AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಹಾವುರಾಣಿ’; ನಿಮಗೆ ಬೆಡ್​ ಬೆಡ್​ಶೀಟ್​ ಏನೂ ಬೇಕಾಗಿಲ್ಲ ಬಿಡಿ ಎನ್ನುತ್ತಿರುವ ನೆಟ್ಟಿಗರು

Wild Animals : ನಾಯಿಗಳನ್ನು, ಬೆಕ್ಕುಗಳನ್ನು, ಹಸುಕರುಗಳನ್ನು, ಕೋತಿಗಳನ್ನು, ಮೊಲಗಳನ್ನು, ಇಲಿಗಳನ್ನು ಹೀಗೆ ಮುದ್ದಿಸುತ್ತೀರಿ ಅಥವಾ ಮುದ್ದಿಸುವುದನ್ನು ನೋಡಿದ್ದೀರಿ. ಆದರೆ ಈ ಮಹಿಳೆ ದೊಡ್ಡದೊಡ್ಡ ಹೆಬ್ಬಾವುಗಳನ್ನು, ಮೊಸಳೆಗಳನ್ನು, ಸರಿಸೃಪಗಳನ್ನು ಹೀಗೆ ಮುದ್ದಿಸುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂದಿನ ದುಃಸ್ವಪ್ನಕ್ಕೆ ಒಳ್ಳೆಯ ಇಂಧನ... ಎಂದು ಗಾಬರಿ ಬೀಳುತ್ತಿದ್ದಾರೆ.

Viral Video: 'ಹಾವುರಾಣಿ'; ನಿಮಗೆ ಬೆಡ್​ ಬೆಡ್​ಶೀಟ್​ ಏನೂ ಬೇಕಾಗಿಲ್ಲ ಬಿಡಿ ಎನ್ನುತ್ತಿರುವ ನೆಟ್ಟಿಗರು
'ಹಾವುರಾಣಿ'
ಶ್ರೀದೇವಿ ಕಳಸದ
|

Updated on:Oct 03, 2023 | 3:32 PM

Share

Python: ಅನೇಕ ಹೆಣ್ಣುಮಕ್ಕಳು ಹಾವನ್ನು ಹಿಡಿದು ಧೈರ್ಯ ತೋರಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಮಹಿಳೆ ಬೃಹತ್ ಗಾತ್ರದ ಹೆಬ್ಬಾವುಗಳನ್ನು ಹಿಡಿದು ಅಪ್ಪಿ, ಮುದ್ದಾಡಿ ಅಚ್ಚರಿ ಮೂಡಿಸಿದ್ಧಾಳೆ. ಈ ದೃಶ್ಯ ಕನಸಿನಲ್ಲಿ ಬಂದು ಕಾಡದಿದ್ದರೆ ಸಾಕಪ್ಪಾ ಎಂದು ಅನೇಕ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ. ವನ್ಯಮೃಗದೊಂದಿಗೆ (Wild Animals) ಹೀಗೆ ಆಪ್ತವಾಗಿ ಒಡನಾಡುತ್ತಿರುವ ಮಹಿಳೆಯ ಧೈರ್ಯ ಮತ್ತು ಪ್ರೀತಿ ಶ್ಲಾಘನೀಯ ಎಂದಿದ್ದಾರೆ ಕೆಲವೊಂದಿಷ್ಟು ಜನ. ಯಾವ ಪ್ರೀತಿಯೂ ಅತಿಯಾದರೆ ವಿಷವೇ, ಅದರಲ್ಲೂ ಇಂಥ ಹೆಬ್ಬಾವಿನೊಡನೆ! ಹುಷಾರಾಗಿರಿ ಎಂದು ಅನೇಕರು ಈ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Viral Video: ಗುಜರಾತ್​; ಜಾಯಿಂಟ್​ ವೀಲ್​ನಲ್ಲಿ ಯುವತಿಯ ಕೂದಲು ಸಿಕ್ಕಿಹಾಕಿಕೊಂಡಾಗ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ @thereptilezoo ಎಂಬ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹತ್ತು ಸೆಕೆಂಡಿನ ಈ ವಿಡಿಯೋ ಮಿಲಿಯನ್​ಗಟ್ಟಲೆ ಜನರನ್ನು ಬೆಚ್ಚಿಬೀಳಿಸಿದ್ದಂತೂ ನಿಜ. ಮಲಗಲು ನಿಮಗೆ ಬೆಡ್, ಬೆಡ್ಶೀಟ್​ ಏನೂ ಬೇಡವೆನ್ನಿಸುತ್ತದೆ ಎಂದು ಹೇಳಿದವರ ಸಂಖ್ಯೆ ಏನು ಕಡಿಮೆ ಇಲ್ಲ!

ಹೆಬ್ಬಾವುಗಳ ಸಾನಿಧ್ಯದಲ್ಲಿ ಮಹಿಳೆ

ದುಃಸ್ವಪ್ನಕ್ಕೆ ಇದು ನನಗೆ ಇಂಧನವಾಗಲಿದೆ , ಧೈರ್ಯವಂತೆ! ಎಂದಿದ್ದಾರೆ ಒಬ್ಬರು. ಈ ಹುಡುಗಿಗೆ ಹುಚ್ಚು ಹಿಡಿದಿದೆ ಎನ್ನಿಸುತ್ತದೆ, ವಿವೇಚನೆ ಉಳ್ಳವರು ಇಂಥದೆಲ್ಲ ಮಾಡುವುದಿಲ್ಲ ಎಂದಿದ್ಧಾರೆ ಇನ್ನೊಬ್ಬರು. ನೀವೇ ನನ್ನ ನಾಯಕಿ ಎಂದಿದ್ದಾರೆ ಮತ್ತೊಬ್ಬರು. ನನಗೂ ಇಂಥ ಅವಕಾಶವಿದ್ದಿದ್ದರೆ? ಎಂದಿದ್ದಾರೆ ಮಗದೊಬ್ಬರು. ದಯವಿಟ್ಟು ವಿಳಾಸ ಕೊಡಿ ಎಂದಿದ್ದಾರೆ ಇನ್ನೂ ಒಬ್ಬರು.

ಇದು ಇದೇ ಜನ್ಮದ ಅನುಬಂಧ

ಈ ಇನ್​ಸ್ಟಾಗ್ರಾಂನ ದಿ ರೆಪ್ಟೈಲ್​ ಝೂ ಎಂಬ ಈ ಖಾತೆಯಲ್ಲಿ ಈ ಮಹಿಳೆಯು ಸಾಕಷ್ಟು ವನ್ಯಜೀವಿಗಳೊಂದಿಗೆ ಒಡನಾಡುವುದನ್ನು ನೋಡಹುದಾಗಿದೆ. ಸಾಕುನಾಯಿ ಬೆಕ್ಕುಗಳೊಂದಿಗೆ ನಾವು ಹೇಗೆ ಪ್ರೀತಿಯಿಂದ ನಿರ್ಭೀತಿಯಿಂದ ಇರುತ್ತೇವೋ ಹಾಗೆ ಈಕೆ ಬೃಹತ್ ಗಾತ್ರದ ಆಮೆ, ಮೊಸಳೆ, ವಿವಿಧ ಜಾತಿಯ ಸರಿಸೃಪಗಳೊಂದಿಗೆ ಇರುತ್ತಾಳೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:28 pm, Tue, 3 October 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ