ಪ್ರಧಾನಿ ಮೋದಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡುತ್ತೇವೆ: ಫಾಕ್ಸ್​ಕಾನ್ ಭರವಸೆ

Foxconn Promise: ನಿಮ್ಮ (ನರೇಂದ್ರ ಮೋದಿ) ನಾಯಕತ್ವದಲ್ಲಿ ಭಾರತದಲ್ಲಿ ಫಾಕ್ಸ್​ಕಾನ್ ಬಹಳ ವೇಗವಾಗಿ ಬೆಳೆದಿದೆ. ಮುಂದಿನ ವರ್ಷಕ್ಕೆ ನಾವು ಇನ್ನೂ ಹೆಚ್ಚು ಶ್ರಮ ಹಾಕಿ ನಿಮಗೆ ದೊಡ್ಡ ಹುಟ್ಟುಹಬ್ಬದ ಉಡುಗೊರೆ ಕೊಡುತ್ತೇವೆ. ಭಾರತದಲ್ಲಿ ಉದ್ಯೋಗ, ಹೂಡಿಕೆ ಮತ್ತು ವ್ಯವಹಾರ ಗಾತ್ರವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಫಾಕ್ಸ್​ಕಾನ್ ಸಂಸ್ಥೆಯ ಭಾರತ ಪ್ರತಿನಿಧಿ ವಿ. ಲೀ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡುತ್ತೇವೆ: ಫಾಕ್ಸ್​ಕಾನ್ ಭರವಸೆ
ಸಾಂದರ್ಭಿಕ ಚಿತ್ರ
Follow us
|

Updated on: Sep 18, 2023 | 1:37 PM

ನವದೆಹಲಿ, ಸೆಪ್ಟೆಂಬರ್ 18: ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಫಾಕ್ಸ್​ಕಾನ್ (Foxconn) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭ ಕೋರಿದ ಫಾಕ್ಸ್​ಕಾನ್​ನ ಭಾರತ ಪ್ರತಿನಿಧಿ ವಿ ಲೀ ಅವರು, ಮುಂದಿನ ಒಂದು ವರ್ಷದಲ್ಲಿ ಭಾರತದಲ್ಲಿನ ತಮ್ಮ ಹೂಡಿಕೆಯನ್ನು ಮತ್ತು ಉದ್ಯೋಗ ಪ್ರಮಾಣವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡಲು ತಮ್ಮ ಸಂಸ್ಥೆ ಶ್ರಮಿಸುವುದಾಗಿ ಲೀ ಹೇಳಿದ್ದಾರೆ.

‘ನಿಮ್ಮ (ನರೇಂದ್ರ ಮೋದಿ) ನಾಯಕತ್ವದಲ್ಲಿ ಭಾರತದಲ್ಲಿ ಫಾಕ್ಸ್​ಕಾನ್ ಬಹಳ ಸುಲಲಿತವಾಗಿ ಮತ್ತು ವೇಗವಾಗಿ ಬೆಳೆದಿದೆ. ಮುಂದಿನ ವರ್ಷಕ್ಕೆ ನಾವು ಇನ್ನೂ ಹೆಚ್ಚು ಶ್ರಮ ಹಾಕಿ ನಿಮಗೆ ದೊಡ್ಡ ಹುಟ್ಟುಹಬ್ಬದ ಉಡುಗೊರೆ ಕೊಡುತ್ತೇವೆ. ಭಾರತದಲ್ಲಿ ಉದ್ಯೋಗ, ಹೂಡಿಕೆ ಮತ್ತು ವ್ಯವಹಾರ ಗಾತ್ರವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದೇವೆ,’ ಎಂದು ವಿ. ಲೀ ತಮ್ಮ ಲಿಂಕ್ಡ್​ಇನ್ ಖಾತೆಯ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾವಿಲ್ಲದೇ ಕಾರಿಡಾರ್ ಹೇಗೆ ಸಾಧ್ಯ? ಭಾರತದ ಹೊಸ ಆರ್ಥಿಕ ಕಾರಿಡಾರ್​ಗೆ ಟರ್ಕಿ ಅಸಮಾಧಾನ

ಇದಕ್ಕೆ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲೇ ಸ್ಪಂದಿಸಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಫಾಕ್ಸ್​ಕಾನ್​ನ ಗುರಿ ಈಡೇರಿಸಲು ಸರ್ಕಾರ ಪೂರ್ಣವಾಗಿ ಬೆಂಬಲ ಒದಗಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ತೈವಾನ್ ದೇಶದ ಫಾಕ್ಸ್​ಕಾನ್ ಸಂಸ್ಥೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಗುತ್ತಿಗೆ ಕಂಪನಿ ಎನಿಸಿದೆ. ಐಫೋನ್ ಸೇರಿದಂತೆ ಆ್ಯಪಲ್​ನ ವಿವಿಧ ಉತ್ಪನ್ನಗಳು, ಹಾಗೂ ಇತರ ಕಂಪನಿಗಳ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅದರು ಅಸೆಂಬ್ಲಿಂಗ್ ಮಾಡಿಕೊಡುತ್ತದೆ. ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನೂ ಅದು ತಯಾರಿಸುತ್ತದೆ.

ಇದನ್ನೂ ಓದಿ: ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು: ಎಸ್ ಜೈಶಂಕರ್ ಕರೆ

ಭಾರತದಲ್ಲಿ ಫಾಕ್ಸ್​ಕಾನ್ ಸಾಕಷ್ಟು ಘಟಕಗಳನ್ನು ಹೊಂದಿದೆ. ಚೆನ್ನೈನಲ್ಲಿ ಅದರ ಒಂದು ಘಟಕ ಚಾಲನೆಯಲ್ಲಿದೆ. ಐಫೋನ್ ಉತ್ಪಾದನೆ ನಡೆಯುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್​ನಲ್ಲೂ ಅದು ಮ್ಯಾನುಫ್ಯಾಕ್ಚರಿಂಗ್ ಯೂನಿಟ್​​ಗಳನ್ನು ಸ್ಥಾಪಿಸುತ್ತಿದೆ.

ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಹೊರಟಿರುವ ಫಾಕ್ಸ್​ಕಾನ್, ಅದಕ್ಕಾಗಿ ಗ್ಲೋಬಲ್ ಪಾರ್ಟ್ನರ್ ಹುಡುಕಾಟದಲ್ಲಿದೆ. ಹಾಗೆಯೇ, ತನಗೆ ಬಿಡಿಭಾಗಗಳನ್ನು ಪೂರೈಸಿಕೊಡುವ ಕಂಪನಿಗಳನ್ನೂ ಭಾರತಕ್ಕೆ ಕರೆತರಲು ಫಾಕ್ಸ್​ಕಾನ್ ಹೊರಟಿದೆ. ಇದೆಲ್ಲವೂ ಭಾರತ ಹಾಗೂ ಫಾಕ್ಸ್ ಕಾನ್ ಎರಡಕ್ಕೂ ವಿನ್ ವಿನ್ ಸ್ಥಿತಿ ಎನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ