ಸಿದ್ದಗಂಗಾ ಮಠದಲ್ಲಿ ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನದ ಪ್ರಯುಕ್ತ ಮಠದಲ್ಲಿ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ಮೈಸೂರಿನ ಕಲಾವಿದರು ರಚಿಸಿದ, ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ ಕಣ್ಮನ ಸೆಳೆಯುತ್ತಿದೆ. ಚಿತ್ರದ ವಿಡಿಯೋ ಇಲ್ಲಿದೆ ನೋಡಿ.
ತುಮಕೂರು, ಏಪ್ರಿಲ್ 1: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ 118ನೇ ಜನ್ಮ ದಿನ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ ಬಿಡಿಸಲಾಗಿದೆ. ಒಟ್ಟು 125 ಅಡಿ ಉದ್ದ, 65 ಅಡಿ ಅಗಲ ಸೇರಿ 8125 ಚದರ ಅಡಿ ವಿಸ್ತೀರ್ಣದ ಚಿತ್ರವನ್ನು ಮೈಸೂರಿನ ಕಲಾವಿದ ಪುನೀತ್ ಸೇರಿ 5 ಜನರ ತಂಡ ರಚಿಸಿದೆ. ಶ್ರೀಗಳ ಭಾವಚಿತ್ರದ ರಂಗೋಲಿಗಾಗಿ 12 ಗಂಟೆಗಳ ಶ್ರಮವಹಿಸಲಾಗಿದೆ.
Latest Videos