ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ ಅವರೊಂದಿಗೆ ಮತ್ತೊಬ್ಬ ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ವಿ ಸೋಮಣ್ಣ ಕೂಡ ಮಠಕ್ಕೆ ಆಗಮಿಸಿದರು. ಸಿದ್ದಲಿಂಗ ಸ್ವಾಮೀಜಿಯವರಿಗೆ ನಮಸ್ಕರಿಸಿದ ನಂತರ ರಾಜನಾಥ ಸಿಂಗ್ ಗದ್ದುಗೆ ಕಡೆ ತೆರಳಿ ಪೂಜೆ ಸಲ್ಲಿಸಿದರು. ರಕ್ಷಣಾ ಸಚಿವರಿಗೆ ಈಗ 73ರ ಪ್ರಾಯವಾದರೂ ಯುವಕರ ಹಾಗೆ ಲವಲವಿಕೆಯ ಸಾಕಾರವಾಗಿದ್ದಾರೆ.
ತುಮಕೂರು, ಏಪ್ರಿಲ್ 1: ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಇಂದು ತುಮಕೂರು ಆಗಮಿಸಿ ಶ್ರೀ ಶಿವಕುಮಾರ್ ಸ್ವಾಮೀಜಿಯವರ 118 ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ರಾಜನಾಥ್ ಸಿಂಗ್ ಬೆಂಗಾವಲು ಪಡೆಯ ಭದ್ರತೆಯಲ್ಲಿ ಮಠದ ಆವರಣವನ್ನು ಪ್ರವೇಶಿಸಿದರು. ಸಿಂಗ್ ಅವರಿಗಾಗಿ ಕಾಯುತ್ತಿದ್ದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ಹೂವಿನ ಹಾರಹಾಕಿ ಅವರನ್ನು ಬರಮಾಡಿಕೊಂಡರು. ಸ್ಬಾಮೀಜಿ ಹಾರ ಕೊರಳಿಗೆ ಹಾಕುತ್ತಿದ್ದಂತೆಯೇ ಸಿಂಗ್ ಶ್ರೀಗಳ ಪಾದ ಮುಟ್ಟಿ ನಮಸ್ಕರಿಸಿದರು.
ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 01, 2025 01:18 PM