ಎಲ್ಐಸಿ ಏಜೆಂಟ್ಸ್ಗೆ ಸರ್ಕಾರದಿಂದ ಸಖತ್ ಕೊಡುಗೆ; ಗ್ರಾಜುಟಿ ಮಿತಿ, ಕುಟುಂಬ ಪಿಂಚಣಿ ಇತ್ಯಾದಿಗಳ ಹೆಚ್ಚಳ
Happy News For LIC Employees and Agents: ಎಲ್ಐಸಿ ಏಜೆಂಟ್ಗಳಿಗೆ ಸಿಗುವ ಗ್ರಾಚುಟಿಯ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಕೆ; ಏಜೆಂಟ್ ಆಗಿ ಮರು ನೇಮಕವಾದವರಿಗೆ ಅವರ ಹಿಂದಿನ ಏಜೆನ್ಸಿ ವೇಳೆ ಮಾಡಿಸಿದ್ದ ಪಾಲಿಸಿ ವ್ಯವಹಾರದಲ್ಲಿ ರಿನಿವಲ್ ಕಮಿಷನ್ ಅನ್ನು ಪಡೆಯುವ ಅವಕಾಶ; ಟರ್ಮ್ ಇನ್ಷೂರೆನ್ಸ್ ಮೊತ್ತವನ್ನು 1.50 ಲಕ್ಷ ರೂವರೆಗೂ ಏರಿಕೆ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಎಲ್ಐಸಿ ಉದ್ಯೋಗಿಗಳ ಕುಟುಂಬ ಪಿಂಚಣಿಯನ್ನೂ ಹೆಚ್ಚಿಸಲಾಗಿದೆ.
ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಜೀವ ವಿಮಾ ನಿಗಮದ (LIC) ಏಜೆಂಟ್ಸ್ ಮತ್ತು ಉದ್ಯೋಗಿಗಳಿಗೆ ಸಂತಸ ತರುವ ಸುದ್ದಿ ಇದು. ಎಲ್ಐಸಿಯ ಉದ್ಯೋಗಿಗಳು ಮತ್ತು ಏಜೆಂಟ್ಗಳಿಗೆ ಸರ್ಕಾರ ವಿವಿಧ ಕೊಡುಗೆಗಳನ್ನು ಪ್ರಕಟಿಸಿದೆ. ಗ್ರಾಚ್ಯುಟಿ ಮಿತಿ, ಮರುನೇಮಿತ ಏಜೆಂಟ್ಗಳ (Reappointed Agents) ರಿನಿವಲ್ ಕಮಿಷನ್, ಅವಧಿ ವಿಮಾ ವ್ಯಾಪ್ತಿ, ಕುಟುಂಬ ಪಿಂಚಣಿ ಹೆಚ್ಚಳ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಐಸಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಏಜೆಂಟ್ಗಳಿದ್ದಾರೆ. ಇವರೆಲ್ಲರ ಉತ್ಸಾಹ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಹಣಕಾಸು ಸಚಿವಾಲಯದಿಂದ ಘೋಷಣೆ ಆಗಿರುವ ಕ್ರಮಗಳು
- ಎಲ್ಐಸಿ ಏಜೆಂಟ್ಗಳಿಗೆ ಸಿಗುವ ಗ್ರಾಚುಟಿಯ ಮಿತಿ 3 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ. ಇದು 13 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಏಜೆಂಟ್ಗಳಿಗೆ ಲಾಭವಾಗಲಿದೆ.
- ಮರುನೇಮಕವಾದ ಏಜೆಂಟ್ಗಳಿಗೆ ಅವರ ಹಳೆಯ ಪಾಲಿಸಿ ವ್ಯವಹಾರಗಳ ರಿನಿವಲ್ ಕಮಿಷನ್ ನೀಡಲಾಗುವುದು. ಹಿಂದಿನ ಏಜೆನ್ಸಿಯಲ್ಲಿ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಗ್ರಾಹಕರಿಂದ ಮಾಡಿಸಿದ್ದ ಪಾಲಿಸಿಗಳ ರಿನಿವಲ್ಗೆ ಸಂಬಂಧಿಸಿದ್ದು ಇದು.
- ಏಜೆಂಟ್ಗಳಿಗೆ ಟರ್ಮ್ ಇನ್ಷೂರೆನ್ಸ್ ಕವರ್ 3,000 ರೂನಿಂದ 10,000 ರೂವರೆಗಿನ ಶ್ರೇಣಿಯಲ್ಲಿ ಇದೆ. ಇದನ್ನು 25,000ದಿಂದ 1,50,000 ರೂಗೆ ಏರಿಸಲಾಗಿದೆ.
- ಎಲ್ಐಸಿ ಉದ್ಯೋಗಿಗಳ ಕುಟುಂಬಗಳ ಯೋಗಕ್ಷೇಮಕ್ಕಾಗಿ ಶೇ. 30ರ ಸಮಾನ ದರದಲ್ಲಿ ಫ್ಯಾಮಿಲಿ ಪೆನ್ಷನ್ ನೀಡಲಾಗುವುದು.
ಇದನ್ನೂ ಓದಿ: ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್ಬಿಐ ಹೊಸ ಪ್ರಯೋಗ
ಸರ್ಕಾರಿ ಸ್ವಾಮ್ಯದ ಎಲ್ಐಸಿ ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎಂಬ ದಾಖಲೆಯನ್ನು ಈಗಲೂ ಉಳಿಸಿಕೊಂಡು ಬರುತ್ತಿದೆ. ಹಲವು ಖಾಸಗಿ ವಿಮಾ ಸಂಸ್ಥೆಗಳ ಪೈಪೋಟಿ ನಡುವೆಯೂ ಎಲ್ಐಸಿ ಪ್ರಾಬಲ್ಯ ಹಾಗೇ ಉಳಿದಿದೆ. ಅದರ ಆದಾಯ ಹೆಚ್ಚಳದ ವೇಗವೂ ವೃದ್ಧಿಸುತ್ತಾ ಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ