ನೆಲಮಂಗಲ ಬಳಿ ಭಾರತದ ಅತಿದೊಡ್ಡ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆಗೆ ಒಪ್ಪಂದ; ಏನಿದರ ವಿಶೇಷತೆ?

Multi-modal Logistics Park In Nelamangala: ಬೆಂಗಳೂರು, ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗುವಂತೆ ನೆಲಮಂಗಲ ಬಳಿಕ ಬೃಹತ್ ಆದ ಮಲ್ಟಿ ಮೋಡಲ್ ನ್ಯಾಷನಲ್ ಪಾರ್ಕ್ ಅನ್ನು ನಿರ್ಮಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪಿಎಂ ಗತಿ ಶಕ್ತಿ ನ್ಯಾಷನಲ್ ಮಿಷನ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಮೊದಲ ಹಾಗೂ ಭಾರತದ ಅತಿದೊಡ್ಡ ಎಂಎಂಎಲ್​ಪಿ ಯೋಜನೆ ಆಗಲಿರಲಿದೆ.

ನೆಲಮಂಗಲ ಬಳಿ ಭಾರತದ ಅತಿದೊಡ್ಡ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆಗೆ ಒಪ್ಪಂದ; ಏನಿದರ ವಿಶೇಷತೆ?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 18, 2023 | 6:50 PM

ಬೆಂಗಳೂರು, ಸೆಪ್ಟೆಂಬರ್ 18: ಪಿಎಂ ಗತಿಶಕ್ತಿ ಯೋಜನೆ ಅಡಿಯಲ್ಲಿ ನೆಲಮಂಗಲದ ಬಳಿ ಬೃಹತ್ ಆದ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ (Multi Modal Logistics Park) ಸ್ಥಾಪನೆ ಆಗಲಿದೆ. 1,770 ಕೋಟಿ ವೆಚ್ಚದಲ್ಲಿ ನೆಲಮಂಗಲ ತಾಲೂಕಿನ ಮುದ್ದೇಲಿಂಗನಹಳ್ಳಿಯಲ್ಲಿನ 400 ಎಕರೆ ಜಾಗದಲ್ಲಿ ಈ ಲಾಜಿಸ್ಟಿಕ್ಸ್ ಪಾರ್ಕ್ ಸಿದ್ಧಗೊಳ್ಳಲಿದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಈ ಯೋಜನೆಗೆ ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿ (NHLML) ಸಂಸ್ಥೆ ಸಹಿ ಹಾಕಿದೆ. ಪಾಥ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಪ್ರೈ ಲಿ ಮತ್ತು ಸರ್ಕಾರಿ ಸ್ವಾಮ್ಯದ ಬೆಂಗಳೂರು ಎಂಎಂಎಲ್​​ಪಿ ಮಧ್ಯೆ ಒಪ್ಪಂದಕ್ಕೆ ಸಹಿ ಆಗಿದೆ.

ಆಯಕಟ್ಟಿನ ಜಾಗದಲ್ಲಿ ಲಾಜಿಸ್ಟಿಕ್ಸ್ ಪಾರ್ಕ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಬಹಳ ಆಯಟ್ಟಿನ ಜಾಗದಲ್ಲೇ ಯೋಜಿಸಲಾಗಿದೆ. ಪೂರ್ವ ಭಾಗದಲ್ಲಿ ಇದರ ಸಮೀಪವೇ ಕೆಐಎಡಿಬಿ ಇಂಡಸ್ಟ್ರಿಯನ್ ಪ್ರದೇಶ ನಿರ್ಮಾಣವಾಗುತ್ತಿದೆ. ಉತ್ತರ ದಿಕ್ಕಿನಲ್ಲಿ ಸೆಟಿಲೈಟ್ ಟೌನ್ ರಿಂಗ್ ರೋಡ್ ಇದೆ. ದಕ್ಷಿಣ ಭಾಗದಲ್ಲಿ ಬೆಂಗಳೂರು ಮುಂಬೈ ರೈಲ್ವೆ ಮಾರ್ಗ ಇದೆ.

ಡಾಬಸ್​ಪೇಟೆಗೆ ಸಮೀಪ ಇರುವ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಬೆಂಗಳೂರು ವಿಮಾನ ನಿಲ್ದಾಣದಿಂದ 58 ಕಿಮೀ ಮಾತ್ರವೇ ದೂರದಲ್ಲಿದೆ. ಬೆಂಗಳೂರು, ತುಮಕೂರಿನಲ್ಲಿರುವ ಉದ್ಯಮಗಳಿಗೆ ಈ ಪಾರ್ಕ್ ಬಲ ತುಂಬಲಿದೆ.

ಇದನ್ನೂ ಓದಿ: ಎಲ್​ಐಸಿ ಏಜೆಂಟ್ಸ್​ಗೆ ಸರ್ಕಾರದಿಂದ ಸಖತ್ ಕೊಡುಗೆ; ಗ್ರಾಜುಟಿ ಮಿತಿ, ಕುಟುಂಬ ಪಿಂಚಣಿ ಇತ್ಯಾದಿಗಳ ಹೆಚ್ಚಳ

ಏನಿದು ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್?

ಒಂದೇ ಸ್ಥಳದಲ್ಲಿ ವಿವಿಧ ಸರಕು ಸಾಗಣೆ ಸೌಲಭ್ಯಗಳನ್ನು ಒದಗಿಸುವ ಒಂದು ವ್ಯವಸ್ಥೆಗೆ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಎನ್ನುವುದು. ಈ ಪಾರ್ಕ್ ಸ್ಥಳ ಕನಿಷ್ಠ 100 ಎಕರೆ ಇರಬೇಕು. ಟ್ರಕ್ ಇತ್ಯಾದಿ ವಿವಿಧ ಮಾದರಿಯ ಸಾರಿಗೆ ಸಾಗಣೆ ವಾಹನಗಳು ಸುಸಜ್ಜಿತವಾಗಿ ಈ ಪಾರ್ಕ್​ನಲ್ಲಿರಬೇಕು. ವಿವಿಧ ಸಾರಿಗೆಗಳಿಗೆ ಸರಕುಗಳನ್ನು ಬದಲಿಸಲು ವ್ಯವಸ್ಥೆ, ಶೀತಗಾರ, ಪ್ಯಾಕೇಜಿಂಗ್, ಅಸೆಂಬ್ಲಿಂಗ್ ಇತ್ಯಾದಿ ಸೌಲಭ್ಯಗಳಿರಬೇಕು.

ಭಾರತದಲ್ಲಿ ಸರಕು ಸಾಗಣೆ ವೆಚ್ಚ ಬಹಳ ಅಧಿಕ ಇದೆ. ಒಂದು ಸರಕಿನ ಮೂಲ ಬೆಲೆಯ ಮೇಲೆ ಭಾರತದಲ್ಲಿ ಸರಕು ಸಾಗಣೆಗೆ ಶೇ. 13ರಷ್ಟು ಹೆಚ್ಚುವರಿ ಆಗುತ್ತದೆ. ಅಂದರೆ, 100 ರೂ ಬೆಲೆ ಇರುವ ಒಂದು ವಸ್ತು, ಬೇರೆಡೆ ಸಾಗಣೆ ಆದಾಗ ಸಾಗಣೆ ವೆಚ್ಚ ಸೇರಿ 113 ರೂ ಆಗುತ್ತದೆ. ಬೇರೆ ಪ್ರಮುಖ ದೇಶಗಳಲ್ಲಿ ಈ ವೆಚ್ಚ ಶೇ. 8 ಮಾತ್ರವೇ ಇರುವುದು. ಈ ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಮಲ್ಟಿ ಮೋಡಲ್ ನ್ಯಾಷನಲ್ ಪಾರ್ಕ್​ಗಳು ಉಪಯೋಗಕ್ಕೆ ಬರುತ್ತವೆ.

ಇದನ್ನೂ ಓದಿ: ನರೇಂದ್ರ ಮೋದಿಯನ್ನು ಚೀನಾದ ಲೆಜೆಂಡ್ ಡೆಂಗ್ ಶಿಯೋಪಿಂಗ್​ಗೆ ಹೋಲಿಸಿದ ಅಮೆರಿಕದ ಇನ್ವೆಸ್ಟರ್ ರೇ ಡೇಲಿಯೋ

ನೆಲಮಂಗಲ ಬಳಿ ನಿರ್ಮಾಣವಾಗುವುದು ಅತಿದೊಡ್ಡ ಎಂಎಂಎಲ್​ಪಿ

ಪಿಎಂ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ ಯೋಜನೆ ಅಡಿಯಲ್ಲಿ ನೆಲಮಂಗಲ ಬಳಿ ಮಾಡಲುದ್ದೇಶಿಸಿರುವ ಮಲ್ಟಿಮೋಡಲ್ ನ್ಯಾಷನಲ್ ಪಾರ್ಕ್ ಭಾರತದಲ್ಲೇ ಅತಿದೊಡ್ಡದು. ಈ ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ಮೊದಲ ಎಂಎಂಎಲ್​ಪಿ ಕೂಡ ಹೌದು.

ಅಂದಾಜು 1,770 ಕೋಟಿ ರೂ ವೆಚ್ಚದ ಈ ಯೋಜನೆಯನ್ನು 3 ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಮೊದಲ ಹಂತವು ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಮುಂಬರುವ ವರ್ಷಗಳಲ್ಲಿ ಈ ಪಾರ್ಕ್ 3 ಕೋಟಿ ಮೆಟ್ರಿಕ್ ಟನ್​ಗಳಷ್ಟು (ಎಂಎಂಟಿ) ಸರಕು ಸಾಗಣೆ ಸಾಮರ್ಥ್ಯ ಹೊಂದಿರುವ ಗುರಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Mon, 18 September 23

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್