ನರೇಂದ್ರ ಮೋದಿಯನ್ನು ಚೀನಾದ ಲೆಜೆಂಡ್ ಡೆಂಗ್ ಶಿಯೋಪಿಂಗ್​ಗೆ ಹೋಲಿಸಿದ ಅಮೆರಿಕದ ಇನ್ವೆಸ್ಟರ್ ರೇ ಡೇಲಿಯೋ

Ray Dalio compares Modi to Deng xiaoping: ಮುಂದಿನ 10 ವರ್ಷದಲ್ಲಿ ಭಾರತ ಯಾವ ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ನಮ್ಮ ಬಳಿ ಅಂದಾಜು ಇದೆ. 22 ಅಗ್ರಗಣ್ಯ ದೇಶಗಳ ಬೆಳವಣಿಗೆ ಹೇಗೆ ಆಗಬಹುದು ಎಂಬುದನ್ನು ಗ್ರಹಿಸಿದ್ದೇವೆ. ಅತಿಹೆಚ್ಚು ಬೆಳವಣಿಗೆ ಕಾಣುವ ಸಾಮರ್ಥ್ಯ ಭಾರತಕ್ಕೆ ಹೆಚ್ಚಿದೆ ಎಂದು ಹೇಳಿರುವ ಅಮೆರಿಕದ ಹೂಡಿಕೆದಾರ ರೇ ಡೇಲಿಯೋ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ಎಂಬತ್ತರ ದಶಕದಲ್ಲಿ ಮುಖ್ಯಸ್ಥರಾಗಿದ್ದ ಡೆಂಗ್ ಶಿಯೋಪಿಂಗ್​ಗೆ ಹೋಲಿಕೆ ಮಾಡಿದ್ದಾರೆ.

Follow us
|

Updated on: Sep 18, 2023 | 3:48 PM

ನವದೆಹಲಿ, ಸೆಪ್ಟೆಂಬರ್ 18: ಅಮೆರಿಕದ ಖ್ಯಾತ ಹೂಡಿಕೆದಾರ ರೇ ಡೇಲಿಯೋ (Ray Dalio) ಅವರು ಭಾರತದ ಆರ್ಥಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವದ ಪ್ರಮುಖ ದೇಶಗಳ ಪೈಕಿ ಭಾರತ ಅತಿವೇಗದ ಪ್ರಗತಿ ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ ಅವರು, ಎಂಬತ್ತರ ದಶಕದಲ್ಲಿ ಇದ್ದ ಚೀನಾಗೆ ಭಾರತವನ್ನು ಹೋಲಿಕೆ ಮಾಡಿದ್ದಾರೆ.

‘ಮುಂದಿನ 10 ವರ್ಷದಲ್ಲಿ ಭಾರತ ಯಾವ ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ನಮ್ಮ ಬಳಿ ಅಂದಾಜು ಇದೆ. 22 ಅಗ್ರಗಣ್ಯ ದೇಶಗಳ ಬೆಳವಣಿಗೆ ಹೇಗೆ ಆಗಬಹುದು ಎಂಬುದನ್ನು ಗ್ರಹಿಸಿದ್ದೇವೆ. ಅತಿಹೆಚ್ಚು ಬೆಳವಣಿಗೆ ಕಾಣುವ ಸಾಮರ್ಥ್ಯ ಭಾರತಕ್ಕೆ ಹೆಚ್ಚಿದೆ…’ ಎಂದು ರೇ ಡೇಲಿಯೋ ಹೇಳಿದ್ದಾರೆ.

ಚೀನಾದ ಡೆಂಗ್ ಶಿಯೋಪಿಂಗ್​ಗೆ ಮೋದಿಯನ್ನು ಹೋಲಿಸಿದ ರೇ

ರೇ ಡೇಲಿಯೋ ಅವರು ಅಮೆರಿಕದ ಹೂಡಿಕೆ ನಿರ್ವಹಣೆ ಸಂಸ್ಥೆ ಬ್ರಿಡ್ಜ್​ವಾಟರ್ ಅಸೋಸಿಯೇಟ್ಸ್​ನ ಸಂಸ್ಥಾಪಕರೂ ಹೌದು. ಅಮೆರಿಕದ ಲಾಸ್ ಏಂಜಲಿಸ್​ನ ಯುಸಿಎಲ್​ಎ ಕ್ಯಾಂಪಸ್​ನಲ್ಲಿ ಆಲ್ ಇನ್ ಸಮಿಟ್ 2023 ಕಾರ್ಯಕ್ರಮದಲ್ಲಿ ಪೋಡ್​ಕ್ಯಾಸ್ಟ್ ಮೂಲಕ ಮಾತನಾಡುತ್ತಿದ್ದ ರೇ ಡೇಲಿಯೋ ಅವರು ನರೇಂದ್ರ ಮೋದಿಯನ್ನು ಆಧುನಿಕ ಚೀನಾದ ನಿರ್ಮಾತೃ ಡೆಂಗ್ ಶಿಯೋಪಿಂಗ್ (Deng Xiaoping) ಅವರಿಗೆ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡುತ್ತೇವೆ: ಫಾಕ್ಸ್​ಕಾನ್ ಭರವಸೆ

‘ನಾನು ಆರಂಭಿಸಿದಾಗ (ಹೂಡಿಕೆ) ಚೀನಾ ಹೇಗಿತ್ತೋ ಆ ದಾರಿಯಲ್ಲಿ ಭಾರತ ಇದೆ… ತಲಾದಾಯ, ಛಾಯೆ (complexion) ಇವೆಲ್ಲವನ್ನೂ ಗಮನಿಸಿ ನೋಡಿ, ಮೋದಿ ನಿಗೆ ಡೆಂಗ್​ರಂತೆ ಕಾಣುತ್ತಾರೆ. ಭಾರೀ ಮಟ್ಟದಲ್ಲಿ ಸುಧಾರಣೆ, ಕ್ರಿಯಾಶೀಲತೆ (creativity) ಈ ಎಲ್ಲಾ ಅಂಶಗಳು ಕಾಣುತ್ತವೆ. ಜೊತೆಗೆ ಸಮಸ್ಯೆಗಳು, ಅಪಾಯಗಳೂ ಇವೆ. ಆದರೆ, ಭಾರತ ಬಹಳ ಬಹಳ ಮುಖ್ಯ,’ ಎಂದು ರೇ ಡೇಲಿಯೋ ವಿವರಣೆ ನೀಡಿದ್ದಾರೆ.

ಮಧ್ಯಪಥದಲ್ಲಿರುವ ದೇಶಗಳಿಗೆ ಹೆಚ್ಚು ಪ್ರಗತಿ ಸಾಮರ್ಥ್ಯ

‘ನಾನೂ ಇತಿಹಾಸ ಬಲ್ಲೆ. ತಟಸ್ತವಾಗಿರುವ ದೇಶಗಳು ಚೆನ್ನಾಗಿ ಸಾಧಿಸಿವೆ. ಯುದ್ಧಗಳಲ್ಲಿ ಗೆದ್ದಿರುವ ದೇಶಗಳಿಗಿಂತ ಇವು ಉತ್ತಮ ಎನಿಸಿವೆ. ಈಗ ಅಮೆರಿಕ ಮತ್ತು ಚೀನಾ ಹಾಗೂ ರಷ್ಯಾ ಮತ್ತಿತರ ಮೈತ್ರಿ ದೇಶಗಳ ನಡುವೆ ಸಂಘರ್ಷ ಇದೆ. ಇವ್ಯಾವುಗಳ ಜೊತೆ ಹೋಗದೇ ಮಧ್ಯ ಮಾರ್ಗದಲ್ಲಿರುವ ಭಾರತದಂತಹ ದೇಶಗಳಿಗೆ ಅನುಕೂಲವಾಗಲಿದೆ,’ ಎಂದು ಅಮೆರಿಕದ ಈ ಖ್ಯಾತ ಹೂಡಿಕೆದಾರ ಹೇಳಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ

ಭಾರತದಲ್ಲಿ ಧಾರ್ಮಿಕ ವಿಚಾರ ಮತ್ತು ಅಸಮಾಧಾನಗಳು ಇರುವ ಬಗ್ಗೆ ಮಾತನಾಡಿದ ಅವರು, ‘ಭಾರತದಲ್ಲಿ 24 ಕೋಟಿ ಮುಸ್ಲಿಮರಿದ್ದು, ಆಂತರಿಕ ಧಾರ್ಮಿಕ ಸಮಸ್ಯೆ ಇದೆ. ಆದರೆ ಇವ್ಯಾವುವೂ ಕೂಡ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ,’ ಎಂದು ರೇ ಡೇಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ರೇ ಡೇಲಿಯೋ ಅವರನ್ನು ಭೇಟಿ ಮಾಡಿದ್ದರು. ತಮ್ಮ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ವಿವರಿಸಿ, ಭಾರತದಲ್ಲಿ ಇನ್ನಷ್ಟು ಹೂಡಿಕೆಗಳನ್ನು ಮಾಡುವಂತೆ ಮನವಿ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ