ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ

WFH and Cigarette Sales: 2020 ಮತ್ತು 2021ರ ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಸಿಗರೇಟ್ ಮಾರಾಟ ಬಹಳ ಕಡಿಮೆ ಇತ್ತು. 2022ರಲ್ಲಿ ಸಿಗರೇಟ್ ಮಾರಾಟ ಶೇ. 18ರಷ್ಟು ಹೆಚ್ಚಾಗಿತ್ತು. ಈ ವರ್ಷ ಇದು ಶೇ. 7ರಿಂದ 9ರಷ್ಟು ಹೆಚ್ಚಳ ಕಾಣಬಹುದು ಎಂಬುದು ಕ್ರಿಸಿಲ್ ರೇಟಿಂಗ್ಸ್​ನ ವಿಶ್ಲೇಷಣೆ. ಕೋವಿಡ್ ಬಳಿಕ ಸಿಗರೇಟ್ ಮಾರಾಟದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಕಚೇರಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಮತ್ತು ಸರ್ಕಾರದಿಂದ ತೀರಾ ತೆರಿಗೆ ಹೆಚ್ಚಳ ಆಗಿಲ್ಲದೇ ಇರುವುದು ಎನ್ನಲಾಗಿದೆ.

ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ
ಧೂಮಪಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2023 | 4:37 PM

ಭಾರತದಲ್ಲಿ ವರ್ಕ್ ಫ್ರಂ ಹೋಂ (work from home) ಕಡಿಮೆ ಆಗುತ್ತಾ ಬರುತ್ತಿದ್ದು ಹೆಚ್ಚಿನ ಮಂದಿ ಈಗ ಕೆಚೇರಿಗೆ ಹೋಗಿ ಕೆಲಸ ಮಾಡತೊಡಗಿದ್ದಾರೆ. ಪರಿಣಾಮವಾಗಿ ಗೃಹಬಳಕೆ ವಿದ್ಯುತ್ ಬಿಲ್ ಮೊತ್ತ ಗಣನೀಯವಾಗಿ ಕಡಿಮೆ ಆಗಿದೆ. ಇದೇ ವೇಳೆ, ಇನ್ನೊಂದು ಕುತೂಹಲ ಸಂಗತಿ ಎಂದರೆ ಸಿಗರೇಟ್ ಮಾರಾಟ ಹೆಚ್ಚಿರುವುದು. ಈ ಹಣಕಾಸು ವರ್ಷದಲ್ಲಿ ಸಿಗರೇಟ್ ಮಾರಾಟ (cigarette sales) ಶೇ. 7ರಿಂದ 9ರಷ್ಟು ಹೆಚ್ಚಿದೆ. ಕೋವಿಡ್ ಬಳಿಕ ಸಿಗರೇಟ್ ಮಾರಾಟದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಕಚೇರಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಮತ್ತು ಸರ್ಕಾರದಿಂದ ತೀರಾ ತೆರಿಗೆ ಹೆಚ್ಚಳ ಆಗಿಲ್ಲದೇ ಇರುವುದು ಎನ್ನಲಾಗಿದೆ.

2020 ಮತ್ತು 2021ರ ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಸಿಗರೇಟ್ ಮಾರಾಟ ಬಹಳ ಕಡಿಮೆ ಇತ್ತು. 2022ರಲ್ಲಿ ಸಿಗರೇಟ್ ಮಾರಾಟ ಶೇ. 18ರಷ್ಟು ಹೆಚ್ಚಾಗಿತ್ತು. ಈ ವರ್ಷ ಇದು ಶೇ. 7ರಿಂದ 9ರಷ್ಟು ಹೆಚ್ಚಳ ಕಾಣಬಹುದು ಎಂಬುದು ಕ್ರಿಸಿಲ್ ರೇಟಿಂಗ್ಸ್​ನ (CRISIL Ratings) ವಿಶ್ಲೇಷಣೆ. ಇದೇ ಸ್ಥಿತಿ ಮುಂದುವರಿದರೆ ಮತ್ತು ಸರ್ಕಾರದಿಂದ ತೀರಾ ದೊಡ್ಡ ಮಟ್ಟದಲ್ಲಿ ತೆರಿಗೆ ಹೆಚ್ಚಳ ಆಗಲಿಲ್ಲವೆಂದರೆ ವರ್ಷಕ್ಕೆ ಸರಾಸರಿಯಾಗಿ ಶೇ. 5ರಷ್ಟು ಸಿಗರೇಟ್ ಮಾರಾಟ ಹೆಚ್ಚಳ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್

ವರ್ಕ್ ಫ್ರಂ ಆಫೀಸ್ ವೇಳೆ ಸಿಗರೇಟ್ ಮಾರಾಟ ಯಾಕೆ ಹೆಚ್ಚಳ?

ಆಫೀಸ್ ವೇಳೆ ಮಧ್ಯೆ ಮಧ್ಯೆ ಸಿಗರೇಟ್​ಗಾಗಿ ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತೆಯೇ, ರಸ್ತೆಬದಿಯ ಚಹಾ ಅಂಗಡಿ, ಬೇಕರಿಗಳಲ್ಲಿ ಬಹಳಷ್ಟು ಮಂದಿ ಟೀ ಮತ್ತು ಸಿಗರೇಟ್ ಸೇವಿಸುತ್ತಾರೆ. ಕೆಲಸಕ್ಕೆ ಹೊರಗೆ ಅಥವಾ ಆಫೀಸ್​ಗೆ ಹೋಗುವವರಲ್ಲಿ ಇದು ಹೆಚ್ಚು.

ಕಚೇರಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆ 2023ರ ಹಣಕಾಸು ವರ್ಷದಲ್ಲಿ ಶೇ. 40ರಷ್ಟಿತ್ತು. ಈ ಹಣಕಾಸು ವರ್ಷದಲ್ಲಿ ಈ ಪ್ರಮಾಣವು ಶೇ. 65ರಿಂದ 70ರಷ್ಟಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಈದ್ ಮಿಲಾದ್​ಗೆ ಬ್ಯಾಂಕ್ ರಜೆ ಸೆಪ್ಟೆಂಬರ್ 27ಕ್ಕೋ, 28ಕ್ಕೋ? ಇಲ್ಲಿದೆ ಡೀಟೇಲ್ಸ್

ಹೊಸ ಪ್ರಯೋಗದತ್ತ ಸಿಗರೇಟ್ ಮಾರಾಟಗಾರರು

ಜನರಿಗೆ ಸಿಗರೇಟ್ ಹೆಚ್ಚ ಆಕರ್ಷಕವಾಗಿಸಲು ಕಂಪನಿಗಳು ಈಗೀಗ ಪ್ರಯೋಗ ಹೆಚ್ಚಿಸುತ್ತಿವೆ. ಸಿಗರೇಟ್ ಹೊಗೆಯ ದಟ್ಟ ವಾಸನೆಯನ್ನು ತಗ್ಗಿಸಲು ಹೊಸ ಫ್ಲೇವರ್, ಅಡಿಟಿವ್ಸ್ ಇತ್ಯಾದಿಯನ್ನು ಪರಿಚಯಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್