ಹಣಕಾಸು ಕಷ್ಟ ಬಂದಾಗ ಲವ್ವಿ ಡವ್ವಿ ಜಾಸ್ತಿಯಾಗುತ್ತಾ? ಅಚ್ಚರಿ ಮೂಡಿಸುತ್ತೆ ಡೇಟಿಂಗ್ ಕಂಪನಿಗಳ ವ್ಯವಹಾರ ಅಂಕಿ ಅಂಶ

Economic Recession and Dating: ಮ್ಯಾಚ್ ಡಾಟ್ ಕಾಮ್ ಎಂಬ ಡೇಟಿಂಗ್ ವೆಬ್​ಸೈಟ್ ಬಗ್ಗೆ ಕೇಳಿರಬಹುದು. ಡೇಟಿಂಗ್ ಸಂಪರ್ಕ ಕಲ್ಪಿಸುವ ಪ್ಲಾಟ್​ಫಾರ್ಮ್ ಆದ ಇದರ ವ್ಯವಹಾರವು ಆರ್ಥಿಕ ಹಿಂಜರಿತದ ವೇಳೆ ಹೆಚ್ಚಾಗುತ್ತದೆ. ಅಂದರೆ, ಜನರು ಹಣಕಾಸು ಕಷ್ಟಕ್ಕೆ ಸಿಲುಕಿದಾಗ ಆ ದುಃಖ ಮರೆಯಲು ಡೇಟಿಂಗ್ ಕಡೆ ಆಸಕ್ತಿ ತೋರುತ್ತಾರಂತೆ. ಈ ಡೇಟಿಂಗ್ ವ್ಯವಹಾರವು ಪುರುಷರ ಒಳ ಉಡುಪುಗಳ ವ್ಯವಹಾರಕ್ಕೆ ತದ್ವಿರುದ್ಧ. ಈ ಬಗ್ಗೆ ಕುತೂಹಲ ಮೂಡಿಸುವ ವರದಿ ಇಲ್ಲಿದೆ.

ಹಣಕಾಸು ಕಷ್ಟ ಬಂದಾಗ ಲವ್ವಿ ಡವ್ವಿ ಜಾಸ್ತಿಯಾಗುತ್ತಾ? ಅಚ್ಚರಿ ಮೂಡಿಸುತ್ತೆ ಡೇಟಿಂಗ್ ಕಂಪನಿಗಳ ವ್ಯವಹಾರ ಅಂಕಿ ಅಂಶ
ಡೇಟಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2023 | 5:39 PM

ನವದೆಹಲಿ, ಸೆಪ್ಟೆಂಬರ್ 18: ಆರ್ಥಿಕತೆ ಕುಸಿತ ಕಂಡಾಗ ಮಾರುಕಟ್ಟೆಗಳಲ್ಲಿ ಪುರುಷರ ಒಳ ಉಡುಪುಗಳ ಮಾರಾಟವೂ ಕಡಿಮೆ ಆಗುತ್ತದೆ. ಆರ್ಥಿಕತೆ ಗರಿಗೆದರಿದಾಗ ಒಳ ಉಡುಪುಗಳ ಮಾರಾಟವೂ ಹೆಚ್ಚುತ್ತದೆ. ಒಂದು ದೇಶದ ಆರ್ಥಿಕತೆಯನ್ನು ಪುರುಷರ ಒಳ ಉಡುಪುಗಳ ಮಾರಾಟದ ಮೇಲೆ ಅಳೆಯಬಹುದು ಎನ್ನುತ್ತಾರೆ ಕೆಲ ಆರ್ಥಿಕ ತಜ್ಞರು. ಈ ಬಗ್ಗೆ ಮೊನ್ನೆ ವರದಿ ಪ್ರಕಟವಾಗಿತ್ತು. ಆ ಸುದ್ದಿ ಮೂಡಿಸಿರುವಷ್ಟೇ ಕುತೂಹಲ ಕೆರಳಿಸುವ ಮತ್ತೊಂದು ಅಂಕಿ ಅಂಶ ಇದೆ. ಅದು ಡೇಟಿಂಗ್​ಗೆ ಸಂಬಂಧಿಸಿದ್ದು. ಆರ್ಥಿಕತೆಯ ಏರಿಳಿತದೊಂದಿಗೆ (Economic growth) ಪುರುಷರ ಒಳ ಉಡುಪುಗಳ ಮಾರಾಟವೂ ಅನುಗುಣವಾಗಿ ಏರಿಳಿತ ಕಾಣುತ್ತದೆ. ಡೇಟಿಂಗ್​ನದ್ದು ಇದಕ್ಕೆ ತದ್ವಿರುದ್ಧ. ಆರ್ಥಿಕತೆ ಕುಸಿತ ಕಂಡಾಗ ಡೇಟಿಂಗ್ ಕಂಪನಿಗಳು ಒಳ್ಳೆಯ ಬಿಸಿನೆಸ್ ಕಾಣುತ್ತವಂತೆ. ಅದಕ್ಕೆ ಮ್ಯಾಚ್ ಡಾಟ್ ಕಾಮ್ ಎಂಬ ಅಮೆರಿಕನ್ ಡೇಟಿಂಗ್ ವೆಬ್​ಸೈಟ್ ನಿದರ್ಶನ. ಇದರ ಅಂಕಿ ಅಂಶ ಸಖತ್ ಕುತೂಹಲ ಕೆರಳಿಸುತ್ತದೆ.

ಕೆಲಸ ಇಲ್ಲದವರಿಗೆ ಕಾಮದ ಚಿಂತೆಯಾ?

ಆರ್ಥಿಕತೆ ಕುಸಿದಂತೆ ಡೇಟಿಂಗ್ ವೆಬ್‌ಸೈಟ್‌ಗಳ ಆದಾಯವೂ ಹೆಚ್ಚಾಗುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ. ಆರ್ಥಿಕ ಹಿಂಜರಿತದಿಂದಾಗಿ ಜನರು ತಮ್ಮ ಕೆಲಸವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ ಜನರು ಮನೆಯಲ್ಲಿಯೇ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಕಾಲಕ್ಷೇಪಕ್ಕೆ ಡೇಟಿಂಗ್ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಇದರಿಂದಾಗಿ ಡೇಟಿಂಗ್ ವೆಬ್‌ಸೈಟ್‌ಗಳಿಗೆ ಒಳ್ಳೆಯ ಬಿಸಿನೆಸ್ ಆಗುತ್ತದೆ.

2009 ರಲ್ಲಿ ಅಮೆರಿಕಾದಲ್ಲಿ ಮಾರುಕಟ್ಟೆ ಕುಸಿತದ ಸಮಯದಲ್ಲಿ, Match.com ನ ನಾಲ್ಕನೇ ತ್ರೈಮಾಸಿಕ ಲಾಭವು ಹಿಂದಿನ ಏಳು ವರ್ಷಗಳಲ್ಲಿ ಅತ್ಯಧಿಕವಾಗಿತ್ತು. ಈ ಅವಧಿಯಲ್ಲಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿ ಜನರ ಉದ್ಯೋಗ ಕಿತ್ತುಕೊಳ್ಳಲಾರಂಭಿಸಿತು. ತಮ್ಮನ್ನು ತಾವು ಬ್ಯುಸಿಯಾಗಿರಿಸಿಕೊಳ್ಳಲು, ಜನರು ಡೇಟಿಂಗ್ ವೆಬ್‌ಸೈಟ್‌ಗಳತ್ತ ಮುಖಮಾಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ಒಳಉಡುಪು ಖರೀದಿಸುವ ಜನಸಂಖ್ಯೆಯಲ್ಲಿ ಭಾರೀ ಇಳಿಕೆ!

ಡೇಟಿಂಗ್, ಇನ್ನರ್ ವೇರ್ ಮತ್ತು ಆರ್ಥಿಕ ಹಿಂಜರಿತ

ಕಂಪನಿಗಳು ಕಷ್ಟದ ಸಮಯದಲ್ಲಿದ್ದಾಗ ಉದ್ಯೋಗಿಗಳಲ್ಲಿ ಡೇಟಿಂಗ್ ಹೆಚ್ಚಾಗುತ್ತದೆ. ಸಾಮಾನ್ಯ ಜನರು ತಮ್ಮ ದುಃಖಗಳನ್ನು ಮರೆಯಲು ಇದನ್ನು ಬಳಸುತ್ತಾರಂತೆ. ಇದಕ್ಕೂ ಮೊದಲು, 2008 ರ ನಾಲ್ಕನೇ ತ್ರೈಮಾಸಿಕದಲ್ಲಿ, ಡೇಟಿಂಗ್ ಸೈಟ್‌ನ ವ್ಯವಹಾರ ಏಳು ವರ್ಷಗಳಲ್ಲಿ ಅತ್ಯಧಿಕವಾಯಿತು. 2001 ರಲ್ಲಿ ಸೆಪ್ಟೆಂಬರ್ 11 ರ ದಾಳಿಯ ನಂತರವೂ, Match.com ನಲ್ಲಿ ಟ್ರಾಫಿಕ್ ಹೆಚ್ಚಾಯಿತು.

ಇತ್ತೀಚಿನ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ರೂಪಾ, ಡಾಲರ್, ಜಾಕಿ ಸೇರಿದಂತೆ ದೇಶದ ಎಲ್ಲಾ ಒಳ ಉಡುಪುಗಳ ಬ್ರಾಂಡ್‌ಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಾಸ್ತವವಾಗಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಕುಸಿತ ಕಂಡುಬಂದಾಗ, ಅದರ ಚಿಹ್ನೆಗಳು ಆ ದೇಶದ ಪುರುಷರ ಒಳ ಉಡುಪು ಸೂಚ್ಯಂಕದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ, ಜನರು ಹೊರಗೆ ಕಾಣದ ಒಳ ಉಡುಪುಗಳಂತಹ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಲು ಪ್ರಾರಂಭಿಸುತ್ತಾರೆ. ಅಂತೆಯೇ, ಈ ಹಣವನ್ನು ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡುವುದು ಉತ್ತಮ ಎಂದು ಅವರು ಪರಿಗಣಿಸುತ್ತಾರೆ. ಹೀಗಾಗಿ, ಪುರುಷರ ಒಳ ಉಡುಪಿಗೂ ಹಣಕಾಸು ಸಂಕಷ್ಟಕ್ಕೂ ನೇರ ಸಂಬಂಧ ಇದೆ.

ಇದನ್ನೂ ಓದಿ: ನರೇಂದ್ರ ಮೋದಿಯನ್ನು ಚೀನಾದ ಲೆಜೆಂಡ್ ಡೆಂಗ್ ಶಿಯೋಪಿಂಗ್​ಗೆ ಹೋಲಿಸಿದ ಅಮೆರಿಕದ ಇನ್ವೆಸ್ಟರ್ ರೇ ಡೇಲಿಯೋ

ಅಮೆರಿಕದಿಂದ ಯುರೋಪಿನವರೆಗಿನ ದೊಡ್ಡ ದೇಶಗಳು ಆರ್ಥಿಕ ಹಿಂಜರಿತದ ಬಿಕ್ಕಟ್ಟಿನಲ್ಲಿವೆ. ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರವೂ ತೀವ್ರ ಸಂಕಷ್ಟದಲ್ಲಿದೆ. ಆರ್ಥಿಕ ಹಿಂಜರಿತದಿಂದಾಗಿ ಇಲ್ಲಿನ ಹಲವು ದೊಡ್ಡ ಬ್ಯಾಂಕ್‌ಗಳು ಮುಚ್ಚುತ್ತಿವೆ. ಈಗ, ಭಾರತದಲ್ಲಿ ದೊಡ್ಡ ಬ್ರಾಂಡ್‌ಗಳ ಒಳ ಉಡುಪುಗಳ ಮಾರಾಟ ಕುಸಿಯುತ್ತಿದೆ. ಇದು ಆರ್ಥಿಕ ಹಿಂಜರಿತದ ಸಂಕೇತವೇ?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ