ಸೆಪ್ಟೆಂಬರ್ 30ರವರೆಗೂ ಡೆಡ್​ಲೈನ್ ಇರುವ ಹಣಕಾಸು ಕಾರ್ಯಗಳಿವು; ತಪ್ಪದೇ ಮಾಡಿ

September Deadline To Complete These Financial Tasks: ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್; ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದವರು ಆಧಾರ್ ಸಲ್ಲಿಕೆ ಕಡ್ಡಾಯ; ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸುವುದು ಹೀಗೆ ವಿವಿಧ ಹಣಕಾಸು ಕಾರ್ಯಗಳಿಗೆ ಈ ತಿಂಗಳೇ ಡೆಡ್​ಲೈನ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಮಾಡಿರುವ ವೀಕೇರ್ ಸ್ಕೀಮ್ ಪಡೆಯಲೂ ಈ ತಿಂಗಳೇ ಕೊನೆ.

ಸೆಪ್ಟೆಂಬರ್ 30ರವರೆಗೂ ಡೆಡ್​ಲೈನ್ ಇರುವ ಹಣಕಾಸು ಕಾರ್ಯಗಳಿವು; ತಪ್ಪದೇ ಮಾಡಿ
ಎರಡು ಸಾವಿರ ರೂ ನೋಟು
Follow us
|

Updated on: Sep 26, 2023 | 5:12 PM

ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದಿದೆ. ದಿನಗಳು ಹೋಗುವುದು ಗೊತ್ತೇ ಆಗುವುದಿಲ್ಲ. ಈ ವೇಳೆ ಕೆಲ ಮುಖ್ಯ ಡೆಡ್​ಲೈನ್​ಗಳು (Deadlines) ನೆನಪಿಗೆ ಬರುವುದೇ ಇಲ್ಲ. ಅವಧಿ ಮೀರಿದ ಬಳಿಕ ಚಿಂತಿಸಿ ಫಲ ಇರುವುದಿಲ್ಲ. ಈ ಸೆಪ್ಟಂಬರ್ 30ಕ್ಕೆ ಕೆಲವಾರು ಮುಖ್ಯ ಹಣಕಾಸು ಕಾರ್ಯಗಳಿಗೆ ಡೆಡ್​ಲೈನ್ ಇದೆ. ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ (small savings schemes) ಆಧಾರ್ ಲಿಂಕ್ ಮಾಡುವುದರಿಂದ ಹಿಡಿದು ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ವಿನಿಯಮದವರೆಗೂ ವಿವಿಧ ಕಾರ್ಯಗಳನ್ನು ಈ ತಿಂಗಳೊಳಗೆ ಮಾಡಬೇಕಾಗಿದೆ. ಈ ಬಗ್ಗೆ ಒಂದು ವರದಿ.

ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್​ಲೈನ್

ಮೇ ತಿಂಗಳಲ್ಲಿ ಆರ್​ಬಿಐ 2,000 ರೂ ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಘೋಷಣೆ ಮಾಡಿತು. ಅದರಂತೆ ಆ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಮರಳಿಸಿ, ಸಮಾನ ಮೌಲ್ಯದ ಬೇರೆ ನೋಟುಗಳನ್ನು ಪಡೆಯಲು ಅವಕಾಶ ನೀಡಿದೆ. ತಮ್ಮ ಖಾತೆಗೆ ಡೆಪಾಸಿಟ್ ಮಾಡಲು ಮತ್ತು ನೋಟು ವಿನಿಮಯ ಮಾಡಲು ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ನೀಡಿದೆ. ಆ ಡೆಡ್​ಲೈನ್ ಬಳಿಕ 2,000 ರೂ ನೋಟು ಅಮಾನ್ಯವಾಗುತ್ತದಾ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ

ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದವರು ಆಧಾರ್ ಸಲ್ಲಿಕೆ ಕಡ್ಡಾಯ

ಸಣ್ಣ ಉಳಿತಾಯ ಯೋಜನೆಗಳನ್ನು ಪಡೆಯಬೇಕಾದರೆ ಈಗ ಆಧಾರ್ ಸಲ್ಲಿಕೆ ಕಡ್ಡಾಯ ಇದೆ. ಆದರೆ, ಈ ಹಿಂದೆ ಪಿಪಿಎಫ್, ಸುಕನ್ಯಾ ಸಮೃದ್ದಿ ಯೋಜನೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸೀನಿಯರ್ ಸಿಟಿಜನ್ ಸ್ಕೀಮ್ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಯೋಜನೆ ಮಾಡಿಸಿದವರಲ್ಲಿ ಹಲವರು ಆಧಾರ್ ದಾಖಲೆ ಸಲ್ಲಿಸಿರಲಿಲ್ಲ. ಆಧಾರ್ ಲಿಂಕ್ ಆಗಿಲ್ಲದ ಸೇವಿಂಗ್ಸ್ ಸ್ಕೀಮ್ ಮೆಚ್ಯೂರ್ ಆದಾಗ ಹಣ ಹಿಂಪಡೆಯಲು ಆಗುವುದಿಲ್ಲ. ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30ರವರೆಗೆ ಸರ್ಕಾರ ಕಾಲಾವಕಾಶ ಕೊಟ್ಟಿದೆ.

ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸುವುದು

ಷೇರು ಮಾರುಕಟ್ಟೆ ಅಥವಾ ಮ್ಯುಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಲು ಡಿಮ್ಯಾಟ್ ಅಕೌಂಟ್ ತೆರೆಯಬೇಕಾಗುತ್ತದೆ. ಇಂಥ ಡೀಮ್ಯಾಟ್ ಖಾತೆಗೆ ನಾಮಿನಿ ಸೇರಿಸುವುದನ್ನು ಸರ್ಕಾರ ಕಡ್ಡಾಯಪಡಿಸಿದೆ. ಸೆ. 30ಕ್ಕೆ ಡೆಡ್​ಲೈನ್ ಇದೆ. ಡಿಮಾಟ್ ಖಾತೆಗೆ ನಾಮಿನಿ ಹೆಸರಿಸಿದವರಲ್ಲಿ ಹೆಚ್ಚಿನವರು ಜಂಟಿ ಖಾತೆ ಹೊಂದಿದವರಾಗಿದ್ದಾರೆ.

ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್​ಡಿ

ಎಸ್​ಬಿಐ ವೀಕೇರ್ ಸ್ಕೀಮ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಸ್ಕೀಮ್ ಅನ್ನು (SBI WeCare) ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಐದು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ನಿಶ್ಚಿತ ಠೇವಣಿ ಯೋಜನೆ ಇದು. ಮಾರ್ಚ್​ನಿಂದಲೂ ಇದರ ಅವಧಿ ವಿಸ್ತರಿಸುತ್ತಾ ಬರಲಾಗಿದೆ. ಇದೀಗ ಸೆಪ್ಟೆಂಬರ್ 30ಕ್ಕೆ ವೀಕೇರ್ ಸ್ಕೀಮ್ ಪಡೆಯಲು ಕೊನೆಯ ದಿನವಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ