- Kannada News Photo gallery Cricket photos RCB Tops IPL Instagram Followers: Beats CSK, Claims no 1 Spot
IPL 2025: ಅತಿ ಹೆಚ್ಚು ಫಾಲೋವರ್ಸ್; ಸಿಎಸ್ಕೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ
RCB Tops IPL Instagram Followers: 2025ರ ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ, ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತಂಡವಾಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಆರ್‌ಸಿಬಿ ಮೊದಲ ಸ್ಥಾನಕ್ಕೇರಿದೆ. 17.8 ಮಿಲಿಯನ್ ಅನುಯಾಯಿಗಳೊಂದಿಗೆ ಆರ್‌ಸಿಬಿ ಅಗ್ರಸ್ಥಾನದಲ್ಲಿದ್ದರೆ, CSK 17.7 ಮಿಲಿಯನ್ ಅನುಯಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನದಲ್ಲಿದೆ.
Updated on: Mar 31, 2025 | 6:01 PM

2025 ರ ಐಪಿಎಲ್‌ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಆರ್ಸಿಬಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ತನ್ನ ಎರಡನೇ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು 50 ರನ್ಗಳಿಂದ ಮಣಿಸಿದ್ದ ಆರ್‌ಸಿಬಿ ಇದೀಗ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಇನ್ಸ್ಟಾಗ್ರಾಮ್ನಲ್ಲೂ ಚೆನ್ನೈ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ವಾಸ್ತವವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಧಿಕ ಫಾಲೋವರ್ಸ್ಗಳನ್ನು ಹೊಂದಿರುವ ಐಪಿಎಲ್ ತಂಡಗಳ ಪೈಕಿ ಇಷ್ಟು ದಿನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿತ್ತು. ಆದರೆ ಈ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಸಿಎಸ್ಕೆ ತಂಡ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಅನುಯಾಯಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ.

ಪ್ರಸ್ತುತ ಸಿಎಸ್ಕೆ ಫ್ರಾಂಚೈಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ 17.7 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದು, ಅತ್ಯಧಿಕ ಫಾಲೋವರ್ಸ್ಗಳನ್ನು ಹೊಂದಿರುವ ಐಪಿಎಲ್ ತಂಡಗಳ ಪೈಕಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಐಪಿಎಲ್ನ ಮತ್ತೊಂದು ಜನಪ್ರಿಯ ತಂಡವಾದ ಆರ್‌ಸಿಬಿ ಮೊದಲ ಸ್ಥಾನಕ್ಕೇರಿದೆ.

ಪ್ರಸ್ತುತ ಆರ್‌ಸಿಬಿ 17.8 ಮಿಲಿಯನ್ ಪಾಲೋವರ್ಸ್ಗಳನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 16.2 ಮಿಲಿಯನ್ ಪಾಲೋವರ್ಸ್ಗಳನ್ನು ಹೊಂದಿದೆ. ಈ ಮೂರು ತಂಡಗಳು ಮಾತ್ರ 15 ಮಿಲಿಯನ್ಗಿಂತಲೂ ಅಧಿಕ ಪಾಲೋವರ್ಸ್ಗಳನ್ನು ಹೊಂದಿವೆ.

ಉಳಿದ 7 ತಂಡಗಳಲ್ಲಿ ಯಾವ ತಂಡಕ್ಕೂ 10 ಮಿಲಿಯನ್ ಪಾಲೋವರ್ಸ್ಗಳಿಲ್ಲ. 4ನೇ ಸ್ಥಾನದಲ್ಲಿರುವ ಕೆಕೆಆರ್ 7 ಮಿಲಿಯನ್, ಸನ್‌ರೈಸರ್ಸ್ ಹೈದರಾಬಾದ್ 5.1 ಮಿಲಿಯನ್, ರಾಜಸ್ಥಾನ್ ರಾಯಲ್ಸ್ 4.7 ಮಿಲಿಯನ್, ಗುಜರಾತ್ 4.5 ಮಿಲಿಯನ್, ಡೆಲ್ಲಿ ಕ್ಯಾಪಿಟಲ್ಸ್ 4.3 ಮಿಲಿಯನ್, ಪಂಜಾಬ್ 3.7 ಮಿಲಿಯನ್ ಕೊನೆಯದಾಗಿ ಲಕ್ನೋ 3.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿವೆ.



















