ನನ್ನ ಉಚ್ಚಾಟನೆಯಾಗಲಿದೆ ಎಂದು ಹೇಳಿದ್ಯಾರು? ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ: ರಮೇಶ್ ಜಾರಕಿಹೊಳಿ
ಸರ್ಕಾರದ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸುವ ಹೋರಾಟದಲ್ಲಿ ನೀವು ಭಾಗಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ತಾನು ಹಿಂದೆ ನೀಡಿದ ಹೇಳಿಕೆಗಳಿಗೆ ಈಗಲೂ ಬದ್ಧನಾಗಿದ್ದೇನೆ, ಪದೇಪದೆ ಹೇಳಿದ್ದನ್ನೇ ಹೇಳಿಸಿ ಮುಜುಗುರ ಉಂಟಾಗುವ ಸ್ಥಿತಿ ನಿರ್ಮಿಸಬೇಡಿ ಎಂದು ಹೇಳಿದರು. ಯತ್ನಾಳ್ ಉಚ್ಚಾಟನೆಯ ಬಳಿಕ ಜಾರಕಿಹೊಳಿ ಮೊದಲಿನಂತೆ ಮಾತಾಡುತ್ತಿಲ್ಲ.
ಬೆಳಗಾವಿ, ಏಪ್ರಿಲ್ 1: ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಉಚ್ಚಾಟನೆಯ ನಂತರ ರಮೇಶ್ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ಅವರ ಸರದಿನಾ ಅಂತ ಬೆಳಗಾವಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ್ದಕ್ಕೆ ಗೋಕಾಕ ಶಾಸಕ ವ್ಯಗ್ರರಾದರು. ಯಾರು ಹಾಗೆ ಹೇಳಿದ್ದು? ಹೇಳಿದವರ ಹೆಸರು ಹೇಳಿ, ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ, ಪ್ರಶ್ನಾರ್ಥಕ ಚಿಹ್ನೆಯಿರುವ ಪ್ರಶ್ನೆಗಳು ಬೇಡ, ಯತ್ನಾಳ್ ಅವರ ಉಚ್ಚಾಟನೆ ದುರ್ದೈವದ ಸಂಗತಿ, ಆದಷ್ಟು ಬೇಗ ಅದನ್ನು ಸರಿಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ಮಾತಾಡುವಾಗ ರಮೇಶ್ ಜಾರಕಿಹೊಳಿ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 01, 2025 02:10 PM