ಕೋಲಾರ: ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ, ಚಾಕು ಇರಿತ
ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿಯಲ್ಲಿ ಕೊರಿಯರ್ ಪಾರ್ಸೆಲ್ ವಿತರಣೆಯ ವಿಚಾರದಲ್ಲಿ ಪವನ್ ಮತ್ತು ಮೋಹನ್ ಎಂಬ ಕೊರಿಯರ್ ಬಾಯ್‌ಗಳು ಚೇತನ್ ಮತ್ತು ಯುವರಾಜ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಫೋನ್‌ನಲ್ಲಿ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ. ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲಾರ, ಮಾರ್ಚ್ 31: ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ ನಡೆದಿರುವ ಘಟನೆ ಕೋಲಾರ (Kolar) ತಾಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊರಿಯರ್ ಬಾಯ್ ಪವನ್, ಸೋದರ ಮೋಹನ್ಕೃತ್ಯ ಎಸಗಿರುವ ಆರೋಪಿಗಳು. ಚೇತನ್, ಯುವರಾಜ್ ಚಾಕು ಇರಿತದಿಂದ ಗಾಯಗೊಂಡವರು. ಫೋನ್‌ನಲ್ಲಿ ಕೊರಿಯರ್ ಬಾಯ್ ಪವನ್ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದೆ. ಬಳಿಕ, ಕೊರಿಯರ್ ಬಾಯ್ ಪವನ್ ಮತ್ತು ಆತನ ಸಹೋದರ ಮೋಹನ್ ಗ್ರಾಮಕ್ಕೆ ನುಗ್ಗಿ ಚೇತನ್ ಮತ್ತು ಯುವರಾಜ್ಗೆ ಚಾಕುವಿನಿಂದ ಇರಿದಿದ್ದಾರೆ.
ಚಾಕು ಇರಿದು ಪರಾರಿಯಾಗುತ್ತಿದ್ದ ವೇಳೆ ಗ್ರಾಮಸ್ಥರು ಇಬ್ಬರೂ ಆರೋಪಿಗಳನ್ನು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಾಳುಗಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿದ ಮೋಹನ್ ಹಾಗೂ ಪವನ್ನನ್ನು ಬಂಧಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕುಡಿದು ಸ್ನೇಹಿತರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ
ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿರುವ ಘಮುಳಬಾಗಿಲು ಹೊರವಲಯದಲ್ಲಿ ನಡೆದಿದೆ. ಮುಳಬಾಗಿಲು ನಗರದ ಹೈದರಿ ನಗರ ನಿವಾಸಿ ಮತೀನ್(25) ಕೊಲೆಯಾದ ವ್ಯಕ್ತಿ. ಕೊಲೆಯಾದ ಮತೀನ್ ಮತ್ತು ಹೈದರಿ ನಗರದ ನಿವಾಸಿಗಳಾದ ಮೊಯಿನ್, ಬಾಬಾ ಮತ್ತು ಜಿಲಾನ್ ಸ್ನೇಹಿತರು. ಮೃತ ಮತೀನ್ ಗಾರೆ ಕೆಲಸ ಮಾಡಿಕೊಂಡಿದ್ದವರು. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಇವರು ರವಿವಾರ ರಾತ್ರಿ ಗಂಗಾ ಬೈರವೇಶ್ವರ ಬಾರ್ನಲ್ಲಿ ಕುಡಿಯಲು ಹೋಗಿದ್ದರು. ಎಲ್ಲರೂ ಬಾರ್ನಲ್ಲಿ ಚೆನ್ನಾಗಿ ಕುಡಿದಿದ್ದಾರೆ. ಬಳಿಕ, ಬಾರ್ ಎದುರಲ್ಲಿ ಮೊಯಿನ್ ಹಾಗೂ ಮತೀನ್ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಅವರ ಜೊತೆಗಿದ್ದ ಬಾಬಾ ಮತ್ತು ಜಿಲಾನ್ ನೋಡುತ್ತಾ ಕುಳಿತಿದ್ದಾರೆ. ನಂತರ ಇವರು ಕೂಡಾ ಹೋಗಿ ಜಗಳದಲ್ಲಿ ಸೇರಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಮೊಯಿನ್ ತನ್ನ ಕೈನಲ್ಲಿದ್ದ ಒಂದು ಕಂಬಿಯಿಂದ ಮತೀನ್ನನ್ನು ನಾಲ್ಕೈದು ಬಾರಿ ಇರಿದ್ದಾನೆ.
ಇದನ್ನೂ ಓದಿ: ಯಾದಗಿರಿ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ಹೆಣ್ಣಿನ ವಿಚಾರಕ್ಕೆ ಶುರುವಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯ
ಬಳಿಕ ಎಲ್ಲರೂ ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ. ಕೊಲೆ ಮಾಡುವ ಹಾಗೂ ಗಲಾಟೆ ಮಾಡುವ ದೃಷ್ಯಗಳು ಬಾರ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಕ್ಷುಲ್ಲಕ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆ ಆರೋಪಿಗಳ ಬಂಧನದ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿಯಲಿದೆ. ಸದ್ಯ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋದು ಮೃತರ ಕುಟುಂಬಸ್ಥರ ಆಗ್ರಹವಾಗಿದೆ.