ಭಾರತದಲ್ಲಿ ಒಳಉಡುಪು ಖರೀದಿಸುವ ಜನಸಂಖ್ಯೆಯಲ್ಲಿ ಭಾರೀ ಇಳಿಕೆ!

ದೇಶದಲ್ಲಿ ಒಳಉಡುಪುಗಳ ಖರೀದಿಯಲ್ಲಿ ಭಾರಿ ಇಳಿಕೆಯಾಗಿದ್ದು, ಪ್ರಮುಖ ಒಳ ಉಡುಪು ಕಂಪೆನಿಗಳಾದ ಜಾಕಿ, ಡಾಲರ್ ಮತ್ತು ರೂಪಾ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್‌ನ ಮಾರಾಟ ಕುಸಿದಿದ್ದು ,ರೂಪಾ & ಕಂ. ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ.

ಭಾರತದಲ್ಲಿ ಒಳಉಡುಪು ಖರೀದಿಸುವ ಜನಸಂಖ್ಯೆಯಲ್ಲಿ ಭಾರೀ ಇಳಿಕೆ!
Image Credit source: Pinterest
Follow us
|

Updated on:Sep 16, 2023 | 12:33 PM

ಸಾಲು ಸಾಲು ಹಬ್ಬ, ಮದುವೆ ಸಮಾರಂಭಗಳು ಬರುತ್ತಿದ್ದಂತೆ ಜನರು ಬಟ್ಟೆ ಮಳಿಗೆಗಳತ್ತ ಮುಖ ಮಾಡುವುದನ್ನು ಕಾಣಬಹುದು. ಆದರೆ ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.  ಸಾಮಾನ್ಯವಾಗಿ ಪಾರ್ಟಿ ವೇರ್ ನಿಂದ ನಾರ್ಮಲ್ ಮತ್ತು ಆಫೀಸ್ ವೇರ್ ವರೆಗೆ ಎಲ್ಲಾ ರೀತಿಯ ಬಟ್ಟೆ, ಶೂ, ಬ್ಯೂಟಿ ಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ. ಆದರೆ, ಒಳಉಡುಪು ಖರೀದಿಯಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದ ಜಾಕಿ, ಡಾಲರ್, ರೂಪಾ ಮುಂತಾದ ಒಳಉಡುಪು ಮಾರಾಟ ಮಾಡುವ ಕಂಪೆನಿಗಳ ಮಾರಾಟ ಕುಸಿದಿದೆ. ಹಬ್ಬ ಹರಿದಿನಗಳಲ್ಲಿ ಶಾಪಿಂಗ್, ಫ್ಯಾಶನ್ ಬಟ್ಟೆಗಳ ಮಾರಾಟ ಹೆಚ್ಚಿದೆಯೇ ಹೊರತು ಒಳಉಡುಪುಗಳ ಮಾರಾಟ ಹೆಚ್ಚಿಲ್ಲ.

ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್‌ನ ಮಾರಾಟದಲ್ಲಿ ತ್ರೈಮಾಸಿಕ ಕುಸಿತ ಕಂಡುಬಂದಿದೆ. ಆದರೆ, ರೂಪಾ & ಕಂ. ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ರೂಪಾ ಷೇರುಗಳು ಶೇ.52ಕ್ಕೂ ಹೆಚ್ಚು ಕುಸಿದಿವೆ. ಪೇಜ್ ಇಂಡಸ್ಟ್ರೀಸ್ ಪ್ರಮಾಣವು 11 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಷೇರಿನ ಬೆಲೆಯು ಐದು ಪ್ರತಿಶತದಷ್ಟು ಕಡಿಮೆಯಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಒಳಉಡುಪು ಖರೀದಿಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಆದಾಯದಲ್ಲಿ ಶೇಕಡಾ 7.5 ರಷ್ಟು ಮತ್ತು ಪ್ರಮಾಣದಲ್ಲಿ ಶೇಕಡಾ 11.5 ಕುಸಿತವಾಗಿದೆ.

ಇದನ್ನೂ ಓದಿ: ಗಣೇಶ ಚತುರ್ಥಿ ಹಬ್ಬ ಹಿನ್ನೆಲೆ ಖಾಸಗಿ ಬಸ್​ಗಳ ಟಿಕೆಟ್ ದರದಲ್ಲಿ ಭಾರೀ ಹೆಚ್ಚಳ

ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಖರ್ಚು ಮಾಡಲು ಸಾಕಷ್ಟು ಹಣವನ್ನು ಹೊಂದಿಲ್ಲದಿರುವುದು ಮಾರಾಟದ ಕುಸಿತಕ್ಕೆ ಕಾರಣವಾಗಿರಬಹುದು. ಅಲ್ಲದೇ ಭಾರತೀಯರು ಆನ್ ಲೈನ್ ಮಾರ್ಕೆಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

ಭಾರತದಲ್ಲಿ ಒಳ ಉಡುಪು ಮಾರುಕಟ್ಟೆ:

ಯುರೋಮಾನಿಟರ್ ಇಂಟರ್‌ನ್ಯಾಶನಲ್ ವರದಿಯ ಪ್ರಕಾರ, ಭಾರತದಲ್ಲಿ ಒಳಉಡುಪು ಮಾರುಕಟ್ಟೆಯು $ 5.8 ಶತಕೋಟಿ ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 48,123 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Published On - 12:15 pm, Sat, 16 September 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ