ಅತಿ ಸೋಮಾರಿಗಳಿಗೆ 90,000 ರೂ. ಬಹುಮಾನ; ಈ ವಿಚಿತ್ರ ಉತ್ಸವದ ಬಗ್ಗೆ ಗೊತ್ತಾ?

Festival of Laziness: ಸೋಮಾರಿತನದ ಉತ್ಸವದಲ್ಲಿ ಭಾಗವಹಿಸುವವರು ಮಲಗಿದಲ್ಲೇ ಮೊಬೈಲ್ ನೋಡುತ್ತಾ, ಆಗಾಗ ನಿದ್ರೆ ಮಾಡುತ್ತಾ ಕಳೆಯುತ್ತಿದ್ದಾರೆ. ಅವರಿಗೆ ದಿನಕ್ಕೆ 3 ಬಾರಿ ಊಟ ನೀಡಲಾಗುತ್ತದೆ. ಪ್ರತಿ 8 ಗಂಟೆಗಳಿಗೊಮ್ಮೆ ವಿಶ್ರಾಂತಿ ಕೊಠಡಿಯ ವಿರಾಮಗಳನ್ನು ಅನುಮತಿಸಲಾಗುತ್ತದೆ.

ಅತಿ ಸೋಮಾರಿಗಳಿಗೆ 90,000 ರೂ. ಬಹುಮಾನ; ಈ ವಿಚಿತ್ರ ಉತ್ಸವದ ಬಗ್ಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Sep 29, 2023 | 2:43 PM

ಇತ್ತೀಚೆಗಂತೂ ಏನೇನೋ ಸ್ಪರ್ಧೆಗಳು ಶುರುವಾಗಿವೆ. ಆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಕೊಡುವುದು ಸಾಮಾನ್ಯ. ಆದರೆ, ಏನೂ ಮಾಡದೇ ಸುಮ್ಮನೇ ಇರುವವರಿಗೂ ಸ್ಪರ್ಧೆಯೊಂದನ್ನು ಇರಿಸಲಾಗಿದೆ. ಸೋಮಾರಿತನದ ಉತ್ಸವ ಎಂಬ ಹಬ್ಬ ನಡೆಯಲಿದ್ದು, ಇದರಲ್ಲಿ ಅತಿಯಾಗಿ ಸೋಮಾರಿತನ ತೋರಿದವರಿಗೆ ಬರೋಬ್ಬರಿ 90,000 ರೂ. ಬಹುಮಾನ ನೀಡಲಾಗುವುದು. ಏನೂ ಮಾಡದೆ ಸೋಮಾರಿಯಾಗಿರುವುದಕ್ಕೂ ಬಹುಮಾನ ಕೊಡುತ್ತಾರೆಂದರೆ ಖುಷಿಯಾಗದೆ ಇದ್ದೀತೇ?

ಆದರೆ, ಈ ಹಬ್ಬ ಇರುವುದು ಯುರೋಪ್ ಖಂಡದ ಮಾಂಟೆನೆಗ್ರೊದಲ್ಲಿ. ಈ ದೇಶದ ಹೊರಗೆ ವಾಸಿಸುವ ಜನರಿಗೆ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಈ ಉತ್ಸವದಲ್ಲಿ ಜಯಶಾಲಿಯಾಗುವ ವ್ಯಕ್ತಿಗೆ ಮಾಂಟೆನೆಗ್ರೋದ ಅತಿ ಸೋಮಾರಿ ಪ್ರಜೆ ಎಂಬ ಬಿರುದು ನೀಡಲಾಗುವುದು. ಇಲ್ಲಿನ ಬ್ರೆಜ್ನಾ ಗ್ರಾಮದಲ್ಲಿ ಆಯೋಜಿಸಲಾದ ಈ ಉತ್ಸವ ಇದೀಗ ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: Skin Care: ನಿಮ್ಮ ಚರ್ಮದ ಸೌಂದರ್ಯಕ್ಕೆ ಅತ್ಯುತ್ತಮವಾದ 12 ಆಹಾರಗಳಿವು

ಯಾರು ಕುಳಿತುಕೊಳ್ಳದೆ ಅಥವಾ ನಿಲ್ಲದೆ ಹೆಚ್ಚು ಕಾಲ ಮಲಗಿಕೊಂಡು ಸೋಮಾರಿಯಾಗಿರುತ್ತಾರೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಆ ಸ್ಪರ್ಧಿಗಳು ಕುಳಿತರೆ ಅಥವಾ ನಿಂತರೆ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ. ಭಾಗವಹಿಸುವವರು ಹಾಸಿಗೆಗಳ ಮೇಲೆ ವಿಶ್ರಾಂತಿ ಪಡೆಯಬೇಕು. ಹಾಗಂತ ಇದು ಒಂದೆರಡು ದಿನದ ಕತೆಯಲ್ಲ. ಕಳೆದ 1 ತಿಂಗಳಿನಿಂದಲೂ ಈ ಸ್ಪರ್ಧೆಯ ಸ್ಪರ್ಧಿಗಳು ಮಲಗಿಕೊಂಡು, ಸೋಮಾರಿತನದಿಂದಲೇ ದಿನ ಕಳೆಯುತ್ತಿದ್ದಾರೆ.

ಈ ಸ್ಪರ್ಧೆಯು ಕಳೆದ 12 ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ಆಗಸ್ಟ್ 21ರಂದು ಪ್ರಾರಂಭವಾದ ಈ ವರ್ಷದ ಸ್ಪರ್ಧೆ ಇನ್ನೂ ನಡೆಯುತ್ತಿದೆ. ಆರಂಭಿಕವಾಗಿ ಭಾಗವಹಿಸಿದ 21 ಸ್ಪರ್ಧಿಗಳಲ್ಲಿ 4 ಅತಿ ಸೋಮಾರಿಗಳು ಮಾತ್ರ ಇನ್ನೂ ಈ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ. ತಾತ್ಕಾಲಿಕವಾಗಿ ತಮ್ಮ ಕುಟುಂಬ, ಕೆಲಸ ಮತ್ತು ಶೈಕ್ಷಣಿಕ ಜವಾಬ್ದಾರಿಗಳನ್ನು ಬದಿಗಿಟ್ಟು ಈ ಉತ್ಸವದಲ್ಲಿ ಅವರು ಪಾಲ್ಗೊಂಡಿದ್ದಾರೆ. ಈ ಉತ್ಸವದ ವಿಜೇತರು ಅಂದಾಜು ರೂ. 90,000 ನಗದು ಬಹುಮಾನವನ್ನು ಸ್ವೀಕರಿಸುತ್ತಾರೆ.

ಇದನ್ನೂ ಓದಿ: Viral Video: ಗಣೇಶ ವಿಸರ್ಜನೆ ವೇಳೆ ಭರ್ಜರಿ ಸ್ಟೆಪ್ ಹಾಕಿದ ಹೈದರಾಬಾದ್ ಪೊಲೀಸ್; ವಿಡಿಯೋ ವೈರಲ್

ಪರದೆಗಳನ್ನು ಹಾಕಿ ಈ ಸ್ಪರ್ಧಿಗಳಿಗೆ ಕೊಠಡಿ ನಿರ್ಮಿಸಲಾಗಿರುತ್ತದೆ. ಈ ಕೊಠಡಿಯಲ್ಲಿ ಅಲ್ಲಲ್ಲಿ ಬಿದ್ದ ಬಟ್ಟೆಗಳು, ತಟ್ಟೆಯಲ್ಲಿ ಅಳಿದುಳಿದ ಊಟ, ಮುದ್ದೆಯಾಗಿ ಬಿದ್ದ ಹೊದಿಕೆಗಳನ್ನು ನೋಡಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಲಗಿದಲ್ಲೇ ಮೊಬೈಲ್ ನೋಡುತ್ತಾ, ಆಗಾಗ ನಿದ್ರೆ ಮಾಡುತ್ತಾ ಕಳೆಯುತ್ತಿದ್ದಾರೆ. ಅವರಿಗೆ ದಿನಕ್ಕೆ 3 ಬಾರಿ ಊಟ ನೀಡಲಾಗುತ್ತದೆ. ಪ್ರತಿ 8 ಗಂಟೆಗಳಿಗೊಮ್ಮೆ ವಿಶ್ರಾಂತಿ ಕೊಠಡಿಯ ವಿರಾಮಗಳನ್ನು ಅನುಮತಿಸಲಾಗುತ್ತದೆ. ಅವರ ಆರೋಗ್ಯವನ್ನು ಆಗಾಗ ತಪಾಸಣೆ ಮಾಡಲಾಗುತ್ತದೆ. ಈ ಸ್ಪರ್ಧಿಗಳು ನೇರವಾಗಿ ನಿಲ್ಲುವಂತಿಲ್ಲ, ಕುಳಿತುಕೊಳ್ಳುವಂತಿಲ್ಲ. ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಬಹುದು, ಪುಸ್ತಕಗಳನ್ನು ಓದಬಹುದು ಮತ್ತು ಯಾರನ್ನಾದರೂ ಕರೆಸಿ ಹರಟೆ ಕೂಡ ಹೊಡೆಯಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ