ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್

India Pakistan Match Effect: ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿ ಆಗುತ್ತಿವೆ. ಅಕ್ಟೋಬರ್ 14ರಂದು ಅಹ್ಮದಾಬಾದ್​ನಲ್ಲಿ ಈ ಮ್ಯಾಚ್ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಮ್ಯಾಚ್​ನ ಆಸುಪಾಸು ದಿನಗಳಲ್ಲಿ ಅಹ್ಮದಾಬಾದ್​​ಗೆ ಫ್ಲೈಟ್ ಟಿಕೆಟ್ ಯದ್ವಾತದ್ವ ಏರಿಕೆ ಆಗಿದೆ. ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಪಾಟ್ನಾ, ಲಕ್ನೋ ಮೊದಲಾದ ನಗರಗಳಿಂದ ಅಹ್ಮದಾಬಾದ್​ಗೆ ಸಾಮಾನ್ಯ ದಿನಗಳಲ್ಲಿ ವಿಮಾನ ಪ್ರಯಾಣ ದರ 5,000 ರೂನಿಂದ 12,000 ರೂವರೆಗೂ ಇರುತ್ತದೆ. ಈಗ ಶೇ. 104ರಿಂದ ಶೇ. 415 ರವರೆಗೂ ಟಿಕೆಟ್ ಬೆಲೆ ಏರಿಕೆ ಆಗಿದೆ.

ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್
ಪ್ರಾತಿನಿಧಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2023 | 3:52 PM

ನವದೆಹಲಿ, ಸೆಪ್ಟೆಂಬರ್ 26: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ (India Pakistan Cricket Match) ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಒದಗಿಸುತ್ತದೆ. ಅದರಲ್ಲೂ ವಿಶ್ವಕಪ್​ನಲ್ಲಿ ಈ ತಂಡಗಳು ಮುಖಾಮುಖಿಯಾದರೆ ಅದು ಅಭಿಮಾನಿಗಳಿಗೆ ಬೇರೆ ಲೆವೆಲ್ ಆಗಿರುತ್ತದೆ. ಏಷ್ಯಾಕಪ್​ನಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದಿದ್ದೇ ಬಂತು ಈಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಇನ್ನಷ್ಟು ಏರಿಸಿದೆ. ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿ ಆಗುತ್ತಿವೆ. ಅಕ್ಟೋಬರ್ 14ರಂದು ಅಹ್ಮದಾಬಾದ್​ನಲ್ಲಿ ಈ ಮ್ಯಾಚ್ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಮ್ಯಾಚ್​ನ ಆಸುಪಾಸು ದಿನಗಳಲ್ಲಿ ಅಹ್ಮದಾಬಾದ್​​ಗೆ ಫ್ಲೈಟ್ ಟಿಕೆಟ್ (flight to Ahmedabad) ಯದ್ವಾತದ್ವ ಏರಿಕೆ ಆಗಿದೆ.

ತಮಗೆ ಇಷ್ಟವಾಗುವ ಕ್ರಿಕೆಟ್ ಪಂದ್ಯ ಎಲ್ಲಿಯೇ ನಡೆಯಲಿ ಹಲವು ಅಭಿಮಾನಿಗಳು ಸ್ಟೇಡಿಯಂಗೆ ಹೋಗಿ ತಮ್ಮ ತಂಡದ ಆಟವನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾರೆ. ಅಂತೆಯೇ ಅಕ್ಟೋಬರ್ 13 ಮತ್ತು 14ರಂದು ಅಹ್ಮದಾಬಾದ್​ನತ್ತ ಸಾಕಷ್ಟು ಮಂದಿ ಪ್ರಯಾಣಿಸುತ್ತಿದ್ದಾರೆ. ಆ ಎರಡು ದಿನಗಳು ಫ್ಲೈಟ್ ಟಿಕೆಟ್ ನಾಲ್ಕು ಪಟ್ಟು ಹೆಚ್ಚಿದೆ.

ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಪಾಟ್ನಾ, ಲಕ್ನೋ ಮೊದಲಾದ ನಗರಗಳಿಂದ ಅಹ್ಮದಾಬಾದ್​ಗೆ ಸಾಮಾನ್ಯ ದಿನಗಳಲ್ಲಿ ವಿಮಾನ ಪ್ರಯಾಣ ದರ 5,000 ರೂನಿಂದ 12,000 ರೂವರೆಗೂ ಇರುತ್ತದೆ. ಈಗ ಶೇ. 104ರಿಂದ ಶೇ. 415 ರವರೆಗೂ ಟಿಕೆಟ್ ಬೆಲೆ ಏರಿಕೆ ಆಗಿದೆ.

ಇದನ್ನೂ ಓದಿ: ನೂರು ಕೋಟಿ ಜನರ ವಿಶ್ವಾಸ ಗಳಿಸಿರುವ ಆಧಾರ್ ಬಗ್ಗೆ… ಮೂಡೀಸ್ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ

ಬೆಂಗಳೂರಿನಿಂದ ಅಹ್ಮದಾಬಾದ್​ಗೆ ಸಾಮಾನ್ಯ ದಿನಗಳಲ್ಲಿ ಎಕನಾಮಿ ಕ್ಲಾಸ್​ನ ಫ್ಲೈಟ್ ಟಿಕೆಟ್ 5,000 ರೂನಿಂದ 6,000 ರೂ ಇರುತ್ತದೆ. ಅಕ್ಟೋಬರ್ 13 ಮತ್ತು 14ರಂದು 12,000 ರೂನಿಂದ 20,000 ರೂವರೆಗೂ ಬೆಲೆ ಏರಿಕೆ ಆಗಿದೆ. ಆದರೆ, ಬಿಸಿನೆಸ್ ಕ್ಲಾಸ್​ನಲ್ಲಿ ಅಷ್ಟೇನೂ ಬೆಲೆ ವ್ಯತ್ಯಯ ಆಗಿಲ್ಲ.

ಬೆಂಗಳೂರಿನಿಂದ ಅಹ್ಮದಾಬಾದ್​ಗೆ ಫ್ಲೈಟ್ ಟಿಕೆಟ್ ಬೆಲೆ ಏರಿಕೆ ಗಣನೀಯ ಎನಿಸಿದರೂ, ನವದೆಹಲಿ ಅಹ್ಮದಾಬಾದ್ ನಡುವಿನ ಫ್ಲೈಟ್ ಟಿಕೆಟ್ ಬೆಲೆ ಏರಿಕೆಗೆ ಹೋಲಿಸಿದರೆ ತೀರಾ ಕಡಿಮೆ ಎನಿಸುತ್ತದೆ. ದಿಲ್ಲಿ ಮತ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್ ಬೆಲೆ 6,000 ರೂನಿಂದ 8,000 ರೂ ಇರುತ್ತದೆ. ಆದರೆ, ಪಂದ್ಯ ನಡೆಯುವ ದಿನದ ಹಿಂದಿನ ಒಂದು ವಾರ ಈ ಮಾರ್ಗದ ಫ್ಲೈಟ್ ಟಿಕೆಟ್ ಬೆಲೆ 30,000 ರೂನಿಂದ 35,000 ರೂವರೆಗೂ ಇದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್ ಚಾನಲ್ ಬಳಗದ ಸಂಖ್ಯೆ 50ಲಕ್ಷಕ್ಕಿಂತ ಹೆಚ್ಚು; ಮುಂಚೂಣಿಯಲ್ಲಿ ಯಾರಿದ್ದಾರೆ?

ಏಕದಿನ ವಿಶ್ವಕಪ್ ಯಾವಾಗಿನಿಂದ?

ಈ ವರ್ಷದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಅಕ್ಟೋಬರ್ 5ರಂದು ಆರಂಭಗೊಳ್ಳುತ್ತದೆ. ಭಾರತದಲ್ಲಿ ಎಲ್ಲಾ ಪಂದ್ಯಗಳು ನಡೆಯುತ್ತಿದೆ. 12 ವರ್ಷದ ಬಳಿಕ ಓಡಿಐ ವಿಶ್ವಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. ಈ ಟೂರ್ನಿಯಲ್ಲಿ 10 ತಂಡಗಳು ಆಡುತ್ತಿದ್ದು, ಒಟ್ಟು 46 ದಿನಗಳ ಕಾಲ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್