Viral Video: ಪೈನಾಪಲ್​ ಮೊಮೊ: ‘ಇದಕ್ಕೆ ಚಟ್ನಿ ಬೇಡ, ಹಾರ್ಪಿಕ್ ಹಾಕಿ ಕೊಟ್ಟುಬಿಡು’ ನೆತ್ತಿಗೇರಿದ ನೆಟ್ಟಿಗರ ಕೋಪ

Pineapple Momo: ನನಗೂ ಒಂದು ಪ್ಲೇಟ್ ಮೊಮೊ ಕೊಡು, ಆದರೆ ಚಟ್ನಿ ಬದಲಾಗಿ ಹಾರ್ಪಿಕ್ ಹಾಕಿ ಕೊಡು. ಖಂಡಿತ ನೀ ನರಕದಲ್ಲಿ ಬೀಳುತ್ತೀ. ಇದನ್ನು ತಿಂದವರ ಗತಿ ಏನು, ಇದು ಅನಾರೋಗ್ಯಕರ. ಹೀಗೆ ನೆಟ್ಟಿಗರು ಒಂದೇ ಸಮ ಈ ವಿಡಿಯೋದಲ್ಲಿ ಪ್ರತಿಕ್ರಿಯೆ ಮಾಡುತ್ತಿದ್ದಾರೆ. ಹೀಗೆ ವಿಚಿತ್ರ ಖಾದ್ಯಗಳ ಪ್ರಯೋಗ ಮಾಡುವುದು ತಪ್ಪು ಎಂದು ಹೇಳಲಾಗದು, ತಿನ್ನುವವರದು ತಪ್ಪು. ನೀವೇನು ಹೇಳುತ್ತೀರಿ?

Viral Video: ಪೈನಾಪಲ್​ ಮೊಮೊ: 'ಇದಕ್ಕೆ ಚಟ್ನಿ ಬೇಡ, ಹಾರ್ಪಿಕ್ ಹಾಕಿ ಕೊಟ್ಟುಬಿಡು' ನೆತ್ತಿಗೇರಿದ ನೆಟ್ಟಿಗರ ಕೋಪ
ಪೈನಾಪಲ್ ಮೊಮೊ
Follow us
ಶ್ರೀದೇವಿ ಕಳಸದ
|

Updated on:Sep 29, 2023 | 1:26 PM

Momo: ಮೊನ್ನೆಮೊನ್ನೆಯಷ್ಟೇ ತಿಂದ ಮೋದಕದ ರುಚಿ ಇನ್ನೂ ಬಾಯಲ್ಲಿದೆ. ಮತ್ತೀಗೇಕೆ ಮೊದಕ ಎನ್ನುತ್ತಿದ್ದೀರೇ? ಒದು ಮೋದಕನ ವಂಶಸ್ಥ ಮೊಮೊ. ಇದೀಗ ವೈರಲ್ ಆಗಿರುವ ಈ ಮೊಮೊದಲ್ಲಿ ತರಕಾರಿಯೂ ಇಲ್ಲ ಚಿಕನ್ನೂ ಇಲ್ಲ. ಇದರೊಳಗೆ ಅನಾನಸ್ ಹಣ್ಣಿದೆ. ಪೈನಾಪಲ್​ ಮೊಮೊ (Pineapple Momo) ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಅನಾನಸಿನ ಚೂರುಗಳನ್ನು ಹಿಟ್ಟಿನೊಳಗೆ ತುಂಬಿ ಉಗಿಯ ಮೇಲೆ ಬೇಯಿಸಲಾಗುತ್ತದೆ. ನಂತರ ಅವುಗಳನ್ನು ಕರಿಯಲಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಹಾರ್ಪಿಕ್ ಮೊಮೊ ಬೇಕಿತ್ತು. ಈ ಮೊಮೊ ನೋಡಿ ನನಗೆ ಒಂದೇ ಸಮ ಅಳು ಬರುತ್ತಿದೆ. ಗರುಡ ಪುರಾಣದಲ್ಲಿ ಇವನಿಗೆ ವಿಶೇಷವಾಗಿ ಶಿಕ್ಷೆ ಕಾದಿದೆ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಬೆಂಗಳೂರಿನಲ್ಲಿ ಬ್ಯಾಟ್​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಆ. 24ರಂದು ಇನ್​ಸ್ಟಾಗ್ರಾಂನ ಜತಿನ್​ ಕುಮಾರ್ ಎನ್ನುವವರು ಹಂಚಿಕೊಂಡಿದ್ದಾರೆ. ಇಂಥ ವಿಚಿತ್ರ ಪಾಕಪ್ರಯೋಗ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಯಾವ ದೇವರೂ ನಿನ್ನನ್ನು ಕ್ಷಮಿಸಲಾರ ಎಂದು ಒಬ್ಬರು. ನಾನಂತೂ ಸತ್ತರೂ ಮೊಮೊ ತಿನ್ನಲಾರೆ ಎಂದಿದ್ದಾರೆ ಇನ್ನೊಬ್ಬರು. ಈ ಮೊಮೊದ ಬೆಲೆ ಎಷ್ಟು ಎಂದು ಕೇಳಿದ್ದಾರೆ ಮತ್ತೊಬ್ಬರು.

ಪೈನಾಪಲ್ ಮೊಮೊ ಇಲ್ಲಿದೆ​

ಅಣ್ಣಾ ಒಂದು ಪ್ಲೇಟ್​ ಮೊಮೊ ಕೊಡು ಆದರೆ ಅದರೊಂದಿಗೆ ಚಟ್ನಿ ಕೊಡಬೇಡ ತೊಟ್ಟು ಹಾರ್ಪಿಕ್ ಕೊಡು ಎಂದಿದ್ದಾರೆ ಒಬ್ಬರು. ಇದು ಮಾಡುತ್ತಿರುವವರ ತಪ್ಪಲ್ಲ, ತಿನ್ನುವವರ ತಪ್ಪು ಎಂದಿದ್ದಾರೆ ಇನ್ನೊಬ್ಬರು. ಪಿಝಾನಲ್ಲಿ ಕೂಡ ನಾನು ಪೈನಾಪಲ್​ ತಿನ್ನುವುದಿಲ್ಲ, ಇನ್ನು ಮೊಮೊದಲ್ಲಿ? ಎಂದು ಕೇಳಿದ್ದಾರೆ ಮತ್ತೊಬ್ಬರು. ಯಾರಾದರೂ ಚಾಕೊಲೇಟ್​ ಮೊಮೊ ತಿಂದಿದ್ದೀರಾ? ಎಂದು ಕೇಳಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಈ ಹೆಬ್ಬಾವುಗಳು ಸಬ್​ಸ್ಟೇಷನ್​ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ?

ನೀನು ನರಕದಲ್ಲಿ ಬೀಳುತ್ತೀ ಎಂದು ಒಬ್ಬರು. ನನಗೆ ಇವನು ಏನು ಮಾಡುತ್ತಿದ್ದಾನೆ ಎಂದು ಕಾಣುತ್ತಲೇ ಇಲ್ಲ ಎಂದು ಇನ್ನೊಬ್ಬರು. ನನಗೆ ಪಾಯಿಸನ್​ ಮೊಮೊ ತಿನ್ನಬೇಕು ಎನ್ನಿಸುತ್ತಿದೆ ಈ ವಿಡಿಯೋ ನೋಡಿದಮೇಲೆ ಎನ್ನುತ್ತಿದ್ದಾರೆ ಮತ್ತೂ ಒಬ್ಬರು.

ಒಟ್ಟಾರೆಯಾಗಿ ಈ ವಿಚಿತ್ರ ಪಾಕ ಪ್ರಯೋಗ ನೋಡಿದ ಮೇಲೆ ನಿಮಗೆ ಏನೆನ್ನಿಸಿತು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:24 pm, Fri, 29 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ