಡೂ ಕೊಡಬಲ್ಲುದು ಕನ್ಸರ್ವೇಟಿವ್ ಹೈಬ್ರಿಡ್ ಫಂಡ್; ಟ್ರೆಂಡ್​ನಲ್ಲಿರುವ ಈ ಫಂಡ್ ಬಗ್ಗೆ ತಿಳಿಯಿರಿ

ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್​ಗೂ ಸೇವಿಂಗ್ಸ್ ಫಂಡ್​ಗೂ ಏನು ವ್ಯತ್ಯಾಸ?

ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್ ಕೂಡ ಇದೇ ರೀತಿ ಇದೆಯಲ್ಲಾ ಎಂದು ಅನಿಸಬಹುದು. ಆದರೆ ಈಕ್ವಿಟಿ ಸೇವಿಂಗ್ಸ್ ಫಂಡ್​ಗೂ ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್​ಗೂ ಏನು ವ್ಯತ್ಯಾಸ ಎಂಬುದನ್ನು ತಿಳಿಯೋಣ.

ಬ್ಯಾಲೆನ್ಸ್ಡ್ ಈಕ್ವಿಟಿ ಫಂಡ್​ಗಳು ಈಕ್ವಿಟಿ ಮಾರುಕಟ್ಟೆಯಲ್ಲಿ ಶೇಕಡಾ 40 ರಿಂದ 60ರಷ್ಟು ಹೂಡಿಕೆ ಮಾಡಬೇಕೆಂದು ಕಡ್ಡಾಯ ನಿಯಮ ಇದೆ. ಆದರೆ, ಇವೆರಡು ಫಂಡ್​ಗಲ್ಲಿ ಮುಖ್ಯ ವ್ಯತ್ಯಾಸ ಎಂದರೆ ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್​ಗೆ (ಬಿಎಚ್​ಎಫ್) ಆರ್ಬಿಟ್ರೇಜ್ ಅವಕಾಶಗಳು ಇರುವುದಿಲ್ಲ. ಅಂದರೆ ಬೇರೆ ಬೇರೆ ಮಾರುಕಟ್ಟೆಯಲ್ಲಿ ಆಸ್ತಿಗಳನ್ನು ಮಾರಲು ಆಸ್ಪದ ಇರುವುದಿಲ್ಲ. ಆದ್ದರಿಂದ ಹೈಬ್ರಿಡ್ ಫಂಡ್​ಗಳು ಮಧ್ಯಮದಿಂದ ದೀರ್ಘಾವಧಿ ಹೂಡಿಕೆಗೆ ಉಪಯುಕ್ತ ಎನಿಸುತ್ತದೆ. ಆದ್ದರಿಂದ ಹೂಡಿಕೆದಾರರ ಗುರಿ, ಹೂಡಿಕೆ ಸಮಯಾವಧಿ, ರಿಸ್ಕ್ ಶ್ರೇಣಿಯ ಮೇಲೆ ಈಕ್ವಿಟಿ ಸೇವಿಂಗ್ಸ್ ಫಂಡ್ ಅಥವಾ ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್ ಅನ್ನು ಆರಿಸಿಕೊಳ್ಳಬಹುದು.

ಇದನ್ನೂ ಓದಿ: ಕ್ಯಾಷ್​​ಬ್ಯಾಕ್ ಬಗ್ಗೆ ಹುಷಾರ್; ದುರಾಸೆಗೆ ಬಿದ್ದು ಮೋಸ ಹೋಗದಿರಿ; ಏನಿದೆ ಕ್ಯಾಷ್​ಬ್ಯಾಕ್ ಮರ್ಮ?

ಈಕ್ವಿಟಿ ಸೇವಿಂಗ್ಸ್ ಫಂಡ್, ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್​ನಿಂದ ಎಷ್ಟೆಷ್ಟು ಲಾಭ?

ಇವೆರಡು ಫಂಡ್​ಗಳು ಕಳೆದ 3 ವರ್ಷದಲ್ಲಿ ಸರಾಸರಿ ಶೇ. 10ರಷ್ಟು ರಿಟರ್ನ್ ನೀಡಿವೆ. ಹಾಗೆಯೇ, ಕಳೆದ 5 ವರ್ಷದಲ್ಲಿ ಇವು ನೀಡಿದ ರಿಟರ್ನ್ಸ್ ಶೇ. 7ರಷ್ಟು ಸರಾಸರಿ ಇದೆ. ತೀರಾ ಹೆಚ್ಚಿನ ರಿಟರ್ನ್ ಕೊಡದೇ ಇದ್ದರೂ ಎಫ್​ಡಿ ಮತ್ತಿತರ ಸಾಂಪ್ರದಾಯಿ ಹೂಡಿಕೆ ಸಾಧನಗಳಿಗಿಂತಲೂ ತುಸು ಉತ್ತಮ ಎನಿಸಿದೆ.

ಈ ಫಂಡ್​ಗಳಲ್ಲಿ ಹೂಡಿಕೆ ಹೇಗೆ?

ತಜ್ಞರ ಸಲಹೆ ಪ್ರಕಾರ, ಈ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿರ್ಧಾರ ಕೈಗೊಳ್ಳುವ ಮೂಲಕ ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಿಗಿಂತ ಹೆಚ್ಚಿನ ಅಪಾಯವಿಲ್ಲದೆ ಅಧಿಕ ರಿಟರ್ನ್ಸ್ ನೀಡುವ ಅವಕಾಶ ಪಡೆಯುತ್ತೀರಿ. ಆದಾಗ್ಯೂ, ನೀವು ಕನಿಷ್ಠ 3 ರಿಂದ 5 ವರ್ಷಗಳ ಕಾಲಾವಧಿಯನ್ನು ಪರಿಗಣಿಸುವುದು ಅಗತ್ಯ ಮತ್ತು ಯೋಜನೆ ಕುರಿತ ಮಾಹಿತಿ ಪತ್ರವನ್ನು ಕೂಲಂಕಷವಾಗಿ ಓದಿ ಅರ್ಥ ಮಾಡಿಕೊಂಡು ಯೋಜನೆಯ ಅಸೆಟ್ ಹಂಚಿಕೆ ಮತ್ತು ಅಪಾಯಗಳನ್ನು ಮನನ ಮಾಡಿಕೊಂಡಿರಬೇಕು.

ತಜ್ಞರು ಹೇಳುವಂತೆ, ಈ ಫಂಡ್​ಗಳು ಈಕ್ವಿಟಿ ಹೂಡಿಕೆಗಳಿಗೆ ಪರ್ಯಾಯವಲ್ಲ ಎಂದು ನೆನಪಿಡುವುದು ಮುಖ್ಯ. ಈ ಫಂಡ್​ಗಳಿಗೆ ಸೂಕ್ತವಾದ ಹೂಡಿಕೆ ವ್ಯಾಪ್ತಿ 3 ರಿಂದ 5 ವರ್ಷಗಳು.

(ಮಾಹಿತಿ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 13 August 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ